ಗೃಹಾಲಂಕಾರ ಸೌಂದರ್ಯಕ್ಕೆ ಪೀಠೊಪಕರಣಗಳು
Team Udayavani, Jan 11, 2020, 5:49 AM IST
ಮನೆಯ ಅಲಂಕಾರದಲ್ಲಿ ಪೀಠೊಪಕರಣಗಳು ಮಹತ್ತರವಾದ ಪಾತ್ರವನ್ನು ವಹಿಸುತ್ತವೆ. ಸೋಫಾ, ಕುರ್ಚಿ, ಬೆಡ್ ಹೀಗೆ ಎಲ್ಲ ವಿಧದ ಪೀಠೊಪಕರಣಗಳು ಮನೆಯ ಅಂದವನ್ನು ಹೆಚ್ಚಿಸುತ್ತವೆ. ಇದರ ಜತೆಗೆ ಒಂದು ಸಮಸ್ಯೆಯಿದೆ. ಇವುಗಳು ಒಂದಷ್ಟು ಜಾಗವನ್ನು ಅತಿಕ್ರಮಿಸಿಕೊಳ್ಳುತ್ತವೆ. ವಿಶಾಲವಾದ ಮನೆಯಾದರೆ ಜಾಗದ ಸಮಸ್ಯೆ ಅಷ್ಟಾಗಿ ಕಾಣಿಸುವುದಿಲ್ಲ. ಆದರೆ ಫ್ಲ್ಯಾಟ್, ಸಣ್ಣ ಮನೆಗಳಲ್ಲಿ ಜಾಗ ಒಂದು ದೊಡ್ಡ ಸಮಸ್ಯೆಯಾಗುತ್ತದೆ. ಇವುಗಳನ್ನು ನಿವಾರಿಸಲು ಮುಖ್ಯವಾಗಿ ಟು ಇನ್ ವನ್ ಪೀಠೊಪಕರಣಗಳನ್ನು ಬಳಸಬಹುದು. ಇವುಗಳು ಎರಡೂ ಬಳಕೆಗೆ ಸಹಾಯ ಮಾತ್ರವಲ್ಲದೆ ಜಾಗವನ್ನು ಹೊಂದಿಸಿಕೊಳ್ಳಲು ಸಹಾಯವಾಗುತ್ತದೆ. ಜತೆಗೆ ಮನೆಯ ಅಂದವೂ ಹೆಚ್ಚಾಗುತ್ತದೆ.
ಬೆಡ್ ಮತ್ತು ಕಪಾಟ್
ಒಂದು ಕೋಣೆಯಲ್ಲಿರಬೇಕಾದ ಮುಖ್ಯ ವಸ್ತುಗಳೆಂದರೆ ಬೆಡ್ ಮತ್ತು ಕಪಾಟು. ಇವುಗಳಿಗೆ ಕೋಣೆಯ ಅರ್ಧದಷ್ಟು ಜಾಗವನ್ನು ಮೀಸಲಿಡಬೇಕಾಗುತ್ತದೆ. ಆದರೆ ಇತ್ತೀಚೆಗೆ ಬರುವ ಬೆಡ್ಗಳ ತಳಭಾಗದಲ್ಲಿ ಬಟ್ಟೆಗಳನ್ನು ಜೋಡಿಸುವ ರ್ಯಾಕ್ನ ಸೌಲಭ್ಯವಿದೆ. ಇದರಿಂದ ಕಪಾಟಿನ ಜಾಗವನ್ನು ಉಳಿಸಿದಂತಾಗುತ್ತದೆ.
ಬೆಂಚ್ಗಳನ್ನು ಬಳಸಿ
ಸಾಮಗ್ರಿಗಳ ಸಂಖ್ಯೆ ಅಧಿಕವಿದ್ದು, ಅವುಗಳನ್ನು ಜೋಡಿಸಲು ಸಾಧ್ಯವಾಗದಿದ್ದಲ್ಲಿ ಬೆಂಚುಗಳನ್ನು ಬಳಸಬಹುದು. ಬೇರೆ ಬೇರೆ ವಿಧದ ಬೆಂಚುಗಳು ಮಾರ್ಕೆಟ್ನಲ್ಲಿ ಲಭ್ಯವಿದ್ದು ಅವುಗಳನ್ನು ಕೋಣೆಯ ಮೂಲೆಯಲ್ಲಿ ಜೋಡಿಸಿ ಅವುಗಳ ಮೇಲೆ ಸಾಮಗ್ರಿಗಳನ್ನು ಜೋಡಿಸಬಹುದು.
ವಾಲ್ಡೆಸ್ಕ್: ಟೇಬಲ್ಗಳನ್ನು ನೆಲದ ಮೇಲೆ ಜೋಡಿಸುವುದಿಂದ ಒಂದಷ್ಟು ಜಾಗದ ಸಮಸ್ಯೆ ಕಾಡುತ್ತದೆ. ಆದರೆ ಖಾಲಿ ಗೋಡೆಗಳ ಮೇಲೆ ವಾಲ್ ಡೆಸ್ಕ್ಗಳನ್ನು ಜೋಡಿಸುವುದರಿಂದ ಟೇಬಲ್ನ ಕೆಲಸವನ್ನು ಅದು ನಿರ್ವಹಿಸುತ್ತದೆ. ಪಕ್ಕದಲ್ಲಿ ಒಂದು ಕುರ್ಚಿ ಇಟ್ಟುಕೊಂಡು ಬರವಣಿಗೆ, ಲ್ಯಾಪ್ಟಾಪ್ಗ್ಳಲ್ಲಿ ಕೆಲಸವನ್ನು ನಿರ್ವಹಿಸಬಹುದು. ಹೀಗೆ ಮನೆಯ ಸಣ್ಣ ಸಣ್ಣ ಪೀಠೊಪಕರಣಗಳನ್ನು ಬದಲಾಯಿಸುವುದರಿಂದ ಮನೆಯ ಜಾಗದ ಸಮಸ್ಯೆಯನ್ನು ನಿವಾರಣೆ ಮಾಡಬಹುದು.
ಕಾಫಿ ಟೇಬಲ್ವುತ್ತು ಸ್ಟೂಲ್
ಮರದ ಕಾಫಿ ಟೇಬಲ್ ಮತ್ತು ಅದಕ್ಕೆ ಹೊಂದಕೊಂಡಿರುವ ಸ್ಟೂಲ್ಗಳು ಡೈನಿಂಗ್ ಟೇಬಲ್ಗೆ ಪಯಾರ್ಯವಾಗಿ ಬಳಸಬಹುದು. ವಿಶಾಲವಾದ ಟೇಬಲ್ ಕೆಳಗೆ ಸ್ಟೂಲ್ಗಳನ್ನು ಜೋಡಿಸಬಹುದು. ಇದರಿಂದ ಮನೆಯಲ್ಲಿ ಜಾಗವನ್ನು ಹೆಚ್ಚಿಸಬಹುದು. ಸಾಧರಣವಾಗಿ ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದಾದಂತಹ ಈ ಕಾಫಿ ಟೇಬಲ್ಗಳು ಮನೆಯ ಅಂದವನ್ನು ಹೆಚ್ಚಿಸುತ್ತದೆ.
– ಸುಶ್ಮಿತಾ ಶೆಟ್ಟಿ ಸಿರಿಬಾಗಿಲು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.