ದೊಡ್ಡಿಗಳಲ್ಲಿಲ್ಲ ಸ್ಮಶಾನ-ಜಮೀನಿನಲ್ಲೇ ಶವಸಂಸ್ಕಾರ

ದೇವದುರ್ಗ ಪುರಸಭೆ ವ್ಯಾಪ್ತಿಯ ದೊಡ್ಡಿಗಳಲ್ಲಿ 400ರಿಂದ 500 ಜನ ವಾಸ ಕೆಲವೆಡೆ ಸ್ಮಶಾನ ಒತ್ತುವರಿ

Team Udayavani, Jan 12, 2020, 1:15 PM IST

12-Janauary-9

ದೇವದುರ್ಗ: ಸ್ಥಳೀಯ ಪುರಸಭೆ ವ್ಯಾಪ್ತಿಯ ಕೆಲ ದೊಡ್ಡಿಗಳಲ್ಲಿ ಶವ ಸಂಸ್ಕಾರಕ್ಕೆ ಸ್ಮಶಾನವೇ ಇಲ್ಲ. ಪುರಸಭೆ ವ್ಯಾಪ್ತಿಯಲ್ಲಿ ಹಲವಾರು ದೊಡ್ಡಿಗಳಿವೆ. ಒಂದೊಂದು ದೊಡ್ಡಿಯಲ್ಲಿ ಕನಿಷ್ಠ 400ರಿಂದ 500 ಜನ ವಾಸಿಸುತ್ತಿದ್ದಾರೆ. ಬಹುತೇಕ ಕುಟುಂಬಗಳು ಜಮೀನುಗಳಲ್ಲೇ ವಾಸಿಸುತ್ತಿದ್ದಾರೆ.  ಯಾರಾದರೂ ಮೃತಪಟ್ಟರೆ ಜಮೀನುಗಳಲ್ಲೇ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ.

ಸ್ಮಶಾನ ಎಲ್ಲೆಲ್ಲಿ ಇಲ್ಲ: ಪುರಸಭೆ ವ್ಯಾಪ್ತಿಯ ತಳವಾರದೊಡ್ಡಿ, ಮರಿಗೆಮ್ಮ ದಿಬ್ಬಿ ತಾಂಡಾ, ಗುಂಡುಲೇರದೊಡ್ಡಿ, ಕ್ಯಾದಿಗೇರದೊಡ್ಡಿ, ಮಟ್ಟಲೇರದೊಡ್ಡ, ಕಾಳೇರದೊಡ್ಡಿ, ಜಕ್ಕಲೇರದೊಡ್ಡಿ ಸೇರಿ ಇತರೆ ದೊಡ್ಡಿಗಳು ಪಟ್ಟಣದಿಂದ ಆರೇಳು ಕಿ.ಮೀ. ಅಂತರದಲ್ಲಿವೆ. ದೊಡ್ಡಿಗಳಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬಕ್ಕೆ ಒಂದೆರಡು ಎಕರೆ ಜಮೀನಿದೆ. ಕುಟುಂಬದಲ್ಲಿ ಯಾರಾದರೂ ಮೃತಪಟ್ಟರೆ ಜಮೀನಿ ನಲ್ಲೇ ಅಂತ್ಯಸಂಸ್ಕಾರ ಮಾಡಲಾಗುತ್ತದೆ.

ಎರಡೇ ಖಬರಸ್ಥಾನ: ಇನ್ನು ದೇವದುರ್ಗ ಪಟ್ಟಣದಲ್ಲಿ 10 ಸಾವಿರಕ್ಕೂ ಅಧಿಕ ಮುಸ್ಲಿಮರಿದ್ದಾರೆ. ಪಟ್ಟಣದಲ್ಲಿ ಎರಡು ಖಬರಸ್ಥಾನ ಇವೆ. ಪೊಲೀಸ್‌ ಠಾಣೆ ಹತ್ತಿರ, ಗೌರಂಪೇಟೆ ಸೇರಿ ಎರಡು ಖಬರಸ್ಥಾನ ಇವೆ. ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಬಸ ನಿಲ್ದಾಣ, ದರ್ಬಾರ್‌ ಹತ್ತಿರ ಇರುವಂತ ಮುಸ್ಲಿಮರು ಮೃತಪಟ್ಟರೆ ಒಂದೂವರೆ ಕಿ.ಮೀ. ನಡೆದುಕೊಂಡು ಖಬರಸ್ಥಾನಕ್ಕೆ ಬರಬೇಕು. ಗೌರಂಪೇಟೆ ವಾರ್ಡ್‌ನಲ್ಲಿ ಸಮಸ್ಯೆ ಇಲ್ಲ. ಖಬರಸ್ಥಾನ ಒಳಗೆ ಬೆಳೆದ ನಿಂತ ಜಾಲಿಗಿಡ ಗಿಡಗಂಟೆಗಳ ಸ್ವಚ್ಛತೆಗೆ ಪುರಸಭೆ ಗಮನಹರಿಸಬೇಕಿದೆ.

ಸ್ಮಶಾನ ಒತ್ತುವರಿ: ಬೂದಿಬಸವೇಶ್ವರ ಮಠದಲ್ಲಿರುವ ಮೇಲ್ವರ್ಗದವರಿಗೆ ಸೇರಿದ ಸ್ಮಶಾನ ಒತ್ತುವರಿಗೆ ಆಗಿದೆ ಎನ್ನಲಾಗುತ್ತಿದೆ. ಒಳಗೆ ಜಾಲಿಗಿಡಗಳು ಬೆಳೆದ ಅವ್ಯವಸ್ಥೆ ಆಗರವಾಗಿದೆ. ಗೌತಮ ವಾರ್ಡ್‌ನಲ್ಲಿರುವ ಸ್ಮಶಾನ ದಿನೇದಿನೇ ಒತ್ತುವರಿಗೆ ಆಗುತ್ತಿದೆ. ಶವ ಸುಟ್ಟು ಹಾಕುವ ಸೌಲಭ್ಯ ಕಲ್ಪಿಸಿದ್ದು, ನಿರ್ವಹಣೆ ಇಲ್ಲದೇ ತುಕ್ಕು ಹಿಡಿಯುತ್ತಿದೆ. ತಿಮ್ಮಪ್ಪನಕರೆ, ಮಲ್ಲಯ್ಯ ಚರ್ಮಿ, ಸಿಪತಗೇರಾ ಸೇರಿ ಇತರೆಡೆ ಸ್ಮಶಾನಗಳಿವೆ. ಇಲ್ಲಿ ಹಿಂದುಳಿದ ಜನಾಂಗ ಇತರೆ ಸಮುದಾಯಗಳ ಶವ ಸಂಸ್ಕಾರ ಮಾಡಲಾಗುತ್ತದೆ. ಇಲ್ಲಿನ ಸ್ಮಶಾನಗಳು ಅವ್ಯವಸ್ಥೆ ಆಗರವಾಗಿದ್ದು, ಸ್ವಚ್ಛತೆ ಗಗನ ಕುಸುಮವಾಗಿದೆ.

ದೊಡ್ಡಿಗಳಲ್ಲಿ ಸ್ಮಶಾನಗಳು ಇಲ್ಲ. ಯಾರಾದರೂ ಮೃತಪಟ್ಟರೆ
ಜಮೀನುಗಳಲ್ಲೇ ಶವ ಸಂಸ್ಕಾರ ಮಾಡಬೇಕಿದೆ. ಸ್ಮಶಾನಕ್ಕೆ ಜಾಗೆ ಒದಗಿಸುವಂತೆ ಪುರಸಭೆಗೆ ಮನವಿ ಮಾಡಲಾಗಿದೆ.
ಶಿವಪ್ಪ, ರಾಮಯ್ಯ,
ದೊಡ್ಡಿ ನಿವಾಸಿಗಳು.

„ನಾಗರಾಜ ತೇಲ್ಕರ್‌

ಟಾಪ್ ನ್ಯೂಸ್

hk-patil

Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್‌

doctor 2

America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ

UGC

UGC; ಪದವಿ ಕಲಿಕೆ ಅವಧಿ ನಿರ್ಧಾರ ಆಯ್ಕೆ ಶೀಘ್ರ: ಚೇರ್ಮನ್‌ ಹೇಳಿದ್ದೇನು?

1-chinn

Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್‌ ಸ್ಪಷ್ಟನೆ

Ashwin Vaishnav

Bullet train ದೇಶದಲ್ಲಿಯೇ ನಿರ್ಮಾಣ: ಸಂಸತ್ತಿಗೆ ಕೇಂದ್ರ ಮಾಹಿತಿ

Farmer

Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್‌ ಇಳುವರಿ!

1-aaasas

Team Indiaಕ್ಕೆ ಆಸೀಸ್‌ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-sirwar

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ

ರಾಯಚೂರು: ರೈತರ ನಿದ್ದೆಗೆಡಿಸಿದ ಬೆಳೆದು ನಿಂತ “ಬಿಳಿ ಬಂಗಾರ’ ಹತ್ತಿ

3-raichur

Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ

1-wewqewq

Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

hk-patil

Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್‌

doctor 2

America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ

UGC

UGC; ಪದವಿ ಕಲಿಕೆ ಅವಧಿ ನಿರ್ಧಾರ ಆಯ್ಕೆ ಶೀಘ್ರ: ಚೇರ್ಮನ್‌ ಹೇಳಿದ್ದೇನು?

1-chinn

Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್‌ ಸ್ಪಷ್ಟನೆ

Ashwin Vaishnav

Bullet train ದೇಶದಲ್ಲಿಯೇ ನಿರ್ಮಾಣ: ಸಂಸತ್ತಿಗೆ ಕೇಂದ್ರ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.