“ಮಂಗಳೂರು ಗಲಭೆ’ ಸಿಡಿ ಬಿಡುಗಡೆ
Team Udayavani, Jan 11, 2020, 3:09 AM IST
ಬೆಂಗಳೂರು: “ಮಂಗಳೂರು ಗಲಭೆ’ ಪ್ರಕರಣದಲ್ಲಿ ರಾಜ್ಯ ಸರ್ಕಾರ ಹಾಗೂ ಪೊಲೀಸರು ಸಾಕಷ್ಟು ಸತ್ಯಾಂಶಗಳನ್ನು ಮುಚ್ಚಿಟ್ಟಿದ್ದು, ಅಮಾಯಕರು ಸಮಸ್ಯೆಗೊಳಗಾಗಿದ್ದಾರೆ. ಹೀಗಾಗಿ, ಪ್ರಕರಣದ ತನಿಖೆಗೆ ಸದನ ಸಮಿತಿ ರಚಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಶುಕ್ರವಾರ “ಮಂಗಳೂರು ಗಲಭೆ’ ಕುರಿತ ಸಿಡಿ ಬಿಡುಗಡೆ ಮಾಡಿ, ರಾಜ್ಯ ಸರ್ಕಾರದ ವಿರುದ್ಧ ಅವರು ಹರಿಹಾಯ್ದರು.
ಕುಮಾರಸ್ವಾಮಿಯವರ ಸುದ್ದಿಗೋಷ್ಠಿಯ ಸಾರವಿದು.:
* ಗಲಭೆ ಸಂಬಂಧ ಪೊಲೀಸ್ ಆಯುಕ್ತ ಹರ್ಷ ಸೇರಿ ಹಲವು ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದು, ಅವರನ್ನು ತಕ್ಷಣ ಅಮಾನತು ಮಾಡಬೇಕು.
* ಸಿಐಡಿ ಮತ್ತು ಮ್ಯಾಜಿಸ್ಟ್ರೇಟ್ ತನಿಖೆಯಿಂದ ಸತ್ಯಾಂಶ ಹೊರಬರಲ್ಲ. ಏಕೆಂದರೆ ತನಿಖೆ ಮುಗಿಯುವ ಮುನ್ನ ಗೃಹ ಸಚಿವರು ಕೇರಳ ಮೂಲದವರು ಕಾರಣ ಎಂದು ಹೇಳಿದ್ದಾರೆ. ಕೇರಳ ಸಂಘಟನೆಗಳ ಮಾಹಿತಿ ಇದ್ದರೆ ಯಾಕೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ?
* ಪೊಲೀಸರು ಪ್ರಾಮಾಣಿಕವಾಗಿ ವರ್ತಿಸಿದ್ದರೆ ಗಲಭೆ ತಡೆಯಬಹುದಿತ್ತು. ಆದರೆ, ಪೊಲೀಸರೇ ಪ್ರತಿಭಟನಾಕಾರರ ಗುಪ್ತಾಂಗಗಳಿಗೆ ಗುಂಡಿಕ್ಕಲು ಸೂಚನೆ ನೀಡಿದ್ದಾರೆ. ಪೊಲೀಸರು ದೌರ್ಜನ್ಯ ಎಸಗಿರುವ ಹಲವಾರು ದೃಶ್ಯಾವಳಿಗಳ ಸಿಡಿಯನ್ನು ನಾನು ಬಿಡುಗಡೆ ಮಾಡಿದ್ದೇನೆ.
* ರಾಜ್ಯದಲ್ಲಿ ಶಾಂತಿ, ಸಾಮರಸ್ಯ ಹಾಳು ಮಾಡಿ, ಬೆಂಕಿ ಇಡುವ ಕೃತ್ಯಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾರನ್ನು ಮೆಚ್ಚಿಸಲು ರಾಜ್ಯದ ಬಿಜೆಪಿ ನಾಯಕರು ಪೈಪೋಟಿಯಲ್ಲಿ ಮಂಗಳೂರು ಘಟನೆಯ ನೈಜತೆ ಮುಚ್ಚಿಟ್ಟು ತಪ್ಪು, ಸುಳ್ಳು, ಅಸತ್ಯ ಹರಡುತ್ತಿದ್ದಾರೆ.
* ಸ್ಥಳೀಯರ ಆಹ್ವಾನದ ಮೇರೆಗೆ ಮಂಗಳೂರಿಗೆ ಹೋಗಿದ್ದ ನ್ಯಾ.ಗೋಪಾಲಗೌಡರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಕೊಡದ ಪೊಲೀಸರ ಕ್ರಮ ಖಂಡನೀಯ.
* ಸಿಎಎ, ಎನ್‌ಆರ್‌ಸಿ ವಿಷಯ ಮುಂದಿಟ್ಟು ಜನರ ಜೀವನದ ಜತೆ ಆಟ ಆಡುವುದು ಸರಿಯಲ್ಲ.
* ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಮೃತಪಟ್ಟ ಇಬ್ಬರು ಅಮಾಯಕರಿಗೆ ಉಗ್ರರ ಪಟ್ಟ, ಗಲಭೆಕೋರರ ಪಟ್ಟ ಕಟ್ಟಿ, ಪರಿಹಾರ ವಾಪಸ್ ಪಡೆಯಲಾಗಿದೆ. ಜೀವನಕ್ಕಾಗಿ ಬಿಹಾರದಿಂದ ಬಂದಿದ್ದ ಒಬ್ಬ ಗುಂಡೇಟಿನಿಂದ ಆಸ್ಪತ್ರೆಯಲ್ಲಿದ್ದಾನೆ. ಮತ್ತೂಬ್ಬ ಪಿಎಚ್‌ಡಿ ವಿದ್ಯಾರ್ಥಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ. ಆತನ ವೈದ್ಯಕೀಯ ಬಿಲ್ 26 ಲಕ್ಷ ರೂ.ಆಗಿದೆ. ಇದನ್ನು ಪಾವತಿಸುವವರು ಯಾರು?.
* ಪ್ರಕರಣದಲ್ಲಿ ಒಬ್ಬಿಬ್ಬರಿಗೆ ಸಣ್ಣಪುಟ್ಟ ಗಾಯ ಆಗಿರುವುದು ಬಿಟ್ಟರೆ ಬೇರೆ ಯಾವ ಪೊಲೀಸರಿಗೂ ಮಾರಣಾಂತಿಕ ಗಾಯ ಆಗಿಲ್ಲ. ಆದರೂ, ಸುಳ್ಳು ಹೇಳಲಾಗುತ್ತಿದೆ.
ಇನ್ನೂ ಬರಲಿವೆ “ಸಿಡಿ’: ನಾನು ಸಿಡಿ ಬಿಡುಗಡೆ ಮಾಡುತ್ತೇನೆ ಎಂದಾಕ್ಷಣ ವಿಧಾನಸೌಧದಲ್ಲಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಸಿಎಂ ಯಡಿಯೂರಪ್ಪ ಅವರು ಆತಂಕ ಗೊಂಡು ಯಾವ ಸಿಡಿ ಎಂದು ಆಪ್ತ ಅಧಿಕಾರಿಗಳ ಬಳಿ ಮಾಹಿತಿ ತರಿಸಿಕೊಂಡಿದ್ದಾರೆ. ನನ್ನ ಬಳಿ ಈ ಸರ್ಕಾರದ ಅವ್ಯವ ಹಾರಗಳ ಸಿಡಿಯೂ ಇದೆ. ಸಚಿವರು- ಶಾಸಕರಲ್ಲಿ ಆತಂಕ ಮೂಡಿ ಸಿರುವ ಸಿಡಿಗಳೂ ಇವೆ. ನನಗೆ ಈಗ “ಮಂಗಳೂರು ಗಲಭೆ’ಯಲ್ಲಿ ಅಮಾಯಕರಿಗೆ ತೊಂದರೆ ಕೊಟ್ಟಿರುವ ವಿಚಾರ ಮುಖ್ಯ. ಮುಂದಿನ ದಿನಗಳಲ್ಲಿ ಬೇರೆ ಸಿಡಿಗಳು ಬರಲಿವೆ ಎಂದು ಕುಮಾರಸ್ವಾಮಿ “ಬಾಂಬ್’ ಹಾಕಿದರು.
ನೆರೆ ಪರಿಹಾರ ಪಡೆಯಲಿ: ಉಪ ಚುನಾವಣೆ ನಡೆದು ಫಲಿತಾಂಶ ಬಂದು ತಿಂಗಳಾದರೂ ಸಂಪುಟ ವಿಸ್ತರಣೆಯೋ, ಪುನಾ ರಚನೆಯೋ ಏನೂ ಆಗಿಲ್ಲ. ಆದ ಮೇಲೆ ಗೊತ್ತಾಗುತ್ತದೆ. ಯಡಿಯೂರಪ್ಪ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ದೆಹಲಿಗೆ ಹೋಗುವ ಬದಲು, ನೆರೆ ಪರಿ ಹಾರ ಪಡೆಯಲು ಹೋಗಲಿ. 2 ಕಂತುಗಳಲ್ಲಿ 3 ಸಾವಿರ ಕೋಟಿ ರೂ.ಬಂತು ಎಂದು ಬಡಾಯಿ ಕೊಚ್ಚಿ ಕೊಂಡರು. ಆದರೆ, ಭಿಕ್ಷೆ ಕೊಟ್ಟಂತೆ 669 ಕೋಟಿ ರೂ.ಕೊಟ್ಟಿದ್ದಾರೆ. ಎರಡೂ ಕಂತು ಸೇರಿ ಬಂದದ್ದು ಕೇವಲ 1869.85
ಕೋಟಿ ರೂ. ಎಂದರು.
ಸಿಡಿಯಲ್ಲಿನ ದೃಶ್ಯಾವಳಿಗಳ ವಿವರ
* ಬಂದರು ಪೊಲೀಸ್ ಠಾಣೆ ವ್ಯಾಪ್ತಿಯ ಬೀದಿಯೊಂದರಲ್ಲಿ ಗಲಭೆ ಸೃಷ್ಟಿಸುವ ಸಲುವಾಗಿಯೇ ಕಲ್ಲುಗಳನ್ನು ಟೆಂಪೋದಲ್ಲಿ ತುಂಬಿಕೊಂಡು ಬರಲಾಗಿತ್ತು ಎಂದು ಪೊಲೀಸರು ಬಿಡುಗಡೆ ಮಾಡಿದ್ದ ವಿಡಿಯೋ ದೃಶ್ಯಾವಳಿಗಳಲ್ಲಿ ಆರೋಪಿಸಲಾಗಿತ್ತು. ಆದರೆ, ಕುಮಾರಸ್ವಾಮಿಯವರು ಬಿಡುಗಡೆ ಮಾಡಿರುವ ಸಿಡಿಯಲ್ಲಿ ನಿಜಕ್ಕೂ ಅದು ಕಲ್ಲುಗಳನ್ನು ತುಂಬಿದ್ದ ಟೆಂಪೋ ಅಲ್ಲ. ಹಾಜಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನ ಕಾರ್ಯದರ್ಶಿ ಅಮ್ಜದ್ ಎಂಬುವರು ಅಪಾರ್ಟ್‌ಮೆಂಟ್‌ನಲ್ಲಿನ ತ್ಯಾಜ್ಯ, ಅನುಪಯುಕ್ತ ವಸ್ತುಗಳನ್ನು ಕೊಂಡೊಯ್ಯಲು ಅಶ್ವಕ್ ಎಂಬುವರಿಗೆ ಗುತ್ತಿಗೆ ನೀಡಿದ್ದು, ಅದರಂತೆ ಅಶ್ವಕ್ ಹಾಜಿ ರೆಸಿಡೆನ್ಸಿಗೆ ಬೆಳಗ್ಗೆ 12.10ರಿಂದ ಮಧ್ಯಾಹ್ನ 3 ಗಂಟೆವರೆಗೂ ಮೂರು ಲೋಡ್‌ಗಳ ಅನುಪಯುಕ್ತ ವಸ್ತುಗಳನ್ನು ಅಲ್ಲಿಂದ ಸಾಗಿಸಿದ್ದಾರೆ.
* ನಾಲ್ಕನೇ ಲೋಡ್ ಸಾಗಿಸುವಾಗ ಮಾರ್ಗಮಧ್ಯೆ ಉದ್ವಿಗ್ನ ಪರಿಸ್ಥಿತಿ ಇದ್ದ ಕಾರಣ ಟೆಂಪೋವನ್ನು ಅಲ್ಲೇ ನಿಲುಗಡೆ ಮಾಡಿ, ನಮಾಜ್‌ಗೆ ತೆರಳಿದ್ದರು. ನಮಾಜ್ ಮುಗಿಸಿ ವಾಪಸ್ ಬಂದು ನೋಡುವಷ್ಟರಲ್ಲಿ ಟೆಂಪೋದಲ್ಲಿರುವ ಎರಡು ಮೂಟೆಗಳನ್ನು ಹೊರಗೆ ಎಸೆದಿದ್ದು, ಉಳಿದಂತೆ ಅನುಪಯುಕ್ತ ವಸ್ತುಗಳು ಅದರಲ್ಲೇ ಇದ್ದವು. ಅದನ್ನು ತಾವು ಹೊರವಲಯಕ್ಕೆ ಸಾಗಿಸಿ ಡಂಪ್ ಮಾಡಿ ಬಂದಿರುವುದಾಗಿ ಅವರು ಹೇಳಿದ್ದಾರೆ. ಹಾಜಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳು ಹಾಗೂ ಬಂದರು ಪೊಲೀಸ್ ಠಾಣೆ ಆವರಣದಲ್ಲಿ ಅಳವಡಿಕೆಯಾಗಿರುವ ಸಿಸಿಟಿವಿಯ ದೃಶ್ಯಾವಳಿಗಳಲ್ಲಿ ಈ ಕುರಿತಾದ ಮಾಹಿತಿಯಿದೆ. ಪೊಲೀಸರು, ತಿರುಚಿದ ವಿಡಿಯೋ ದೃಶ್ಯಾವಳಿ ಬಿಡುಗಡೆ ಮಾಡಿ ಅಮಾಯಕರ ಮೇಲೆ ಗಲಭೆಕೋರ ಆರೋಪ ಹೊರಿಸಿದ್ದರು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
* ಪೊಲೀಸರು ಪ್ರತಿಭಟನಾಕಾರರ ಗುಪ್ತಾಂಗಕ್ಕೆ ಹೊಡೆಯಬೇಕು ಎಂದು ಹೇಳಿರುವುದು, ಪೊಲೀಸ್ ಆಯುಕ್ತರ ಅನುಮತಿ ದೊರೆಯುವ ಮುನ್ನವೇ ಗೋಲಿಬಾರ್ ನಡೆಸಿದ್ದು, ಗುಂಡು ಹಾರಿಸಿದರೂ ಒಂದು ಹೆಣವೂ ಬೀಳಲಿಲ್ಲ ಎಂದು ಹೇಳಿದ್ದೂ ಇದೆ. ಇದಕ್ಕೆ ಸಾಕ್ಷಿ ಇಟ್ಟುಕೊಂಡೇ ಮಾತನಾಡುತ್ತಿದ್ದೇನೆ. ಬಂದರು ಪೊಲೀಸ್ ಠಾಣೆ ಆವರಣದಲ್ಲಿ ಅಳವಡಿಸಿರುವ 370 ಡಿಗ್ರಿ ಸಿಸಿಟಿವಿಯಲ್ಲಿ ಈ ದೃಶ್ಯಗಳು ಇಲ್ಲವೇ ಅಥವಾ ಇರುವುದನ್ನು ತೆಗೆದು ಹಾಕಲಾಗಿದೆಯೇ ಎಂದು ಪ್ರಶ್ನಿಸಿದರು.
ಸಿಡಿಯಲ್ಲೇನಿದೆ?
ದೃಶ್ಯ 1: ವ್ಯಕ್ತಿಯೊಬ್ಬರು ಘೋಷಣೆ ಕೂಗುತ್ತಿರುವುದು.
ದೃಶ್ಯ 2: ಬಸ್‌ಗಾಗಿ ಕಾಯುತ್ತಿದ್ದ ಯುವಕನ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿರುವುದು.
ದೃಶ್ಯ 3: ನನ್ನನ್ನು ಯಾಕೆ ಹೊಡೆಯುತ್ತಿದ್ದೀರಿ ಎಂದು ಯುವಕ ಕೇಳುತ್ತಿರುವುದು.
ದೃಶ್ಯ 4: ಪೊಲೀಸರು ಯುವಕನನ್ನು ಜಾಸ್ತಿ ಮಾತನಾಡಬೇಡ ಎಂದು ದಬಾಯಿಸುತ್ತಿರುವುದು.
ದೃಶ್ಯ 5: ಯುವಕನ ಮೇಲೆ ಲಾಠಿ ಚಾರ್ಜ್ ವಿರೋಧಿಸಿ ಗುಂಪೊಂದು ಪ್ರತಿಭಟನೆ ನಡೆಸುತ್ತಿರುವುದು.
ದೃಶ್ಯ 6: ಪ್ರತಿಭಟನೆ ಮಾಡುತ್ತಿರುವವರ ಮೇಲೆ ಪೊಲೀಸರ ಲಾಠಿ ಚಾರ್ಜ್, ಕಲ್ಲು ತೂರಾಟ, ಪ್ರತಿಭಟನಾಕಾರರ ಬಂಧನ.
ದೃಶ್ಯ 7: ಪ್ರತಿಭಟನೆಯ ವರದಿಗಾಗಿ ಬಂದಿದ್ದ ಪತ್ರಕರ್ತರಿಗೆ ಅಲ್ಲಿಂದ ತೆರಳುವಂತೆ ಪೊಲೀಸರಿಂದ ಸೂಚನೆ.
ದೃಶ್ಯ 8: ಲಾಠಿ ಚಾರ್ಜ್ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸ್ ಆಯುಕ್ತ ಹರ್ಷ ಭೇಟಿ.
ದೃಶ್ಯ 9: ಉದ್ರಿಕ್ತರಿಂದ ಕಲ್ಲು ತೂರಾಟ.
ದೃಶ್ಯ 10: ಪೊಲೀಸರಿಂದ ಅಶ್ರುವಾಯು ಸಿಡಿತ.
ದೃಶ್ಯ 11: ಪೊಲೀಸರು ರಸ್ತೆಯಲ್ಲಿ ನಿಂತು ಕಲ್ಲು ತೂರಾಟ ಮಾಡುತ್ತಿರುವುದು.
ದೃಶ್ಯ 12: ಪರಿಸ್ಥಿತಿ ಹತೋಟಿಗೆ ಬಾರದ ಕಾರಣ ಗೋಲಿಬಾರ್.
ದೃಶ್ಯ 13: ಬೀದಿ ಬದಿ ವ್ಯಾಪಾರಿಗಳನ್ನು ಬಲವಂತವಾಗಿ ಕಳುಹಿಸುತ್ತಿರುವುದು.
ದೃಶ್ಯ 14: ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸುತ್ತಿರುವುದು.
ದೃಶ್ಯ 15: ಪ್ರತಿಭಟನಾಕಾರರಿಂದ ಪೊಲೀಸರತ್ತ ಕಲ್ಲು ತೂರಾಟ.
ದೃಶ್ಯ 16: ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಸಂಘರ್ಷ.
ದೃಶ್ಯ 17: ಬಸ್‌ಗೆ ಕಾಯುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್. ಪೆಟ್ರೋಲ್ ಬಂಕ್ ಬಳಿ ಇದ್ದ ಯುವಕನ್ನು ಎಳೆದೊಯ್ದು ಪೊಲೀಸ್ ಜೀಪಿಗೆ ಹತ್ತಿಸುತ್ತಿರುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.