201 ಬಾರಿ ಮಲೆಯೇರಿದ ಅಯ್ಯಪ್ಪ ಭಕ್ತ!
ಊರಲ್ಲೇ ಅಯ್ಯಪ್ಪ ಮಂದಿರ ನಿರ್ಮಿಸಿದ ಗುರುಸ್ವಾಮಿ ; 35 ವರ್ಷ ಹಿಂದೆ ಮೊದಲ ಯಾತ್ರೆ , ಪ್ರತೀ ತಿಂಗಳು ಶಬರಿಗಿರಿಗೆ
Team Udayavani, Jan 13, 2020, 6:00 AM IST
ಪುತ್ತೂರು: ಜೀವನದಲ್ಲಿ ಒಮ್ಮೆಯಾದರೂ ಶಬರಿಮಲೆ ಯಾತ್ರೆ ಕೈಗೊಳ್ಳಬೇಕೆಂಬ ಆಸೆ ಹಲವರದಾಗಿರುತ್ತದೆ. ಆದರೆ ಇಲ್ಲೊಬ್ಬರು ಅಯ್ಯಪ್ಪ ಭಕ್ತ 35 ವರ್ಷಗಳಲ್ಲಿ ಬರೋಬ್ಬರಿ 201 ಬಾರಿ ಶಬರಿಮಲೆ ಯಾತ್ರೆ ನಡೆಸಿದ್ದಲ್ಲದೆ ಸ್ವಾಮಿ ಭಕ್ತಿಯ ಪ್ರತೀಕವಾಗಿ ತನ್ನೂರಿನಲ್ಲಿ ಅಯ್ಯಪ್ಪ ಮಂದಿರ ನಿರ್ಮಿಸಿದ್ದಾರೆ.
ಪುತ್ತೂರು ತಾ.ಪಂ. ಕಚೇರಿಯಲ್ಲಿ ವಿಷಯ ನಿರ್ವಾಹಕರಾಗಿದ್ದು, ಪ್ರಭಾರ ವ್ಯವಸ್ಥಾಪಕರಾಗಿಯೂ ಕೆಲಸ ಮಾಡುತ್ತಿರುವ ಸುಳ್ಯ ತಾಲೂಕಿನ ಅಡ³ಂಗಾಯದ ಶಿವಪ್ರಕಾಶ್ ಈ ಸಾಧಕ. ತಾ.ಪಂ. ಕಚೇರಿಗೆ ಯಾವತ್ತು ಭೇಟಿ ನೀಡಿದರೂ ಶಬರಿಮಲೆ ವ್ರತಧಾರಿಯಾಗಿಯೇ ಅವರು ಕಾಣಸಿಗುತ್ತಾರೆ.
ಸಂಕಲ್ಪ ಮೀರಿದ ಭಕ್ತಿ!
ಅಯ್ಯಪ್ಪ ಸ್ವಾಮಿಯ ಪರಮ ಭಕ್ತನಾದ ಶಿವಪ್ರಕಾಶ್ 35 ವರ್ಷಗಳ ಹಿಂದೆ ಮಲೆಗೆ ಮೊದಲ ಯಾತ್ರೆ ಕೈಗೊಂಡರು. 1983ರಿಂದ 1991ರ ಅವ ಧಿಯಲ್ಲಿ ಕೆಲವು ಬಾರಿ ಹೋಗಿ ಬಂದ ಶಿವಪ್ರಕಾಶ್, 1991ರಿಂದ ಯಾತ್ರೆಯನ್ನು ಹಂತ ಹಂತವಾಗಿ ಹೆಚ್ಚಿಸಿದ್ದಾರೆ. 2004ರಲ್ಲಿ ಹೋದಾಗ ಇನ್ನು ನಿರಂತರ 48 ತಿಂಗಳು ಮಾಲೆ ಹಾಕಿ ಬರುತ್ತೇನೆ ಎಂದು ಸ್ವಾಮಿಯ ಎದುರು ಸಂಕಲ್ಪ ಮಾಡಿಕೊಂಡರು. 2008ರಲ್ಲಿ ಈ ಸಂಕಲ್ಪ ಪೂರೈಸಿದರೂ ಯಾತ್ರೆ ನಿಲ್ಲಿಸಲು ಮನಸಾಗಲಿಲ್ಲ. ಪ್ರತೀ ತಿಂಗಳು ಸ್ವಾಮಿಯ ದರ್ಶನ ಮುಂದುವರಿದಿದೆ. ಈ ಸಂಕಲ್ಪಕ್ಕೆ 2020ರ ಜನವರಿ 16ಕ್ಕೆ ವರ್ಷ ತುಂಬುತ್ತಿದೆ. ಕಳೆದ ವಾರವಷ್ಟೇ 201ನೇ ಯಾತ್ರೆಯನ್ನು ಮುಗಿಸಿದ್ದಾರೆ ಶಿವಪ್ರಕಾಶ್.
ಅಪಾರ ಶಿಷ್ಯರು
ಗುರುಸ್ವಾಮಿಯಾಗಿರುವ ಅವರು ಪ್ರತೀ ಬಾರಿ ಹೋಗುವಾಗಲೂ ಸುಮಾರು 30ರಷ್ಟು ವ್ರತಧಾರಿ ಸ್ವಾಮಿಗಳನ್ನು ಕರೆದುಕೊಂಡು ಹೋಗುತ್ತಾರೆ. ಪ್ರತೀ ಸಂಕ್ರಾಂತಿಯ ಆಸುಪಾಸಿನ ಶನಿವಾರ ಯಾತ್ರೆ ಆರಂಭಿಸುತ್ತಾರೆ. ಅದಕ್ಕೆ ಮುನ್ನ 12 ದಿನ ಮಾಲಾಧಾರಣೆಯಲ್ಲಿ ಇರುತ್ತಾರೆ. ಇರುಮುಡಿ ಕಟ್ಟುವ ದಿನ ಪರಿಸರದ ಮಂದಿಗೆ ಅನ್ನದಾನ ಮಾಡುತ್ತಾರೆ. ಕಾಸರಗೋಡಿನಿಂದ ರೈಲಿನಲ್ಲಿ ಕೊಟ್ಟಾಯಂಗೆ ಹೋಗಿ ಅಲ್ಲಿಂದ ಮೊದಲೇ ಕಾದಿರಿಸಿದ ಮಿನಿ ಬಸ್‌ನಲ್ಲಿ ಮುಂಜಾನೆ ಪಂಪಾ ತಲುಪುತ್ತಾರೆ. ಸ್ವಾಮಿಯ ದರ್ಶನ ಪೂರೈಸಿ ಸಂಜೆ ನಿರ್ಗಮಿಸಿ ಮರುದಿನ ಕಚೇರಿಗೆ ಹಾಜರಾಗುತ್ತಾರೆ. ಇದು ಅವರ ಪ್ರತೀ ತಿಂಗಳ ಯಾತ್ರೆಯ ವಿಧಾನ.
ಚಪ್ಪರದಿಂದ ಮಂದಿರಕ್ಕೆ ಸ್ವಾಮಿಯ ಅನುಗ್ರಹ
ಶಿವಪ್ರಕಾಶ್ ಅವರ ಸ್ವಾಮಿ ಭಕ್ತಿ ಅಷ್ಟಕ್ಕೇ ನಿಂತಿಲ್ಲ. ತಮ್ಮ ಮನೆಯ ಸಮೀಪದಲ್ಲೇ ಸಹಸ್ವಾಮಿಗಳ ಸಹಕಾರದೊಂದಿಗೆ 2018ರ ಡಿಸೆಂಬರ್‌ನಲ್ಲಿ 26 ಲಕ್ಷ ರೂ. ವ್ಯಯಿಸಿ ಅಯ್ಯಪ್ಪ ಸ್ವಾಮಿ ಮಂದಿರ ನಿರ್ಮಿಸಿದ್ದಾರೆ. ಕುರುಂಜಿ ಡಾ| ರೇಣುಕಾ ಪ್ರಸಾದ್ ಸಹಕಾರ ನೀಡಿದ್ದಾರೆ. ಶಾಸಕರು 10 ಲಕ್ಷ ರೂ. ಅನುದಾನದ ಭರವಸೆ ನೀಡಿದ್ದಾರೆ. ಮನೆಯ ಎದುರು ಚಪ್ಪರದಲ್ಲಿ ವ್ರತಾಚರಣೆ ಮಾಡುತ್ತಿದ್ದ ಕಾಲ ಹೋಗಿ ಮಂದಿರದಲ್ಲಿ ನಿಲ್ಲುವ ತನಕ ಅಯ್ಯಪ್ಪ ಸ್ವಾಮಿ ಅನುಗ್ರಹಿಸಿದ್ದಾನೆ ಎಂದು ಭಾವುಕರಾಗುತ್ತಾರೆ ಶಿವಪ್ರಕಾಶ್.
ಪ್ರಸಾದವೇ ಔಷಧವಾಯಿತು!
ಒಂದು ಬಾರಿ ಯಾತ್ರೆಯ ಹಿಂದಿನ ದಿನ ರಾತ್ರಿ ಅಸಾಧ್ಯ ಹೊಟ್ಟೆನೋವು ಬಾಧಿಸಿತು. ಮುಂಜಾನೆ ವರೆಗೆ ಆಸ್ಪತ್ರೆಯಲ್ಲಿದ್ದು ಡಿಸಾcರ್ಜ್ ಮಾಡಿಸಿಕೊಂಡು ಯಾತ್ರೆಗೆ ತೆರಳಿದೆ. ಮಲೆಯಲ್ಲಿ ನೋವು ಉಲ್ಬಣಗೊಂಡಾಗ ಅಲ್ಲೇ ಔಷಧ ಸ್ವೀಕರಿಸಿದೆ. ಅಯ್ಯಪ್ಪನ ಭಸ್ಮವನ್ನೇ ನೀರಲ್ಲಿ ಬೆರೆಸಿ ಕುಡಿದೆ. ಅಂದು ಗುಣವಾದ ಹೊಟ್ಟೆನೋವು ಮತ್ತೆಂದೂ ಬಾಧಿಸಿಲ್ಲ ಎನ್ನುತ್ತಾರೆ ಶಿವಪ್ರಕಾಶ್.
ಸ್ವಾಮಿಯ ಮೇಲಿನ ಭಕ್ತಿಯಿಂದ ಹೊರತು ಯಾವುದೇ ದಾಖಲೆಗಾಗಿ ಮಾಲೆ ಹಾಕುತ್ತಿಲ್ಲ. ತಿಂಗಳ 12 ದಿನ ಮಾಲಾಧಾರಣೆ ಮಾಡುತ್ತೇನೆ. 26 ವರ್ಷಗಳಲ್ಲಿ 2 ಸಾವಿರಕ್ಕೂ ಅಧಿಕ ವ್ರತಧಾರಿಗಳನ್ನು ಸನ್ನಿಧಾನಕ್ಕೆ ಕರೆದೊಯ್ದಿದ್ದೇನೆ. ಅಯ್ಯಪ್ಪ ಎಲ್ಲಿಯವರೆಗೆ ಆರೋಗ್ಯ, ಶಕ್ತಿ ನೀಡುತ್ತಾನೋ ಅಲ್ಲಿಯತನಕ ಪ್ರತೀ ತಿಂಗಳು ಹೋಗಿ ಬರುವೆ.
– ಶಿವಪ್ರಕಾಶ್, ಗುರುಸ್ವಾಮಿ
– ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.