ಪ್ರಿಯಾಮಣಿ ಇಲ್ಲಿ ಭಾರೀ ಚಂದ

Team Udayavani, Jan 4, 2020, 5:55 AM IST

4

ನಟಿ ಪ್ರಿಯಾಮಣಿ ಅವರ ನಟನೆಯನ್ನು ಇಷ್ಟಪಡುವವರು ತುಂಬಾ ಜನರಿದ್ದಾರೆ. ನಾನು ಕೂಡ ಬೆಳ್ಳಿತೆರೆಯಲ್ಲಿ ಅವರ ನಟನೆಯನ್ನು ಇಷ್ಟಪಡುತ್ತೇನೆ. ಆದರೆ, ಅವರು ನನಗೆ ಹೆಚ್ಚು ಇಷ್ಟವಾಗಿದ್ದು ವೈಟ್‌ ಎಂಬ ಮಿನಿಚಿತ್ರದಲ್ಲಿ.

ಇಡೀ ಚಿತ್ರದಲ್ಲಿರುವುದು ಎರಡೇ ಪಾತ್ರ. ಆದರೆ, ಅದು ಕೊಡುವ ಸಂದೇಶ ಮಹತ್ವದ್ದು. ಸಂದೇಶವನ್ನು ಸ್ವೀಕರಿಸುವ ಮನಸ್ಥಿತಿಯನ್ನೂ ಈ ಚಿತ್ರ ಸೃಷ್ಟಿಸುತ್ತದೆ. ಲ್ಯಾಬ್ರಡಾರ್‌ ನಾಯಿಯ ಜೊತೆಗೆ ಬೆಟ್ಟದ ಮೇಲೆ ದಿನವೂ ವಾಕಿಂಗ್‌ ಹೋಗುವ ಸುಂದರಿಯ ಕೈಯಲ್ಲೊಂದು ಕೋಲು ಇರುತ್ತದೆ. ಸದಾ ನಾಯಿಯೇ ಆಕೆಯನ್ನು ಕರೆದುಕೊಂಡು ಮುಂದೆ ಮುಂದೆ ಹೋಗುತ್ತದೆ. ಮುಂಜಾನೆ ಬೆಟ್ಟವನ್ನು ಏರುತ್ತ ಸಾಗುವ ಈ ದೃಶ್ಯವನ್ನು ಅತ್ಯಂತ ಸುಂದರ ವಾಗಿ ಕೆಮರಾ ಸೆರೆ ಹಿಡಿದಿದೆ. ಸೂರ್ಯನ ಕಿರಣಗಳು, ಬೆಟ್ಟದಿಂದ ಕಾಣುವ ಹಸಿರ ಸೊಬಗು, ಆ ಹಸಿರಿಗೆ ಮುತ್ತಿಕ್ಕುವ ಮೋಡಗಳು, ಮಂಜಿನ ಹನಿಗಳ ಚೆಲ್ಲಾಟ… ಎಲ್ಲವೂ ಬಹಳ ಸುಂದರವಾಗಿದೆ.

ಒಂದು ದಿನ ಬೆಟ್ಟದ ಮೇಲೆ ಆಕೆಯ ನಾಯಿ ಕಾಣೆಯಾಗುತ್ತದೆ. ಆ ನಾಯಿಯನ್ನು ಹುಡುಕುವಾಗ, ಕೈಯಿಂದ ಆ ಕೋಲೂ ಕೆಳಕ್ಕೆ ಬೀಳುತ್ತದೆ. ಚಿತ್ರದ ನಾಯಕಿಗೆ ಕಣ್ಣು ಕಾಣುವುದಿಲ್ಲ ಎಂಬುದು ಆಗಲೇ ಪ್ರೇಕ್ಷಕರಿಗೆ ಅರಿವಾಗುವುದು. ಕೋಲಿನಿಂದ ಕೇವಲ ಐದಾರು ಸೆಂ.ಮೀ. ಅಂತರದಲ್ಲೇ ಆಕೆಯ ಕೈ ಇದ್ದರೂ, ಆಕೆಗೆ ಕೋಲು ಸಿಗುವುದಿಲ್ಲ. ಆಕೆಗೆ ಆಸರೆಯಾಗಿದ್ದ ಮೊದಲ ಜೀವ ನಾಯಿ ಕಾಣೆಯಾಗಿದೆ. ಎರಡನೆಯ ಆಸರೆ ಕೋಲೂ ಕೈಯಿಂದ ಜಾರಿದೆ. ಅಲ್ಲಿ ಕುಸಿದು ಕುಳಿತ ಆಕೆ ಸಹಾಯಕ್ಕಾಗಿ ಕಿರುಚುತ್ತಾಳೆ.

ಮತ್ತೆ ನಾಯಿ ಬಂದು ಆಕೆಗೆ ಕೋಲು ಎತ್ತಿಕೊಡುವ ದೃಶ್ಯವು ನೋಡುಗರ ಕಣ್ಣಲ್ಲಿ ನೀರು ತರಿಸುತ್ತದೆ. ಕೊನೆಯಲ್ಲಿ “ನೇತ್ರದಾನ’ದ ಮಹತ್ವವನ್ನು ಬೆಂಬಲಿಸಿ ಅಮಿತಾಭ್‌ ಬಚ್ಚನ್‌ ನೀಡುವ ಸಂದೇಶವಿದೆ. ಆ ಧ್ವನಿಯೂ ಚೆನ್ನಾಗಿದೆ. ಮನು ನಾಗ್‌ ನಿರ್ದೇಶನಕ್ಕೆ ಹ್ಯಾಟ್ಸ್‌ ಆಫ್ ಅನ್ನಲೇಬೇಕು.
(ನೋಡಿ : https://www.youtube.com/watch?v=91zBwrJuLAw)

ಕಿರಣ್‌ ಕುಮಾರ್‌ ಕಣ್ಣೂರು

ಟಾಪ್ ನ್ಯೂಸ್

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.