ಟಿ20 ವಿಶ್ವಕಪ್‌ಗೆ ಅಚ್ಚರಿಯ ಅಸ್ತ್ರ
ಕರ್ನಾಟಕದ ಪ್ರಸಿದ್ಧ್ ಕೃಷ್ಣ ಹೆಸರು ಪ್ರಸ್ತಾವಿಸಿದ ವಿರಾಟ್ ಕೊಹ್ಲಿ
Team Udayavani, Jan 8, 2020, 11:37 PM IST
ಇಂದೋರ್: ಮುಂಬರುವ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆ ಟೀಮ್ ಇಂಡಿಯಾ ಬೌಲಿಂಗ್ ಬತ್ತಳಿಕೆಯಲ್ಲಿ “ಅಚ್ಚರಿಯ ಅಸ್ತ್ರ’ಗಳಿರಲಿವೆ ಎಂದಿರುವ ನಾಯಕ ವಿರಾಟ್ ಕೊಹ್ಲಿ, ಕರ್ನಾಟಕದ ಪ್ರಸಿದ್ಧ್ ಕೃಷ್ಣ ಅವರ ಹೆಸರನ್ನು ಪ್ರಸ್ತಾವಿಸಿ ಭಾರೀ ಸಂಚಲನ ಮೂಡಿಸಿದ್ದಾರೆ.
ತಂಡದ ಪ್ರಮುಖ ಪೇಸ್ ಬೌಲರ್‌ಗಳಾದ ಭುವನೇಶ್ವರ್ ಕುಮಾರ್, ದೀಪಕ್ ಚಹರ್ ಅವರೆಲ್ಲ ಗಾಯಾಳುಗಳ ಯಾದಿಯಲ್ಲಿರುವುದರಿಂದ ಹೆಚ್ಚುವರಿ ಪೇಸ್ ಬೌಲರ್‌ಗಳ ಅಗತ್ಯ ತಂಡಕ್ಕಿದೆ ಎಂಬುದು ಕೊಹ್ಲಿ ಲೆಕ್ಕಾಚಾರ. ಈ ಜಾಗಕ್ಕೆ 23ರ ಹರೆಯದ ಕರ್ನಾಟಕದ ಬಲಗೈ ವೇಗಿ ಪ್ರಸಿದ್ಧ್ ಕೃಷ್ಣ ಉತ್ತಮ ಆಯ್ಕೆ ಆಗಬಲ್ಲರು ಎಂದಿರುವುದು ಅನೇಕರ ಹುಬ್ಬೇರಿಸಿದೆ.
ರಾಜ್ಯದಾಚೆ ಅಪರಿಚಿತ
ಈ ಪ್ರಸಿದ್ಧ್ ಕೃಷ್ಣ ಯಾರು ಎಂಬ ಪ್ರಶ್ನೆಗೆ ಉತ್ತರ ಇರುವುದು ಕರ್ನಾಟಕ ಕ್ರಿಕೆಟ್ ವಲಯದಲ್ಲಿ ಮಾತ್ರ. 2018ರ ಇಂಗ್ಲೆಂಡ್ “ಎ’ ಸರಣಿ ವೇಳೆ ಭಾರತ “ಎ’ ತಂಡದಲ್ಲಿದ್ದ ಪ್ರಸಿದ್ಧ್ ಕೃಷ್ಣ, ಈಗ ರಾಷ್ಟ್ರೀಯ ಮಟ್ಟದ ಯಾವ ತಂಡದಲ್ಲೂ ಇಲ್ಲ. ಐಪಿಎಲ್‌ನಲ್ಲಿ ಕೆಕೆಆರ್ ಪರ ಆಡುತ್ತಿದ್ದಾರೆ. ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೂಪರ್ ಓವರ್ ಎಸೆಯುವ ಅವಕಾಶ ಲಭಿಸಿತ್ತು. ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್‌ನಲ್ಲಿ 19 ವಿಕೆಟ್ ಉರುಳಿಸಿದ್ದಾರೆ. ಈ ವರ್ಷ ಯಾವುದೇ ರಣಜಿ ಪಂದ್ಯ ಆಡಿಲ್ಲ.
“ಒಂದೇ ರೀತಿಯ ಬೌಲಿಂಗ್ ಕೌಶಲ ಹೊಂದಿರುವವರ ಆಯ್ಕೆ ವೇಳೆ ಸೀನಿಯರ್‌ಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ನನ್ನ ಪ್ರಕಾರ ಟಿ20 ವಿಶ್ವಕಪ್‌ಗಾಗಿ ಪೇಸ್ ಮತ್ತು ಬೌನ್ಸ್ ಹೊಂದಿರುವ ಓರ್ವ ಅಚ್ಚರಿಯ ಬೌಲರ್ ಆಸ್ಟ್ರೇಲಿಯಕ್ಕೆ ಪ್ರವಾಸ ಮಾಡಲಿದ್ದಾರೆ. ಪ್ರಸಿದ್ಧ್ ಕೃಷ್ಣ ಅವರಲ್ಲಿ ಇಂಥ ತಾಕತ್ತಿದೆ. ದೇಶಿ ಕ್ರಿಕೆಟ್‌ನಲ್ಲಿ ಅವರ ನಿರ್ವಹಣೆ ಉತ್ತಮ ಮಟ್ಟದಲ್ಲಿದೆ’ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
6 ಪ್ರಥಮ ದರ್ಜೆ ಪಂದ್ಯಗಳಿಂದ 20 ವಿಕೆಟ್, 41 ಲಿಸ್ಟ್ ಎ ಪಂದ್ಯಗಳಿಂದ 67 ವಿಕೆಟ್ ಹಾಗೂ 28 ಟಿ20 ಪಂದ್ಯಗಳಿಂದ 24 ವಿಕೆಟ್ ಉರುಳಿಸಿರುವುದು ಪ್ರಸಿದ್ಧ್ ಕೃಷ್ಣ ಅವರ ಈವರೆಗಿನ ಬೌಲಿಂಗ್ ಸಾಧನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.