ಕಲಿತದ್ದು ಆಧುನಿಕ ಶಿಕ್ಷಣ; ಒಲಿದದ್ದು ಶಾಸ್ತ್ರೀಯ ಶಿಕ್ಷಣ
ಅದಮಾರು ಕಿರಿಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು
Team Udayavani, Jan 16, 2020, 5:08 AM IST
ಉಡುಪಿ: ಶ್ರೀಕೃಷ್ಣಮಠದಲ್ಲಿ ಜ. 18ರ ಬೆಳಗ್ಗೆ ಶ್ರೀಕೃಷ್ಣನ ಪೂಜಾಕೈಂಕರ್ಯದ ದೀಕ್ಷೆ ತೊಡುವ ಶ್ರೀಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಪೂರ್ವಾಶ್ರಮದಲ್ಲಿ ಲೌಕಿಕ ಶಿಕ್ಷಣವನ್ನು ಪಡೆದು ಈಗ ಸಾಂಪ್ರದಾಯಿಕ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಹಿರಿಯಡಕ ಸಮೀಪ ಶೀರೂರಿನವರಾದ ಶ್ರೀಶ ಎಸ್. ಅವರು ಎಂಜಿನಿಯರಿಂಗ್ ಪದವಿಯನ್ನು ಓದಿದವರು. ಇವರ ತಂದೆ ತಾಯಿ ಚಂದ್ರಶೇಖರ್ ಎಸ್. ಮತ್ತು ಗೌರಿ. ಆರ್ಥಿಕವಾಗಿ ಮಧ್ಯಮವರ್ಗದವರಾದ ಶ್ರೀಶ ಅವರು 1985ರ ಮಾರ್ಚ್ 20ರಂದು ಜನಿಸಿದರು. ಚಂದ್ರಶೇಖರ್ ಅವರು ತೀರ್ಥಹಳ್ಳಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಕಾರಣ ತೀರ್ಥಹಳ್ಳಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ಶಿಕ್ಷಣ ಪಡೆದರು. ಶಿವಮೊಗ್ಗದ ಜವಾಹರಲಾಲ್ ನೆಹರು ನ್ಯಾಶನಲ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ 2006ರಲ್ಲಿ ಬಿಇ (ಮೆಕ್ಯಾನಿಕಲ್) ಪದವಿ ಪಡೆದರು.
ಶಾಸ್ತ್ರ ಪಾಠ
ಅವರು ಉಡುಪಿ, ಮಂಗಳೂರಿನಲ್ಲಿ ಉದ್ಯೋಗವನ್ನೂ ಕೆಲ ಕಾಲ ಮಾಡಿದ್ದರು. ಆಧುನಿಕ ಶಿಕ್ಷಣವನ್ನು ಪಡೆದರೂ ಆಧ್ಯಾತ್ಮಿಕ ಜ್ಞಾನದತ್ತ ಆಕರ್ಷಣೆಯಾದ ಕಾರಣ ಅದಮಾರು ಮಠದ ಹಿರಿಯ ಯತಿ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರಲ್ಲಿ ತಮ್ಮನ್ನು ಶಿಷ್ಯನನ್ನಾಗಿ ಸ್ವೀಕರಿಸಲು ಕೋರಿದರು. ಹಿರಿಯ ಶ್ರೀಪಾದರು ಕೆಲವು ವರ್ಷ ಶ್ರೀಶರಿಗೆ ಹೆಸರಾಂತ ವಿದ್ವಾಂಸ, ಉಡುಪಿ ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ಪಡುಬಿದ್ರಿ ಲಕ್ಷ್ಮೀನಾರಾಯಣ ಶರ್ಮರಲ್ಲಿ ಪಾಠದ ವ್ಯವಸ್ಥೆಯನ್ನು ಮಾಡಿದರು. ಶರ್ಮರ ಬಳಿ ವ್ಯಾಕರಣ, ಮಹಾಭಾರತ ತಾತ್ಪರ್ಯನಿರ್ಣಯ, ಅಮರಕೋಶ ಮೊದಲಾದ ಶಾಸ್ತ್ರಕ್ಕೆ ಸಂಬಂಧಿಸಿದ ಪ್ರಾಥಮಿಕ ಪಾಠಗಳನ್ನು ಕೇಳಿದರು. ಉಡುಪಿ ಅದಮಾರು ಮಠದಲ್ಲಿದ್ದು ಗಣಪತಿ ಆಚಾರ್ಯರಿಂದ ವಿಷ್ಣುತಣ್ತೀನಿರ್ಣಯ ಕುರಿತು ಪಾಠವನ್ನು ಕೇಳಿದರು. ಸ್ವತಃ ಶ್ರೀವಿಶ್ವಪ್ರಿಯತೀರ್ಥರೂ ಕೆಲವು ಪಾಠಗಳನ್ನು ಮಾಡಿದ್ದರು.
2014ರ ಜುಲೈ 19ರಂದು 29 ವರ್ಷ ಪ್ರಾಯದ ಶ್ರೀಶರಿಗೆ ಪಾಜಕ ಸಮೀಪದ ಅದಮಾರು ಮಠದ ಆಡಳಿತಕ್ಕೆ ಒಳಪಟ್ಟ ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಸನ್ಯಾಸಾಶ್ರಮ, ಉತ್ತರಾಧಿಕಾರಿಯಾಗಿ ನೇಮಿಸಲಾಯಿತು. ಆಗ ಗುರುಗಳು ಕೊಟ್ಟ ಹೆಸರು ಶ್ರೀಈಶಪ್ರಿಯತೀರ್ಥರು. ಅಷ್ಟಮಠಗಳಲ್ಲಿ ಆಧುನಿಕ ಉನ್ನತ ಶಿಕ್ಷಣ ಪಡೆದು ಸನ್ಯಾಸ ಸ್ವೀಕರಿಸಿದ ಮೊದಲಿಗರು ಈಶಪ್ರಿಯತೀರ್ಥರಾಗಿದ್ದಾರೆ.
ಬಳಿಕ ಪಲಿಮಾರು ಮಠದ ಶ್ರೀವಿದ್ಯಾ ಧೀಶತೀರ್ಥ ಶ್ರೀಪಾದರಲ್ಲಿ ಶಾಸ್ತ್ರಪಾಠವನ್ನು ಓದುತ್ತಿದ್ದಾರೆ. ಈಗಷ್ಟೇ ಪರ್ಯಾಯ ಸಂಚಾರದ ಅವಧಿ ಹೊರತುಪಡಿಸಿದರೆ ನಾಲ್ಕು ವರ್ಷಗಳಿಂದಲೂ ಪಾಠ ಓದುತ್ತಿದ್ದಾರೆ. ಇನ್ನೆರಡು ವರ್ಷ ಕಾಲ ಶ್ರೀಕೃಷ್ಣಮಠದಲ್ಲಿರುವಾಗಲೂ ಪಲಿಮಾರು ಮಠಾಧೀಶರು ಉಡುಪಿಯಲ್ಲಿದ್ದು ಪಾಠವನ್ನು ಮುಂದುವರಿಸಲಿದ್ದಾರೆ. ಈತನ್ಮಧ್ಯೆ ಶ್ರೀಈಶಪ್ರಿಯತೀರ್ಥ ಶ್ರೀಪಾದರಿಗೆ ಗುರುಗಳು ಮಠದ ಆಡಳಿತವನ್ನೂ ಕೆಲವು ತಿಂಗಳ ಹಿಂದೆ ಹಸ್ತಾಂತರಿಸಿದ್ದರು. ಅನಂತರ ಪರ್ಯಾಯ ಮಠದ ಆಡಳಿತವನ್ನೂ ಕಿರಿಯರೇ ನೋಡಿಕೊಳ್ಳುವುದಾಗಿ ಘೋಷಿಸಿದ್ದ ಹಿರಿಯ ಶ್ರೀಪಾದರು ಇತ್ತೀಚಿಗಷ್ಟೇ ಪರ್ಯಾಯ ಪೀಠಾರೋಹಣವನ್ನೂ ಕಿರಿಯರೇ ನೋಡಿಕೊಳ್ಳುವುದಾಗಿ ತಿಳಿಸಿದರು. ಜ. 18ರ ಮುಂಜಾನೆ ಅವರು ಸರ್ವಜ್ಞ ಪೀಠಾ ರೋಹಣಗೈಯುವರು.
ಪರ್ಯಾಯದಲ್ಲಿ ಹಲವು ಬದಲಾವಣೆಗಳು
ಅದಮಾರು ಕಿರಿಯ ಶ್ರೀಗಳು ಪರ್ಯಾಯಕ್ಕೆ ಸಂಬಂಧಿಸಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ.
– ಪರ್ಯಾಯೋತ್ಸವದ ದರ್ಬಾರ್ ಸಭೆ ಜ. 18ರ ಅಪರಾಹ್ನ 3ಕ್ಕೆ ನಡೆಯುತ್ತದೆ. ಅಂದು ಮುಂಜಾವ ಸುಮಾರು 3 ಗಂಟೆಗೆ ಮೆರವಣಿಗೆ ಬಂದು 6 ಗಂಟೆಗೆ ಪೀಠಾರೋಹಣ ಮಾಡಿದ ಬಳಿಕ ಸಾರ್ವಜನಿಕ ಪರ್ಯಾಯ ದರ್ಬಾರ್ ಸಭೆ ನಡೆಯುವುದಿತ್ತು. ಈ ಬಾರಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾತ್ರ ಬೆಳಗ್ಗೆ ಪೂರೈಸಿ ಅಪರಾಹ್ನ ದರ್ಬಾರ್ ಸಭೆಯನ್ನು ಆಯೋಜಿಸಿದ್ದಾರೆ. ಇದರಿಂದಾಗಿ ಬೆಳಗ್ಗಿನ ಗಡಿಬಿಡಿ ಇರದೆ ಆದಷ್ಟು ಬೇಗ ಮಹಾಪೂಜೆಯನ್ನು ನಡೆಸಿ ಭೋಜನ ಪ್ರಸಾದವನ್ನು ವಿತರಿಸಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯವಿದೆ.
– ಪರ್ಯಾಯೋತ್ಸವಕ್ಕೆ ಸುಮಾರು ಹತ್ತು ದಿನಗಳಲ್ಲಿ ನಾನಾ ಕಡೆಯಿಂದ ಹೊರೆಕಾಣಿಕೆ ಬಂದು ಸೇರುತ್ತಿತ್ತು. ಎಲ್ಲವೂ ಒಂದೇ ಸಮನೆ ಬರುವುದರಿಂದ ಒಂದಿಷ್ಟು ತರಕಾರಿ, ಧಾನ್ಯಗಳು ಹಾಳಾಗುತ್ತಿತ್ತು. ಹೀಗೆ ಹಾಳಾಗುವುದನ್ನು ತಪ್ಪಿಸಲು ಈ ಬಾರಿ ಎರಡು ವರ್ಷವೂ ಪ್ರತಿ 15 ದಿನಗಳಿಗೊಮ್ಮೆ ಒಂದೊಂದು ಊರಿನಿಂದ ಹೊರೆಕಾಣಿಕೆ ಬರುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಹೀಗೆ ಮಾಡಿದರೆ ತಾಜಾ ಹಸುರುವಾಣಿ ಹೊರೆಕಾಣಿಕೆ ಸಾಮಗ್ರಿಗಳು ಅಡುಗೆಗೆ ಬಳಸಬಹುದು ಎಂಬ ಚಿಂತನೆ ಇದೆ. ಒಮ್ಮೆಲೆ ಹೊರೆಕಾಣಿಕೆ ಬಂದರೆ ಅವುಗಳನ್ನು ತಂದವರನ್ನು ಮಾತನಾಡಿಸಲೂ ಸಮಯ ಸಿಗುವುದಿಲ್ಲವಿತ್ತು. 15 ದಿನಗಳಿಗೊಮ್ಮೆ ಬಂದರೆ ಅವರನ್ನು ಪ್ರತ್ಯೇಕವಾಗಿ ಮಾತನಾಡಿಸಿ ಪ್ರಸಾದ ಮಂತ್ರಾಕ್ಷತೆ ಕೊಡಬಹುದು ಎಂಬ ಚಿಂತನೆಯೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.