ಹಳೇ ಮದಗದ ಕೆರೆಗೆ ಬೇಕಿದೆ ಕಾಯಕಲ್ಪ

ಪ್ರವಾಸೋದ್ಯಮ ಆರಂಭಿಸಲು ಸೂಕ್ತ ತಾಣ ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯ

Team Udayavani, Jan 10, 2020, 12:59 PM IST

10-January-10

ಕಡೂರು: ತಾಲೂಕಿನ ಜೀವನಾಡಿಯಾಗಿರುವ ಐತಿಹಾಸಿಕ ಮದಗದ ಕೆರೆ, ಪ್ರಕೃತಿಯ ಸುಂದರ ತಾಣದಲ್ಲಿ ನೆಲೆಗೊಂಡಿದೆ. “ಮಾಯದಂತ ಮಳೆ ಬಂದು ಮದಗದ ಕೆರೆ ತುಂಬಿತು’ ಎಂಬ ಜಾನಪದ ನುಡಿಯಂತೆ ಮದಗದ ಕೆರೆ ತುಂಬುತ್ತದೆ. ಆದರೆ ಹಳೇ ಮದಗದಕೆರೆಯೇ ಇದಕ್ಕೆ ವ್ಯತಿರಿಕ್ತವಾಗಿದ್ದು, ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯದಿಂದ ಸಂಕಷ್ಟದ ಸ್ಥಿತಿಗೆ ತಲುಪಿದೆ.

210 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಹೊಂದಿರುವ ಹಳೇ ಮದಗದಕೆರೆ 50 ಮೀಟರ್‌ ಎತ್ತರವಿದೆ. ಸಣ್ಣ ನೀರಾವರಿ ಇಲಾಖೆಯ ಸುಪರ್ದಿಯಲ್ಲಿರುವ ಈ ಕೆರೆ ಅತ್ಯಂತ ನಿರ್ಲಕ್ಷ್ಯಕ್ಕೊಳಗಾಗಿದೆ. ಇಲಾಖೆಯ ಬೇಜವಾಬ್ದಾರಿಯಿಂದ ಪ್ರತಿ ಮಳೆಗಾಲದಲ್ಲಿ ತುಂಬಿ ಅತ್ಯಂತ ಮನೋಹರವಾಗಿ ಕಾಣುತ್ತಿದ್ದ ಕೆರೆಯ ಪರಿಸರ ಇಂದು ಸಂಪೂರ್ಣ ಹದಗೆಟ್ಟಿದೆ.

ಸುಂದರ ಪ್ರಕೃತಿಯ ತಾಣವಾಗಿರುವ ಕೆರೆ ಏರಿಯ ಸುತ್ತ ಮುಳ್ಳು ಗಂಟಿಗಳು ಬೆಳೆದು ಓಡಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆರೆಗೆ ಹೋಗಲು ಉತ್ತಮ ರಸ್ತೆ ಇಲ್ಲ. ಇರುವ ರಸ್ತೆಯಲ್ಲಿ ವಾಹನ ಓಡಿಸಲು ಸಾಧ್ಯವೆ ಇಲ್ಲದಂತಾಗಿದೆ. ಪ್ರಯತ್ನ ಪಟ್ಟಿದ್ದರೆ ಅತ್ಯಂತ ಸುಂದರ ಪ್ರವಾಸಿ ಸ್ಥಳವನ್ನಾಗಿ ಮಾಡಬಹುದು. ಆದರೆ, ಕೆರೆಯನ್ನು ನಿರ್ಲಕ್ಷಿಸಲಾಗಿದೆ ಎಂಬ ಅಳಲು ಸ್ಥಳೀಯರದ್ದಾಗಿದೆ.

ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಇಂತಹ ಕೆರೆಗಳ ಅಭಿವೃದ್ಧಿಪಡಿಸಿದರೆ ಪ್ರವಾಸಿಗರನ್ನು ಸೆಳೆಯಬಹುದು. ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿ ಗಳ ಪ್ರಯತ್ನ ಬೇಕಾಗಿದೆ. ತಾಲೂಕಿನ ಅಯ್ಯನಕೆರೆಯಂತೆಯೇ ಇದನ್ನೂ ಅಭಿವೃದ್ಧಿಪಡಿಸಲಿ ಎಂಬ ಕೂಗು ಕೇಳಿ ಬರುತ್ತಿದೆ. ಕಡೂರು ಮತ್ತು ಬೀರೂರು ಎರಡೂ ಪಟ್ಟಣಗಳಿಗೆ ಸಮಾನ ಅಂತರದಲ್ಲಿರುವ ಹಳೆ ಮದಗದಕೆರೆಗೆ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಬರುವ ನಿರೀಕ್ಷೆ ಇದೆ. ಹೊಸ ಮದಗದ ಕೆರೆಯ ನಿರ್ಮಾಣಕ್ಕಿಂತ ಮೊದಲೇ ರಚಿತವಾದ ಹಳೇಮದಗದ ಕೆರೆ ಮದಗದ ಕೆರೆಯಷ್ಟೇ ಪ್ರಮುಖವಾಗಿ ಕೃಷಿಗೆ ಆಧಾರವಾಗಿದೆ. ಆದರೆ ಹಲವಾರು ಕಾರಣದಿಂದ ಹಳೇಮದಗದ ಕೆರೆ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ. ಇಲ್ಲಿಗೆ ಬರುವ ನೀರಿನ ಮೂಲಗಳನ್ನೇ ತಡೆಯಲಾಗಿದೆ.

ಬ್ರಹ್ಮದೇವರ ಕಟ್ಟೆ, ಕಿತ್ತಲೆ ಮಡಬಾಯಿ ಎಂಬ ಎರಡು ಮಾನವ ನಿರ್ಮಿತ ಹಾಗೂ ತಾಯಿ ಹಳ್ಳ ಎಂಬ ನಿಸರ್ಗ ನಿರ್ಮಿತ ಹಳ್ಳದಿಂದ ಹಳೇಮದಗದ ಕೆರೆಗೆ ನೀರು ಬರುತ್ತದೆ. ಈ ಮೂಲಗಳ ಮೂಲ ಮದಗದ ಕೆರೆ. ಇನ್ನು ನೈಸರ್ಗಿಕವಾಗಿ ಹರಿಯುವ ತಾಯಿಹಳ್ಳ ನೇರವಾಗಿ ಹಳೇಮದಗದ ಕೆರೆಗೆ ತಲುಪುತ್ತಿತ್ತು. ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸುವ, ಹತ್ತಾರು ಹಳ್ಳಿಗಳಿಗೆ ಕುಡಿಯುವ ನೀರಿನ ಆಸರೆಯಾಗಿರುವ ಅತ್ಯಂತ ಪ್ರಮುಖ ವಿಹಾರ ಕೇಂದ್ರವನ್ನಾಗಿಸುವ ಸಾಧ್ಯತೆಗಳಿರುವ ಹಳೆಮದಗದ ಕೆರೆಯ ಪುನರುಜ್ಜೀವನಕ್ಕೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಜನಪ್ರತಿನಿಧಿಗಳು ಇದರತ್ತ ಗಮನ ಹರಿಸಬೇಕಾಗಿದೆ.

10 ಹಳ್ಳಿಗಳಿಗೆ ಕುಡಿಯುವ ನೀರಿನ ಆಧಾರ ಸ್ತಂಭ
ಮದಗದ ಕೆರೆಯ ಕೋಡಿ ಬಿದ್ದ ನೀರು ಹಳೇಮದಗದ ಕೆರೆಗೆ ಹೋಗಿ ತುಂಬುವುದು ವಾಡಿಕೆ. ಹಳೇಮದಗದ ಕೆರೆ ತುಂಬಿ ಕೋಡಿ ಬಿದ್ದ ನೀರು ಅಲ್ಲಿಂದ ಮುಂದಕ್ಕೆ ಚಿಕ್ಕಂಗಳ, ಅಂದೇನಹಳ್ಳಿ, ಚೆನ್ನಾಪುರ, ಚಿಕ್ಕಪಟ್ಟಣಗೆರೆ, ಸಂತೆಕೆರೆ, ಎಂ.ಕೋಡಿಹಳ್ಳಿ ಕೆರೆ ಮುಂತಾದ ಕೆರೆಗಳು ತುಂಬುತ್ತವೆ. ಇದಲ್ಲದೆ ಇಲ್ಲಿ ಸುತ್ತಮುತ್ತ
ಇರುವ ಸುಮಾರು 10 ಹಳ್ಳಿಗಳಿಗೆ ಕುಡಿಯುವ ನೀರಿಗೆ ಈ ಕೆರೆಯೇ ಮುಖ್ಯ ಆಧಾರ. 30 ಕಿ.ಮೀ. ಸುತ್ತಮುತ್ತ ಅಂತರ್ಜಲ ಮಟ್ಟ ಸ್ಥಿರತೆಗೂ ಈ ಕೆರೆಯ ಕೊಡುಗೆಯಿದೆ.

ಎ.ಜೆ.ಪ್ರಕಾಶಮೂರ್ತಿ

ಟಾಪ್ ನ್ಯೂಸ್

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Kalaburagi: Arrest of three including husband who hits his wife

Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ: ಒಬ್ಬ ಮೃತ

Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ

Waqf Issue: BJP protest against the Congress government across the state on November 4

Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ

10-gudibande

Gudibande: ಕಲ್ಯಾಣಿಯಲ್ಲಿ ಬಿದ್ದು ಯುವಕ ಸಾವು

ಪರಿಶಿಷ್ಟರ ಮೇಲೆ ದೌರ್ಜನ್ಯ; 7 ವರ್ಷದಲ್ಲಿ 488 ಪ್ರಕರಣ!

ಪರಿಶಿಷ್ಟರ ಮೇಲೆ ದೌರ್ಜನ್ಯ; 7 ವರ್ಷದಲ್ಲಿ 488 ಪ್ರಕರಣ!

13-

Gudibanda: ದೇವಸ್ಥಾನದಲ್ಲಿ ಕಳವು; ಆರೋಪಿಗಳು ಪೊಲೀಸ್ ವಶಕ್ಕೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

2

Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.