ದಾಖಲೆ ಸಹಿತ ಪ್ರತಿಪಾದನೆ


Team Udayavani, Jan 12, 2020, 3:09 AM IST

dakale

ಬೆಂಗಳೂರು: “ಬಸವಣ್ಣ ಶೈವನಾಗಿದ್ದವನು ವೀರಶೈವನಾದ. ಆದರೆ, ಅವನ ಮಲ ಸೋದರ ದೇವರಾಜನೂ ವೀರಶೈವನಾಗಿರಲಾರ. ಅವನು ಬ್ರಾಹ್ಮಣನಾಗಿದ್ದೂ ವೀರಶೈವಾ ಭಿಮಾನಿ ಆಗಿರಬೇಕು. ಆ ದೇವರಾಜನ ವಂಶಸ್ಥರು ಈಗಲೂ ಇದ್ದಾರೆ. ಖುದ್ದು ನಾನು ಅಲ್ಲಿಗೆ ಹೋಗಿ, ಮಾತನಾಡಿ ಖಚಿತಪಡಿಸಿಕೊಂಡಿದ್ದೇನೆ…’

-ಹೀಗಂತ ಹಿರಿಯ ಸಂಶೋಧಕ ಡಾ.ಚಿದಾನಂದಮೂರ್ತಿ ತಮ್ಮ “ಹೊಸ ಬೆಳಕಿನಲ್ಲಿ ಬಸವಣ್ಣ’ ಕೃತಿಯಲ್ಲಿ ಬರೆದುಕೊಂಡಿದ್ದಾರೆ. ಇದು ಅವರ ಕ್ಷೇತ್ರಾಧ್ಯಯನ ಅದರಲ್ಲೂ ವೀರಶೈವ-ಲಿಂಗಾಯತ ವಿಚಾರಕ್ಕೆ ಸಂಬಂಧಿ ಸಿದ ಸಂಶೋಧನೆ ಎಷ್ಟರಮಟ್ಟಿಗೆ ಆಳವಾಗಿತ್ತು ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ.

ಗುರುಪೀಠಗಳು ಇರುವುದು ಧಾರ್ಮಿಕ ವ್ಯವಸ್ಥೆಗೆ ಹಾಗೂ ವಿರಕ್ತ ಪೀಠಗಳು ಇರುವುದು ಜ್ಞಾನ ವ್ಯವಸ್ಥೆಗೆ. ರೂಪ ಬೇರೆ ಯಾಗಿದ್ದರೂ ಸ್ವರೂಪ ಒಂದೇ. ವಿರಕ್ತಪೀಠಗಳು ವಚನವಾಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟರೂ ಸಿದ್ಧಾಂತ ಶಿಖಾಮಣಿಗೆ ಸಂಸ್ಕೃತಕ್ಕೆ ಕಡಿಮೆ ಸ್ಥಾನ ನೀಡಿಲ್ಲ. ಹಾಗಾಗಿ, ವೀರಶೈವ-ಲಿಂಗಾಯತ ಎರಡೂ ಸಮಾನ ಎಂಬುದು ಚಿದಾನಂದ ಮೂರ್ತಿ ಅವರ ಗಟ್ಟಿ ನಿಲುವು ಆಗಿತ್ತು.

ವೀರಶೈವ-ಲಿಂಗಾಯತ ಕುರಿತ ಸಂಶೋ ಧನಾ ಫ‌ಲಿತಗಳನ್ನು ನೀಡುವುದರಲ್ಲಿ ಚಿದಾ ನಂದಮೂರ್ತಿ (ಚಿಮೂ) ಅವರ ನಿಲುವು ಒಪ್ಪಿತ ಆಗಿರಬಹುದು ಅಥವಾ ಆಗಿಲ್ಲ ದಿರಬ ಹುದು. ಆದರೆ, ಅವರು ಒದಗಿಸುವ ಸಾಕ್ಷ್ಯಾ ಧಾರ ,ವ್ಯಾಪಕ ಕ್ಷೇತ್ರಾಧ್ಯಯ ನವನ್ನು ಪ್ರತಿಯೊ ಬ್ಬರೂ ಗೌರವಿಸುವಂತ ಹದ್ದಾಗಿತ್ತು. ಈ ನಿಟ್ಟಿನಲ್ಲಿ ಹೇಳುವುದಾದರೆ ಫ‌.ಗು.ಹಳಕಟ್ಟಿ, ಭೂಸನೂರ ಮಠ ಅವರ ಪರಂಪರೆ ಮುಂದುವರಿಸಿದವರು ಚಿಮೂ ಎಂದು ವಿಶ್ಲೇಷಿಸಲಾಗುತ್ತದೆ.

ಹಿಂದಿನ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮುಂದಾದಾಗಲೂ ತಮ್ಮ ಇಳಿ ವಯಸ್ಸಿನಲ್ಲಿಯೂ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದರು. ವೀರಶೈವ-ಲಿಂಗಾಯತ ಎರಡೂ ಒಂದೇ. ಅವುಗಳನ್ನು ಪ್ರತ್ಯೇಕ ಗೊಳಿಸು ವುದು ಮೂರ್ಖತನದ ನಿರ್ಧಾರ ಎಂದು ಟೀಕಿಸಿದ್ದರು. ಅವರ ಇಂತಹ ಖಂಡ ತುಂಡಾದ ನಿಲುವುಗಳಿಂದ ತಮ್ಮ ಕೆಲವು ಶಿಷ್ಯವೃಂದ ಅಂತರ ಕಾಯ್ದುಕೊಂಡಿದ್ದೂ ಉಂಟು. ಹಾಗಂತ, ಚಿಮೂ ಅವರ ನಿಲುವು ಮಾತ್ರ ಅಚಲವಾಗಿತ್ತು.

“ಚಿದಾನಂದಮೂರ್ತಿ (ಚಿಮೂ) ನಾಡಿನ ಸಂಶೋಧಕರ ಸಾಲಿನಲ್ಲಿ ಅಗ್ರಮಾನ್ಯರ ಸಾಲಿ ನಲ್ಲಿ ನಿಲ್ಲುವ ಸಂಶೋಧಕ. ನಾನು ಅವರ ಪ್ರಿಯ ಶಿಷ್ಯ ಕೂಡ. ಹಾಗೂ ಅವರು ನಡೆಸಿದ ಸಂಶೋಧನೆ ಬಗೆಗೆ ನನಗೆ ದೊಡ್ಡ ಗೌರವ ಇದೆ,’ ಎಂದು ಚಿಮೂ ಅವರ ಶಿಷ್ಯ, ಚಿಂತಕ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ತಿಳಿಸುತ್ತಾರೆ.

ಒಂದೇ ಅಲ್ಲ; ಬೇರೆಯಾಗದಂತೆ ಬೆರೆತಿವೆ!: “ವೀರಶೈವ ಮತ್ತು ಲಿಂಗಾಯತ ಇವೆರಡೂ ಬೇರೆ ಮಾಡಲಾಗದಷ್ಟು ಒಂದರಲ್ಲಿ ಮತ್ತೂಂದು ಬೆರೆತುಹೋಗಿದೆ ಎನ್ನುವುದು ವಾಸ್ತವವಾಗಿರಬಹುದು. ಆದರೆ, ಅವರೆಡೂ ಒಂದೇ ಎಂಬ ಚಿದಾನಂದಮೂರ್ತಿ ಅವರ ವಾದ ವನ್ನು ನಾನು ಒಪ್ಪುವುದಿಲ್ಲ. ಏಕೆಂದರೆ, ಲಿಂಗಾ ಯತ ನಿಜವಾಗಿಯೂ ವೀರಶೈವದ ಒಳಗೂ ಇದ್ದ ವೈದಿಕತೆಯಿಂದ ಬಿಡಿಸಲು ಪ್ರಯತ್ನಿಸಿದ ಒಂದು ಪ್ರಯತ್ನ.

ಅದು ಜನಪರ ಮತ್ತು ಶ್ರಮ ಸಂಸ್ಕೃತಿ ಎತ್ತಿಹಿಡಿಯುವ ಚಳವಳಿ. ವೀರಶೈವ ಎಲ್ಲಾ ವೈದಿಕ ಆಚರಣೆ ಒಳಗೊಂಡಿದ್ದಾಗಿತ್ತು. ಇದನ್ನು ಸ್ವತಃ ಚಿಮೂ 80ರ ದಶಕದ ಕಾಲಘಟ್ಟದಲ್ಲಿ ಲಿಂಗಾ ಯತದಲ್ಲಿನ ಪ್ರಗತಿಪರ ಮತ್ತು ಜನಪರ ನಿಲುವುಗಳನ್ನು ಒಪ್ಪಿಕೊಂಡವರಾಗಿದ್ದರು. ಆದರೆ, ನಂತರದಲ್ಲಿ ಮೂಲಭೂತವಾದದತ್ತ ಚಲಿಸಿದರು ಎಂದು ನನಗೆ ಅನಿಸುತ್ತದೆ ಎಂದು ಮತ್ತೋರ್ವ ಶಿಷ್ಯೆ ಪ್ರೊ.ಎಂ.ಎಸ್‌.ಆಶಾದೇವಿ ಸ್ಪಷ್ಟಪಡಿಸುತ್ತಾರೆ.

ಧರ್ಮಬೇಧ ಬೇಡ: ವೀರಶೈವ-ಲಿಂಗಾಯತ ವಿಚಾರ ಮಾತ್ರವಲ್ಲ; ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇವರಿಬ್ಬರೂ ಒಂದೇ ಎಂದು ಒಂದು ವರ್ಗ ವಾದಿಸುತ್ತಿರುವಾಗ, ಆ ಬಗ್ಗೆ ದಾಖಲೆಗಳ ಸಹಿತ ಅವರಿಬ್ಬರೂ ಬೇರೆ ಬೇರೆ ಹಾಗೂ ವಚನ ಸಾಹಿತ್ಯದ ಆರಂಭಕಾರ ಜೇಡರ ದಾಸಿಮಯ್ಯ ಎಂದೂ ಚಿಮೂ ಪ್ರತಿಪಾದಿಸಿದ್ದರು.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-cm

Waqf: ರೈತರಿಗೆ ನೀಡಿರುವ ನೋಟಿಸ್‌ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

Kannada Rajyotsava: ಪಾಲಿಕೆ ಆಡಳಿತದಲ್ಲಿ  ಸಂಪೂರ್ಣ ಕನ್ನಡ: ತುಷಾರ್‌

Kannada Rajyotsava: ಪಾಲಿಕೆ ಆಡಳಿತದಲ್ಲಿ  ಸಂಪೂರ್ಣ ಕನ್ನಡ: ತುಷಾರ್‌

Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು

Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು

Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು

Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು

Bengaluru: ಬ್ಯಾಗ್‌ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್‌

Bengaluru: ಬ್ಯಾಗ್‌ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.