ಬೆಂಕಿಯುಂಡೆಗೆ ಬೆದರಿದ ಆಸೀಸ್ ; ಬಿರುಗಾಳಿಗೆ ಮತ್ತಷ್ಟು ವ್ಯಾಪಿಸಿದ ಕಾಡ್ಗಿಚ್ಚು
Team Udayavani, Jan 11, 2020, 2:14 AM IST
ಮೆಲ್ಬರ್ನ್: ಆಸ್ಟ್ರೇಲಿಯಾವನ್ನು ಮಮ್ಮಲ ಮರುಗಿಸಿರುವ ಕಾಡ್ಗಿಚ್ಚು ತನ್ನ ಪ್ರತಾಪ ಮುಂದುವರಿಸಿದ್ದು, ಶುಕ್ರವಾರ ಬೀಸಿರುವ ಭಾರೀ ಬಿರುಗಾಳಿಯು ಮೂರು ಕಡೆಯ ಕಾಡ್ಗಿಚ್ಚನ್ನು ಒಂದು ಬೃಹತ್ ಬೆಂಕಿಯುಂಡೆಯಾಗಿ ಪರಿವರ್ತಿಸಿದೆ.
ಈಗಾಗಲೇ ಕಾಡ್ಗಿಚ್ಚು 24 ಮಂದಿಯನ್ನು ಬಲಿ ಪಡೆದುಕೊಂಡಿದ್ದು, ಕೋಟ್ಯಂತರ ಪ್ರಾಣಿಗಳು ಸಜೀವ ದಹನವಾಗಿವೆ. ಶುಕ್ರವಾರ ಏಕಾಏಕಿ ಗಂಟೆಗೆ 90 ಕಿ.ಮೀ. ವೇಗದಲ್ಲಿ ಗಾಳಿ ಬೀಸಿರುವ ಕಾರಣ, ಬೇರೆ ಬೇರೆ ಕಡೆ ಎದ್ದಿದ್ದ ಕಾಡ್ಗಿಚ್ಚನ್ನು ಮತ್ತಷ್ಟು ವ್ಯಾಪಿಸುವಂತೆ ಮಾಡಿದ್ದು, ಅತಿದೊಡ್ಡ ಅಪಾಯದ ಮುನ್ಸೂಚನೆ ನೀಡಿದೆ. ಅತ್ಯಂತ ಕ್ಷಿಪ್ರವಾಗಿ ಬೆಂಕಿ ವ್ಯಾಪಿ ಸುತ್ತಿರುವ ಕಾರಣ ನ್ಯೂ ಸೌತ್ ವೇಲ್ಸ್ ಮತ್ತು ವಿಕ್ಟೋರಿಯಾದ ಜನರಲ್ಲಿ ಆತಂಕ ಮೂಡಿಸಿದೆ. ಈ ಕೂಡಲೇ ಎಲ್ಲರೂ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಪಬ್‌ಗಳಲ್ಲಿ ಬಿಯರೇ ಇಲ್ಲ!
ಕಾಡ್ಗಿಚ್ಚಿನಿಂದಾಗಿ ಒಂದೆಡೆ ನೀರಿಗೆ ತೀವ್ರ ಅಭಾವ ಉಂಟಾಗಿದೆ. ವಿಕ್ಟೋರಿಯಾದ ಮಲ್ಲಕೂಟಾ ಎಂಬ ಗ್ರಾಮವು ಇತರೆ ನಗರಗಳ ಸಂಪರ್ಕವನ್ನು ಕಡಿದುಕೊಂಡು ಸಂಕಷ್ಟ ಅನುಭವಿಸುತ್ತಿದೆ. ಅಲ್ಲಿರುವ ಪಬ್‌ಗಳಲ್ಲಿ ಬಿಯರ್ ಕೂಡ ಲಭ್ಯವಾಗದೇ ಜನ ಪರದಾಡುವಂತಾಗಿದೆ.
ಈ ಪ್ರದೇಶದಲ್ಲಿ ಮದ್ಯವು ಅತ್ಯಗತ್ಯ ವಸ್ತುಗಳಲ್ಲಿ ಒಂದಾಗಿರುವ ಕಾರಣ, ಆಸ್ಟ್ರೇಲಿಯಾದ ನೌಕಾಪಡೆಯು 800 ಗ್ಯಾಲನ್ ಬಿಯರ್ ಅನ್ನು ವಿಮಾನದ ಮೂಲಕ ಸರಬರಾಜು ಮಾಡಿ, ನೊಂದಿರುವ ಜನರಿಗೆ ಈ ಬಿಯರ್ ಆದರೂ ಖುಷಿ ಕೊಡಲಿ ಎಂದಿದೆ. ಬಿಯರ್ ನೋಡಿ ಉಲ್ಲಸಿತರಾದ ಜನ, ‘ಗಾಡ್ ಬ್ಲೆಸ್ ದಿ ನೇವಿ’ ಎಂದು ಘೋಷಣೆ ಕೂಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.