ಅಕ್ರಮ ಮನೆ, ಅಡಿಪಾಯ ತೆರವು
Team Udayavani, Jan 15, 2020, 5:25 PM IST
ಟೇಕಲ್: ವ್ಯಾಪ್ತಿಯ ಕೆ.ಜಿ.ಹಳ್ಳಿ ಗ್ರಾಮದ ಸರ್ವೆ ನಂ. 73ರಲ್ಲಿನ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಹಾಕಿದ್ದ ಪಾಯ ಮತ್ತು ನಿರ್ಮಾಣದಲ್ಲಿನ ಮನೆಗಳನ್ನು ಉಪವಿಭಾಗಾಧಿಕಾರಿ ಸೋಮಶೇಖರ್ ಸಮ್ಮುಖದಲ್ಲಿ ತೆರವು ಮಾಡಲಾಯಿತು. ಎರಡು ದಿನಗಳ ಹಿಂದೆ ತಹಶೀಲ್ದಾರ್‌ನಾಗವೇಣಿ ಹಾಗೂ ಇಒ ಕೃಷ್ಣಪ್ಪ ಸ್ಥಳಕ್ಕೆ ಬಂದು ಅಕ್ರಮವಾಗಿ ಮನೆ ಕಟ್ಟಿಕೊಳ್ಳುತ್ತಿದ್ದವರಿಗೆ ಎಚ್ಚರಿಕೆ ನೀಡಿದ್ದರು.
ಸರ್ಕಾರಿ ಜಾಗದಲ್ಲಿ ಮನೆಕಟ್ಟಿ ಕೊಳ್ಳಬಾರದು, ಒಂದು ವೇಳೆ ಕಟ್ಟಿದರೆ ನೆಲಸಮಗೊಳಿಸುವುದಾಗಿ ಹೇಳಿದ್ದರು. ಆದರೂ ಕೆಲವರು ಅಧಿಕಾರಿಗಳ ಮಾತಿಗೆ ಬೆಲೆ ಕೊಡದೆ, ರಾತ್ರೋರಾತ್ರಿ ಮನೆ ಕಟ್ಟಲು ಪ್ರಾರಂಭಿಸಿದ್ದರು. ಹೀಗಾಗಿ ಮಂಗಳವಾರ ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ, ತಹಶೀಲ್ದಾರ್ ನಾಗವೇಣಿ ನೇತೃತ್ವದಲ್ಲಿ ತೆರವು ಮಾಡಲಾಯಿತು.
ದಾಖಲೆಗಳು ಪರಿಶೀಲನೆ: ತೆರವು ಕಾರ್ಯಾಚರಣೆ ವೇಳೆ ಮನೆ ಕಟ್ಟಲು ಆರಂಭಿಸಿದ್ದ ಕೆಲವರು ಪಂಚಾಯ್ತಿ ನೀಡಿರುವ ದಾಖಲೆ ತೋರಿಸಿದರು. ಆಗ ಸ್ಥಳದಲ್ಲಿದ್ದ ಪಿಡಿಒ ಶಾಲಿನಿ ಮತ್ತು ತಾಪಂ ಇಒ ಕೃಷ್ಣಪ್ಪ ಪರಿಶೀಲನೆ ನಡೆಸಿದರು. ದಾಖಲೆಗಳು ಸರಿಯಿಲ್ಲ ಎಂಬುದು ತಿಳಿದು ಬಂದಿದ್ದರಿಂದ ನಿರ್ಮಿಸಿದ್ದ ಅಡಿಪಾಯ ಹಾಗೂ ಮನೆ ಗಳನ್ನು ನೆಲಸಮ ಗೊಳಿಸಲಾಯಿತು.
ಅರ್ಹರ ಪಟ್ಟಿ ತಯಾರಿಸಿ: ಉಪ ವಿಭಾಗಾಧಿಕಾರಿ ಸೋಮಶೇಖರ್ ಮಾತನಾಡಿ, ಸರ್ವೆ ನಂಬರ್ 73ರಲ್ಲಿ ಪಾಯ ಹಾಕಿಕೊಂಡಿರುವವರು, ಪಕ್ಕಮನೆ ಕಟ್ಟಿಕೊಂಡಿರುವವರು, ಗುಡಿಸ ಲಲ್ಲಿ ವಾಸಿಸುತ್ತಿರುವವರು, ನಿವೇಶನ ರಹಿತರೆ, ವಸತಿ ಹೀನರೆ ಅಥವಾ 94 ಸಿನಲ್ಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆಯೇ ಎಂಬ ದಾಖಲೆಗಳನ್ನು ಸಂಗ್ರ ಹಿಸಿ, ಅರ್ಹತೆ ಇರುವ ಫಲಾನುಭವಿಗಳ ಪಟ್ಟಿ ತಯಾರಿಸಿ, ಗ್ರಾಮ ಪಂಚಾಯ್ತಿಗೆ ನೀಡುವಂತೆ ಜನರಿಗೆ ತಿಳಿಸಿದರು.
ಪಿಡಿಒ, ಸರ್ವೆಯರ್ ವಿರುದ್ಧ ದೂರು: ಸರ್ವೆಯರ್ ಸರ್ಕಾರಿ ಜಮೀನನ್ನು ಗಾಮಠಾಣೆ ಜಮೀನು ಎಂದು ನಮೂದಿಸಿರುವುದು, ಕೆಲವು ದಾಖಲೆ ಗಳಲ್ಲಿ ಕಂಡು ಬಂದಿದ್ದರಿಂದ ಅವರ ವಿರುದ್ಧವೂ ಕೇಸು ದಾಖಲಿಸುವಂತೆ ತಾಪಂ ಇಒಗೆ ಸೂಚಿಸಿದರು. ಈ ಸರ್ವೆ ನಂಬರಿನಲ್ಲಿ ಈ ಸ್ವತ್ತು ಮಾಡಿಕೊಟ್ಟಿರುವ ಪಿಡಿಒ ವಿರುದ್ಧವು ದೂರು ದಾಖಲಿಸಿ ಕ್ರಮ ಜರುಗಿಸುವಂತೆ ತಿಳಿಸಿದರು.
ಅನುಮಾನ: ಇಒ ಕೃಷ್ಣಪ್ಪನವರು ಇದಕ್ಕೂ ಮುಂಚೆ ಕೆ.ಜಿ.ಹಳ್ಳಿ ಗ್ರಾ.ಪಂ. ಕಚೇರಿಯಲ್ಲಿ ಕೆ.ಜಿ.ಹಳ್ಳಿ ಗ್ರಾಮದ ಖಾತೆ ಪುಸ್ತಕಗಳನ್ನು ಪರಿಶೀಲಿಸಿದಾಗ ಬಹುತೇಕ ಲೋಪದೋಷಗಳು ಕಂಡು ಬಂದಿವೆ. ಕ್ರಮ ಸಂಖ್ಯೆಗಳಲ್ಲಿ ಅನೇಕ ವ್ಯತ್ಯಾಸವಾಗಿದೆ. ಸ್ವತ್ತಿನ ಬಾಬಿನಲ್ಲಿ ಕೆಲವು ಕಡೆ ಕ್ರಮ ಸಂಖ್ಯೆಗಳ ಹೆಸರಿಗೂ ತಾಳೆಯಾಗುತ್ತಿಲ್ಲ ಮತ್ತು ಮನೆ ನಿರ್ಮಿ ಸಿದ ಜಾಗದಲ್ಲಿ ಫಲಾನು ಭವಿಗಳು ಹಾಜರು ಪಡಿಸಿದ ನಮೂನೆ 9, 10 ದಾಖಲೆಗಳು ಪಂಚಾಯ್ತಿ ಖಾತೆ ಪುಸ್ತಕ ದಲ್ಲಿ ಕೈಬಿಟ್ಟಿರುತ್ತದೆ. ಇದರಿಂದ ಅಕ್ರಮ ವಾಗಿದೆ ಎಂಬುದು ಅನುಮಾನಕ್ಕೆ ಎಡೆಮಾಡಿದೆ. ಈ ಸ್ವತ್ತು ಮಾಡಿರುವುದು ಸಹ ಅವುಗಳಲ್ಲಿ ಅಕ್ರಮವಾಗಿದೆ ಎಂದು ವಿವರಿಸಿದರು.
ತಹಶೀಲ್ದಾರ್ ನಾಗವೇಣಿ ಮಾತನಾಡಿ, ಈ ಸರ್ವೆ ನಂಬರಿನಲ್ಲಿ ಸರ್ಕಾರಿಇಲಾಖೆಗಳ ಕೆಲವು ಕಚೇರಿಗಳಿಗೆ ಜಾಗಮೀಸಲಾಗಿದ್ದು, ಅವುಗಳಿಗೆ ಸರ್ವೆ ಕಾರ್ಯದಲ್ಲಿ ಹದ್ದುಬಸ್ತು ಪೂರ್ಣಗೊಂಡ ನಂತರ ಖಾಲಿಜಾಗ ಉಳಿದರೆ ಅರ್ಹ ಕಡುಬಡವರಿಗೆ ಗ್ರಾ.ಪಂ. ಶಿಫಾರಸು ಮಾಡಿದ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ನಿವೇಶನ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ನೆರೆದಿದ್ದವರಿಗೆ ತಿಳಿಸಿದರು.
ಕಾರ್ಯಾ ಚರಣೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ನಾಗರಾಜ್, ಮಾಸ್ತಿ ಪಿಎಸ್‌ಐ ವಸಂತಕುಮಾರ್, ತಾಪಂ ಸದಸ್ಯೆ ಕಾಂತಮ್ಮ, ಆರ್.ಐ ಮುನಿಸ್ವಾಮಿಶೆಟ್ಟಿ, ವಿಎಗಳಾದ ಸುಧಾ ಮಣಿ, ರಘು, ಪವನ್, ಗುರುದತ್, ವಿನಯ್, ಉಮೇಶ್, ರಾಹುಲ್ ಜೊತೆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.