ಕುಟುಂಬ, ಕಚೇರಿಗಳಲ್ಲಿ ಮಾನವ ಸಂಬಂಧ ಬಿರುಕು ಬಿಡದಿರಲಿ


Team Udayavani, Jan 13, 2020, 5:38 AM IST

C-9

ಮನುಷ್ಯನ ಸಂಬಂಧಗಳೆಲ್ಲವೂ ಬಿರುಕು ಬಿಡುತ್ತಲೇ ಸಾಗುತ್ತಲಿದೆ. ಇಂತಹ ಜೀವನ ನಮ್ಮನ್ನು ಅಧಃಪತನದತ್ತ ಒಯ್ಯುತ್ತದೆ ಎಂದು ನಾವ್ಯಾರೂ ಭಾವಿಸುವುದಿಲ್ಲ.
ಕುಟುಂಬ ಸೇರಿದಂತೆ ನಾವು ಕೆಲಸ ಮಾಡುವ ಕಚೇರಿಗಳಲ್ಲಿ ಇಂದು ಮಾನವ ಸಂಬಂಧಗಳು ಹದಗೆಟ್ಟಿವೆ. ಈ ಸಂಬಂಧಗಳು ಬಿರುಕು ಬಿಡದೆ ಗಟ್ಟಿಗೊಳಿಸುವಲ್ಲಿ ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಪಾತ್ರವೇನು ಎನ್ನುವುದರ ಅರಿವು ನಮಗಿರಲೇಬೇಕಿದೆ.

ಆಧುನಿಕ ಯಾಂತ್ರೀಕೃತ ಜೀವನ ಶೈಲಿಗೆ ಅನಿವಾರ್ಯವೆನ್ನುವಂತೆ ಒಗ್ಗಿಕೊಂಡಿರುವ ನಾವು ಇಂದು ಮೊಬೈಲ್‌, ಇಂಟರ್ನೆಟ್‌ನಲ್ಲೇ ಹೆಚ್ಚಿನ ಕಾಲ ಕಳೆಯುತ್ತಿದ್ದೇವೆ. ಇದರಿಂದಾಗಿ ಒತ್ತಡಗಳು ತನ್ನಿಂದ ತಾನಾಗಿಯೇ ಮನುಷ್ಯನನ್ನು ಆವರಿಸಿಕೊಂಡು ಬಿಟ್ಟಿವೆೆ. ಮನುಷ್ಯನ ಸಂಬಂಧಗಳೆಲ್ಲವೂ ಬಿರುಕು ಬಿಡುತ್ತಲೇ ಸಾಗುತ್ತಲಿದೆ. ಇಂತಹ ಜೀವನ ನಮ್ಮನ್ನು ಅಧಃಪತನದತ್ತ ಒಯ್ಯುತ್ತದೆ ಎಂದು ನಾವ್ಯಾರೂ ಭಾವಿಸುವುದಿಲ್ಲ.
ಕುಟುಂಬ ಸೇರಿದಂತೆ ನಾವು ಕೆಲಸ ಮಾಡುವ ಕಚೇರಿಗಳಲ್ಲಿ ಇಂದು ಮಾನವ ಸಂಬಂಧಗಳು ಹದಗೆಟ್ಟಿವೆ. ಈ ಸಂಬಂಧಗಳು ಬಿರುಕು ಬಿಡದೆ ಗಟ್ಟಿಗೊಳಿಸುವಲ್ಲಿ ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಪಾತ್ರವೇನು ಎನ್ನುವುದರ ಅರಿವು ನಮಗಿರಲೇಬೇಕಿದೆ. ಅದಕ್ಕಾಗಿ ಕೆಲವೊಂದು ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗುತ್ತಿದೆ.

ಅಹಂ ತೊರೆದುಬಿಡಿ
ಆಸ್ತಿ, ಅಂತಸ್ತು, ಆರೋಗ್ಯ ಇತ್ಯಾದಿ ಎಲ್ಲವೂ ನನ್ನಲ್ಲಿ ಇದೆ. ನಾನೇ ದೊಡ್ಡವನು, ನಾನೇ ಉತ್ತಮನಾದವನು ಎನ್ನುವ ಅಹಂಕಾರದ (ಈಗೋ) ಭಾವನೆ ಮನುಷ್ಯರಲ್ಲಿ ಅಂಟಿಕೊಂಡು ಬಿಡುತ್ತದೆ. ಇಂತಹ ದುರ್ಗುಣ ನಿಮ್ಮಲ್ಲಿದ್ದರೆ ಅದನ್ನು ಇಂದೇ ತೊರೆದುಬಿಡಿ. ಆಸ್ತಿ, ಅಂತಸ್ತು ಕರಗಿದಾಗ, ಆರೋಗ್ಯ ಕೈಕೊಟ್ಟಾಗಲಾದರೂ ಕೆಲವರ ಅಹಂ ಇಳಿದು ಬಿಡುತ್ತದೆ. ಇಂತಹ ಸಂದರ್ಭದಲ್ಲೂ ನಮ್ಮ ಅಹಂ ಅನ್ನು ನಾವು ಬಿಡದೇ ಇದ್ದಲ್ಲಿ ಅವರು ಎಂದಿಗೂ ಬದಲಾಗಲಾರರು.

“ಲೂಸ್‌ ಟಾಕ್‌’ ಬಿಟ್ಟುಬಿಡಿ
ಕಚೇರಿ ಕೆಲಸದಲ್ಲಿರುವಾಗ, ಬಿಡುವಿನ ಸಂದರ್ಭ ಒಟ್ಟಾಗಿ ಚಹಾ ಕುಡಿಯುವ ವೇಳೆಯಲ್ಲಿ ನಮಗೆ ಅನ್ನ ನೀಡುವ ಕಂಪೆನಿ, ಇತರ ವ್ಯಕ್ತಿಗಳು, ನಮಗಾಗದವರ ಬಗ್ಗೆ ಅರ್ಥವಿಲ್ಲದೆ ಮಾತನಾಡುವುದನ್ನು (ಲೂಸ್‌ ಟಾಕ್‌) ಬಿಟ್ಟು ಬಿಡಬೇಕು. ನಮಗೆ ಯಾರಿಂದಲೂ ತೊಂದರೆಯಾಗಿರಬಹುದು. ಅದು ಅವರಿಗೆ ಸರಿ ಎನಿಸಿರಲೂಬಹುದು. ಅಂತಹ ಸನ್ನಿವೇಶದಿಂದ ನಮ್ಮ ಮನಸ್ಸಿಗೆ ಘಾಸಿಯಾಗಿರಲೂಬಹುದು. ಆದರೂ ಲೂಸ್‌ ಟಾಕ್‌ ಬೇಡವೇ ಬೇಡ. ಅರ್ಥವಿಲ್ಲದೆ ಮುಂದೆ ಬರುವ ಪರಿಣಾಮವನ್ನು ಅರಿಯದೆ ಮಾತನಾಡುವುದನ್ನು ನಾವು ಸಂಪೂರ್ಣವಾಗಿ ನಿಲ್ಲಿಸೋಣ. ಇದರಿಂದ ನಮಗೇ ಲಾಭಗಳು ಜಾಸ್ತಿಯಾಗುತ್ತವೆ. ಮನಸ್ಸೇ ತಡೆಯುತ್ತಿಲ್ಲ ಎಂದಾದರೆ ಲೂಸ್‌ ಟಾಕ್‌ ಬದಲು ಆ ಪರಿಸರದಿಂದಲೇ ದೂರವಾಗುವುದೇ ಒಳಿತೆನ್ನಬಹುದು.

ಸಮಸ್ಯೆ ಯಾರಿಗೆ ಬರೋಲ್ಲ?
ಯಾವುದೇ ವಿಷಯವನ್ನು, ಸಮಸ್ಯೆಗಳನ್ನು ನಾಜೂಕಾಗಿ ಎದುರಿಸುವುದನ್ನು ಅರಿತುಕೊಂಡರೆ ಉತ್ತಮ. ಸಮಸ್ಯೆಗಳನ್ನು ತಲೆಯಲ್ಲಿಟ್ಟುಕೊಂಡು ತೊಳಲಾಡುವುದರಿಂದ ಮತ್ತಷ್ಟು ಸಮಸ್ಯೆಗಳನ್ನು ನಾವೇ ಎಳೆದುಕೊಂಡಂತಾಗುತ್ತದೆ. ಕೆಲವು ಸಮಯಗಳಲ್ಲಿ ಕೆಲವು ಸಂಕಟಗಳನ್ನು ನಾವು ಅನುಭವಿಸಲೇಬೇಕು ಎನ್ನುವುದನ್ನು ಮನದಟ್ಟುಮಾಡಿಕೊಳ್ಳಬೇಕು.

ನಮ್ಮ ವಾದವೇ ಏಕೆ ಸರಿಯಾಗಬೇಕು?
ಎಲ್ಲ ಸಂದರ್ಭಗಳಲ್ಲಿ ನಾವು ಹೇಳಿದ್ದೇ, ಮಾಡಿದ್ದೇ ಸರಿ. ಇನ್ನೊಬ್ಬ ಮಾಡಿದ್ದು ತಪ್ಪು ಎನ್ನುವ ವಾದ ಮಾಡಬೇಡಿ. ಅವನ ವಿಷಯದಲ್ಲೂ ಸರಿ ಇರಬಹುದು. ಮತ್ತೆ ನೀವು ಹೇಳಿದ್ದೇ ಸರಿ. ಮಾಡಿದ್ದೇ ಸರಿ ಎನ್ನುವ ವಾದವೂ ಬೇಡ. ಸಂಕುಚಿತ ಮನೋಭಾವವನ್ನು ಬಿಟ್ಟು ಹೊರಬನ್ನಿ.

ಮಿಥ್ಯವೇ ಸತ್ಯವಾಗದಿರಲಿ
ಸತ್ಯ ಯಾವುದು, ಮಿಥ್ಯ ಯಾವುದೆನ್ನುವುದನ್ನು ಮೊದಲು ಅರಿತುಕೊಳ್ಳಬೇಕು. ಕೆಲವು ಸಂದರ್ಭಗಳಲ್ಲಿ ಸತ್ಯ, ಮಿಥ್ಯ ಯಾವುದೆಂದು ತಿಳಿದುಕೊಳ್ಳಲೂ ನಮಗಾಗದಿರಬಹುದು. ಅಂತಹ ಸಂದಿಗ್ಧ ಸನ್ನಿವೇಶದಲ್ಲಿ ಏನೆಂದೂ ವಿಚಾರವನ್ನೂ ತಿಳಿದುಕೊಳ್ಳದೆ ಇಲ್ಲಿ ಕೇಳಿದ್ದನ್ನು ಅಲ್ಲಿ ಹೇಳುವುದು, ಅಲ್ಲಿ ಕೇಳಿದ್ದನ್ನು ಇಲ್ಲಿ ಹೇಳುವುದನ್ನು ಬಿಟ್ಟು ಬಿಡಿ. ಮೌನದಿಂದಲೇ ಇಲ್ಲಿ ದೊಡ್ಡವರಾಗಿ. ಮೊತ್ತೂಬ್ಬರಿಗಿಂತ ನಮ್ಮನ್ನು ನಾವೇ ದೊಡ್ಡವರೆಂದು ತಿಳಿದು ದಡ್ಡರಾಗಬೇಡಿ.

ಅತಿಯಾದ ಆಸೆ ಬೇಡವೇ ಬೇಡ
ಮಿತಿಗಿಂತ ಅಧಿಕವಾಗಿ, ಅವಶ್ಯಕ್ಕಿಂತ ಅಧಿಕವಾಗಿ ಆಸೆ ಪಡುವುದೇ ಬೇಡ. ಕಚೇರಿಯಲ್ಲಿ ಅದೆಷ್ಟೋ ಸಂಖ್ಯೆಯ ಕೆಲಸಗಾರರಿರುತ್ತಾರೆ. ನನ್ನ ಸಹೋದ್ಯೋಗಿ ನನ್ನಷ್ಟೇ ಸಂಬಳದಲ್ಲಿ ಕೆಲಸಕ್ಕೆ ಸೇರಿ ಕಾರು ಖರೀದಿಸಿರಬಹುದು. ಜಾಗ ಖರೀದಿಸಿ ಮನೆ ಕಟ್ಟಿರಬಹುದು. ಅದೇ ಕೆಲಸದಲ್ಲಿರುವ ನನಗೆ ಅದನ್ನೆಲ್ಲ ಮಾಡಲಾಗಿಲ್ಲ ಎನ್ನುವ ಕೊರಗು ಬೇಡವೇ ಬೇಡ. ಅವರವರ ಹಿನ್ನೆಲೆ, ಮುನ್ನೆಲೆ, ಖರ್ಚು ಇನ್ನಿತರ ಕಾರ್ಯಗಳು ನಮಗಿಂತ ಭಿನ್ನವಾಗಿರಬಹುದು.

ಕಿರಿಯರನ್ನೂ ಗೌರವಿಸಿ
ಮತ್ತೂಬ್ಬರಿಗೆ ಮರ್ಯಾದೆ ಕೊಡುವುದು, ಸಿಹಿಯಾದ, ಹಿತವಾದ ಪದಗಳನ್ನು ಬಳಸಬೇಕು. ಹಿರಿಯರು, ಕಿರಿಯರನ್ನು ಗೌರವಿಸಿ. ನಾನು ಸೀನಿಯರ್‌ ಎನ್ನುವ ಸಣ್ಣತನ ಬೇಡ. ಕಿರಿಯರಿಂದಲೂ ಕಲಿಯಲು ಸಾಕಷ್ಟಿರುತ್ತದೆ. ಕಿರಿಯ ಮನಸ್ಸು ನೋಯುವಂತೆ ಮಾಡಬಾರದು. ಮಾತಿನಲ್ಲೂ, ನಡತೆಯಲ್ಲೂ ಸಭ್ಯತೆ ಇಲ್ಲದ ಕೀಳು ಪದಗಳ ಬಳಕೆ ಬೇಡವೇ ಬೇಡ.

 -ಚೇತನ್‌ ಪಡುಬಿದ್ರಿ

ಟಾಪ್ ನ್ಯೂಸ್

Ambedkar row: Amit Shah gone mad, he should leave politics says Lalu Prasad Yadav

Ambedkar row: ಅಮಿತ್‌ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ಮಾಹಿತಿ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

INDvAUS: Is captain Rohit Sharma standing against to Shami?; Aussie tour difficult for pacer!

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?;‌ ವೇಗಿಗೆ ಆಸೀಸ್‌ ಪ್ರವಾಸ ಕಷ್ಟ!

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Ambedkar row: Amit Shah gone mad, he should leave politics says Lalu Prasad Yadav

Ambedkar row: ಅಮಿತ್‌ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ಮಾಹಿತಿ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.