ನಿತ್ಯಯೋಗ ಆರೋಗ್ಯದ ಪ್ರಮುಖ ಸೂತ್ರ
Team Udayavani, Jan 14, 2020, 5:26 AM IST
ಯೋಗ ಒಂದು ಇದ್ದರೆ ಬದುಕು ಹೆಚ್ಚು ಸ್ವಸ್ಥ. ಈ ಮಾತು ಖಂಡಿತಾ ಸುಳ್ಳಲ್ಲ. ಅದರಲ್ಲೂ ಮನಸ್ಸು ಸ್ವಸ್ಥವಾಗಿಡಲು ಯೋಗ ಬೇಕೇಬೇಕು. ಇನ್ನೂ ಒಂದು ಕುತೂಹಲದ ಅಂಶವೆಂದರೆ, ಮನಸ್ಸು ಸರಿ ಇದ್ದರೆ ದೇಹದ ಬಹುತೇಕ ಭಾಗ ಕ್ರಿಯಾಶೀಲವಾಗಿರಬಲ್ಲದು. ಅದಕ್ಕೆಂದೇ ಯೋಗ ನಿತ್ಯವೂ ಇದ್ದರೆ ಚೆನ್ನ.
ಯೋಗಾಭ್ಯಾಸದ ಪ್ರಯೋಜನಗಳೇನು ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದ್ದದ್ದೇ. ಯೋಗ ಮಾಡದೆ ಬದುಕುವವರು ಇಲ್ಲವೇ ಎಂಬ ಉತ್ತರವೂ ಅಂಥವರಲ್ಲಿರುತ್ತದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಪ್ರಶ್ನೆಯೂ ಸರಿ, ಉತ್ತರವೂ ಸರಿ. ಆದರೆ ಅವೆಲ್ಲದಕ್ಕಿಂತಲೂ ಮಿಗಿಲಾಗಿ ಹತ್ತಾರು ಪ್ರಯೋಜನಗಳಿವೆ. ಅದು ಸರಳ ಮತ್ತು ಸ್ಪಷ್ಟ.
ದೇಹದ ಪ್ರತಿ ಭಾಗದಲ್ಲೂ ನವ ಚೈತನ್ಯ ತುಂಬಿಕೊಳ್ಳಲು ಯೋಗ ಅತ್ಯಂತ ಸಹಕಾರಿ. ತೂಕವನ್ನು ಕಳೆದುಕೊಳ್ಳಲು, ಬಲಿಷ್ಠವಾದ, ಬಾಗಿ-ಬಳಕುವ (ಫ್ಲೆಕ್ಸಿಬಲ್) ದೇಹ ಪಡೆಯಲು, ಸುಂದರ ವಾದ ಹೊಳೆಯುವ ಚರ್ಮವನ್ನು ಹೊಂದಲು, ಮನಸ್ಸನ್ನು ಪ್ರಶಾಂತವಾಗಿರಿಸಲು ಯೋಗ ಸಹಕಾರಿ.
ಯೋಗವು ದೇಹ, ಮನಸ್ಸು ಮತ್ತು ಉಸಿರನ್ನು ಐಕ್ಯವಾಗಿರಿಸುತ್ತದೆ. ಇವು ಮೂರೂ ಸಾಮ
ರಸ್ಯದಲ್ಲಿದ್ದಾಗ ಜೀವನದ ಪಯಣ ಪ್ರಶಾಂತ ವಾಗಿರುತ್ತದೆ. ಸರ್ವಾಂಗೀಣ ದೇಹದ ಸುಸ್ಥಿತಿ, ತೂಕ ತಗ್ಗುವಿಕೆ, ಒತ್ತಡ ನಿವಾರಣೆ, ಆಂತರಿಕ ಶಾಂತಿ, ರೋಗ ನಿರೋಧಕ ವ್ಯವಸ್ಥೆಯಲ್ಲಿ ಸುಧಾರಣೆ, ಹೆಚ್ಚಿನ ಅರಿವಿನಿಂದ ಜೀವಿಸುವುದು, ಸಂಬಂಧಗಳಲ್ಲಿ ಸುಧಾರಣೆ, ಹೆಚ್ಚಿನ ಮನೋದೈಹಿಕ ಶಕ್ತಿ ಹಾಗೂ ಉತ್ತಮ ಅಂತ ದೃಷ್ಟಿಯನ್ನು ಯೋಗ ನೀಡಬಲ್ಲದು.
ಪ್ರಾರ್ಥನೆಯೊಂದಿಗೆ ಆರಂಭಿಸಿ
ಚಂಚಲವಾದ ಮನಸ್ಸು ಏಕಾಗ್ರತೆ ತರಲು ಯೋಗದ ಮೊದಲು ಪ್ರಾರ್ಥನೆ ಮಾಡುವುದು ಅತ್ಯಗತ್ಯ. 10ರಿಂದ 15 ನಿಮಿಷ ಧ್ಯಾನ ಮತ್ತು ಪ್ರಾರ್ಥನೆಗೆ ಅವಶ್ಯ. ಪ್ರಾರ್ಥನೆ ಬಳಿಕ ದೇಹದ ಅಂಗಾಗಗಳು ಸಡಿಲಗೊಳ್ಳಲು ಶಿಥಿಲೀಕರಣ ವ್ಯಾಯಾಮವನ್ನು ಮಾಡಬೇಕು. ಕೈ-ಕಾಲು, ಸೊಂಟ, ಬೆನ್ನುಮೂಳೆ ಸೇರಿದಂತೆ ದೇಹದ ಎಲ್ಲ ಭಾಗಗಳಿಗೆ ವ್ಯಾಯಾಮದ ಮೂಲಕ “ಆರಾಮ’ ನೀಡಬೇಕು. ಇದು ಗಂಟು ನೋವು ಮತ್ತು ಗಂಟುಗಳಲ್ಲಿ ಬರುವ ಶಬ್ದಗಳನ್ನು ನಿವಾರಿಸಲು ನೆರವಾಗುತ್ತದೆ.
ಸೂರ್ಯ ನಮಸ್ಕಾರ
ಸೂರ್ಯ ನಮಸ್ಕಾರವನ್ನು ಖಾಲಿ ಹೊಟ್ಟೆಯಲ್ಲಿ ಸೂರ್ಯೋದಯದ ಸಮಯದಲ್ಲಿ ಮಾಡುವುದೇ ಅತ್ಯುತ್ತಮ. 8+4 ಒಟ್ಟು 12 ಆಸನಗಳು ಇರುತ್ತವೆ. ಅದರಲ್ಲಿ 4 ಆಸನಗಳು ಪುನರಾವರ್ತನೆಯಾಗುತ್ತವೆ. ಇವನ್ನು ಮಂತ್ರ ಪಠನ ಮಾಡುತ್ತಾ ಮಾಡಬೇಕು. ಸೂರ್ಯನಮಸ್ಕಾರವನ್ನು “ಸರ್ವಾಂಗ ಸುಂದರ ಆಸನ’ ಎನ್ನುತ್ತಾರೆ. ಇದು ದೇಹದಲ್ಲಿನ ಎಲ್ಲ ರಸ ಗ್ರಂಥಿಗಳನ್ನು ಆರೋಗ್ಯ ವಾಗಿಡಲು ಪೂರಕ. 12 ಆಸನಗಳನ್ನು 4 ಆವೃತ್ತಿ ಯಲ್ಲಿ ಮಾಡಬೇಕು.
ಆಸನಗಳು
ಯೋಗಾಸನ, ಪ್ರಾಣಾ ಯಾಮ ಮತ್ತು ಧ್ಯಾನವು ಸರ್ವಾಂಗೀಣ ಸುಸ್ಥಿತಿಯನ್ನು ಉಂಟು ಮಾಡುವ ಅಂಶ ಗಳಿವೆ. ಸೂರ್ಯ ನಮಸ್ಕಾರ ಆದ ಆಸನಗಳನ್ನು ಮಾಡಬೇಕು. ಪ್ರಮುಖ ವಾಗಿ ತಾಡಾಸನ, ತ್ರಿಕೋನಾಸನ, ವೃತ್ತಾಸನ ಅಥವಾ ಸಂತುಲನಾಸನವನ್ನು ಮಾಡಬೇಕು. ಶಶಾಂಕಾ ಸನ (ಕಾಲು ಹಿಂದೆ ಮಡಚಿ ಕುಳಿತುಕೊಂಡು) ಮಾಡಬೇಕು. ಆರೋಗ್ಯದಲ್ಲಿ ಸುಧಾರಣೆ, ಮಾನಸಿಕ ಬಲ ಹೆಚ್ಚುತ್ತದೆ, ದೈಹಿಕ ಬಲ ವರ್ಧಿಸುತ್ತದೆ, ಗಾಯಗಳಾಗುವುದರಿಂದ ತಪ್ಪಿಸುತ್ತದೆ, ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನು ಹೊರಕ್ಕೆಸೆಯುತ್ತದೆ.
ಒಟ್ಟು 11 ಪ್ರಾಣಾಯಾಮಗಳ ಪೈಕಿ ಕೆಲವನ್ನಾದರೂ ನಾವು ನಿತ್ಯ ಮಾಡಲೇಬೇಕು. ನಮ್ಮ ಉಸಿರಾಟದ ಮೇಲೆ ಹಿಡಿತ ಸಾಧಿಸಿ ಏಕಾಗ್ರತೆ, ಮನಶಾಂತಿ ಸಿದ್ಧಿಸಿಕೊಳ್ಳಬಹುದು. ಕುಳಿತು ಆಸನ ಮಾಡಿದ ಬಳಿಕ ಒಂದೆರಡು ಆಸನವನ್ನು ಮಲಗಿ ಮಾಡಬೇಕು. ಸರ್ವಾಂಗಾಸನ, ಮಕರಾಸನವನ್ನು ಭುಜಂಗಾಸನ ಮಾಡಬೇಕು. ಈ ಎರಡು ಆಸನಗಳು ಮೆದುಳು, ದೇಹಗಳಿಗೆ ರಕ್ತದ ಪರಿಚಲನೆಯನ್ನು ಹೆಚ್ಚಿಸುತ್ತದೆ. ಎಲ್ಲ ಆಸನಗಳನ್ನು ಬೆಳಗ್ಗೆ ಮಾಡಿದ ಕೊನೆಯಲ್ಲಿ ವಿಶ್ರಾಂತ ಶವಾಸನದೊಂದಿಗೆ ಕೊನೆಗೊಳಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.