ಫ್ರೀ ಆನ್‌ ಟ್ರೀ!

ಮರದ ಮೇಲೆ ಮಾನವೀಯ ಜಾಕೆಟ್‌ಗಳು

Team Udayavani, Jan 11, 2020, 6:04 AM IST

free

ಚಳಿಗಾಲ ತನ್ನೊಟ್ಟಿಗೆ ಮಂಜು, ಹಿಮವೆಂಬ ಸೌಂದರ್ಯದ ಜೊತೆಗೆ, ಚಳಿಕಂಪನವನ್ನೂ ಹೊತ್ತು ತರುತ್ತದೆ. ದಪ್ಪನೆ ಜಾಕೆಟ್‌, ಸ್ವೆಟರ್‌ ಧರಿಸಿರುವವರಿಗೆ ಚಳಿಯ ಬಗ್ಗೆ ಯಾವ ದಿಗಿಲೂ ಇಲ್ಲದಿರಬಹುದು. ಆದರೆ, ಬೀದಿ ಬದಿಯಲ್ಲಿ ಜೀವಿಸುವವರಿಗೆ, ಕಟ್ಟಡ ಕಾರ್ಮಿಕರಿಗೆ, ಆ ಕೂಲಿಕಾರರ ಪುಟ್ಟ ಪುಟ್ಟ ಮಕ್ಕಳಿಗೆ, ಕಷ್ಟಪಟ್ಟು ಬಾಡಿಗೆ ಹೊಂದಿಸಿ, ಮಿನಿಮಮ್‌ ಬಜೆಟ್ಟಲ್ಲಿ ಬದುಕುವ ಬಡವರಿಗೆ ಶಿಶಿರ ಋತು ಅಂದ್ರೆ ಅಷ್ಟಕ್ಕಷ್ಟೇ. ಚಳಿಗಾಲ ಮುಗಿದ್ರೆ ಸಾಕಪ್ಪಾ ಅಂತನ್ನಿಸ್ತಿರುತ್ತೆ.

ರಾಜರಾಜೇಶ್ವರಿ ನಗರದಲ್ಲಿ ಇಂಥ ಅಸಹಾಯಕರಿಗೆ ಅಲ್ಲಿನ ಮರಗಳೇ ಕಲ್ಪವೃಕ್ಷಗಳಾಗಿವೆ! “ಫ್ರೀ ಆನ್‌ ಟ್ರೀ’ ಎನ್ನುವ ಫ‌ಲಕವುಳ್ಳ ಮರಗಳಲ್ಲಿ, ಜಾಕೆಟ್‌ಗಳನ್ನು ನೇತುಹಾಕಿರುತ್ತಾರೆ. ಹಾಗೆಯೇ, ಅದರ ಕೆಳಗೆ, “ಅವಶ್ಯಕತೆ ಇದ್ದಲ್ಲಿ ತೆಗೆದುಕೊಳ್ಳಿ’ ಎನ್ನುವ ಒಕ್ಕಣೆ. ಕಡುಬಡವರು ಚಳಿಯಿಂದ ತಮ್ಮ ಶರೀರವನ್ನು ರಕ್ಷಿಸಿಕೊಳ್ಳಲು, ಮರಗಳಲ್ಲಿನ ಜಾಕೆಟ್‌ಗಳ ಮೊರೆ ಹೋಗುತ್ತಿದ್ದಾರೆ.

ರಾಜರಾಜೇಶ್ವರಿ ನಗರ ರೆಸಿಡೆಂಟ್‌ ಫೋರಂನ (ಆರ್‌ಆರ್‌ಎಫ್) ಸದಸ್ಯರಾದ ವಿ.ಎಸ್‌. ಶ್ರೀಕಾಂತ್‌ ಮತ್ತು ಅವರ ಬಳಗದ ಈ ಮಾನವೀಯ ಕೆಲಸ, ವಿಶಿಷ್ಟವಾಗಿ ಗಮನ ಸೆಳೆಯುತ್ತಿದೆ. ಶ್ರೀಕಾಂತ್‌ ಒಮ್ಮೆ ಫೇಸ್‌ಬುಕ್‌ ಜಾಲಾಡುತ್ತಿದ್ದರಂತೆ. ಬಲ್ಗೇರಿಯಾದಲ್ಲಿ ಅಮ್ಮ ಮತ್ತು ಮಗಳು, ತಮ್ಮಲ್ಲಿ ಹೆಚ್ಚುವರಿಯಾಗಿ ಇದ್ದ ಸ್ವೆಟರ್‌- ಜಾಕೆಟ್‌ಗಳನ್ನು ಮನೆ ಎದುರಿನ ಮರಕ್ಕೆ ನೇತುಹಾಕಿದರಂತೆ. ಆ ಬೆಚ್ಚಗಿನ ಉಡುಪುಗಳು ಕೆಲವೇ ಗಂಟೆಗಳಲ್ಲಿ ನಿರ್ಗತಿಕರ ಪಾಲಾದ ಸುದ್ದಿ ವೈರಲ್‌ ಆಗಿತ್ತು.

“ಬಲ್ಗೇರಿಯಾದಲ್ಲಿ ಮಾಡಿದಂಥ ಉಪಕಾರವನ್ನೇ ನಮ್ಮ ನೆಲದಲ್ಲಿ ಯಾಕೆ ಮಾಡಬಾರದು ಅಂತನ್ನಿಸಿ, ಒಂದಿಷ್ಟು ಜಾಕೆಟ್‌ಗಳನ್ನು ರಾಜರಾಜೇಶ್ವರಿ ನಗರದ ಕೆಲವು ಮರಗಳ ಮೇಲೆ ನೇತುಹಾಕಿದೆವು. ಆರಂಭದಲ್ಲಿ, ದೂರದಲ್ಲಿ ನಿಂತು ಗಮನಿಸಿದೆವು. ಯಾರೋ ಕಟ್ಟಡ ಕಾರ್ಮಿಕರು ಬಂದರು, ಮಗು ಎತ್ತಿಕೊಂಡಿದ್ದ ಬಡ ಗೃಹಿಣಿ ಬಂದಳು. ಇಷ್ಟಪಟ್ಟು ಜಾಕೆಟ್‌ಗಳನ್ನು ಕೊಂಡೊಯ್ದರು. ಖಂಡಿತಾ ಈ ಕೆಲಸ ಅಸಹಾಯಕರಿಗೆ ಮುಟ್ಟುತ್ತದೆ ಅಂತನ್ನಿಸಿ, ಬೇರೆ ಬೇರೆ ಮರಗಳಲ್ಲಿ, ಜಾಕೆಟ್‌ಗಳನ್ನು ಇಟ್ಟೆವು’ ಅಂತಾರೆ ಶ್ರೀಕಾಂತ್‌.

ಚಳಿಗಾಲದಲ್ಲಿ ಕೂಲಿ- ಕಾರ್ಮಿಕರ ಮಕ್ಕಳು ಬೀದಿ ಬದಿ ಕಂಪಿಸುತ್ತಾ ನಿಂತಿರುತ್ತಾರೆ. ಜಾಕೆಟ್‌- ಧರಿಸಿ, ರಸ್ತೆಯಲ್ಲಿ ಹೋಗುವವರನ್ನು ಅವರು ಅಸಹಾಯಕ ಕಂಗಳಿಂದ ನೋಡುವಾಗ, ಎಂಥವರಿಗೂ ಅಯ್ಯೋ ಅನ್ನಿಸುತ್ತದೆ. ಚಳಿಗಾಲ ಬಂದು, ಅಂಥ ಬಡವರಿಗೆ ಸೇವೆ ಮಾಡಲು ಪ್ರೇರೇಪಿಸಿತು.
-ವಿ.ಎಸ್‌. ಶ್ರೀಕಾಂತ್‌, ಆರ್‌ಆರ್‌ಎಫ್ ಸದಸ್ಯ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.