ವಿವೇಕಾನಂದ ಜನ್ಮದಿನಾಚರಣೆ: ಅಬಲೆಯರಿಗೆ ಆಸರೆಯಾದ ತೋಕೂರು ಸ್ಪೋರ್ಟ್ಸ್ ಕ್ಲಬ್
Team Udayavani, Jan 12, 2020, 2:58 PM IST
ಹಳೆಯಂಗಡಿ: ಯುವ ಶಕ್ತಿಗೆ ಪ್ರೇರಣೆಯಾಗಿರುವ ಸ್ವಾಮೀ ವಿವೇಕಾನಂದ ಅವರ 157ನೇ ಜನ್ಮ ದಿನಾಚರಣೆಯನ್ನು ರವಿವಾರ ಇಲ್ಲಿನ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರು ವಿಭಿನ್ನವಾಗಿ ಅಬಲೆಯರಿಗೆ ಆಸರೆಯಾಗಿ ಶ್ರಮದಾನದ ಮೂಲಕ ಆಚರಣೆ ನಡೆಸಿದರು.
ಮಂಗಳೂರಿನ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಗೂ ಪಡುಪಣಂಬೂರು ಗ್ರಾಮ ಪಂಚಾಯತ್‌ನ ಸಹಕಾರದಲ್ಲಿ ಅಶಕ್ತರಾಗಿರುವ ಬೆಳ್ಳಾಯರು ಗ್ರಾಮದ ಕೆರೆಕಾಡುವಿನ 94 ವರ್ಷದ ಕಿಟ್ಟಿ ಮಡಿವಾಳ್ತಿ ಮತ್ತು ಅವರ ಮಗಳು ಅವಿವಿವಾಹಿತೆ 56 ವರ್ಷದ ಗಿರಿಜಾ ಮಡಿವಾಳ್ತಿ ಅವರ ಮನೆಯ ಸುತ್ತ – ಮುತ್ತ ಇದ್ದ ಕಸ ಕಡ್ಡಿ, ಗಿಡ-ಗಂಟಿಗಳನ್ನು ತೆಗೆದು, ಮನೆಯ ಆವರಣ ಹಾಗೂ ಕೋಣೆಗಳನ್ನು ಸ್ವಚ್ಚ ಮಾಡುವ ಮೂಲಕ ವಿಶೇಷವಾಗಿ ಶ್ರಮದಾನ ನಡೆಸಿದರು.
ಪಡುಪಣಂಬೂರು ಗ್ರಾಮ ಪಂ. ಅಧ್ಯಕ್ಷ ಮೋಹನ್ ದಾಸ್, ಉಪಾಧ್ಯಕ್ಷೆ ಸುರೇಖಾ ಕರುಣಾಕರ ಬೆಳ್ಳಾಯರು, ಸದಸ್ಯ ಸಂತೋಷ್ ಕುಮಾರ್ ಮಾರ್ಗದರ್ಶನ ನೀಡಿದರು.
ಕ್ಲಬ್‌ನ ಗೌರವ ಅಧ್ಯಕ್ಷ ನಾರಾಯಣ ಜಿ ಕೆ, ಅಧ್ಯಕ್ಷ ಸುರೇಶ್ ಶೆಟ್ಟಿ, ಸಂತೋಷ್ ದೇವಾಡಿಗ, ದೀಪಕ್ ಸುವರ್ಣ, ಗೌತಮ್ ಬೆಲ್ಚಡ, ಸುನಿಲ್ ಜಿ. ದೇವಾಡಿಗ, ಪ್ರಶಾಂತ್ ಕುಮಾರ್ ಬೇಕಲ್, ಗಣೇಶ್ ದೇವಾಡಿಗ, ಜಗದೀಶ್ ಕೋಟ್ಯಾನ್, ಬಾಲಕೃಷ್ಣ ಲೈಟ್ ಹೌಸ್, ಸೋಮನಾಥ್, ಮಹೇಶ್ ಸುವರ್ಣ, ಸಂಪತ್ ದೇವಾಡಿಗ, ರಕ್ಷಣ್ ಮತ್ತಿತರರು ಪಾಲ್ಗೊಂಡಿದ್ದರು.
ಕ್ಲಬ್‌ನ ಕಾರ್ಯ ಮಾದರಿ
ತೋಕೂರಿನ ಶ್ರಿ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಚಟುವಟಿಕೆ ಮಾದರಿಯಾಗಿದೆ, ಹಿಂದೆ ಈ ಮನೆಯ ಮೇಲ್ಛಾವಣಿಯನ್ನು ದುರಸ್ಥಿ ಮಾಡಿಕೊಟ್ಟು, ಪಡಿತರವನ್ನು ನೀಡಿದ ಸಂಸ್ಥೆಯು ಇದೀಗ ಮನೆಯ ವಾತಾವರಣವನ್ನು ಶ್ರಮದಾನದ ಮೂಲಕ ವಯೋವೃದ್ಧರಲ್ಲಿ ಸಾಧ್ಯವಾಗದ ಕೆಲಸವನ್ನು ಮಾಡಿಕೊಟ್ಟಿರುವುದು ಶ್ಲಾಘನೀಯ, ಯುವ ಸಂಸ್ಥೆಗಳು ಇಂತಹ ಕಾರ್ಯ ನಡೆಸಿದಲ್ಲಿ ಯುವ ದಿನದ ಮಹತ್ವ ಅರಿವಾಗುತ್ತದೆ.
ಮೋಹನ್‌ದಾಸ್, ಅಧ್ಯಕ್ಷರು, ಪಡುಪಣಂಬೂರು ಗ್ರಾ. ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
ಮಂಗಳೂರಿಗೆ ವಾಟರ್ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ
Mangaluru: ಕರಾವಳಿಯ ವೃತ್ತಿಪರರಿಗೆ ವಿಶ್ವದೆಲ್ಲೆಡೆ ಮನ್ನಣೆ
MUST WATCH
ಹೊಸ ಸೇರ್ಪಡೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.