ಮಲೇಶ್ಯ ಮಾಸ್ಟರ್ ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್ಗೆ ಸೈನಾ, ಸಿಂಧು
Team Udayavani, Jan 10, 2020, 12:22 AM IST
ಕೌಲಾಲಂಪುರ: ಮಲೇಶ್ಯ ಮಾಸ್ಟರ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ವನಿತಾ ತಾರೆಗಳ ಓಟ ಮುಂದುವರಿದಿದೆ. ಸೈನಾ ನೆಹ್ವಾಲ್ ಮತ್ತು ಪಿ.ವಿ. ಸಿಂಧು ದ್ವಿತೀಯ ಸುತ್ತು ದಾಟಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಪುರುಷರ ಆಟ ಕೊನೆಗೊಂಡಿದೆ.
ಗುರುವಾರದ ಮುಖಾಮುಖೀಯಲ್ಲಿ 6ನೇ ಶ್ರೇಯಾಂಕದ ಸಿಂಧು ಜಪಾನಿನ ಅಯಾ ಒಹೊರಿ ಅವರನ್ನು 21-10, 21-15 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು. ಇವರ ಕಾದಾಟ 34 ನಿಮಿಷಗಳ ತನಕ ಸಾಗಿತು. ಇದು ಒಹೊರಿ ವಿರುದ್ಧ ಸಿಂಧು ಸಾಧಿಸಿದ ಸತತ 9ನೇ ಗೆಲುವು. ಕ್ವಾರ್ಟರ್ ಫೈನಲ್ನಲ್ಲಿ ಸಿಂಧು ವಿಶ್ವದ ನಂಬರ್ ವನ್ ಆಟಗಾರ್ತಿ, ಚೈನೀಸ್ ತೈಪೆಯ ತೈ ಜು ಯಿಂಗ್ ಅವರನ್ನು ಎದುರಿಸಬೇಕಿದೆ. ದಿನದ ಇನ್ನೊಂದು ಪಂದ್ಯದಲ್ಲಿ ಯಿಂಗ್ ದಕ್ಷಿಣ ಕೊರಿಯಾದ ಸುಂಗ್ ಜಿ ಹ್ಯುನ್ ಅವರನ್ನು 21-18, 16-21, 21-10 ಅಂತರದಿಂದ ಪರಾಭವಗೊಳಿಸಿದರು.
ಅನಂತರದ ಪಂದ್ಯದಲ್ಲಿ ಸೈನಾ ನೆಹ್ವಾಲ್ ದಕ್ಷಿಣ ಕೊರಿಯಾದ ಆ್ಯನ್ ಸೆ ಯಂಗ್ ಅವರನ್ನು 25-23, 21-12 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು. ಇದು ಯಂಗ್ ವಿರುದ್ಧ ಸೈನಾ ಸಾಧಿಸಿದ ಮೊದಲ ಗೆಲುವು.
ಸೈನಾ ನೆಹ್ವಾಲ್ ಅವರ ಕ್ವಾರ್ಟರ್ ಫೈನಲ್ ಎದುರಾಳಿ ಒಲಿಂಪಿಕ್ ಚಾಂಪಿಯನ್ ಖ್ಯಾತಿಯ ಸ್ಪೇನ್ ಆಟಗಾರ್ತಿ ಕ್ಯಾರೋಲಿನಾ ಮರಿನ್.
ಪುರುಷರಿಗೆ ಸೋಲು
ಈ ಕೂಟದಲ್ಲಿ ಭಾರತದ ಪುರುಷರ ಸವಾಲು ಅಂತ್ಯಗೊಂಡಿದೆ. ಸಮೀರ್ ವರ್ಮ, ಎಚ್.ಎಸ್. ಪ್ರಣಯ್ ಇಬ್ಬರೂ ದ್ವಿತೀಯ ಸುತ್ತಿನಲ್ಲಿ ಪರಾಭವಗೊಂಡರು. ಸಮೀರ್ ಅವರನ್ನು ಮಲೇಶ್ಯದ ಲೀ ಜೀ ಜಿಯ 21-19, 22-20 ಅಂತರದಿಂದ ಪರಾಭವಗೊಳಿಸಿದರೆ, ಪ್ರಣಯ್ ಅವರನ್ನು ಕೆಂಟೊ ಮೊಮೊಟ 21-14, 21-16 ಅಂಕಗಳಿಂದ ಹಿಮ್ಮೆಟ್ಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.