ಭಯದ ನೆರಳಲ್ಲಿ ಸಂಬಂಧ ಸರಪಳಿ

ಸೂರಿ ದುನಿಯಾದಲ್ಲಿ ಎಲ್ಲವೂ ಹೊಸದು

Team Udayavani, Jan 10, 2020, 5:54 AM IST

27

“ಟಗರು’ ಚಿತ್ರದ ಸೂಪರ್‌ ಹಿಟ್‌ ಸಕ್ಸಸ್‌ ನಂತರ ನಿರ್ದೇಶಕ ದುನಿಯಾ ಸೂರಿ ಸದ್ದಿಲ್ಲದೆ, ಮತ್ತೂಂದು ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಅಂದಹಾಗೆ, ಸೂರಿ ನಿರ್ದೇಶನದ ಹೊಸಚಿತ್ರದ ಹೆಸರು “ಪಾಪ್‌ಕಾರ್ನ್ ಮಂಕಿ ಟೈಗರ್‌’. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿ ಸೆನ್ಸಾರ್‌ ಮುಂದಿರುವ ಈ ಚಿತ್ರ ಇದೇ ಜನವರಿ ಕೊನೆಗೆ ಅಥವಾ ಫೆಬ್ರವರಿ ಮೊದಲವಾರ ತೆರೆಗೆ ಬರುವ ಸಾಧ್ಯತೆ ಇದೆ. ಇತ್ತೀಚೆಗಷ್ಟೆ ಟೀಸರ್‌ ಮೂಲಕ ಹೊರಬಂದಿರುವ “ಪಾಪ್‌ಕಾರ್ನ್ ಮಂಕಿ ಟೈಗರ್‌’ ನೋಡುಗರ ಗಮನ ಸೆಳೆಯುತ್ತಿದ್ದು, ಇದೇ ವೇಳೆ ಮಾತಿಗೆ ಸಿಕ್ಕ ನಿರ್ದೇಶಕ ದುನಿಯಾ ಸೂರಿ “ಪಾಪ್‌ಕಾರ್ನ್ ಮಂಕಿ ಟೈಗರ್‌’ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಓವರ್‌ ಟು ದುನಿಯಾ ಸೂರಿ

“ಪಾಪ್‌ಕಾರ್ನ್ ಮಂಕಿ ಟೈಗರ್‌’ನಲ್ಲಿ ಏನು ಹೇಳಲು ಹೊರಟಿದ್ದೀರಿ?
ಇದು ಮನುಷ್ಯನ ಸಂಬಂಧಗಳು ಮತ್ತು ಅದರ ಮೇಲಿರುವ ಭಯ ಎರಡರ ಸುತ್ತ ನಡೆಯುವ ಚಿತ್ರ. ಕೆಲ ಸಂಬಂಧಗಳು ಭಯ ಹುಟ್ಟಿಸುವಂತಿದ್ದರೂ, ಆ ಸಂಬಂಧಗಳು ನಮಗೆ ಬೇಕೆ ಬೇಕು ಎನಿಸುತ್ತವೆ. ಪ್ರೀತಿ-ಪ್ರೇಮ, ಬದುಕಿನ ವ್ಯಾಲ್ಯೂ, ಗಂಡು-ಹೆಣ್ಣಿನ ಸಂಬಂಧಗಳು ಎಲ್ಲವೂ ಇಲ್ಲಿದೆ. ನಮ್ಮೊಳಗಿನ ಅನೇಕ ಪ್ರಶ್ನೆಗಳಿಗೆ ಚಿತ್ರ ಉತ್ತರವಾಗುತ್ತದೆ. ನನ್ನ ಪ್ರಕಾರ ಇದು ನೋಡುಗನಿಗೆ ಒಂಥರಾ ಕನ್ನಡಿ ಇದ್ದಂತೆ!

ಧನಂಜಯ್‌ ಅವರ ಗೆಟಪ್‌, ಲುಕ್‌, ಮ್ಯಾನರಿಸಂ ಎಲ್ಲವೂ ಡಿಫ‌ರೆಂಟ್‌ ಆಗಿರುವಂತಿದೆಯಲ್ಲ?
ಹೌದು. “ಟಗರು’ ಮಾಡುವಾಗ ಡಾಲಿ ಪಾತ್ರಕ್ಕೆ ಧನಂಜಯ್‌ ಜೀವ ತುಂಬಿ ಅಭಿನಯಿಸಿದ್ದರು. ಆದ್ರೆ ಇದರಲ್ಲಿ ಹಾಗಲ್ಲ. ಧನಂಜಯ್‌ ಒಳಗಿನ ಒಬ್ಬ ವ್ಯಕ್ತಿಯ ಪಾತ್ರವೇ ಚಿತ್ರದಲ್ಲಿದೆ. ನಿರ್ದೇಶಕನಾಗಿ ಧನಂಜಯ್‌ ಒಳಗಿರುವ ಬೇರೆ ಬೇರೆ ವ್ಯಕ್ತಿತ್ವಗಳನ್ನು, ವಿಷಯಗಳನ್ನು ಹೊರತೆಗೆಯುವ ಪ್ರಯತ್ನ ಮಾಡಿದ್ದೇನೆ. ಹಾಗಾಗಿ ಧನಂಜಯ್‌ ಗೆಟಪ್‌, ಲುಕ್‌, ಮ್ಯಾನರಿಸಂ ಎಲ್ಲವೂ ಬೇರೆ ಥರನೇ ಕಾಣುತ್ತದೆ.

ಚಿತ್ರದ ಕಥೆ ಬಗ್ಗೆ ಏನು ಹೇಳುತ್ತೀರಿ?
ಇದು ಪ್ರತಿಯೊಬ್ಬರ ಜೀವನದಲ್ಲೂ ಅನುಭವಿಸಿರುವ, ಬಂದು ಹೋಗುವ, ನೋಡಿರುವಂಥ ಕಥೆ. ಒಂದು ಆ್ಯಕ್ಸಿಡೆಂಟ್‌ನ ನೋಡಿದವರು, ನೋಡದವರು ಒಬ್ಬೊಬ್ಬರು ಒಂದೊಂದು ರೀತಿ ಹೇಳ್ತಾರೆ. ಆದ್ರೆ ಆ್ಯಕ್ಸಿಡೆಂಟ್‌ ಆದವರು ಮತ್ತೂಂದು ಥರ ಹೇಳ್ತಾರೆ. ಹಾಗೆ ಸಿನಿಮಾದ ಕಥೆ ಕೂಡ. ನಾವು ಒಂದು ವಿಷಯವನ್ನ ಯಾವ ರೀತಿ ಹೇಳ್ತೀವಿ, ಹೇಗೆ ಹೇಳ್ತೀವಿ, ಯಾವ ದೃಷ್ಟಿಕೋನದಲ್ಲಿ ಹೇಳ್ತೀವಿ ಅನ್ನೋದು ಮುಖ್ಯ. ಇದರಲ್ಲೂ ಹಾಗೇ, ಎಲ್ಲರಿಗೂ ತಲುಪುವಂಥ ಕಥೆಯನ್ನ ನನ್ನದೇ ಸ್ಟೈಲ್‌ನಲ್ಲಿ ಸ್ಕ್ರೀನ್‌ ಮೇಲೆ ಪ್ರಸೆಂಟ್‌ ಮಾಡಿದ್ದೇನೆ.

ಟೀಸರ್‌ ನೋಡಿದ್ರೆ, ರಾ ಮೇಕಿಂಗ್‌ ಎದ್ದು ಕಾಣಿಸುತ್ತಿದೆಯಲ್ಲ?
ಚಿತ್ರದ ಸಬ್ಜೆಕ್ಟ್ ಹಾಗಿದೆ. ಅದಕ್ಕೆ ತಕ್ಕಂತೆ ಮೇಕಿಂಗ್‌ ಮಾಡಿದ್ದೇವೆ. ಒಬ್ಬ ವ್ಯಕ್ತಿಯೊಳಗಿನ ಪ್ರೀತಿ-ಪ್ರೇಮ, ಭಯ, ಅಸಹನೆ, ಆಕ್ರೋಶ, ಆನಂದ, ಎಲ್ಲವನ್ನೂ ಇದರಲ್ಲಿ ಕಟ್ಟಿಕೊಡಬೇಕಾಗಿತ್ತು. ಹಾಗಾಗಿ ಅದೆಲ್ಲದರ ಝಲಕ್‌ ಅನ್ನು ಟೀಸರ್‌ನಲ್ಲಿ ನೋಡಬಹುದು. ಸಿನಿಮಾದಲ್ಲಿ ಅದೆಲ್ಲದಕ್ಕೂ ಉತ್ತರ ಸಿಗುತ್ತದೆ. ಪ್ರತಿ ದೃಶ್ಯ, ಸನ್ನಿವೇಶಗಳು ಕಾಡುತ್ತ ಸಾಗುತ್ತದೆ.

ಚಿತ್ರದ ಟೀಮ್‌ ಬಗ್ಗೆ ಏನಂತೀರಾ..?
ಇಡೀ ಚಿತ್ರವನ್ನು ಧನಂಜಯ್‌ ಸಂಭಾಳಿಸಿಕೊಂಡು ಹೋಗುತ್ತಾರೆ. ಉಳಿದಂತೆ ನಿವೇದಿತಾ, ಅಮೃತಾ ಅಯ್ಯಂಗಾರ್‌, ಮೋನಿಷಾ, ಸಪ್ತಮಿ ಹೀಗೆ ಹಲವರ ಪಾತ್ರಗಳು ಅದಕ್ಕೆ ಜೊತೆಯಾಗಿ ಸಾಗುತ್ತವೆ. ಬಹುತೇಕ ಹೊಸ ಹುಡುಗರ ಜೊತೆಗೆ ಈ ಚಿತ್ರವನ್ನು ಮಾಡಿದ್ದೇನೆ. ನಾನು ಏನು ಥಿಂಕ್‌ ಮಾಡ್ತೀನಿ ಅನ್ನೋದು, ಮೊದಲು ನನ್ನ ಜೊತೆಗಿದ್ದವರಿಗೆ ಗೊತ್ತಾಗಬೇಕು. ಆನಂತರವೇ ಅದನ್ನ ಜನರಿಗೆ ತಲುಪಿಸೋದಕ್ಕೆ ಸಾಧ್ಯವಾಗೋದು. ಈ ಟೀಮ್‌ನಿಂದ ಅದು ಸಾಧ್ಯವಾಗಿದೆ.

  • ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesh Chaturthi; ನಟಿಮಣಿಯರ ಚೌತಿ ಸಂಭ್ರಮ; ಬಾಲ್ಯದ ಹಬ್ಬದ ನೆನಪು ಹಂಚಿಕೊಂಡ ನಟಿಯರು…

Ganesh Chaturthi; ನಟಿಮಣಿಯರ ಚೌತಿ ಸಂಭ್ರಮ; ಬಾಲ್ಯದ ಹಬ್ಬದ ನೆನಪು ಹಂಚಿಕೊಂಡ ನಟಿಯರು…

ಇಂದಿನಿಂದ ತೆರೆಯಲ್ಲಿ ಅನ್ನ ಪ್ರಸಾದ

Anna Movie; ಇಂದಿನಿಂದ ತೆರೆಯಲ್ಲಿ ‘ಅನ್ನ’ ಪ್ರಸಾದ

Bhuvanam Gaganam ಹಾಡಿನ ಸದ್ದು; ರೊಮ್ಯಾಂಟಿಕ್‌ ಹಾಡಿನಲ್ಲಿ ರಚೆಲ್‌-ಪ್ರಮೋದ್‌

Bhuvanam Gaganam ಹಾಡಿನ ಸದ್ದು; ರೊಮ್ಯಾಂಟಿಕ್‌ ಹಾಡಿನಲ್ಲಿ ರಚೆಲ್‌-ಪ್ರಮೋದ್‌

Sandalwood; 8 ತಿಂಗಳು 150 ಸಿನಿಮಾ.. ಗೆದಿದ್ದು ಕೆಲವು, ಸೋತಿದ್ದು ಹಲವು

Sandalwood; 8 ತಿಂಗಳು 150 ಸಿನಿಮಾ.. ಗೆದ್ದಿದ್ದು ಕೆಲವು, ಸೋತಿದ್ದು ಹಲವು

Vinay Rajkumar; ಪೆಪೆ ನೋಡಿದ ಬಳಿಕ ಮೌನ ಕಾಡಿತು..: ವಿನಯ್‌ ಮಾತು

Vinay Rajkumar; ಪೆಪೆ ನೋಡಿದ ಬಳಿಕ ಮೌನ ಕಾಡಿತು..: ವಿನಯ್‌ ಮಾತು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.