ಗೋಕಾಕ್ ಚಳವಳಿ ಬಳಿಕ ಕನ್ನಡ ಹೋರಾಟವೆಂದರೆ ಚಿಮೂ!
Team Udayavani, Jan 12, 2020, 3:08 AM IST
ಬೆಂಗಳೂರು: ಸರಿಸುಮಾರು ನಾಲ್ಕು ದಶಕಗಳ ಹಿಂದೆ ಮೊದಲ ಬಾರಿಗೆ ಕನ್ನಡ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಂಶೋಧನೆ ಕ್ಷೇತ್ರದ ಜತೆಗೆ ಕನ್ನಡ ಚಳವಳಿಗೂ ಹೆಜ್ಜೆ ಹಾಕಿದ ಡಾ.ಎಂ.ಚಿದಾ ನಂದಮೂರ್ತಿ ಅವರು ನಂತರ ಕನ್ನಡ ಚಳವಳಿ ಮೂಲಕ ಪರಿಚಾರಕರಾಗಿ ಕಾರ್ಯ ನಿರ್ವಹಿಸಿದ ಹೆಗ್ಗ ಳಿಕೆಗೆ ಪಾತ್ರರಾಗಿದ್ದಾರೆ.
ಹಾಗಾಗಿ 1982ರ ನಂತರದ ಇಡೀ ಕನ್ನಡ ಚಳವಳಿ ಇತಿಹಾಸ ಎಂದರೆ ಅದು ಚಿದಾನಂದಮೂರ್ತಿ ಎನ್ನುವ ಷ್ಟರ ಮಟ್ಟಿಗೆ ಕನ್ನಡ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು. ಸಂಶೋಧನಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಚಿದಾನಂದಮೂರ್ತಿಯವರು ಕನ್ನಡ ಚಳವಳಿಗೆ ಹೊಸ ದಿಕ್ಕು ತೋರುವಲ್ಲಿ ಮಹತ್ವದ ಪಾತ್ರ ವಹಿಸಿದರು. ಮಾತೃಭಾಷಾ ಮಾಧ್ಯಮ, ದೂರದರ್ಶನದಲ್ಲಿ ಉರ್ದು ವಾರ್ತಾ ವಾಚನ, ಕಾವೇರಿ ಜಲವಿವಾದ, ಉದ್ಯೋಗದಲ್ಲಿ ಕನ್ನಡಿಗರಿಗೆ ಸ್ಥಾನ…ಹೀಗೆ ಕನ್ನಡಕ್ಕೆ ಸಂಬಂಧಪಟ್ಟ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ಮೂಲಕ ಚಳವಳಿಗೆ ಶಕ್ತಿ ತುಂಬುತ್ತಿದ್ದರು.
ಸಂಶೋಧಕ ಚಿದಾನಂದಮೂರ್ತಿ ಅವರು 1979ರಲ್ಲಿ ಮೊದಲ ಬಾರಿಗೆ ಕನ್ನಡ ಮೆರವಣಿಗೆಯಲ್ಲಿ ಪಾಲ್ಗೊಂಡು ಕನ್ನಡ ಹೋರಾಟ ಕ್ಷೇತ್ರಕ್ಕೆ ಕಾಲಿಟ್ಟರು. 1980ರಲ್ಲಿ “ಸಿ’ ವರ್ಗದ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆಗೆ ಒತ್ತಾಯಿಸಿ ನಡೆದ ಮೆರವಣಿಗೆಯಲ್ಲೂ ಪಾಲ್ಗೊಂಡಿದ್ದರು. ಮರುವರ್ಷ(1981) ಕರ್ನಾಟಕ ರಾಜ್ಯೋತ್ಸವ ದಿನದಂದು ಕನ್ನಡ ಕೆಲಸದ ಬಗ್ಗೆ ಕರಪತ್ರ ಹಂಚಿ ಪರಿಚಾರಿಕೆ ಶುರು ಮಾಡಿದರು ಎಂದು ಅವರ ಒಡನಾಡಿಗಳು ಸ್ಮರಿಸುತ್ತಾರೆ.
ನಂತರ 1982ರಲ್ಲಿ ಗೋಕಾಕ್ ವರದಿ ಜಾರಿಗೆ ನಡೆದ ಚಳವಳಿಗೆ ಧುಮುಕುವ ಮೂಲಕ ಕ್ರಿಯಾಶೀಲರಾದರು. 1988ರಲ್ಲಿ ಚಿದಾನಂದಮೂರ್ತಿ ಕನ್ನಡ ಶಕ್ತಿಕೇಂದ್ರವನ್ನು ಅಸ್ತಿತ್ವಕ್ಕೆ ತಂದು ರಾಜ್ಯಾದ್ಯಂತ ವಿಸ್ತರಿಸಿದರು. ಮಾತೃಭಾಷೆಯಲ್ಲಿ ಶಿಕ್ಷಣ ಮಾಧ್ಯಮಕ್ಕಾಗಿ ಮೂರು ದಿನ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದ್ದು ಮಹತ್ವದ ಘಟ್ಟ. ಕಾವೇರಿ ವಿವಾದ ಸಂಬಂಧ 2010ರಲ್ಲಿ ನಡೆದ ಧರಣಿಯಲ್ಲಿ ಪಾಲ್ಗೊಂಡು ಹೋರಾಟದ ತೀವ್ರತೆ ಹೆಚ್ಚಿಸಿದ್ದರು.
ಕನ್ನಡ ವಿವಿ ಸ್ಥಾಪನೆಗಾಗಿ ನಿರಂತರ ಹೋರಾಟ ಆರಂಭಿಸಿದರು. ಸ್ಪಂದನೆ ಸಿಗದಿದ್ದಾಗ ಮರಣ ಪತ್ರ ಬರೆದು ಜಲಸಮಾಧಿಯಾಗಲು ಮುಂದಾಗಿದ್ದರು. ಅದು ಕನ್ನಡ ಪರ ಅವರ ಬದ್ಧತೆಯನ್ನು ತೋರಿಸುತ್ತದೆ. ಹೈದರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕವೆಂದು ಗುರುತಿಸುವುದನ್ನು ದಾಸ್ಯದ ಸಂಕೇತವೆಂದು ಭಾವಿಸಿದ್ದ ಚಿದಾನಂದಮೂರ್ತಿ, ಮರು ನಾಮಕರಣಕ್ಕಾಗಿ ಸುಮಾರು ಎರಡು ದಶಕಗಳಿಂದ ಹೋರಾಟ ನಡೆಸಿದ್ದರು. ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದೂ ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕವೆಂದು ನಾಮಕರಣ ಮಾಡಬೇಕು ಎಂದು ನಿರಂತರವಾಗಿ ಒತ್ತಾಯಿಸಿದ್ದರು.
ಬೆಂಬಲ: ಕನ್ನಡ ಚಳವಳಿಗಾರರು, ಹೋರಾಟಗಾರರೆಂದರೆ ಬಡವರು, ಆರ್ಥಿಕವಾಗಿ ಹಿಂದುಳಿದವರೆಂದು ಭಾವಿಸಿದ್ದ ಚಿಮೂ, ತಮ್ಮ ಕೈಲಾದ ಮಟ್ಟಿಗೆ ನೆರವು ನೀಡುತ್ತಿದ್ದುದು ಅವರ ಕನ್ನಡ ಪ್ರೀತಿಯನ್ನು ತೋರಿಸುತ್ತದೆ.
1962ರಲ್ಲಿ ಭಾರತ- ಚೀನಾ ಯುದ್ದ ನಡೆದಾಗ ಅವರು ಸೇನೆಗೆ ಸೇರಲು ಮುಂದಾಗಿದ್ದರು. ಆದರೆ ಸೇನೆಗೆ ಸೇರಲು ಸಾಧ್ಯವಾಗದಿದ್ದಾಗ ಮೈಸೂರಿನಲ್ಲಿ ಪಾದಚಾರಿ ಮಾರ್ಗದಲ್ಲಿ ಪುಸ್ತಕ ಮಾರಾಟ ಮಾಡಿ ಬಂದ ಹಣವನ್ನು ಸೇನಾ ನಿಧಿಗೆ ಸಮರ್ಪಿಸಿದ್ದರು.
-ಡಾ.ಸಿದ್ದಲಿಂಗಯ್ಯ. ಕವಿ
ಕನ್ನಡ ಚಳವಳಿ, ಕೆಲಸ ಕಾರ್ಯಗಳಿಗೆ ಎಂದಿಗೂ ಯಾವುದೇ ಸೌಲಭ್ಯ ಬಯಸಿದವರಲ್ಲ. ಕಾರು ಕಳಿಸಿ ಎಂದು ಸೂಚಿಸಿದವರಲ್ಲ. ಆಟೋರಿಕ್ಷಾದಲ್ಲೇ ಬಂದು ಪಾಲ್ಗೊಳ್ಳುತ್ತಿದ್ದ ಸರಳ ವ್ಯಕ್ತಿಯಾಗಿದ್ದರು.
-ಸಮೀವುಲ್ಲಾ ಖಾನ್, ಮಹಮದೀಯರ ಕನ್ನಡ ವೇದಿಕೆ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್ ಭೇಟಿ ಸಾಧ್ಯತೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.