ಮನಸೊಂದು ಮಾನಸ ಸರೋವರ
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ
Team Udayavani, Jan 9, 2020, 5:43 PM IST
ಚಿಕ್ಕಮಗಳೂರು: ಮನಸ್ಸೊಂದು ಮಾನಸ ಸರೋವರ. ಅದು ಸದಾ ತಿಳಿಯಾಗಿರಬೇಕು. ಕಲುಷಿತಗೊಳ್ಳಬಾರದೆಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಬಿಜಿಎಸ್ ಸಭಾಂಗಣದಲ್ಲಿ ಬುಧವಾರ ಎಸ್.ಎಸ್.ಎಲ್ .ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನಸ ಸರೋವರದ ಶುದ್ಧ ನೀರಿನಂತೆ ಮನುಷ್ಯ ದೇಹದಲ್ಲಿರುವ ಮಾನಸ ಸರೋವರ ಸಹ ಶುದ್ಧವಾಗಿರಬೇಕು. ಅದಕ್ಕೆ ರೂಪ, ರಸ, ಗಂಧ, ಶಬ್ಧ, ಸ್ಪರ್ಶದಿಂದ ಕೊಳಕು ಒಳಸೇರಿದರೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂದರು.
ಒಳ್ಳೆಯದನ್ನು ನೋಡುವ, ಸ್ಪರ್ಶಿಸುವ, ಕೇಳುವ, ಆಘ್ರಾಣಿಸುವ ಗುಣವನ್ನು ವಿದ್ಯಾರ್ಥಿ ದಿಸೆಯಲ್ಲೆ ಅಭ್ಯಾಸ ಮಾಡಿಕೊಂಡರೆ ಶುದ್ಧ ಮನಸ್ಸನ್ನು ಹೊಂದಿ ಎತ್ತರದ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ದೇವರು ಎಲ್ಲರಿಗೂ ಸಮಾನ ಅವಕಾಶ ನೀಡಿದ್ದಾನೆ. ಈ ಅವಕಾಶವನ್ನು ಬಳಸಿಕೊಂಡಾಗ ಮಾತ್ರ ಯಶಸ್ಸನ್ನು ಕಾಣಬಹುದು. ಹೊಗಳಿಸಿಕೊಳ್ಳಲು ಸಹ ನಾವು ಶಕ್ತರಾಗಿರಬೇಕು. ಆ ಶಕ್ತಿ ಬರುವುದು ಶುದ್ಧ ಮನಸ್ಸಿನ ಸಾಧನೆಯಿಂದ ಎಂದು ತಿಳಿಸಿದರು. ಗೀತೆಯಲ್ಲಿ ಪರಮಾತ್ಮ ಉದ್ದರೇತ್ ಆತ್ಮನಾತ್ಮನಃ ಎನ್ನುತ್ತಾನೆ. ನಮ್ಮ ಉದ್ಧಾರ ನಮ್ಮೊಳಗೆ ಎಂಬ ಅರ್ಥ. ನಮಗೆ ನಾವೆ ಮಿತ್ರ ಮತ್ತು ಶತೃ ಎಂಬುದನ್ನು ಅರಿತು ಮುನ್ನಡೆದಾಗ ಗುರಿ ಮುಟ್ಟಬಹುದೆಂದು ಹೇಳಿದರು.
ಸಂತೋಷವಾಗಿರಲು ಕಾರಣಗಳ ಅವಶ್ಯಕತೆ ಇಲ್ಲ, ಒಂದು ಕಾರಣದಿಂದ ಸಂತೋಷಗೊಂಡರೂ ಅದು ಅತ್ಯಲ್ಪ ಕಾಲವಿರುತ್ತದೆ. ಸದಾ ಸಂತೋಷವಾಗಿ ಶುದ್ಧ ಮನಸ್ಸಿನಿಂದ ಸಾಧನೆಯತ್ತ ಮುಖ ಮಾಡಬೇಕು. ಮನುಷ್ಯ ತನ್ನ ಜೀವನದ ಮೊದಲ 25 ವರ್ಷದೊಳಗೆ ಸ್ಪಷ್ಟ ಗುರಿಯತ್ತ ಸಾಗುವ ತವಕ ಹೊಂದಿರಬೇಕು. ಆ ನಂತರವೂ ಹೊಂದಿರದಿದ್ದರೆ, ಬದುಕಿನ ಕಲಿಕೆಯನ್ನು ಎತ್ತರಿಸಿಕೊಳ್ಳದಿದ್ದರೆ, ಜೀವನದಲ್ಲಿ ಏನನ್ನು ಸಾಧಿಸಲಾಗದು ಎಂದು ವಿವರಿಸಿದರು. ತರಗತಿಯಲ್ಲಿ ಬೋಧನೆಯತ್ತ ಮನಸ್ಸನ್ನು ಕೇಂದ್ರೀಕರಿಸುವುದು ಅಗತ್ಯ. ಇದಕ್ಕೆ ಶುದ್ಧ ಮನಸ್ಸು ಮುಖ್ಯ. ಬಾಹ್ಯ ಸೌಂದರ್ಯದಿಂದ ಮನುಷ್ಯ ಸಮಾಜದಲ್ಲಿ ಮಾನ್ಯನಾಗುವುದಿಲ್ಲ. ಅವನ ಆಂತರಿಕ ಸೌಂದರ್ಯ ಅಂದರೆ ಶ್ರವಣ, ಮನನದಿಂದ ತಲೆಗೆ ಹೋಗಿದ್ದು ಮಾತ್ರ ವ್ಯಕ್ತಿಯನ್ನು ಎತ್ತರಕ್ಕೆ ಬೆಳೆಸುತ್ತದೆ. ಹೊಟ್ಟೆಯೊಳಗೆ ಹೋಗುವ ಆಹಾರ ದೇಹಕ್ಕೆ ಪುಷ್ಠಿ, ತಲೆಗೆ ಹೋಗುವ ವಿಚಾರ ವ್ಯಕ್ತಿತ್ವಕ್ಕೆ ಶಕ್ತಿ ಎಂದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಮುಖ್ಯಸ್ಥ ದೇವರಾಜ್ ಮಾತನಾಡಿ, ವಿದ್ಯಾರ್ಥಿಗಳು ಇಂದು ಹಲವು ರೀತಿಯ ಸವಾಲುಗಳನ್ನು ಎದುರಿಸಬೇಕಾಗಿದೆ. ತಂದೆ ತಾಯಿಯಿಂದ ಹಾಗೂ ಶಿಕ್ಷಕರಿಂದ ಮಾರ್ಗದರ್ಶನ ದೊರೆಯಬಹುದೆ ಹೊರತು ಆ ಸವಾಲುಗಳನ್ನು ಎದುರಿಸಬೇಕಾದವರು ವಿದ್ಯಾರ್ಥಿಗಳೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.