500 ರೂ.ಗೆ 2,500 ರೂ. ಕೊಟ್ಟ ಎಟಿಎಂ
ಮಡಿಕೇರಿ: ಎಟಿಎಂಗೆ ಹಣ ತುಂಬಿಸುವ ಸಿಬಂದಿಯ ಎಡವಟ್ಟು
Team Udayavani, Jan 9, 2020, 6:45 AM IST
ಮಡಿಕೇರಿ: ಇಲ್ಲಿನ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರವೊಂದರಲ್ಲಿ ಅದಕ್ಕೆ ಹಣ ತುಂಬುವ ಸಿಬಂದಿ ಮಾಡಿರುವ ಎಡವಟ್ಟಿನಿಂದ ಗ್ರಾಹಕರು ಭರಪೂರ ಲಾಭ ಪಡೆದ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಹಕರು 500 ರೂ.ಗೆ ಬೇಡಿಕೆ ಮಂಡಿಸಿದಾಗ ಎಟಿಎಂ 2,500 ರೂ. ನೀಡಿ ಗ್ರಾಹಕರನ್ನು ಅಚ್ಚರಿಗೊಳಿಸಿತ್ತು. ಈ ಎಡವಟ್ಟು ಬ್ಯಾಂಕ್ ಸಿಬಂದಿಗೆ ತಿಳಿಯುವಷ್ಟರಲ್ಲಿ 1.50 ಲಕ್ಷ ರೂ. ಸೋರಿಕೆ ಆಗಿತ್ತು.
ಆ ಬಳಿಕ ಬ್ಯಾಂಕ್ ಸಿಬಂದಿ ಹೆಚ್ಚುವರಿಯಾಗಿ ಹಣ ಪಡೆದ ಗ್ರಾಹಕರನ್ನು ಸಂಪರ್ಕಿಸಿ ಹಣ ಹಿಂದಿರುಗಿಸುವಂತೆ ಮನವಿ ಮಾಡಿದರು. ಕೆಲವರು ಹಿಂದೇಟು ಹಾಕಿದ್ದರಿಂದ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಪೊಲೀಸರ ಕರೆಗೆ ಬೆಚ್ಚಿದ ಉಳಿದ ಗ್ರಾಹಕರೆಲ್ಲರೂ ಬ್ಯಾಂಕ್‌ಗೆ ತೆರಳಿ ಹಣ ವಾಪಸ್ ಮಾಡಿದರು. ಈ ಮೂಲಕ ಎಟಿಎಂನಿಂದ ಹೆಚ್ಚುವರಿಯಾಗಿ ಗ್ರಾಹಕರ ಕೈಸೇರಿದ 1.50 ಲಕ್ಷ ರೂ. ಸುರಕ್ಷಿತವಾಗಿ ಬ್ಯಾಂಕ್‌ಗೆ ಜಮೆಯಾಗುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.
ಏನಿದು ಘಟನೆ
2019ರ ಡಿ. 30ರಂದು ಖಾಸಗಿ ಏಜೆನ್ಸಿಯ ಸಿಬಂದಿ ಕೊಹಿನೂರು ರಸ್ತೆಯಲ್ಲಿರುವ ಎಟಿಎಂ ಕೇಂದ್ರಕ್ಕೆ ಹಣ ತುಂಬಿದ್ದು. ಈ ಸಂದರ್ಭ 100 ರೂ. ಹಾಕುವ ಟ್ರೇಯಲ್ಲಿ 500 ರೂ. ಮುಖಬೆಲೆಯ ನೋಟುಗಳನ್ನು ತುಂಬಿರುವುದು ಸಿಬಂದಿಯ ಗಮನಕ್ಕೆ ಬಾರದಿದ್ದುದು ಈ ಎಡವಟ್ಟಿಗೆ ಕಾರಣವಾಗಿದೆ. ಗ್ರಾಹಕರು ಎಟಿಎಂಗೆ ಬಂದು 500 ರೂ. ಡ್ರಾ ಮಾಡಲು ಮುಂದಾದಾಗ 100 ರೂ.ಗಳ ಐದು ನೋಟು ಬದಲು 500 ರೂ.ಗಳ ಐದು ನೋಟು ಬರುತಿತ್ತು. ಆಶ್ಚರ್ಯಗೊಂಡರೂ ಕೆಲವರು ಸಿಕ್ಕಿದ್ದೇ ಲಾಭ ಎಂದು ಹಣವನ್ನು ಜೇಬಿಗಿಳಿಸಿಕೊಂಡಿದ್ದರು.
ಕೆಲವರಂತೂ ಹಲವು ಬಾರಿ ಹಣ ಡ್ರಾ ಮಾಡಿರುವುದು ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಕೆನರಾ ಬ್ಯಾಂಕಿನ ಗ್ರಾಹಕ ಶ್ರೀಧರ್ ಈ ಎಟಿಎಂ ನಿಂದ ಹಣ ಪಡೆಯಲು ಬಂದಾಗ ಹೆಚ್ಚು ಹಣ ಬಂದದ್ದನ್ನು ನೋಡಿ ಎಟಿಎಂ ಕೇಂದ್ರದಲ್ಲಿ ದೋಷವಿರಬೇಕೆಂದು ಬ್ಯಾಂಕಿಗೆ ದೂರು ಕೊಟ್ಟಾಗಲೇ ವಿಷಯ ಬೆಳಕಿಗೆ ಬಂದದ್ದು. ತತ್‌ಕ್ಷಣ ಬ್ಯಾಂಕ್ ಸಿಬಂದಿ ಎಟಿಎಂ ಕೇಂದ್ರವನ್ನು ಮುಚ್ಚಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ
PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Udupi: ʼನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆಯಿಂದ ಪಾರದರ್ಶಕತೆ, ಸಮಯ, ಹಣವೂ ಉಳಿತಾಯʼ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.