ಪ್ರವಾಸ, ಚಾರಣ ಯೋಜನೆಗಾಗಿ YHAI
Team Udayavani, Jan 16, 2020, 5:17 AM IST
ವೈಎಚ್‌ಎಐ ಯುವಜನರಿಗೆ ಹೇಳಿ ಮಾಡಿಸಿದ ವೇದಿಕೆ. ಚಾರಣವೂ ಸೇರಿದಂತೆ ಹತ್ತಾರು ಸಾಹಸಮಯ ಶಿಬಿರಗಳನ್ನು ಆಯೋಜಿಸುವ ಈ ಸಂಸ್ಥೆಯು ಅತ್ಯುತ್ತಮ ಅನುಭವಿ ಮಾರ್ಗದರ್ಶಕರನ್ನು ಹೊಂದಿದೆ. ಹಾಗಾಗಿ ಇದರೊಂದಿಗಿನ ಪ್ರವಾಸದ ಅನು ಭವವೇ ವಿಭಿನ್ನ ಎನ್ನುತ್ತಾರೆ ರಂಜಿನಿ ಮಿತ್ತಡ್ಕ.
ಚಾರಣವೆಂದರೆ ಬರೀ ದುಡ್ಡಿದ್ದರೆ ಸಾಲದು, ಸೂಕ್ತ ಮಾರ್ಗದರ್ಶನವೂ ಬೇಕು. ಇವೆರಡನ್ನೂ ಪೂರೈಸುವ ಏಜೆನ್ಸಿಗಳೂ ಇವೆ. ಅವು ತುಸು ದುಬಾರಿ ಎನಿಸಲೂ ಬಹುದು ಕೆಲವರಿಗೆ. ಸೌಲಭ್ಯ ಆಧರಿಸಿ ಆಯ್ಕೆ ಮಾಡಿ ಕೊಳ್ಳುವ ಜನರೂ ಹಲವರಿದ್ದಾರೆ.
ಆದರೆ ಇವೆಲ್ಲದರ ಮಧ್ಯೆ, ಸಮಾ ನಾಸಕ್ತರೆನಿಸುವ ಬೇರೆ ಬೇರೆ ಭಾಗದ ಜನ ರೊಂದಿಗೆ ಚಾರಣಕ್ಕೆ, ಪ್ರವಾಸಕ್ಕೆ ಹೋಗುವ ಅನುಭವವೇ ವಿಶೇಷ. ಪರಸ್ಪರ ಸಂಸ್ಕೃತಿ ಯನ್ನು ಅರಿತುಕೊಳ್ಳುತ್ತಾ, ಆಚಾರ ವಿಚಾರ ತಿಳಿಯುತ್ತಾ ನಮ್ಮ ಜಾನ ಕ್ಷಿತಿಜವನ್ನು ವಿಸ್ತರಿ ಸಿಕೊಳ್ಳಲು ಇರುವ ಅವಕಾಶವಿದು.
ಇಂಥ ಸಂದರ್ಭದಲ್ಲಿ ಸಹಾಯಕ್ಕೆ ಬರು ವುದು ವೈಎಚ್‌ಎಐ. ಅಂದರೆ ಯುತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ. ಪ್ರವಾಸವನ್ನು ಬಯಸುವ ಯುವಜನರೆಲ್ಲಾ ಈ ಸಂಸ್ಥೆಯ ಸದಸ್ಯರಾಗು ವುದುಂಟು. ಇದು ಸ್ವಯಂ ಸೇವಕರಿಂದಲೇ ನಡೆಯುವ ಸಂಸ್ಥೆ. ವರ್ಷಪೂರ್ತಿ ಪ್ರಯಾಣ, ಪ್ರವಾಸೋದ್ಯಮ ಮತ್ತು ಸಾಹಸ ಪ್ರವಾಸೋದ್ಯಮ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಜತೆಗೆ ಕುಟುಂಬ ಶಿಬಿರವನ್ನೂ ಆಯೋಜಿಸುತ್ತದೆ. ಸುರಕ್ಷಿತ ಪ್ರವಾಸದೊಂದಿಗೆ ಯುವಜನರಲ್ಲಿ ಹೊಸ ಸ್ಫೂರ್ತಿಯನ್ನು ತುಂಬುವುದೂ ಈ ಸಂಸ್ಥೆಯ ಉದ್ದೇಶ. ಸಂಸ್ಥೆ ಆಯೋಜಿಸುವ ವಿವಿಧ ಶಿಬಿರ (ಚಾರಣ) ಗಳಲ್ಲಿ ಕ್ಯಾಂಪ್ ಲೀಡರ್ ತರಬೇತಿ ನೀಡಲಾಗುತ್ತದೆ.
ಸದಸ್ಯತ್ವದ ಪ್ರಯೋಜನ
ಸಂಸ್ಥೆ ಹಮ್ಮಿಕೊಳ್ಳುವ ಹತ್ತಾರು ಪ್ರವಾಸ ಸಂಬಂಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳ ಬಹು ದು. ದೇಶದ 150ಕ್ಕೂ ಹೆಚ್ಚು ಪ್ರದೇಶ ಗಳಲ್ಲಿ, ಯೂತ್ ಹಾಸ್ಟೆಲ್‌ಗಳಲ್ಲಿ ರಿಯಾ ಯಿತಿ ವಸತಿ ಸೌಕರ್ಯ ಪಡೆಯ ಬಹುದು. ಈ ಸದಸ್ಯತ್ವ ಅಂತಾರಾಷ್ಟ್ರೀಯ ಕಾರ್ಡ್ ಆಗಿದ್ದು, ಜಗತ್ತಿನಾದ್ಯನ ವಿವಿಧೆಡೆ ಮಾನ್ಯ. ಯಾವುದೇ ಸ್ಪೆಷಲ್ ಆಫರ್‌ಗಳಲ್ಲಿ ಸದ ಸ್ಯರಿಗೆ ಆದ್ಯತೆ. ಇದರ ಸದಸ್ಯರಿಗೆ ಕ್ಯಾಂಪ್ ಲೀಡರ್ ಆಗುವ ಅವಕಾಶವಿದೆ. ಟ್ರೆಕ್ಕಿಂಗ್ ಪ್ಯಾಕೇಜ್‌ಗಳಲ್ಲಿ ರಿಯಾ ಯಿತಿ ಇದೆ. ಫ್ಯಾಮಿಲಿ ಅಥವಾ ಒಬ್ಬರೇ ಹೋಗ ಬಹುದು.
YHAI ಸದಸ್ಯರಾಗುವುದು ಎಂದರೆ ರಿಯಾಯಿತಿ ಸೌಕರ್ಯಗಳನ್ನು ಪಡೆಯು ವುದಕ್ಕಿಂತ ಹೆಚ್ಚಾಗಿ ಅನುಭವಿ ಸಂಘಟಕರು ನಡೆಸುವ ಈ ಸಂಸ್ಥೆಯ ಮೂಲಕ ರಜೆಯನ್ನು ವಿಭಿನ್ನವಾಗಿ ಕುಟುಂಬದವರೊಂದಿಗೆ ಅನು ಭವಿಸಲು ಅವಕಾಶ ನೀಡುತ್ತದೆ.
YHAI ಸಂಸ್ಥೆಯ ಇತಿಹಾಸ
20ನೇ ಶತಮಾನದಲ್ಲಿ ಜರ್ಮನಿಯಲ್ಲಿ ಇದು ಅಸ್ತಿತ್ವಕ್ಕೆ ಬಂದಿತು. ಮೊದಲ ಹಾಸ್ಟೆಲ್ ಆರಂಭವಾದದ್ದು 1912 ರಲ್ಲಿ. 1945 ರಲ್ಲಿ ಶಿಮ್ಲಾದಲ್ಲಿ ಹಾಸ್ಟೆಲ್ ಆರಂಭಿಸುವುದ ರೊಂದಿಗೆ ಭಾರತಕ್ಕೂ ಕಾಲಿಟ್ಟಿತು. 1949ರಲ್ಲಿ ಮೈಸೂರಿನಲ್ಲೂ ಈ ಪರಿ ಕಲ್ಪನೆ ಅರಳಿತು. 1956ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಲವೆಡೆ ತನ್ನ ಚಟುವಟಿಕೆಯನ್ನು ವಿಸ್ತರಿಸಿತು.
1. ವೈಯಕ್ತಿಕ -(ಆನ್‌ಲೈನ್ ಮೂಲಕ ವೈಯಕ್ತಿಕ ಸದಸ್ಯತ್ವಕ್ಕೆ 10ರಿಂದ 18 ವರ್ಷದೊಳಗಿನವರಿಗೆ )ಒಂದು ವರ್ಷಕ್ಕೆ 100 ರೂ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಒಂದು ವರ್ಷಕ್ಕೆ 250 ರೂ., 2 ವರ್ಷಕ್ಕೆ ಆದರೆ 350 ರೂ. ಪೂರ್ಣ ಸದಸ್ಯತ್ವಕ್ಕೆ ಗೆ 2,700 ರೂ.
2. YHAI- IYTC ಕೋ ಬ್ರಾಂಡೆಡ್ ಸದಸ್ಯತ್ವ ಇದು ಒಂದು ವರ್ಷದ ಸದಸ್ಯತ್ವವಾಗಿದ್ದು, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ಸದಸ್ಯತ್ವದೊಂದಿಗೆ ಇಂಟರ್‌ನ್ಯಾಶನಲ್ ಯೂತ್ ಟ್ರಾವೆಲ್ ಕಾರ್ಡ್‌ನ ಸದಸ್ಯತ್ವವನ್ನೂ ಪಡೆಯಬಹುದು. ಇದರಲ್ಲಿ ಹೆಚ್ಚು ರಿಯಾಯತಿಗೆ ಅವಕಾಶವಿದೆ. ಅಷ್ಟೇ ಅಲ್ಲದೆ ಈ ಸದಸ್ಯತ್ವವನ್ನು ಯುನೆಸ್ಕೋ ಅನುಮೋದಿಸಿದೆ. ಈ ಸದಸ್ಯತ್ವಕ್ಕೆ 500 ರೂ. ಇದೆ.
3.ಪಿಯುಸಿ ವರೆಗೆ ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ 600 ರೂ. ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.