ಶತಮಾನದ ಆಶ್ರಮ
Team Udayavani, Jan 11, 2020, 6:03 AM IST
ಹಿನ್ನೆಲೆ: ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರ ಚಿಂತನೆಗಳಿಗೆ ಮಾರುಹೋದ ಕೆಲವರು, 1901ರ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ವೇದಾಂತ ಸೊಸೈಟಿಯನ್ನು ತೆರೆದರು. ನಂತರ, ಆ ಅನುಯಾಯಿಗಳು ಇಲ್ಲೊಂದು ಆಶ್ರಮ ಸ್ಥಾಪಿಸಿ, ಸಿದ್ಧಾಂತಗಳ ಪ್ರಸಾರಕ್ಕೆ ಮುಂದಾಗಬೇಕೆಂದು ರಾಮಕೃಷ್ಣ ಪರಮಹಂಸರನ್ನು ಕೋರಿಕೊಂಡರು. ಅವರ ಕೋರಿಕೆಯ ಪರಿಣಾಮವಾಗಿ, 1904ರಲ್ಲಿ ಬಾಡಿಗೆ ಮನೆಯೊಂದರಲ್ಲಿ ಆಶ್ರಮ ಅಸ್ತಿತ್ವಕ್ಕೆ ಬಂದಿತು.
ನಿರ್ಮಾಣ: ಈಗಿರುವ ಆಶ್ರಮದ ಕಟ್ಟಡ ನಿರ್ಮಾಣ ಪ್ರಾರಂಭವಾಗಿದ್ದು 1906ರಲ್ಲಿ.
ಶಿಲಾನ್ಯಾಸ: 1906ರ ಆಗಸ್ಟ್ 20ರಂದು ಸ್ವಾಮಿ ಅಭೇದಾನಂದರು ಕಟ್ಟಡಕ್ಕೆ ಶಿಲಾನ್ಯಾಸ ಮಾಡಿದರು.
ಕಲ್ಲಿನ ಅಡಿಯಲ್ಲಿ: ಒಂದು ಸಂಸ್ಕೃತ ಭಗವದ್ಗೀತೆ ಪುಸ್ತಕ, ಶ್ರೀ ರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ಚಿತ್ರಗಳು, ಐದು ಬಗೆಯ ಆಭರಣಗಳು (ಪಂಚ ಲೋಹ) ಮತ್ತು ಕೆಲವು ಹಿಂದೂ ಪವಿತ್ರ ಚಿಹ್ನೆಗಳನ್ನು ಕಟ್ಟಡದ ಮೂಲೆಯ ಕಲ್ಲಿನ ಕೆಳಗೆ ಇಡಲಾಗಿದೆ.
ಉದ್ಘಾಟನೆ: 1908ರ ಅಂತ್ಯದ ವೇಳೆಗೆ ಕಟ್ಟಡದ ನಿರ್ಮಾಣ ಪೂರ್ಣಗೊಂಡಿತು. 1909ರ ಜನವರಿ 20ರಂದು ಸ್ವಾಮಿ ಬ್ರಹ್ಮಾನಂದರು ಆಶ್ರಮವನ್ನು ಉದ್ಘಾಟಿಸಿದರು.
ಮರು ನಾಮಕರಣ: ಆರಂಭದಲ್ಲಿ ಈ ಕೇಂದ್ರವನ್ನು “ರಾಮಕೃಷ್ಣ ಮಿಷನ್ ಸಂಸ್ಥೆ’ ಎಂದು ಕರೆಯಲಾಗುತ್ತಿತ್ತು. ಸ್ವಾಮಿ ಬ್ರಹ್ಮಾನಂದರ ಸಲಹೆಯಂತೆ 1910ರಲ್ಲಿ “ರಾಮಕೃಷ್ಣ ಆಶ್ರಮ’ ಎಂದು ಹೆಸರು ಬದಲಾಯಿಸಲಾಯ್ತು. ಏಪ್ರಿಲ್ 1 1999ರಲ್ಲಿ, ಆಶ್ರಮವನ್ನು “ರಾಮಕೃಷ್ಣ ಮಠ’ ಎಂದು ಮರುನಾಮಕರಣ ಮಾಡಲಾಯ್ತು.
ಪ್ರಾರ್ಥನಾ ಮಂದಿರ: ಆಶ್ರಮದ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ, 1959ರಲ್ಲಿ ಪ್ರಾರ್ಥನಾ ಮಂದಿರವನ್ನು ನಿರ್ಮಿಸಲಾಯ್ತು. ಅದೇ ರೀತಿ, ಶಾರದಾ ಮಾತಾಜಿಯವರ ಸ್ಮಾರಕ ಭವನ, ರಾಮಕೃಷ್ಣ ಪರಮಹಂಸರ ಸ್ಮಾರಕ ಭವನ, ವಿವೇಕಾನಂದರ ಸ್ಮಾರಕ ಭವನ, 1600 ಮಂದಿ ಕೂರಬಹುದಾದ ರಾಮಕೃಷ್ಣ ಬಯಲು ಸಭಾಂಗಣ, ಆಶ್ರಮದ ಆವರಣದಲ್ಲಿದೆ.
ಮಾತೆ ತಂಗಿದ್ದ ಜಾಗ: 1911ರಲ್ಲಿ ಬೆಂಗಳೂರಿಗೆ ಬಂದ ಶಾರದಾ ಮಾತೆಯವರು ಇಲ್ಲಿ ತಂಗಿದ್ದ ನೆನಪಿಗಾಗಿ, ಅವರು ಧ್ಯಾನಕ್ಕೆ ಕುಳಿತಿದ್ದ ಸ್ಥಳದ ಮೇಲೆ ಕಲ್ಲಿನ ಮಂಟಪ ನಿರ್ಮಿಸಲಾಗಿದೆ. ವಿವೇಕಾನಂದರು ಬೆಂಗಳೂರಿಗೆ ಬಂದಾಗ, ವಿರಮಿಸಿದ ಕಲ್ಲಿನ ಬೆಂಚನ್ನೂ ಇಲ್ಲಿಯೇ ಇಡಲಾಗಿದೆ…
ಎಲ್ಲಿದೆ?: ಬುಲ್ ಟೆಂಪಲ್ ರಸ್ತೆ, ಬಸವನಗುಡಿ
(ಬೆಂಗಳೂರಿನಲ್ಲಿ ಚೆಲುವು ಇರುವುದೇ ಹಳೇ ಕಟ್ಟಡಗಳಲ್ಲಿ. ವಾರಕ್ಕೆ ಒಂದೊಂದರಂತೆ, ಕಟ್ಟಡಗಳ ತುಣುಕು ಮಾಹಿತಿಯ ಸರಮಾಲೆ ಈ ಅಂಕಣದಲ್ಲಿ ಮೂಡಿ ಬರಲಿದೆ )
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.