ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ?

ಸತತ ಪರಿಶ್ರಮ, ತಪಸ್ಸು, ಹವ್ಯಾಸ ಯಶಸ್ಸಿಗೆ ರಹದಾರಿ

Team Udayavani, Jan 15, 2020, 5:43 AM IST

mk-28

ಸ್ಪರ್ಧೆ ಎನ್ನುವುದು ಈಗ ಎಲ್ಲ ಕ್ಷೇತ್ರಗಳಲ್ಲೂ ಇದೆ. ವಿಶೇಷವಾಗಿ ಉದ್ಯೋಗ ಕ್ಷೇತ್ರದಲ್ಲಿ ಪ್ರತಿ ಕ್ಷಣವೂ ಸ್ಪರ್ಧೆ. ಉನ್ನತ ಹುದ್ದೆಗಳನ್ನು ಪಡೆಯುವುದೆಂದರೆ ಎಣಿಸಿದಷ್ಟು ಸುಲಭವಲ್ಲ. ಇಂಥದೊಂದು ಸಾಧನೆ ಮಾಡಲು ಬರೀ ಓದು ಸಾಕಾಗದು. ಅದರೊಂದಿಗೆ ಹತ್ತಾರು ಪೂರಕ ಅಂಶಗಳೂ ಇವೆ. ಈ ಪೈಕಿ ಹವ್ಯಾಸ-ಅಭ್ಯಾಸವೂ ಸಹ ಎನ್ನುತ್ತಾರೆ ಪ್ರೀತಿ ಭಟ್‌.

ರಣವೇಗದಲ್ಲಿರುವ ಕಾಲಘಟ್ಟದಲ್ಲಿ ಎಲ್ಲರೂ ಆಶಾವಾ ದಿಗಳೇ. ಎಲ್ಲರಿಗೂ ಗೆಲ್ಲುವ ಹಂಬಲವಿದ್ದೇ ಇದೆ. ರನ್ನಿಂಗ್‌ ಟ್ರ್ಯಾಕ್‌ನಲ್ಲಿ ನಿಂತರೆಂದರೆ ಗೆಲ್ಲಲು ನಿರ್ಧರಿಸಿದ್ದಾರೆ ಎಂದರ್ಥವೇ. ಆದರೆ ಇಂಥದೊಂದು ನಿರ್ಧಾರ ಎಷ್ಟೊಂದು ನಿರ್ಧಾರಗಳ ಒಟ್ಟೂ ಸಂಯೋಜನೆಯಲ್ಲವೇ. ಖಂಡಿತಾ ಹೌದು.

ಕೆಲವರಿಗೆ ಅಂದುಕೊಂಡ ಗುರಿ ಮುಟ್ಟುವುದು ಸುಲಭ ಎನಿಸದಿರಬಹುದು. ಇನ್ನು ಕೆಲವರು ಅಂದು ಕೊಂಡಷ್ಟೇ ವೇಗವಾಗಿ ಗುರಿ ಮುಟ್ಟಬಹುದು. ಇದಕ್ಕೆ ಪೂರ್ವ ತಯಾರಿ ಅಥವಾ ಸರಿಯಾದ ಮಾರ್ಗದರ್ಶ ನವೇ ಕಾರಣ. ಏನು ಬಿತ್ತುತ್ತೇವೋ ಅದೇ ಫ‌ಲ ಬರುವಂತೆ ಪ್ರತಿ ದಿನ ನಾವು ಮಾಡುವ ಸಿದ್ಧತೆಯೇ ದಡ ಮುಟ್ಟಿಸುವ ದೋಣಿ. ಇದರೊಂದಿಗೆ ಸಾಮಾನ್ಯವಾಗಿ ಆರಂಭಿಸುವ ಕೆಲವು ಹವ್ಯಾಸಗಳು ಇದಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ ಎಂಬುದು ನಮ್ಮ ನೆನಪಿನಲ್ಲಿರಲಿ.

ಯಾವುದೇ ದೊಡ್ಡ ವ್ಯಕ್ತಿ, ಸಾಧಕನ ಹವ್ಯಾಸಗಳನ್ನು ತಾಳೆ ಹಾಕಿ ನೋಡಿದರೆ ಇವುಗಳ ಪೈಕಿ ಕೆಲವಾದರೂ ಅವರ ಪಟ್ಟಿಯಲ್ಲಿರುತ್ತವೆ. ಹವ್ಯಾಸವೆಂದರೆ ಕೆಲವು ಇಷ್ಟ ಪಟ್ಟು ಮಾಡುವುದು. ಇನ್ನು ಕೆಲವು ನಮ್ಮ ಅಗತ್ಯಕ್ಕೆ ತಕ್ಕಂತೆ ಅಭ್ಯಾಸ ಮಾಡಿಕೊಳ್ಳುವುದು. ಹವ್ಯಾಸ ಆಸಕ್ತಿಗೆ ಸಂಬಂಧಿಸಿದ್ದು, ಅಭ್ಯಾಸ ಅಗತ್ಯಕ್ಕೆ ಸಂಬಂಧಿಸಿದ್ದು. ಬದುಕಿನ ಶಿಸ್ತಿನ ಭಾಗವಾಗಿಯೂ ಕೆಲವೊಮ್ಮೆ ಕಂಗೊಳಿಸುವುದುಂಟು. ದಿನಪತ್ರಿಕೆ, ನಿಯತಕಾಲಿಕಗಳ ಓದು ದಿನಪತ್ರಿಕೆ ಮತ್ತು ನಿಯತಕಾಲಿಕಗಳನ್ನು ಓದುವ ಹವ್ಯಾಸವಿದ್ದಷ್ಟೂ ಒಳ್ಳೆಯದು. ರಾಷ್ಟ್ರೀಯ ಅಂತಾರಾಷ್ಟ್ರೀಯ ಘಟನೆಗಳ ಅರಿವು ಸಿಗುವುದಷ್ಟೇ ಅಲ್ಲ, ಸಮಕಾಲೀನ ಜಗತ್ತಿನ ಜತೆಗೆ ಹೆಜ್ಜೆ ಹಾಕುತ್ತಿರುತ್ತೇವೆ. ಸಾಮಾನ್ಯಜ್ಞಾನವನ್ನು(ಜಿಕೆ) ಹೊಂದದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಕನಸಿನ ಮಾತು. ಹಾಗಾಗಿ ದಿನಕ್ಕೆ ಬೇರೆ ಬೇರೆ ಭಾಷೆಯ ಕನಿಷ್ಠ 4-5 ಸುದ್ದಿ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಂಡರೆ ಅದು ಸ್ಪರ್ಧಾತ್ಮಕ ಪರೀಕ್ಷೆ ಸಂದರ್ಭದಲ್ಲಿ ಸಹಾಯಕ್ಕೆ ಬರಲಿದೆ. ಪತ್ರಿಕೆಗಳಲ್ಲಿ ಪ್ರಕಟವಾದ ನಿಮಗೆ ಮುಖ್ಯವೆನಿಸಿದ ಮಾಹಿತಿ ಅಥವಾ ಸುದ್ದಿಗಳ ಪಟ್ಟಿ ಮಾಡಿಟ್ಟುಕೊಂಡರೆ ಹೆಚ್ಚು ಅನುಕೂಲ. ಬೇಕೆಂದಾಗ ತಿರುವು ಹಾಕಬಹುದು.

ಮೈಕ್ರೋ ಟಿಪ್ಪಣಿ ಮಾಡುವುದು
ನಿಮ್ಮ ಓದಿಗೆ ಸಹಕಾರಿಯಾಗಬಲ್ಲ ಅಂಶಗಳನ್ನು ಟಿಪ್ಪಣಿ ಮಾಡಿಟ್ಟುಕೊಳ್ಳುವ ಅಭ್ಯಾಸವೂ ಉತ್ತಮವಾದುದು.ತಮ್ಮ ಅಧ್ಯಯನಕ್ಕೆ ಬೇಕಾಗುವ ಪುಸ್ತಕ, ಮಾಹಿತಿ ಇತ್ಯಾದಿ ಕುರಿತು ಎಲ್ಲೇ ಒಂದು ಚಿಕ್ಕ ಮಾಹಿತಿ ಸಿಕ್ಕರೂ ಅದನ್ನು ಟಿಪ್ಪಣಿ ಮಾಡಿಟ್ಟುಕೊಳ್ಳಬೇಕು. ಬಿಡುವಿನ ವೇಳೆಯಲ್ಲಿ ಅದನ್ನು ಮನನ ಮಾಡಲು ಅನುಕೂಲ. ಇದು ಓದಿದ ವಿಷಯವನ್ನು ನೆನಪಿನಲ್ಲಿರಿಸಲು ಸಹಕರಿಸುವುದರ ಜತೆಗೆ ಸಮಯ ಉಳಿಸಲು ಸಹಕಾರಿ. ಪಾಯಿಂಟ್ಸ್‌ ರೂಪದಲ್ಲಿ ಟಿಪ್ಪಣಿ ಮಾಡಿಟ್ಟುಕೊಂಡರೆ ಓದಲು ಸುಲಭ.

ಅಣಕು ಪರೀಕ್ಷೆ
ನೀವು ಎಷ್ಟೇ ಪೂರ್ವ ತಯಾರಿ ನಡೆಸಿದರೂ ಅಣಕು ಪರೀಕ್ಷೆಗಳನ್ನು ಮಾಡಿಕೊಳ್ಳದಿದ್ದರೆ ನಿಮ್ಮ ಗುರಿ ಮುಟ್ಟಲು ಕಷ್ಟವೆನಿಸಬಹುದು. ಅದಕ್ಕಾಗಿ ಕೆಲವು ಅಣುಕು ಪರೀಕ್ಷೆ ಎದುರಿಸಿ. ಅದರಿಂದ ನಿಮ್ಮ ಓದಿನ ಕ್ರಮದಲ್ಲಿನ ಒಳ್ಳೆಯ ಅಂಶ ಮತ್ತು ಕೆಟ್ಟ ಅಂಶ ತಿಳಿಯಲು ಸಾಧ್ಯ.

ಸಿನೆಮಾ ನೋಡುವುದು
ಸಿನೆಮಾಗಳನ್ನು ನೋಡುವುದರಿಂದ ಸಮಯ ವ್ಯರ್ಥವಾಗುತ್ತದೆ, ಅದು ಸಿದ್ಧತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಮಾತಿದೆ. ಆದರೆ ಕೆಲವರ ಪ್ರಕಾರ ಅದು ಸುಳ್ಳು. ಆದರೆ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಪ್ರೇರಣಾದಾಯಕ ಕಥಾವಸ್ತುಗಳನ್ನು ಆಯ್ದುಕೊಳ್ಳಿ. ಅಂಥ ಚಿತ್ರಗಳನ್ನೇ ನೋಡಿದರೆ, ನಿಮ್ಮಲ್ಲಿ ಮತ್ತಷ್ಟು ಸ್ಫೂರ್ತಿಯನ್ನು ತುಂಬಬಹುದು.

ಸಕಾರಾತ್ಮಕ ಯೋಚನೆ ಮತ್ತು ಧ್ಯಾನ
ಮನಸ್ಸಿನ ನಿಯಂತ್ರಣಕ್ಕಾಗಿ ಆದಷ್ಟು ಸಕಾರಾತ್ಮಕ ಆಲೋಚನೆ ಮತ್ತು ದಿನದ ಕೆಲ ಸಮಯವಾದರೂ ಧ್ಯಾನ ಮಾಡುವುದು ಉತ್ತಮ. ಇದರಿಂದ ಮನಸ್ಸು ಶಾಂತವಾಗುವುದಲ್ಲದೆ ಓದಿನ ಮೇಲೆ ಗಮನ ಕೇಂದ್ರೀಕರಿಸಲೂ ಸಹಾಯವಾಗುತ್ತದೆ.

ಸಮಯದ ಅರಿವು
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಮುಖ್ಯವಾಗಿ ಬೇಕಾದದ್ದು ಸಮಯದ ಅರಿವು. ಸಮಯ ನಮಗಾಗಿ ನಿಲ್ಲುವುದಿಲ್ಲ ಆದರೆ ಇರುವ ಸಮಯವನ್ನು ಹೇಗೆ ಸದುಪಯೋ ಗಿಸಿಕೊಳ್ಳಬೇಕು. ಯಾವ ಸಮಯದಲ್ಲಿ ಏನು ಓದಬೇಕು? ಹೇಗೆ ಓದಬೇಕು? ಮತ್ತು ಎಷ್ಟು ಸಮಯದಲ್ಲಿ ಅದನ್ನು ಓದಿ ಮುಗಿಸಬೇಕು ಎನ್ನುವ ಯೋಜನೆ ಮುಖ್ಯ.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಾಗ ಆದಷ್ಟು ಚಿಕ್ಕ ನೋಟ್ಸ್‌ಗಳನ್ನು ಮಾಡಿಕೊಳ್ಳಿ.ಅದರಲ್ಲಿ ಮುಖ್ಯವಾದ ವಿಷಯಗಳನ್ನು ಬರೆದಿಟ್ಟುಕೊಳ್ಳಿ. ಇದು ಮನನ ಮಾಡಲು ಸಹಾಯ ಮಾಡುತ್ತದೆ. ತುಂಬಾ ಹೊತ್ತು ಓದಿ ಬೋರ್‌ ಆದಲ್ಲಿ ಬೇರೆ ವಿಷಯಗಳತ್ತ ಗಮ ನಹರಿಸಿ, ಮತ್ತೆ ಓದು ಮರು ಸ್ಥಾಪಿಸಿಕೊಳ್ಳಿ. ಕೆಲವರಿಗೆ ಗೇಮ್ಸ್‌ಗಳಲ್ಲಿ ತುಂಬಾ ಆಸಕ್ತಿ ಇರುತ್ತದೆ. ಅಂಥವರು ಓದಿನ ಬಿಡುವಿನಲ್ಲಿ ಸ್ವಲ್ಪ ಸಮಯ ಆಟವಾಡಿ ಅಥವಾ ಒಂದು ಚಿಕ್ಕ ವಾಕ್‌ ಹೋಗಿ ಬರುವುದರಿಂದ ಮನಸ್ಸು ಹಗುರವಾಗುತ್ತದೆ. ಯಾವಾಗಲೂ ಬದುಕಿ ನಲ್ಲಿ ಗೆಲ್ಲುತ್ತೇವೆ ಎನ್ನುವ ಹಂಬಲವಿರಲಿ. ಆದರೆ ಸೋತರೆ ಪ್ರಯತ್ನ ಬಿಡಬಾರದು. ಸೋಲು ಅಥವಾ ಗೆಲುವನ್ನು ಸಮಾನವಾಗಿ ಸ್ವೀಕರಿಸಿ.
-ಮಿಚೆಲ್‌ ಕ್ವೀನಿ ಡಿ’ ಕೋಸ್ತಾ
ಜಿಎಸ್‌ಟಿ ವಿಭಾಗದ ಸಹಾಯಕ ಆಯುಕ್ತರು, ಮುಂಬಯಿ

ಟಾಪ್ ನ್ಯೂಸ್

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.