ಕನ್ಯೆಯರ ನೆಚ್ಚಿನ ಕ್ರಾಪ್‌ ಟಾಪ್‌

ಸದ್ಯ ಮಾರುಕಟ್ಟೆಯಲ್ಲಿ ರೋಸ್‌ ಪೆಟಲ್‌ಗ‌ಳದ್ದೇ ಕಮಾಲ್‌

Team Udayavani, Jan 10, 2020, 5:50 AM IST

Deepika

ಇತಿಹಾಸ ಮರುಕಳಿಸುತ್ತದೆ ಎನ್ನುವುದು ಬರೀ ಇತಿಹಾಸಕ್ಕೆ ಹೊಂದುತ್ತದೆ ಎನ್ನಬೇಕಿಲ್ಲ. ಫ್ಯಾಷನ್‌ಗೂ ಈ ಮಾತು ಅಕ್ಷರಶಃ ಅನ್ವಯ. ಎಷ್ಟು ಸಂಗತಿಗಳು ಬೇಕು, ನೂರು ವರ್ಷದ ಹಿಂದೆ ತೊಡುತ್ತಿದ್ದ ದಿರಿಸು ಇಂದಿನ ತಲೆಮಾರಿಗೆ ಟ್ರೆಂಡಿಂಗ್‌ ಡ್ರೆಸ್‌. ಹೀಗೆಯೇ ಕ್ರಾಪ್‌ಟಾಪ್‌ ಸಹ ನೂರು ವರ್ಷಗಳ ಹಿಂದೆ ಕಂಗೊಳಿಸಿದ್ದು. ಈಗ ಮತ್ತೆ ಕಂಗೊಳಿಸ
ತೊಡಗಿದೆ ಎನ್ನುತ್ತಾರೆ ರಾಧಿಕಾ.

ದೀಪಿಕಾ ಪಡುಕೋಣೆ ಇತ್ತೀಚಿನ ಒಂದು ಕಾರ್ಯ ಕ್ರಮದಲ್ಲಿ ಕಾಣಿಸಿಕೊಂಡದ್ದು ಈ ಡ್ರೆಸ್‌ನಲ್ಲಿ. ದೊಡ್ಡ ದೊಡ್ಡ ಗುಲಾಬಿ ಪಕಳೆಗಳನ್ನು ಮುದ್ರಿಸಿದ ಸೀರೆ. ಅದರ ಬಣ್ಣವೂ ಹಿತಕರವೆನಿಸುತ್ತಿತ್ತು.

ಸೀರೆ ಎನ್ನುವುದು ಎವರ್‌ ಗ್ರೀನ್‌ ಫ್ಯಾಷನ್‌. ಅದನ್ನು ಉಟ್ಟು ಸಾಂಪ್ರದಾಯಿಕ ವಾಗಿ ಕಾಣವು ದರೊಂದಿಗೆ ಅಷ್ಟೇ ಅಧುನಿಕವಾಗಿಯೂ ಕಾಣಬಹುದು. ಇತ್ತೀಚೆಗೆ ಹುಡುಗಿಯರಿಂದ ಹಿಡಿದು ಮಹಿಳೆಯರಿಗೆ ರೇಷ್ಮೆ, ಕಾಟನ್‌ ಸೀರೆ ಬದಲು ಫ್ಯಾಷನ್‌ ಸೀರೆ ಧರಿಸಲು ಹೆಚ್ಚು ಇಷ್ಟ. ಅದ ರಲ್ಲೂ ಸೆಲೆಬ್ರಿಟಿಗಳ ಸ್ಟೈಲ್‌ ಬಹು ಬೇಗ ಜನ ಪ್ರಿಯವಾಗುತ್ತದೆ. ಇದೀಗ ಈ ಸಾಲಿಗೆ ಪ್ರಿಂಟೆಡ್‌ ರೋಸ್‌ ಪೆಟಲ್‌ ಸೀರೆ ಸೇರಿ ಕೊಂಡಿದೆ. ಬಾಲಿವುಡ್‌ ತಾರೆಗಳಿಗೀಗ ಈ ಸೀರೆ ಎಂದರೆ ಅಚ್ಚುಮೆಚ್ಚು.

ಪ್ರಿಂಟೆಡ್‌ ಸೀರೆಯ ಹೊಸ ಬೆರಗು
ಪ್ರಿಂಟೆಡ್‌ ಸೀರೆ ಟ್ರೆಂಡಿಯಾಗದಿದ್ದರೂ ಆಗೊಮ್ಮೆ ಈಗೊಮ್ಮೆ ಫ್ಯಾಷನ್‌ ಲೋಕದಲ್ಲಿ ಇಣು ಕುತ್ತಿರುತ್ತದೆ. ಸ್ವಲ್ಪ ಕಾಲ ಜನಪ್ರಿಯವಾಗಿ ಮತ್ತೆ ತೆರೆಗೆ ಸರಿಯುತ್ತದೆ. ಸಮಯ ಸರಿದಂತೆ ಮತ್ತೂಮ್ಮೆ ಮರಳುತ್ತದೆ. ಮತ್ತೆ ಮಾಯ. ಆದರೆ ಯಾವಾಗ ಅವತಾರ ಎತ್ತಿದರೂ ಜನಪ್ರಿಯತೆಗೇನೂ ಕೊರತೆ ಇಲ್ಲ. ಇಂಥ ಪ್ರಿಂಟೆಂಡ್‌ ಸೀರೆಗಳಿಗೆ ಹೊಸ ರೂಪ ದೊರಕಿದ್ದು, ಗುಲಾಬಿ ದಳಗಳ ಚಿತ್ತಾರ ಕಂಗೂಳಿಸುತ್ತಿದೆ. ಇನ್ನೂ ಕ್ರೀಮ್‌ ಅಥವಾ ಬಿಳಿ ಬಣ್ಣಗಳ ಪ್ಲೇನ್‌ ಸೀರೆಗಳ ಮೇಲೆ ಕೆಂಪು ಅಥವಾ ಪಿಂಕ್‌ ಬಣ್ಣದ ಗುಲಾಬಿ ದಳಗಳ ಪ್ರಿಂಟ್‌ ಸೊಗಸಾಗಿ ಕಾಣುತ್ತದೆ.

ಬೌಟ್‌ನೆಕ್‌ ಬ್ಲೌಸ್‌
ಹೌದು, ಅದೇ ಸೀರೆಯ ಮ್ಯಾಚಿಂಗ್‌ ಬ್ಲೌಸ್‌ ಸೂಟ್‌ ಆಗಲಿದ್ದು, ಬೌಟ್‌ನೆಕ್‌ ಅಥವಾ ಕಾಲರ್‌ ಬ್ಲೌಸ್‌ ವಿನ್ಯಾಸ ಒಗ್ಗುತ್ತದೆ. ಇಂದು ಪೇಜ್‌ 3 ಹಾಗೂ ಸೆಲಬ್ರಿಟಿಗಳ ಫ್ಯಾಷನ್‌ ಲಿಸ್ಟ್‌ ನಲ್ಲಿ ಇವು ಗಳಿಗೇ ಅಗ್ರಸ್ಥಾನ.

ಆಭರಣಗಳ ಅಗತ್ಯವಿಲ್ಲ
ಇನ್ನು ಈ ಸೀರೆಗೆ ಹೆಚ್ಚು ಆಕ್ಸೆಸರೀಸ್‌ ಧರಿಸುವ ಅಗತ್ಯವಿಲ್ಲ. ಸ್ಕಿನ್‌ ಟೋನ್‌ ಹಾಗೂ ಮೆಟೀರಿಯಲ್‌ಗೆ ತಕ್ಕಂತೆ ವಿನ್ಯಾಸ ಆಯ್ಕೆ ಮಾಡಿ ಸಿಂಪಲ್‌ ಚೈನ್‌ ಅಥವಾ ದೊಡ್ಡ ಕಿವಿ ಓಲೆ ಹಾಕಿದ್ದರೆ ಸಾಕು. ಜತೆಗೆ ಈ ಸೀರೆಗೆ ಹೈ ಹೀಲ್ಡ್‌ ಸ್ಯಾಂಡಲ್ಸ…ಗಿಂತ ಫ್ಲ್ಯಾಟ್‌ ಸ್ಯಾಂಡಲ್ಸ್‌ ಹೊಂದಿಕೆಯಾಗ ಲಿದ್ದು, ಕೂದಲನ್ನು ಮುಕ್ತವಾಗಿ ಬಿಡುವುದಕ್ಕಿಂತ ಪೋನಿ ಟೇಲ್‌ ಮಾಡಿ ದರೇ ಉತ್ತಮ.

ಮಹಿಳೆಯರ ಕಪಾಟಿನಲ್ಲಿ ಅದೆಷ್ಟೇ ಚೆಂದದ ದಿರಿಸುಗಳಿದ್ದರೂ ಪ್ರತಿ ಹೆಣ್ಣಿಗೂ ಈ ಕ್ಷಣದ ಫ್ಯಾಷನ್‌ ಬಗ್ಗೆಯೇ ಚಿಂತೆ. ಬಹುಪಾಲು ಇಂತಹ ಫ್ಯಾಷನ್‌ಗಳು ಬಂದಷ್ಟೇ ವೇಗದಲ್ಲಿ ತೆರೆಗೆ ಸರಿಯವುದುಂಟು. ಆದರೆ ಸೀರೆ ಇರಲಿ, ಸಲ್ವಾರ್‌ ಇರಲಿ, ಡೆನಿಮYಳಿರಲಿ-ಎಲ್ಲಕ್ಕೂ ಹೊಂದಿಕೊಳ್ಳುವ ಗುಣವಿದ್ದು, ಹೊಸ ಝಲಕ್‌ ಕೊಡುವ ದಿರಿಸುವ ಇದ್ದರೆ ಅದು ಕ್ರಾಪ್‌ ಟಾಪ್‌.

ಫ್ಯಾಷನ್‌ ಶೋಗಳಲ್ಲಿ ಪ್ರದರ್ಶನಗೊಳ್ಳುವ ಬಹು ಪಾಲು ದಿರಿಸುಗಳಲ್ಲಿ, ಸೆ‌ಲೆಬ್ರಿಟಿ ಫ್ಯಾಶನ್‌ ಇವೆಂಟ್‌ ನಲ್ಲಿಯೂ ಕ್ರಾಪ್‌ ಟಾಪ್‌ ಇಂದು ತನ್ನ ಹವಾ ಮೂಡಿ ಸಿದೆ. ಕಂಫ‌ರ್ಟ್‌ ದೃಷ್ಟಿಯಿಂದ ಈ ಬಟ್ಟೆ ಸ್ವಲ್ಪ ಅಸಹಜ ಎನಿಸಿದರೂ ನೀರೆಯರ ಫ್ಯಾಷನ್‌ ಲಿಸ್ಟ್‌ನಲ್ಲಿ ಪ್ರಮುಖ ಸ್ಥಾನ ಪಡೆದಿದೆ.

ಹಿಂದೆಯೂ ಇದೇ ಫೇಮಸ್‌
ಇದು ಇತ್ತೀಚಿನ ಫ್ಯಾಷನ್‌ ಇರಬೇಕು ಮುಂದೆ ಔಟ್‌ ಡೇಟ್‌ ಆಗುತ್ತದೆ ಎಂಬ ನಿರಾಸೆ ಬೇಡ. 1893ರರಲ್ಲಿ ಚಿಕಾಗೋದಲ್ಲಿ ನಡೆದ ವರ್ಲ್ಡ್ ಫೇರ್‌ನ ಲಿಟಲ್‌ ಈಜಿಪ್ಟ್ ವೇದಿಕೆಯಲ್ಲಿ ಬೆಲ್ಲಿ ಡ್ಯಾನ್ಸರ್‌ಗಳು ಈ ಕ್ರಾಪ್‌ ಟಾಪ್‌ ಧರಿಸಿ ಡ್ಯಾನ್ಸ್‌ ಮಾಡಿದ್ದರಂತೆ. ಅಂದರೆ ಶತಮಾನದ ಇತಿಹಾಸ ಈ ಪುಟ್ಟ ಟಾಪ್‌ ಗೆ ಇದೆ ಎಂದರೆ ನೀವು ನಂಬಲೇಬೇಕು. 1940ರ ಸುಮಾರಿಗೆ ಈ ಡ್ರೆಸ್‌ ಬೀಚ್‌ ಡ್ರೆಸ್‌ ಆಗಿ ಟ್ರೆಂಡ್‌ ಆಯ್ತು. 1970ರಲ್ಲಿ ಪ್ರಸಿದ್ಧ ನಟಿ ಬರ್ಬರಾ ಏಡೆನ್‌ನ ಮೂಲಕ ಫ್ಯಾಷನ್‌ ಜಗತ್ತಿಗೆ ಈ ಟಾಪ್‌ ಕಾಲಿಟ್ಟಿದ್ದು ಇಂದು ಮತ್ತೆ ಟ್ರೆಂಡ್‌ ಸೃಷ್ಟಿಸುತ್ತಿದೆ.

ಯಾವುದಕ್ಕೆ ಮ್ಯಾಚಿಂಗ್‌
ಟ್ರೆಂಡ್‌ ಲುಕ್‌ ನೀಡುವ ಸಂಯೋಜನೆಯ ಆಯ್ಕೆಯಲ್ಲಿಯೂ ವಿಭಿನ್ನತೆ ಇರುತ್ತದೆ. ಧೋತಿ ಪ್ಯಾಂಟ್‌ ಅಥವಾಸಲ್ವಾರ್‌ ಕಮಿಸ್‌ ಪ್ಯಾಂಟ್‌ ನೊಂದಿಗೆ ಕ್ರಾಪ್‌ ಟಾಪ್‌ ಸೊಗಸು ಹೆಚ್ಚಿಸುತ್ತದೆ. ಲಂಗ, ಸ್ಕರ್ಟ್‌, ಸೀರೆ ಹೀಗೆ ಬಹುತೇಕ ಹೊಂದಿಕೆಯ ಡ್ರೆಸ್‌ಗಳನ್ನು ನೀವು ಟ್ರೈ ಮಾಡ ಬಹುದು. ಇದರೊಂದಿಗೆ ಲಾಂಗ್‌ ಜಾಕೆಟ್‌ ಇತ್ತೀ ಚೆಗೆ ತೊಡುತ್ತಿದ್ದು, ಹಾಯಾಗಿರಬೇಕೆಂದು (ಕಂಫ‌ರ್ಟ್‌) ಬಯಸುವ ನೀರೆಯರಿಗೆ ಇದು ಉಪಯುಕ್ತ.

ವಿಶೇಷತೆ
ಈ ಡ್ರೆಸ್‌ನಲ್ಲಿ ಕುಳ್ಳಗಿರುವವರು ಕೊಂಚ ಎತ್ತರಕ್ಕೆ, ಎತ್ತರ ಕ್ಕಿರುವವರು ಸ್ಮಾರ್ಟ್‌ ಆಗಿಯೂ ಕಾಣುತ್ತಾರೆ. ಇದರೊಂದಿಗೆ ತೀರ ತೆಳ್ಳಗಿರುವವರು ಇದನ್ನು ಧರಿಸುವುದರಿಂದ ಸ್ವಲ್ಪ ಫ್ಯಾಟ್‌ ಲುಕ್‌ ಪಡೆದು ಸೊಗಸಾಗಿ ತೋರುತ್ತಾರೆ. ದಪ್ಪ ಮೈಕಟ್ಟು ಹೊಂದಿರುವವರಿಗೆ ಸ್ಲಿಮ್‌ ಆಗಿ ಮತ್ತು ಸ್ಟೈಲಿಶ್‌ ಆಗಿ ಕಾಣಲು ಸಾಧ್ಯವಿದೆ. ಜತೆಗೆ ಬೇಸಗೆಗೆ ಬೆವರುವಿಕೆಯಿಂದ ತಪ್ಪಿಸಿ ಆರಾಮದಾಯಕ ಅನುಭವ ಪಡೆಯಲು ಈ ಬಟ್ಟೆ ಸೂಕ್ತ. ಇಂದು ಮಹಿಳೆಯರು ಮಾತ್ರವಲ್ಲದೇ ಪುರುಷರಲ್ಲಿಯೂ ಕ್ರಾಪ್‌ ಟಾಪ್‌ ಫ್ಯಾಷನ್‌ ಆರಂಭವಾಗಿರು ವುದು ವಿಶೇಷ.

ಹೀಗಿರಲಿ ಮೇಕ್‌ ಅಪ್‌(ಮೇಕಪ್‌)
ಕ್ರಾಪ್‌ ಟಾಪ್‌ ಧರಿಸುವವರು ಅತಿಯಾಗಿ ಮೇಕಪ್‌ ಮಾಡಿಕೊಳ್ಳ ಬೇಕಿಲ್ಲ. ಸರಳ ಸೌಂದರ್ಯದಲ್ಲೂ ನೀವು ಕಂಗೊಳಿಸಬಹುದು. ಕ್ರಾಪ್‌ ಟಾಪ್‌ನೊಂದಿಗೆ ಧೋತಿ ಧರಿಸಬೇಕೆಂದಿದ್ದರೆ ರೌಂಡ್‌ ಪ್ಲೇನ್‌ ಕಿವಿಯೋಲೆ ಸೂಕ್ತ. ಸೀರೆಯೊಂದಿಗೆ ದೊಡ್ಡ ಸ್ಟೈಲಿಶ್‌ ಕಿವಿಯೋಲೆ ಧರಿಸಿ, ದಪ್ಪಗಿನ ಮೆಟಲ್‌ ಬಳೆಯೂ ಅದ್ದೂರಿ ನೋಟ ನೀಡಬಲ್ಲದು. ಯಾವ ಬಣ್ಣದ ಬಟ್ಟೆಯನ್ನು ಆರಿಸಿದ್ದೀರಿ ಎಂಬುದನ್ನು ಆಧರಿಸಿ ಅದಕ್ಕೆ ಹೊಂದುವ ಲಿಪ್‌ಸ್ಟಿಕ್‌, ಮೇಕಪ್‌, ಕಿವಿಯೋಲೆ ಆಯ್ಕೆ ಮಾಡಿಕೊಂಡರೆ ಉತ್ತಮ.

ಸೆಲೆಬ್ರಿಟಿ ಲುಕ್‌
ಈ ಬಟ್ಟೆ ಜನಪ್ರಿಯತೆಯ ಕುದುರೆ ಹತ್ತಿದ್ದು ಬಹುಪಾಲು ಸಿನೆಮಾ ಮತ್ತು ಆಲ್ಬಂ ಹಾಡುಗಳಿಂದ. ಪ್ರಿಯಾಂಕ ಚೋಪ್ರಾ, ಸೋನಮ್‌ ಕಪೂರ್‌-ಹೀಗೆ ಬಹುತೇಕ ನಟಿಯರು ಈ ಕ್ರಾಪ್‌ನ ಚೆಲುವೆಯರು ಎನ್ನಬಹುದು.

ನೂತನ ಟ್ರೆಂಡ್‌
ಇಂದು ಕ್ರಾಪ್‌ ಟಾಪ್‌ನಲ್ಲಿ ಪ್ರಸಿದ್ಧವಾಗುತ್ತಿರು ವುದು ಹಾಫ್ ಶೋಲ್ಡರ್‌ ಫ್ಯಾಷನ್‌. ಇದು ಟೀ ಶರ್ಟ್‌, ಜೀನ್ಸ್‌ ಟಾಪ್‌ ಮತ್ತು ಕುರ್ತಾ ಟಾಪ್‌ನಲ್ಲಿಯೂ ಲಭ್ಯವಿದೆ. ಕುತ್ತಿಗೆಯ ಭಾಗದಲ್ಲಿ ಹೆಚ್ಚು ಡಿಸೈನ್‌ ಮಾಡಿದಂಥ ಟಾಪ್‌ಗ್ಳು ಆಕರ್ಷಕವಾಗಿ ಕಾಣಬಲ್ಲವು.

ಟಾಪ್ ನ್ಯೂಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

1-aaa

PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

1(4

Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ

Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.