ಶಾಲೆ ಆವರಣದಲ್ಲಿ ಹಳ್ಳಿ ಅನಾವರಣ
Team Udayavani, Jan 14, 2020, 3:57 PM IST
ಗಂಗಾವತಿ: ಗ್ರಾಮೀಣ ಜನಪದವನ್ನುಬಿಟ್ಟು ಬದುಕು ದುಸ್ತರವಾಗಿದ್ದು, ಮಾನವೀಯ ಸಂಬಂಧಗಳು ದೂರವಾಗಿವೆ ಎಂದು ಸಾಹಿತಿ ಶಂಭುಬಳಿಗಾರ ಹೇಳಿದರು.
ಅವರು ತಾಲೂಕಿನ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಪಬ್ಲಿಕ್ ಶಾಲೆ ವಾರ್ಷಿಕೋತ್ಸವದ ನಿಮಿತ್ತ ಚಿಣ್ಣರ ಜಾನಪದ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಜಾಗತೀಕರಣ ನೆಪದಲ್ಲಿ ಗ್ರಾಮೀಣ ಬದುಕನ್ನು ದೂರ ಮಾಡುವ ಮೂಲಕ ಜನರು ಪರಿತಪಿಸುವಂತಾಗಿದೆ. ಹಳ್ಳಿಯ ಸ್ವಾವಲಂಬಿ ಬದುಕು ಇಲ್ಲವಾಗಿದ್ದು, ನಗರ ಪ್ರದೇಶವನ್ನು ಪ್ರತಿಯೊಬ್ಬರುಅವಲಂಭಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದ ಕಲಬೆರಿಕೆ ಆಹಾರ ವಸ್ತುಗಳ ಮೂಲಕ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತಿವೆ. ಅವಿಭಕ್ತಕುಟುಂಬಗಳು ಛಿದ್ರಗೊಂಡಿವೆ.
ಹಳ್ಳಿಯ ಸೊಬಗನ್ನು ಶಾಲಾ ಮಕ್ಕಳಿಗೆ ಪಾಲಕರಿಗೆ ದರ್ಶನ ಮಾಡಿಸಲು ಆಡಳಿತ ಮಂಡಳಿ ಚಿಣ್ಣರ ಜಾನಪದ ಜಾತ್ರೆಯಲ್ಲಿ ಅರ್ಥಪೂರ್ಣವಾಗಿ ಕಾರ್ಯ ಮಾಡಲಾಗಿದೆ. ಸಾಹಿತ್ಯ ಸಮ್ಮೇಳನನ್ನು ಮೀರಿಸುವಂತೆ ಜಾನಪದ ಜಾತ್ರೆ ನಡೆದಿದ್ದು ಶಾಲೆಯ ಮಕ್ಕಳು ಪಾಲಕರು ಇದರಿಂದ ಪ್ರಭಾವಿತರಾಗಿಜಾನಪದ ಮಹತ್ವ ತಿಳಿಯಲು ಕಾರ್ಯಕ್ರಮ ಸಹಕಾರಿಯಾಗಿದೆ.ಹಳ್ಳಿಗಳಲ್ಲಿರುವಂತೆ ಗುಡಿಸಲು ಮನೆ, ದನಕರು, ಹೈನುಗಾರಿಕೆ, ಕುಂಬಾರಿಕೆ, ಗರಡಿಮನೆ, ವ್ಯವಸಾಯದ ಕ್ರಮ ಕೈಮಗ್ಗ, ದೇವರ ಭಜನೆ ದೇಗುಲದ ದೃಶ್ಯ, ಗೂಡಂಗಡಿ ಹೀಗೆ ಹತ್ತು ಹಲವು ಬಗೆಯ ಕೃತಕ ಕಲೆ ಸೃಷ್ಟಿ ಮಾಡಿದ್ದಾರೆ. ಶಾಲಾ ವಾರ್ಷಿಕೋತ್ಸವನ್ನು ಕ್ಯಾಸೆಟ್ ಡ್ಯಾನ್ಸ್‌ಗೆ ಸೀಮಿತಗೊಳಿಸದೇ ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾನಿಕೇತನ ಶಾಲೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ಜಿಪಂ ಚಿನ್ನಪಾಟಿ ವಿಜಯ ಲಕ್ಷ್ಮೀ ಎಪಿಎಂಸಿ ಸದಸ್ಯ ರಡ್ಡಿ ಶ್ರೀನಿವಾಸ, ತಾಪಂ ಸದಸ್ಯ ಮಹಮ್ಮದ್ ರಫಿ, ಪ್ರಭಾಕರ ಚಿನ್ನುಪಾಟಿ, ಜಗನ್ನಾಥ ಆಲಂಪಲ್ಲಿ, ಪಾರ್ಥಸಾರಥಿ, ಪ್ರಿಯಾಕುಮಾರಿ, ಶಾರೋನ್ ಕುಮಾರಿ ಸೇರಿ ಆಡಳಿತ ಮಂಡಳಿಯವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.