ಮಹಿಳೆಯರು ಸಬಲರಾಗಿ ಬೆಳೆಯಬೇಕು: ಸಚಿವೆ ಶಶಿಕಲಾ ಜೊಲ್ಲೆ
Team Udayavani, Jan 15, 2020, 2:28 PM IST
ದಾವಣಗೆರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲಾ ರೀತಿಯ ಸೌಲಭ್ಯಗಳನ್ನು ಪ್ರತಿಯೊಬ್ಬರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಹರಿಹರದಲ್ಲಿ ನಡೆಯುತ್ತಿರುವ ಹರಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು ಮಹಿಳೆಯರು, ಮಕ್ಕಳು, ಹಿರಿಯರು ಮತ್ತು ವಿಕಲ ಚೇತನರಿಗೆ ಸೌಲಭ್ಯಗಳನ್ನು ಒದಗಿಸುವ ಇಲಾಖೆ ನಮ್ಮದು. ಇಂದಿನ ಆಧುನಿಕ, ಫ್ಯಾಷನ್, ಕಂಪ್ಯೂಟರ್, ತಂತ್ರಜ್ಞಾನ ಯುಗದಲ್ಲಿ ಮಹಿಳೆಯರು ಭಾರತೀಯ ಸಂಸ್ಕೃತಿಯ ಮರೆತು ಪಾಶ್ಚಾತ್ಯ ಸಂಸ್ಕೃತಿಯ ಮೈಗೂಡಿಸಿಕೊಳ್ಳುತ್ತಿದ್ದಾರೆ. ಅದೇ ಪಾಶ್ಚಾತ್ಯ ಮಹಿಳೆಯರು ಭಾರತೀಯ ಸಂಸ್ಕೃತಿಯ ಅನುಸರಣೆ ಮಾಡುವುದು ಕಂಡು ಬರುತ್ತದೆ. ಮಹಿಳೆಯರು ಭಾರತೀಯ ಸಂಸ್ಕೃತಿಯ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು.
ಇದೇ ವೇಳೆಯಲ್ಲಿ ವೇದಿಕೆಯಲ್ಲಿ ಮಾತಾನಾಡಿದ ನಟಿ ರಾಗಿಣಿ ದ್ವಿವೇದಿ ಮಹಿಳೆಯರು ಮನೆ, ಹೊರಗಡೆ ಸಾವಿರಾರು ಕೆಲಸ ಮಾಡಿದರೂ ದೊರೆಯಬೇಕಾದ ಗೌರವ, ಸಮ್ಮಾನ ದೊರೆಯುತ್ತಿಲ್ಲ. ಅಡುಗೆ, ಮನೆಯ ಕೆಲಸ ಮಾಡುವುದು ಒಂದು ಕೆಲಸವೇ ಎಂದು ಮೂದಲಿಸುವುದು ಕಂಡುಬರುತ್ತದೆ ಎಂದರು.
ಪ್ರತಿಯೊಬ್ಬ ಹೆಣ್ಣು ಮಾಡುವ ಕೆಲಸ ಇನ್ಯಾರು ಮಾಡಲು ಸಾಧ್ಯವಿಲ್ಲ. ಮಹಿಳೆಯರು ಕೆಲಸ ಮಾಡದೇ ಇದ್ದರೆ ಜೀವನ ಸಾಗುವುದೇ ಇಲ್ಲ. ಮಹಿಳೆಯರು ಮಾಡುವ ಕೆಲಸಕ್ಕೆ ಗೌರವ, ಸಮ್ಮಾನ ನೀಡುವಂತಾಗಬೇಕು. ಮಹಿಳೆಯರು ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ಎಲ್ಲೆಡೆ ಶಾಂತಿ, ಏಕಾಗ್ರತೆ, ಪ್ರೀತಿ, ವಿಶ್ವಾಸ ಪಸರಿಸಬೇಕು. ಇಂದಿನ ಹರ ಜಾತ್ರಾ ಮಹೋತ್ಸವ ನಿಜಕ್ಕೂ ಸಂತೋಷದ ವಿಚಾರ. ಎಷ್ಟೇ ಒತ್ತಡವಿದ್ದರೂ ಒಬ್ಬರನ್ನೊಬ್ಬರು ಭೇಟಿಮಾಡಿ, ವಿಚಾರ ವಿನಿಮಯ ಮಾಡಿಕೊಳ್ಳಲು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ
ಬಿಸಿಯೂಟ ಸಿಬ್ಬಂದಿ ಇಡಿಗಂಟಿಗೆ ಸರ್ಕಾರದ ಮಾರ್ಗಸೂಚಿ ಪ್ರಕಟ
Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…
Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Name Road in Row: ಕರ್ನಾಟಕಕ್ಕೇ ಸಿದ್ದರಾಮಯ್ಯ ಅಂತ ಹೆಸರು ಇಡಲಿ: ಎಚ್‌ಡಿಕೆ ವ್ಯಂಗ್ಯ
ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್’ನಲ್ಲಿ ಪಲಿಮಾರು ಶ್ರೀ ಅಭಿಮತ
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ವಚನ, ದಾಸ ಸಾಹಿತ್ಯ ಮನೆ ಮನೆಗೆ ತಲುಪಿಸೋಣ: ಪೇಜಾವರ ಶ್ರೀ
Yakshagana;ಕಾಲಕ್ರಮೇಣ ಪರಂಪರೆಯ ಸ್ವರೂಪಕ್ಕೆ ಮರಳುವುದು ನಿಶ್ಚಿತ: ಕುರಿಯ ಗಣಪತಿ ಶಾಸ್ತ್ರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.