ಕೈಗಾರಿಕಾ ಪ್ರದೇಶದ ರಸ್ತೆ ಕಾಮಗಾರಿಗೆ ಚಾಲನೆ
Team Udayavani, Jan 14, 2020, 5:55 PM IST
ಮಾಗಡಿ: ಸೋಮೇಶ್ವರಸ್ವಾಮಿ ಗುಡಿ ಕಾಲೋನಿಯ ಕೈಗಾರಿಕಾ ಪ್ರದೇಶದ ರಸ್ತೆ ಡಾಂಬರೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾಗಿ ಶಾಸಕ ಎ. ಮಂಜುನಾಥ್ ಹೇಳಿದರು.
ಪಟ್ಟಣದ ಸೋಮೇಶ್ವರಸ್ವಾಮಿ ಗುಡಿ ಕಾಲೋ ನಿಯ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಕೋಟಿ ರೂ. ವೆಚ್ಚ ರಸ್ತೆ ಡಾಂಬರೀ ಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮಾಗಡಿ ಕುಣಿಗಲ್ ರಸ್ತೆ ಅಗ್ನಿಶಾಮಕ ದಳದ ಸಂಪರ್ಕ ರಸ್ತೆ ಗಳ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಗುಣಮ ಟ್ಟದ ರಸ್ತೆ ಕಾಮಗಾರಿ ಚಾಲನೆ ನೀಡಿದ್ದೇನೆ ಎಂದರು.
ಬೀದಿ ದೀಪ ಅಳವಡಿಸಲು ಮನವಿ: ನೀರಿನ ಸಮಸ್ಯೆ ನಿವಾರಣೆಗಾಗಿ ಕೊಳವೆಬಾವಿ ಕೊರೆಸಲಾಗುತ್ತಿದೆ. ಜೊತೆಗೆ ಬೀದಿ ದೀಪ ಅಳವಡಿಸಿಕೊಡುವಂತೆ ಅವಕಾಶ ಮಾಡಿಕೊಡಲಾಗಿದೆ. ಕಂದಾಯ ಇಲಾಖೆ ಪಹಣಿಯ ಬೆಳೆ ಕಾಲಂನಲ್ಲಿ ಬೆಳೆ ಹೆಸರು ನಮೂದಿಸಿಲ್ಲ, ಈ ಸಂಬಂಧ ಅಧಿಕಾರಿಗಳು ಸಮಯ ಕೇಳಿದ್ದರೆ. ರಾಗಿ ಬೆಳೆದ ರೈತರ ಪಹಣಿ ಕಾಲಂನಲ್ಲಿ ವಾರದೊಳಗೆ ಬೆಳೆ ನಮೂನೆ ಮಾಡಿಕೊಡು ವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅಷ್ಟರೊಳಗೆ ಆಗದಿದ್ದರೂ. ಸಹ ರಾಗಿ ಖರೀದಿಗೆ ನೋಂದಾಯಿಸಿಕೊಳ್ಳಲು ಸೂಚನೆ ನೀಡಿದ್ದೇನೆ. ಕಂದಾಯ ಸಚಿವರಲ್ಲಿಯೂ ಮನವಿ ಮಾಡಿದ್ದೇನೆ ಎಂದು ವಿವರಿಸಿದರು.
ಶೇ.80 ರಷ್ಟು ಭೂಸ್ವಾಧೀನ: ಕೈಗಾರಿಕಾ ಪ್ರದೇಶ ಸ್ಥಾಪನೆ ಪ್ರಪೋಸ್ ಮಾಡಿ ಮೃತ್ರಿ ಸರ್ಕಾರದಲ್ಲಿ ಎಚ್ಡಿಕೆಗೆ ಮನವಿ ಸಲ್ಲಿಸಿದ್ದೆ. ಕಲ್ಯಾ ಸುತ್ತಮುತ್ತ ಭೂ ಸ್ವಾಧೀನ ಮಾಡಿಕೊಳ್ಳಲು ಅಧಿಕಾರಿಗಳಿಗೂ ಸೂಚನೆ ನೀಡಿದ್ದೆ, ಅನುಷ್ಠಾನ ಕುರಿತು ಆದೇಶ ಬಂದರೆ ಕ್ರಮ ಕೈಗೊಳ್ಳಲಾ ಗುವುದು. ಕೆಶಿಫ್ ರಸ್ತೆ ವಿಳಂಗೊಂಡಿದೆ ಎಂದು ಪ್ರಶ್ನೆಗೆ ಈಗಾಗಲೇ ಸೋಮವಾರ ಪೇಟೆ ಮಾರ್ಗದ ರಸ್ತೆ ಕಾಮಗಾರಿ ಆರಂಭಗೊಂಡಿದೆ. ಬೆಂಗಳೂರು ಮಾಗಡಿ ಮಾರ್ಗದ ಶೇ.80 ರಷ್ಟು ಭೂಸ್ವಾಧೀನಗೊಂಡಿದ್ದು, ಪಟ್ಟಣದ ಅಲ್ಲಿಲ್ಲಿ ಶೇ.10 ಭೂಸ್ವಾಧೀನ ಬಾಕಿ ಯಿದ್ದು, ಪೂರ್ಣಗೊಳಿಸಿ ಈ ಭಾಗದಿಂದಲೂ ರಸ್ತೆ ಕಾಮಗಾರಿ ಆರಂಭಿಸಲು ಕಂಪನಿದಾರರಿಗೆ ಸೂಚನೆ ನೀಡಿದ್ದೇನೆ. ಆದಷ್ಟು ಬೇಗ ಕಾಮಗಾರಿ ಆರಂಭಗೊಳ್ಳಲಿದೆ. ಅಲ್ಲಿಯವರೆಗೂ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ನಿರ್ವಹಣೆ ಮಾಡಬೇಕೆಂದು ತಾಕೀತು ಮಾಡಿದ್ದೇನೆ ಎಂದು ತಿಳಿಸಿದರು.
ಜಿಪಂ ಸದಸ್ಯ ಚಂದ್ರಮ್ಮ ನಂಜಯ್ಯ, ಪುರಸಭಾ ಸದಸ್ಯರಾದ ಎಂ.ಎನ್.ಮಂಜುನಾಥ್, ಕೆ.ವಿ. ಬಾಲು, ರಹಮತ್, ಜಯರಾಂ, ವಿಜಯ ರೂ.ಪೇಶ್, ಹೇಮಲತಾ ನಾಗರಾಜು, ಸೀಗೇಕುಪ್ಪೆ ಶಿವಣ್ಣ, ನರಸಿಂಹಯ್ಯ, ಎಪಿಎಂಸಿ ನಿರ್ದೇಶಕ ಕೆ.ಟಿ.ಮಂಜುನಾಥ್, ವೆಂಕಟೇಶ್, ನೇತೇನಹಳ್ಳಿ ಪಿಡಿಒ ಶಿವಕುಮಾರ್, ಕಾರ್ಯದರ್ಶಿ ನಾಗರಾಜು, ಶಂಕರ್, ಜುಟ್ಟನಹಳ್ಳಿ ಮಾರೇಗೌಡ,ಅಗ್ನಿಶಾಮಕ ದಳದ ಅಧಿಕಾರಿ ರೇವಣ್ಣ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.