ಉತ್ತರಪ್ರದೇಶ ಸಚಿವ ಎಂದು ಹೇಳಿ 10 ದಿನ ಗೋವಾ ಗೆಸ್ಟ್ ಹೌಸ್ ನಲ್ಲಿ ಕಾಲ ಕಳೆದ ವ್ಯಕ್ತಿ ಬಂಧನ!
ಉತ್ತರಪ್ರದೇಶದ ಸಚಿವ ಎಂದು ಹೇಳಿದ್ದ ಸುನೀಲ್ ಸಿಂಗ್ ಅಸಲಿ ಗುರುತನ್ನು ಬಯಲು ಮಾಡಿದ್ದು ಗೋವಾ ಮುಖ್ಯಮಂತ್ರಿ
Team Udayavani, Jan 9, 2020, 12:21 PM IST
ಪಣಜಿ: ನಾನು ಉತ್ತರಪ್ರದೇಶದ ಸಚಿವ ಎಂದು ಪೋಸು ಕೊಟ್ಟು ನಕಲಿ ದಾಖಲೆಯನ್ನು ತೋರಿಸಿ ಸುಮಾರು ಹತ್ತು ದಿನಗಳಿಗಿಂತಲೂ ಹೆಚ್ಚು ಪಣಜಿ ಗೆಸ್ಟ್ ಹೌಸ್ ನಲ್ಲಿ ಠಿಕಾಣಿ ಹೂಡಿದ್ದ ವ್ಯಕ್ತಿಯನ್ನು ಗೋವಾ ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ತನ್ನ ಹಿಂಬಾಲಕರ ಜತೆ ಕಾರಿನಲ್ಲಿ ಉತ್ತರಪ್ರದೇಶ ಸಚಿವ ಎಂದು ಸುಳ್ಳು ಹೇಳಿ ಪಣಜಿ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡಿದ್ದ ಸುನೀಲ್ ಸಿಂಗ್ ಹಾಗೂ ಆತನ ನಾಲ್ವರು ಗೆಳೆಯರನ್ನು ಬಂಧಿಸಿರುವುದಾಗಿ ಗೋವಾ ಕ್ರೈಂ ಬ್ರ್ಯಾಂಚ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಪ್ರದೇಶದ ಸಚಿವ ಎಂದು ಹೇಳಿದ್ದ ಸುನೀಲ್ ಸಿಂಗ್ ಅಸಲಿ ಗುರುತನ್ನು ಬಯಲು ಮಾಡಿದ್ದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್. ಆತ ನಕಲಿ ಸಚಿವ ಎಂದು ಪೊಲೀಸರಿಗೆ ಸೂಚನೆ ನೀಡಿ ಬಂಧಿಸುವಂತೆ ಸೂಚಿಸಿರುವುದಾಗಿ ವರದಿ ವಿವರಿಸಿದೆ.
ಸಿಂಗ್ ಮಂಗಳವಾರ ಬಂಧನಕ್ಕೊಳಗಾಗುವ ಮುನ್ನ ಸುಮಾರು 12 ದಿನಗಳ ಕಾಲ ಗೆಸ್ಟ್ ಹೌಸ್ ನಲ್ಲಿ ಕಾಲ ಕಳೆದಿದ್ದ. ಅಲ್ಲದೇ ಮುಖ್ಯಮಂತ್ರಿ ಭೇಟಿಗೆ ಕಾಲಾವಕಾಶ ಕೇಳಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ತಾನು ಉತ್ತರಪ್ರದೇಶದ ಕೋ ಆಪರೇಷನ್(ಸಹಕಾರಿ) ಸಚಿವ ಎಂದು ಹೇಳಿಕೊಂಡಿದ್ದ. ಆತನಿಗೆ ಗೋವಾ ಪೊಲೀಸರು ವೈಯಕ್ತಿಕ ಭದ್ರತಾ ಅಧಿಕಾರಿಯನ್ನು ನಿಯೋಜಿಸಿದ್ದರು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.