ನಿಜ ಕಣ್ರಿ, ಐ ಯಾಮ್ ಇನ್ ಲವ್ !
Team Udayavani, Jan 14, 2020, 5:00 AM IST
ಲವ್ ಲೆಟರ್ ಎಲ್ಲ ಬರಿಯೋ ಹುಡುಗಿ ಹೇಗೋ ಏನೋ ಅಂತ ಯೋಚನೆ ಬೇಡ. ನನಗೆ ಗೊತ್ತು, ನಾನು ಸೂಪರ್ ಹುಡುಗಿ ಅಂತ.
ನಿಜ ಕಣ್ರಿ, ಐ ಯಾಮ್ ಇನ್ ಲವ್ ! ಹಾಗಂತ ಇನ್ನೂ ಯಾರನ್ನೂ ಇಷ್ಟಪಟ್ಟಿಲ್ಲ! ನನಗೂ ಒಬ್ಬ ಗೆಳೆಯ ಅಂತ ಇದ್ದಿದ್ರೆ ಅನ್ನಿಸೋಕೆ ಶುರುವಾಗಿದೆ ! ಕ್ಯಾಂಪಸ್ಸಿನ ಕ್ಯಾಂಟೀನ್‌ನಲ್ಲಿ ಕೂತು, ಅಲ್ಲಿ ಸಿಗುವ ಮಸಾಲೆ ದೋಸೆಯನ್ನ ಇಬ್ಬರೂ ಹರಿದು, ಮುರಿದು ತಿನ್ನಬೇಕು, ಯಾವುದಾದರೂ ಎರೆಡು ಕಣ್ಣುಗಳೂ ಸುಮ್ಮನೆ ನನ್ನನ್ನೇ ನೋಡುತ್ತಿರಬೇಕು, ಮನಸ್ಸಿಗೆ ಹಿಡಿಸಿದವನನ್ನು ಗೆಳತಿಯರಿಗೆ ತೋರಿಸಿ, ಹಿ ಈಸ್ ಮೈ ಡ್ರೀಮ್ ಬಾಯ್ ಅಂತ ಹೇಳಬೇಕು ಅನ್ನಿಸ್ತಿದೆ. ಈ ಹೆಗಲ ಮೇಲೆ ಒಂದಿಷ್ಟು ಕೆ.ಜಿ ತೂಕದ ಕೈ ಯಾವಾಗಲೂ ಇರಬೇಕು ಅನ್ನಿಸ್ತಿದೆ. ಮೊದಲೇ ಹೇಳಿಬಿಡ್ತೀನಿ ನನಗೆ ಕಪ್ಪು ಬಣ್ಣದ ರಾಜಕುಮಾರನೇ ಬೇಕು. ಯಾಕೋ ಕಪ್ಪು ಬಣ್ಣ ಅಂದ್ರೆ ನನಗಿಷ್ಟಾನಪ್ಪ. ಆದ್ರೆ ಹುಡುಗ ತುಂಬ ಚಂದ ಇರಬೇಕು. ಓಕೆ ನ? ಯಾಕೆ ಅಂತ ಸ್ವಲ್ಪ ಕೇಳಿ.. ನಾನು ಇಡೀ ಕಾಲೇಜಿನಲ್ಲೆ ಫೇಮಸ್ ಅನ್ನಿಸುವಷ್ಟು ಚಂದಕ್ಕೆ ಇದ್ದೀನಿ! ಇಂಥ ಕ್ಯೂಟ್ ಹುಡುಗಿಗೆ ಸೂಪರ್ ಹುಡುಗನ ಜೋಡಿ ಇರಬೇಕು ಅಲ್ವಾ?
ಒಂದು ಮಾತು ಕಣ್ರೀ. ನಾನು ಇಷ್ಟ ಪಡುವಂಥ ಹುಡುಗ ಸುಮ್ಮ ಸುಮ್ಮನೆ ನನಗೆ ಆವಾಜ್ ಹಾಕುವ ಹಾಗಿಲ್ಲ. ಪಾರ್ಕ್‌ಗೆ ಬಾ ಅಂತ ಕರೆಯುವ ಹಾಗಿಲ್ಲ. ಅಪ್ಪು ಸಿನಿಮಾಗೆ ಆದ್ರೆ ಮಾರ್ನಿಂಗ್ ಷೋಗೆ ಕರಕೊಂಡು ಹೋಗಬೇಕು. ಸಿನಿಮಾದ ಕತ್ತಲಲ್ಲಿ ಏನಾದ್ರೂ ಆಟ ಆಡಿದ್ರೆ ಹುಷಾರ್. ಅವನು ಮೈ ಮುಟ್ಟುವ ಹಾಗಿಲ್ಲ ! ಇವಳು ತುಂಬಾ ಪುಟ್ಟ ಹುಡುಗಿ, ಇವಳಿಗೆ ಏನೂ ಗೊತ್ತಾಗೊಲ್ಲ ಅಂದುಕೊಂಡು ಸುಮ್ಮನೆ ಬೈಕಿಗೆ ಬ್ರೇಕು ಹಾಕಿದ್ರೆ ಸರಿ ಇರಲ್ಲ ಮತ್ತೆ! ತುಂಬಾ ಮು¨ªಾಗಿ ಬೆಳೆದ ಹುಡುಗಿ ನಾನು. ಈಕೆ ಬೆಳೆದಿದ್ದಾಳಲ್ಲ; ಅದಕ್ಕಿಂತ ಮುದ್ದಾಗಿ ನೋಡ್ಕೊಬೇಕು ಅನ್ನುವುದು ಹುಡುಗನ ನಿರ್ಧಾರ ಆಗಿರಬೇಕು. ಅಪ್ಪ - ಅಮ್ಮಾ ಅಂದ್ರೆ ಪ್ರಾಣ ನನಗೆ. ಅವರ ಕೈಕಾಲು ಹಿಡಿದಾದ್ರೂ ಒಪ್ಪಿಸ್ಬೇಕು. ಅದು ಬಿಟ್ಟು ಪ್ರೀತಿಸ್ತಾ ಇದ್ದೇನೆ ಅಂತ ಹೆತ್ತವರನ್ನು ಧಿಕ್ಕರಿಸಿ ಮನೆ ಬಿಟ್ಟು ಬರೋ ಜಾಯಮಾನ ನನ್ನದಂತೂ ಅಲ್ಲ. ಇದೊಂದು ವಿಷಯದಲ್ಲಿ ನೋ ಕಾಂಪ್ರಮೈಸ್ !
ಲವ್ ಲೆಟರ್ ಎಲ್ಲ ಬರಿಯೋ ಹುಡುಗಿ ಹೇಗೋ ಏನೋ ಅಂತ ಯೋಚನೆ ಬೇಡ. ನನಗೆ ಗೊತ್ತು, ನಾನು ಸೂಪರ್ ಹುಡುಗಿ ಅಂತ. ನನಗೊಬ್ಬ ಸೂಪರ್ ಗೆಳೆಯ ಬೇಕು ಅಷ್ಟೇ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.