ಮಾಡೆಲಿಂಗ್ ಕ್ಷೇತ್ರದಲ್ಲಿ ಹಲವು ಅವಕಾಶ
Team Udayavani, Jan 15, 2020, 5:50 AM IST
ಜಾಹೀರಾತು, ಸಿನೆಮಾ, ಧಾರಾವಾಹಿ ಮತ್ತು ಕಿರುಚಿತ್ರ ಉತ್ಪನ್ನಗಳ ಬ್ರ್ಯಾಂಡ್ ಅಂಬಾಸಿಡರ್ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮಾಡೆಲಿಂಗ್‌ಗೆ ಅಪಾರ ಅವಕಾಶಗಳು ಹುಟ್ಟಿಕೊಳ್ಳುತ್ತಿವೆ. ಕಾಲೇಜು ಯುವಕ ಅಥವಾ ಯುವತಿಯರಿಗೆ ಇದು ಇನ್ನೂ ಹೆಚ್ಚಿನ ಅವಕಾಶ ಒದಗಿಸುತ್ತಿದೆ. ಕಲಿಯುತ್ತಿರುವಾಗಲೇ ಅದಕ್ಕೆ ಪರ್ಯಾಯವಾಗಿ ಕೆಲವು ಉತ್ತಮ ಮಾರ್ಗಗಳತ್ತ ಯೋಚಿಸುತ್ತಿರುವ ಕಾಲೇಜು ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಅವಕಾಶ.
ಉತ್ತಮ ನಟನಾ ಕೌಶಲ ಮತ್ತು ಮಾಡೆಲಿಂಗ್ ಕ್ಷೇತ್ರದ ಬಗ್ಗೆ ಆಸಕ್ತಿ ಇರುವವರು ವಿವಿಧ ಆಡಿಷನ್‌ಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬಹುದು. ಇದರಿಂದ ಕಲಿಕೆಯ ಜತೆ ಜತೆಗೆ ಯಾವುದೇ ತೊಂದರೆ ಆಗದಂತೆ ಹಣ ಸಂಪಾದಿಬಹುದು. ಮತ್ತು ತಮ್ಮ ಮುಂದಿನ ಭವಿಷ್ಯಕ್ಕೂ ಈಗಲೇ ಉತ್ತಮ ಯೋಜನೆ ರೂಪಿಸಿಕೊಳ್ಳಬಹುದು.
ಕೌಶಲಗಳು
ಇಂದು ಹಲವಾರು ಸಿನೆಮಾಗಳು ಅಥವಾ ಉತ್ತನ್ನಗಳಿಗೆ ಜಾಹೀರಾತು ತಯಾರಿಸುವಾಗ ಅದಕ್ಕೆ ಆಡಿಶನ್ ನಡೆಯುತ್ತದೆ ಅದರಲ್ಲಿ ಪಾಲ್ಗೊಂಡು ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟಿಸಬಹುದು ಅದಕ್ಕೆ ಕೆಲವು ಕೌಶಲಗಳು ಅಗತ್ಯ.
ಇಲ್ಲಿ ದೈಹಿಕ ಸೌಂದರ್ಯಕ್ಕೆ ಹೆಚ್ಚು ಆದ್ಯತೆ ಇರುವುದರಿಂದ ಸದೃಢ ಮೈಕಟ್ಟನ್ನು ಹೊಂದಿರಬೇಕು.
ಸುಂದರವಾಗಿರಬೇಕು. ಹಾಗಂತ ಇದೊಂದೇ ಮುಖ್ಯ ಅಂಶವೂ ಅಲ್ಲ.
ಜಾಹೀರಾತಿಗೆ ತಕ್ಕಂತೆ ನಿಮ್ಮ ವರ್ತನೆ, ಹಾವಭಾವ ಸಂದರ್ಶಕರನ್ನು ಆಕರ್ಷಿಸುವಂತಿರಲಿ.
ಯಾವುದೇ ಆಡಿಶನ್‌ಗೆ ಹೊಗುವ ಮುನ್ನ ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಬಹಳ ಪ್ರಮುಖ ಪಾತ್ರ ವಹಿಸುತ್ತದೆ.
ಪಟಪಟನೆ ಮಾತನಾಡುವ ಕೌಶಲ, ಉತ್ತಮ ಧ್ವನಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮಲ್ಲಿ ಆತ್ಮವಿಶ್ವಾಸ ಇರಬೇಕು.
ನಟನೆಯ ಬಗ್ಗೆ ಸ್ವಲ್ಪವಾದರೂ ತಿಳಿದಿರಬೇಕು ಮತ್ತು ಆಸಕ್ತಿ ಇರಬೇಕು. ನಟನೆಗೆ ಸಂಬಂಧಪಟ್ಟ ಯಾವುದಾರೂ ತರಬೇತಿ ಅಥವಾ ಕೊರ್ಸ್ ಮುಗಿಸಿದ್ದರೆ ಇನ್ನೂ ಹೆಚ್ಚು ಸಹಕಾರಿಯಾಗಿದೆ.
ಜನಪ್ರಿಯತೆ
ಮಾಡೆಲಿಂಗ್ ಕ್ಷೇತ್ರದಲ್ಲಿ ನಟಿಸಿದರೆ ಜನಪ್ರಿಯವಾಗುತ್ತೀರಿ. ಸಮಾಜದಲ್ಲಿ ಎಲ್ಲಿ ಹೋದರೂ ಜನ ನಿಮ್ಮನ್ನು ಗುರುತಿಸುತ್ತಾರೆ. ಇದು ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಮತ್ತು ನಿಮ್ಮ ಸುತ್ತಮುತ್ತ ಮಿತ್ರರು ಬಂಧುಗಳಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ.
ಭವಿಷ್ಯಕ್ಕೆ ಹೇಗೆ ಸಹಾಯಕಾರಿ?
ಇದರಿಂದ ಭವಿಷ್ಯದಲ್ಲಿ ಉತ್ತಮ ನಾಯಕ/ನಟಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.
ಉತ್ತಮ ಸಂಭಾವನೆ ಗಳಿಸಲು ಇದು ಸಹಕಾರಿ. ಇದರಿಂದ ನಿಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣವಾಗುತ್ತದೆ. ಆಫರ್‌ಗಳು ನಿಮ್ಮ ಮುಂದಿರುವುದರಿಂದ ನಿಮಗೆ ಸೂಕ್ತವೆನಿಸಿದ್ದನ್ನು ಆರಿಸಿ ಭವಿಷ್ಯ ರೂಪಿಸಿಕೊಳ್ಳಬಹುದು
ಉತ್ತಮ ಪ್ರದರ್ಶನ ನಿಮ್ಮದಾದರೆ ಪ್ರಶಸ್ತಿ ಕೂಡ ನಿಮ್ಮದಾಗಬಹುದಾಗಿದೆ.
ಉತ್ತಮ ವೇದಿಕೆ ಉತ್ತಮ ಅವಕಾಶಗಳ ಸಾಲನ್ನು ನಿಮ್ಮ ಮುಂದಿರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
- ಶಿವಾನಂದ ಎಚ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.