ಮಲ್ಪೆ ನಗರದಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಅತಿ ಹಳೆಯ ಎಸ್‌ಟಿಡಿ ಬೂತ್
ಮೊಬೈಲ್ ಕಾಲದಲ್ಲೂ ಗ್ರಾಹಕರಿಗೆ ಸೇವೆ ನೀಡುತ್ತಿರುವ ಬೂತ್
Team Udayavani, Jan 16, 2020, 5:31 AM IST
ಮಲ್ಪೆ: ಒಂದು ರೂಪಾಯಿಯಲ್ಲಿ ಅದೆಷೋr ಪ್ರೇಮಿಗಳನ್ನು ಒಂದು ಮಾಡಿದ ದೂರಸಂಪರ್ಕದ ಬೂತುಗಳು ಇಂದು ಸಂಪೂರ್ಣ ಕಾಲಗರ್ಭವನ್ನು ಸೇರಿದ್ದರೂ, ಮಲ್ಪೆ ನಗರದ ಮಧ್ಯೆ ಈಗಲೂ ಒಂದು ಎಸ್‌ಟಿಡಿ ಬೂತ್ ಕಾರ್ಯ ನಿರ್ವಹಿಸುತ್ತಿದೆ ಎಂದರೆ ಅತಿಶಯಯೋಕ್ತಿಯಾಗಬಹುದು.ಹೌದು, ಮಲ್ಪೆಯ ಗೋವರ್ಧನ ಕಾಮತ್ (ವಿಟೇÉರಂಗಡಿ) ಅವರ ಅಂಗಡಿಯಲ್ಲಿ ಈಗಲೂ ಎಸ್‌ಟಿಡಿ ಬೂತ್ ಸೌಲಭ್ಯ ಚಾಲ್ತಿಯಲ್ಲಿದೆ.
ಮಲ್ಪೆಯ ಗೋವರ್ಧನ ಕಾಮತ್ ಅವರು 1995ರಲ್ಲಿ ಎಸ್‌ಟಿಡಿ ಬೂತ್ ತೆರೆದಿದ್ದರು. ಆರಂಭದಲ್ಲಿ ಸಾಕಷ್ಟು ವ್ಯವಹಾರಗಳು ನಡೆಯುತ್ತಿತ್ತು. ಪ್ರತಿ ದಿನಕ್ಕೆ ಕನಿಷ್ಠ ವೆಂದರೂ 1500ರೂ. ವ್ಯಾಪಾರ ಬರುತ್ತಿತ್ತು. ಮೊಬೈಲ್ ಕಾಲಿಟ್ಟ ನಂತರ ಕುಸಿಯುತ್ತಾ ಬಂದು ಇದೀಗ ವ್ಯವಹಾರ 15ರೂ.ಗೆ. ಇಳಿದಿದೆ. ಆದರೂ ಅವರು ಎಸ್‌ಟಿಡಿ ಬೂತನ್ನು ಕೈ ಬಿಡಲಿಲ್ಲ.
ದೂರಸಂಪರ್ಕಕ್ಕೆ ಬೂತ್‌ಗಳೇ ಆಧಾರ!
ಮೊಬೈಲ್‌ಗಳು ಬೆಳಕಿಗೆ ಬರುವುದಕ್ಕಿಂತ ಮೊದಲು ದೂರಸಂಪರ್ಕಕ್ಕೆ ಎಸ್‌ಟಿಡಿ ಬೂತುಗಳೇ ಆಧಾರವಾಗಿದ್ದು. ಟೆಲಿಫೋನ್ ರಂಗದಲ್ಲಿ ಹೊಸ ಕ್ರಾಂತಿಯನ್ನು ಉಂಟು ಮಾಡಿದ್ದವು. ಬೂತ್‌ಗಳ ಹೊರಗೆ ಸಾಲು ಸಾಲು ಜನ ಕರೆ ಮಾಡಲು ಕಾಯುತ್ತಿದ್ದ ಕಾಲವದು. ಕ್ರಮೇಣ ಮೊಬೈಲ್ ರಂಗದಲ್ಲೂ ಕ್ಷಿಪ್ರ ಕ್ರಾಂತಿ ನಡೆಯಿತು. ಎಲ್ಲರೂ ಮೊಬೈಲ್ ಬಳಸಲು ತೊಡಗಿದರು. ದಿನಗಳೆದಂತೆ ಎಸ್‌ಟಿಡಿ ಬೂತ್‌ಗಳು ಬೇಡಿಕೆ ಕುಸಿಯುತ್ತಾ ಬಂದು, ಇಂದು ಬೂತ್‌ಗಳು ಕಾಲಗರ್ಭವನ್ನು ಸೇರುವಂತಾಗಿದೆ. ಇಂದಿನ ಯುವಜನತೆಗೆ ಮೊಬೈಲ್ ಪೋನ್, ವಾಟ್ಸಾಪ್ ಜ್ವರ ಹೇಗೆ ಅಂಟಿದೆಯೋ ಅದೇ ರೀತಿಯ ಹಿಂದಿನ ಯುವ ಜನತೆಗೂ ಕಾಯಿನ್ ಬಾಕ್ಸ್, ಎಸ್‌ಟಿಡಿ ಬೂತ್ ಒಂದು ಗೀಳಾಗಿ ಅಂಟಿಕೊಂಡಿತ್ತು.
ಹೆಚ್ಚು ಸುರಕ್ಷಿತ, ಇನ್ನೊಬ್ಬರಿಗೆ ಕಿರುಕುಳ ಇಲ್ಲ
ಎಷೇr ಸೌಲಭ್ಯಗಳಿದ್ದರೂ ಎಸ್‌ಟಿಡಿ ಬೂತ್‌ಗಳಷ್ಟು ನೆಮ್ಮದಿ ಮೊಬೈಲ್‌ಗಳಲಿಲ್ಲ. ಬೂತ್‌ಗಳಲ್ಲಿ ಮಾತನಾಡುವಾಗ ಇನ್ನೊಬ್ಬರಿಗೆ ತೊಂದರೆಯಾಗಲಿ ಕಿರುಕುಳವಾಗಲಿ ಇರುತ್ತಿರಲಿಲ್ಲ. ದೇವಸ್ಥಾನವಾಗಿರಲಿ, ಬಸ್ಸು ನಿಲ್ದಾಣವಾಗಲಿ, ವಾಹನಗಳನ್ನು ಓಡಿಸುತ್ತಿರುವಾಗ ತಾವು ಎಲ್ಲಿ ಇದೇªವೆ ಎಂಬ ಪರಿಜ್ಞಾನ ಇಲ್ಲದೆ ಮೊಬೈಲ್‌ಗಳಲ್ಲಿ ಮಾತನಾಡುವ ಜನರ ವರ್ತನೆ ಬಹಳ ವಿಚಿತ್ರವಾಗಿದೆ. ಎಲ್ಲೆಂದರಲ್ಲಿ ಅತಿಯಾದ ಮೊಬೈಲ್ ಬಳಕೆ ಹಲವಾರು ಅಪಘಾತಗಳು ಹೆಚ್ಚಳಕ್ಕೂ ಕಾರಣವಾಗುತ್ತಿದೆ.
ಗಿರಾಕಿ ಇದ್ದಷ್ಟು ಕಾಲ ಮುಂದುವರಿಯಲಿದೆ
ಉತ್ತರ ಕನ್ನಡದ ಕೆಲವೊಂದು ಮೊಬೈಲ್ ಇಲ್ಲದ ಬಡ ಮೀನುಗಾರ ಕಾರ್ಮಿಕರು ಬಿಟ್ಟರೆ ಮತ್ತಾರು ಬೂತ್ ಕಡೆಗೆ ಮುಖ ಮಾಡುತ್ತಿಲ್ಲ. ಇಲ್ಲಿ ಬಿಟ್ಟರೆ ಬೇರೆಲ್ಲೂ ಇಲ್ಲ. ಗಿರಾಕಿ ಇರಲಿ ಇಲ್ಲದೆ ಇರಲಿ, ಇದ್ದಷ್ಟು ಕಾಲ ಮುಂದುವರೆಸಿಕೊಂಡು ಹೋಗಬೇಕೆಂಬ ಇರಾದೆ ನನ್ನದು.
– ಗೋವರ್ಧನ ಕಾಮತ್, ಬೂತ್ ನಿರ್ವಾಹಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.