ತೋಳ ಚಂದ್ರಗ್ರಹಣ; ದ್ವಾದಶ ರಾಶಿಗಳ ಮೇಲೆ ಯಾವ ಪರಿಣಾಮ ಬೀರಲಿದೆ, ಯಾರಿಗೆ ಶುಭ, ಮಿಶ್ರಫಲ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅರೆನೆರಳಿನ ಚಂದ್ರಗ್ರಹಣ ಮಿಥುನ ರಾಶಿ, ಪುನರ್ವಸು ನಕ್ಷತ್ರದಲ್ಲಿ ನಡೆಯಲಿದೆ.

Team Udayavani, Jan 10, 2020, 12:37 PM IST

Lunar-eclips

ಬೆಂಗಳೂರು: 2019ರ ವರ್ಷಾಂತ್ಯದಲ್ಲಷ್ಟೇ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿದ್ದ ಭಾರತ, ಇದೀಗ ಹೊಸ ವರ್ಷದಲ್ಲಿ ಚಂದ್ರಗ್ರಹಣದ ಕೌತುಕಕ್ಕೆ ಸಿದ್ದವಾಗಿದೆ. ಶುಕ್ರವಾರ ಮಧ್ಯರಾತ್ರಿ ಚಂದಿರನಿಗೆ ಅಡ್ಡವಾಗಿ ನಿಲ್ಲಲಿರುವ ಭೂಮಿ, ಚಂದ್ರನ ಮೇಲೆ ಬೀಳುವ ತನ್ನ ನೆರಳನ್ನೇ ವೀಕ್ಷಿಸಲಿದೆ. ಜನವರಿ ತಿಂಗಳನ್ನು ತೋಳಗಳ ತಿಂಗಳು ಎಂದೇ ಕರೆಯುತ್ತಾರೆ. ಆದ್ದರಿಂದ ಜನವರಿ ತಿಂಗಳಿನಲ್ಲಿ ಘಟಿಸಲಿರುವ ಚಂದ್ರಗ್ರಹಣವನ್ನು ತೋಳಗಳಿಗೆ ಸಮರ್ಪಿಸಿ, ಅದನ್ನು ತೋಳಗ್ರಹಣ ಎಂದು ಕರೆಯುವ ವಾಡಿಕೆ ಇದೆ.

ಈ ತೋಳಗ್ರಹಣ ರಾತ್ರಿ 10-37ಕ್ಕೆ ಆರಂಭವಾಗಲಿದ್ದು, 12.40ಕ್ಕೆ ಪೂರ್ಣ ಪ್ರಮಾಣದಲ್ಲಿ ಗ್ರಹಣ ಗೋಚರಲಿದೆ. ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ಭಾಗಗಳಲ್ಲಿಯೂ ಗ್ರಹಣ ಗೋಚರಿಸಲಿದೆ. ಬೆಳಗಿನ ಜಾವ 2.42ಕ್ಕೆ ಗ್ರಹಣ ಮೋಕ್ಷ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅರೆನೆರಳಿನ ಚಂದ್ರಗ್ರಹಣ ಮಿಥುನ ರಾಶಿ, ಪುನರ್ವಸು ನಕ್ಷತ್ರದಲ್ಲಿ ನಡೆಯಲಿದೆ. ನಭೋ ಮಂಡಲದಲ್ಲಿ ಬದಲಾಗುವ ಗ್ರಹಗಳಿಂದಾಗಿ ಆಯಾಯ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ದ್ವಾದಶ ರಾಶಿಗಳ ಮೇಲೆ ಯಾವ ಫಲ ಬೀರಲಿದೆ, ಯಾವ ರಾಶಿಗೆ ಶುಭ, ಯಾವ ರಾಶಿಗೆ ಅಶುಭ ಫಲ ಎಂಬ ಕಿರು ಮಾಹಿತಿ ಇಲ್ಲಿದೆ.

ತೋಳಗ್ರಹಣದ ಹಿನ್ನೆಲೆಯಲ್ಲಿ ಶುಭ ಫಲದ ರಾಶಿಗಳು:

ಮೇಷ, ಕರ್ಕ, ವೃಶ್ಚಿಕ, ಮಕರ, ಕನ್ಯಾ, ಕುಂಭ, ಮೀನ

ಮಿಶ್ರ ಫಲದ ರಾಶಿಗಳು ಯಾವುವು?

ವೃಷಭ, ಮಿಥುನ, ತುಲಾ, ಧನುಸ್ಸು, ಸಿಂಹ

ದ್ವಾದಶ ರಾಶಿಗಳ ಮೇಲಾಗುವ ಪರಿಣಾಮ ಏನು?

ಮೇಷ ರಾಶಿ: ಮೇಷ ರಾಶಿಯ ಮೂರನೇ ಮನೆಯಲ್ಲಿ ಗ್ರಹಣ ಸಂಭವಿಸುವ ನಿಟ್ಟಿನಲ್ಲಿ ಸಂಬಂಧಗಳ ಮೇಲೆ ಪರಿಣಾಮ ಬೀರಲಿದೆ. ಅಣ್ಣ, ತಂಗಿ ನಡುವೆ ವಿನಾಃಕಾರಣ ವಾಗ್ವಾದ, ವೈಮನಸ್ಸು ತಲೆದೋರಬಹುದು. ಈ ಹಿನ್ನೆಲೆಯಲ್ಲಿ ಮಾತುಕತೆ ಸಮಯ ಎಚ್ಚರಿಕೆ ಅಗತ್ಯ. ಪರಿಸ್ಥಿತಿಯನ್ನು ಸಮಾಧಾನದಿಂದ ನಿಭಾಯಿಸಿ.

ವೃಷಭ ರಾಶಿ:ಈ ರಾಶಿಯವರ ಎರಡನೇ ಮನೆಯಲ್ಲಿ ಗ್ರಹಣ ಸಂಭವಿಸುವುದರಿಂದ ಹಣಕಾಸು ಮತ್ತು ಕೌಟುಂಬಿಕ ಸಂಬಂಧದಲ್ಲಿ ವ್ಯತ್ಯಯವಾಗಲಿದೆ. ಯಾರೊಡನೆಯೂ ಸಂಬಂಧ ಹದಗೆಡುವ ಪರಿಸ್ಥಿತಿಗೆ ಎಡೆ ಮಾಡಿಕೊಡದಿರಿ. ಕುಟುಂಬದಲ್ಲಿ ದಿಢೀರ್ ಖರ್ಚು, ವೆಚ್ಚಗಳಿಗೆ ದಾರಿಯಾಗಬಹುದು. ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಉತ್ತಮ.

ಮಿಥುನ ರಾಶಿ: ಈ ರಾಶಿಯ ಒಂದನೇ ಮನೆಯಲ್ಲಿ ಗ್ರಹಣ ಸಂಭವಿಸುವುದರಿಂದ ಮಾನಸಿಕ ಒತ್ತಡದಿಂದ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಈ ಗ್ರಹಣ ನಿಮ್ಮ ಗುರಿಯನ್ನು ಸಾಧಿಸಲು ಸಹಕಾರ ನೀಡಲಿದೆ. ಕೌಟುಂಬಿಕ ವಿಚಾರದಲ್ಲಿ ಹೆಚ್ಚಿನ ಮಹತ್ವ ನೀಡಿ, ನಿಮ್ಮ ಪ್ರಯತ್ನ ಮುಂದುವರಿಸಿ ಫಲ ಲಭ್ಯ.

ಕಟಕ ರಾಶಿ: ಈ ರಾಶಿಯವರಿಗೆ ಹನ್ನೊಂದನೆ ಮನೆಯಲ್ಲಿ ಗ್ರಹಣ ಸಂಭವಿಸಲಿದೆ. ನಿಮಗಿದು ಸಂಧಿ ಕಾಲ. ನಿಮ್ಮ ಬದುಕಿನ ದಿಕ್ಕನ್ನು ನೀವೇ ಆಯ್ಕೆ ಮಾಡಿಕೊಳ್ಳಬೇಕಾದ ಸಮಯ ಇದಾಗಿದೆ. ನೀವು ಏಕಾಂಗಿ ಅಲ್ಲ ಎಂಬುದು ನೆನಪಿರಲಿ. ಮನಸ್ಸಿನ ನೆಮ್ಮದಿಗೆ ಆಧ್ಯಾತ್ಮಿಕ ಮೊರೆ ಹೋಗಿ. ನಿಮ್ಮ ಭವಿಷ್ಯ ಉಜ್ವಲವಾಗಲು ಬೇಕಾದ ಯೋಜನೆ ರೂಪಿಸಿ, ಯಶಸ್ಸು ನಿಶ್ಚಿತ.

ಸಿಂಹರಾಶಿ: ಈ ರಾಶಿಯ ಹನ್ನೊಂದನೆ ಮನೆಯಲ್ಲಿ ಗ್ರಹಣ ಸಂಭವಿಸುವ ಹಿನ್ನೆಲೆಯಲ್ಲಿ ಸ್ನೇಹಿತರು ಮತ್ತು ಸಹೋದರರ ಜತೆ ವಾಗ್ವಾದದೊಂದಿಗೆ ಸಂಬಂಧ ಹಳಸುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೂ ಸಂಬಂಧ ಕೆಡಿಸಿಕೊಳ್ಳದಂತೆ ಮುಂಜಾಗ್ರತೆ ವಹಿಸಿ. ನಿಮ್ಮ ಕೆಲಸ, ಹಣಕಾಸಿನ ಮೇಲೆ ಪರಿಣಾಮ ಬೀರಲಿದೆ. ತಪ್ಪು ತಿಳಿವಳಿಕೆಯಿಂದ ಆಗುವ ಅನಾಹುತ ತಪ್ಪಿಸಿಕೊಳ್ಳಿ. ಹೆಚ್ಚಿನ ನೆಮ್ಮದಿಗಾಗಿ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ.

ಕನ್ಯಾರಾಶಿ: ಈ ರಾಶಿಯ ಹತ್ತನೇ ಮನೆಯಲ್ಲಿ ಗ್ರಹಣ ನಡೆಯಲಿರುವ ನಿಟ್ಟಿನಲ್ಲಿ ನಿಮ್ಮ ವೃತ್ತಿ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ. ಯಾವುದೇ ಕಾರಣಕ್ಕೂ ಕಚೇರಿಯಲ್ಲಿ ತಾಳ್ಮೆ ವಹಿಸಿ ಕೆಲಸ ನಿರ್ವಹಿಸಿ, ಯಾವುದೇ ಗೊಂದಲ, ಮನಸ್ತಾಪಕ್ಕೆ ಅವಕಾಶ ಕೊಡದಿರಿ. ಸಮಯಸಾಧಕರನ್ನು ದೂರ ಇಟ್ಟು ನಿಮ್ಮ ಗಮ್ಯ ತಲುಪುವತ್ತ ಜಾಣ ಹೆಜ್ಜೆ ಇಡಿ.

ತುಲಾರಾಶಿ: ಈ ರಾಶಿಯ ಒಂಬತ್ತನೇ ಮನೆಯಲ್ಲಿ ಗ್ರಹಣ ನಡೆಯಲಿದೆ. ದೂರ ಪ್ರಯಾಣದಲ್ಲಿ ಹೆಚ್ಚಿನ ಎಚ್ಚರ ವಹಿಸಿ. ಉದ್ಯೋಗದ ಹುಡುಕಾಟದಲ್ಲಿರುವವರು ಶ್ರಮ ಪಟ್ಟರೆ ಹೆಚ್ಚಿನ ಲಾಭವಿದೆ. ವಿದ್ಯಾರ್ಥಿಗಳು ಆಲಸ್ಯಕ್ಕೆ ಮೈಕೊಡದೆ ಇದ್ದರೆ ಉತ್ತಮ ಫಲಿತಾಂಶ ಪಡೆಯಲಿದ್ದಾರೆ.

ವೃಶ್ಚಿಕರಾಶಿ: ಈ ರಾಶಿಯ ಎಂಟನೆ ಮನೆಯಲ್ಲಿ ಗ್ರಹಣ ನಡೆಯುವ ನಿಟ್ಟಿನಲ್ಲಿ ಮಿಶ್ರ ಫಲ ನೀಡಲಿದೆ. ಪೋಷಕರ ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಲಕ್ಷ್ಯ ವಹಿಸಿ. ಸುಳ್ಳನ್ನು ದೂರ ಇಟ್ಟು, ಸತ್ಯದ ಮೇಲೆ ನಡೆದರೆ ನಿಮ್ಮ ಹಾದಿ ಸುಗಮವಾಗಲಿದೆ. ನಿಮ್ಮ ವೃತ್ತಿ, ವ್ಯಾಪಾರ, ವಹಿವಾಟಿನಲ್ಲಿ ಶ್ರದ್ದೆಯಿಂದ ಮುಂದಡಿ ಇಟ್ಟರೆ ಉನ್ನತಿ ನಿಮ್ಮ ಪಾಲಿಗಿದೆ.

ಧನುಸ್ಸು ರಾಶಿ: ಈ ರಾಶಿಯ ಏಳನೇ ಮನೆಯಲ್ಲಿ ಗ್ರಹಣ ನಡೆಯುವುದರಿಂದ ನಿಮಗೆ ಮಿಶ್ರ ಫಲವಿದೆ. ಸಂಗಾತಿ ಜತೆ ಪ್ರೀತಿಯಿಂದ ಇರಿ. ಗ್ರಹಗಳ ಬಲ ದುರ್ಬಲವಾಗುವುದರಿಂದ ಪತ್ನಿ ಜತೆ ವೈಮನಸ್ಸಿಗೆ ಕಾರಣವಾಗಬಹುದು. ಕೆಲವು ಸಂದರ್ಭದಲ್ಲಿ ಸಂಗಾತಿಯ ಬೆಂಬಲ ಸಿಗದೆ ಇರಬಹುದು. ಎಲ್ಲವನ್ನೂ ಸಮಚಿತ್ತದಿಂದ ಅಳೆದು ತೂಗಿ ನಿಭಾಯಿಸಬೇಕಾದ ಹೊಣೆಗಾರಿಕೆ ನಿಮ್ಮದು. ಉದ್ಯೋಗ, ಕೌಟುಂಬಿಕದಲ್ಲಿ ಶ್ರೇಯಸ್ಸಿಗಾಗಿ ನಿಮ್ಮ ಆಪ್ತರಿಂದ ಸಲಹೆ ಪಡೆದು ಮುಂದುವರಿಯಿರಿ.

ಮಕರರಾಶಿ: ಈ ರಾಶಿಯ ಆರನೇ ಮನೆಯಲ್ಲಿ ಗ್ರಹಣ ನಡೆಯಲಿದ್ದು ಮಿಶ್ರಫಲ ಅನುಭವಿಸಲಿದ್ದೀರಿ. ಸ್ನೇಹಿತರು, ಆಪ್ತರು ಪಿತೂರಿ ನಡೆಸಬಹುದು. ಆಫೀಸ್ ವ್ಯವಹಾರದಲ್ಲಿ ತಾಳ್ಮೆ ಕಳೆದುಕೊಳ್ಳದಿರಿ. ಸಹೋದರ, ಸಹೋದರಿ ಜತೆ ಸಂಬಂಧ ಹದಗೆಡದಂತೆ ನೋಡಿಕೊಳ್ಳಿ. ಕೋರ್ಟ್, ಆಸ್ತಿ ವಿಚಾರದಲ್ಲಿ ತಗಾದೆ ಬರಬಹುದು..ಜಾಣ್ಮೆಯಿಂದ ಸಮಸ್ಯೆ ನಿಭಾಯಿಸಿ. ಸಾಲ ಪಡೆಯುವುದು, ಕೊಡುವುದು ಎರಡೂ ನಿಮಗೆ ಒಳ್ಳೆಯದಲ್ಲ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಿ. ಸಂಗಾತಿ ಜತೆ ಮನಸ್ತಾಪ ಬಾರದಂತೆ ನೋಡಿಕೊಳ್ಳಿ.

ಕುಂಭರಾಶಿ: ಈ ರಾಶಿಯ ಐದನೇ ಮನೆಯಲ್ಲಿ ಗ್ರಹಣ ಸಂಭವಿಸಲಿದ್ದು, ದೊಡ್ಡ ಪ್ರಮಾಣದ ಅಶುಭಗಳಿಲ್ಲ. ಕೆಲವೊಂದು ಭಿನ್ನಾಭಿಪ್ರಾಯಗಳು ತಲೆದೋರಬಹುದು. ನಿಮ್ಮ ಮನೋಸ್ಥೈರ್ಯ ಬಲಪಡಿಸಿಕೊಳ್ಳಿ. ಲಾಭ, ನಷ್ಟದ ಬಗ್ಗೆ ಚಿಂತಿಸಬೇಡಿ. ನಿಮಗೆ ಉಜ್ವಲ ಹಾದಿ ಮುಂದೆ ಬಾಗಿಲು ತೆರೆಯಲಿದೆ. ಅವಕಾಶ ಬಂದಾಗ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಡಿ. ಶ್ರಮಕ್ಕೆ ಬೆಲೆ ಇದೆ.

ಮೀನರಾಶಿ: ಈ ರಾಶಿಯ ನಾಲ್ಕನೇ ಮನೆಯಲ್ಲಿ ಚಂದ್ರಗ್ರಹಣ ನಡೆಯಲಿದ್ದು, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಆಲೋಚಿಸಿ ಮುಂದಡಿ ಇಡಿ.  ಮೀನ ರಾಶಿಗೆ ಶುಭ ಫಲ ಪ್ರಾಪ್ತಿಯಾಗುವುದರಿಂದ ನಿಮ್ಮ ನಿರ್ಧಾರ ಯಶಸ್ಸಿನತ್ತ ಕೊಂಡೊಯ್ಯಲಿದೆ. ವ್ಯಾಪಾರ, ವೃತ್ತಿ ನಿಮ್ಮ ಕೈಹಿಡಿಯಲಿದೆ. ಪೋಷಕರನ್ನು ಪ್ರೀತಿಯಿಂದ ನೋಡಿಕೊಳ್ಳಿ.

ಟಾಪ್ ನ್ಯೂಸ್

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.