ಚಿನ್ನಕ್ಕೆ ಹಾಲ್‌ಮಾರ್ಕ್‌ ಕಡ್ಡಾಯ

Team Udayavani, Jan 16, 2020, 5:28 AM IST

GOLD-a

ಜನವರಿ 15ರ ಬಳಿಕ ಚಿನ್ನಕ್ಕೆ ಹಾಲ್‌ಮಾರ್ಕ್‌ ಗುರುತು ಕಡ್ಡಾಯ ಎಂದು ಹೇಳ ಲಾಗಿತ್ತು. ಆದರೆ ಇದೀಗ ಈ ದಿನಾಂಕ ವನ್ನು ಒಂದು ವರ್ಷ ಮುಂದೂಡ ಲಾಗಿದೆ. ಹಾಗಾದರೆ ಏನಿದು ಹಾಲ್‌ಮಾರ್ಕ್‌, ಏನಿದರ ಮಹತ್ವ ಎಂಬುದನ್ನು ಇಲ್ಲಿ ನೀಡಲಾಗಿದೆ.

ಏನಿದು ಹಾಲ್‌ಮಾರ್ಕ್‌?
ಗ್ರಾಹಕ ಬಳಕೆಯ ವಸ್ತುಗಳಿಗೆ ಐಎಸ್‌ಐ, ಖಾದ್ಯ ವಸ್ತುಗಳಿಗೆ ಅಗ್ಮಾರ್ಕ್‌ ಇದ್ದಂತೆ ಚಿನ್ನಾಭರಣಗಳ ಶುದ್ಧತೆಯ ಪ್ರತೀಕವಾಗಿ ಹಾಲ್‌ಮಾರ್ಕ್‌ ಇರುತ್ತದೆ. ಆಭರಣದಲ್ಲಿ ಬಳಸಲಾಗುವ ಚಿನ್ನದ ಶುದ್ಧತೆಗೆ ಇದೊಂದು ಪ್ರಮಾಣ ಪತ್ರವಾಗಿದೆ. ಅಂತಾರಾಷ್ಟ್ರೀಯವಾಗಿಯೂ ಇದು ಮೌಲ್ಯವನ್ನು ಹೊಂದಿದೆ.

2000ರಲ್ಲಿ ಜಾರಿ
ದೇಶದೆಲ್ಲೆಡೆ 2000ರ ಎಪ್ರಿಲ್‌ನಲ್ಲಿಯೇ ಹಾಲ್‌ಮಾರ್ಕ್‌ ನಿಯಮ ಪ್ರಾರಂಭವಾಗಿದ್ದು, 2005ರಿಂದ ಬೆಳ್ಳಿ ಮೊದಲಾದ ಲೋಹಗಳ ಆಭರಣಗಳಿಗೆ ಹಾಲ್‌ಮಾರ್ಕ್‌ ಅಗತ್ಯ ಎಂದು ಹೇಳಲಾಗಿತ್ತು. ಆದರೆ ನಿಯಮ ಪರಿಣಾಮಕಾರಿಯಾಗಿ ಜಾರಿಯಾಗಿರಲಿಲ್ಲ. ಜತೆಗೆ ತಮ್ಮ ಆಭರಣಗಳಿಗೆ ಹಾಲ್‌ಮಾರ್ಕ್‌ ಪಡೆಯುವುದು ಗ್ರಾಹಕರ ಆಯ್ಕೆಗೆ ಬಿಟ್ಟ ವಿಚಾರವಾಗಿತ್ತು.

ಏನು ಉಪಯೋಗ?
ಹಾಲ್‌ಮಾರ್ಕ್‌ ಚಿಹ್ನೆಯನ್ನು ಕಡ್ಡಾಯ ಮಾಡುವುದರಿಂದ ವಂಚನೆ ಪ್ರಮಾಣ ಕಡಿಮೆಯಾಗಲಿದೆ. ಮಾತ್ರವಲ್ಲದೆ ಖರೀದಿದಾರರಿಗೆ ಗುಣಮಟ್ಟದ ಆಭರಣಗಳು ದೊರೆಯುತ್ತವೆ. ಮರು ಮಾರಾಟ ಮಾಡುವ ವೇಳೆಯೂ ಆಗಿನ ಮಾರುಕಟ್ಟೆ ದರ ದೊರೆಯಲಿದೆ.

ಏಕೆ ಅಗತ್ಯ?
ಚಿನ್ನದ ಪರಿಶುದ್ಧತೆ ಅಥವಾ ಗುಣಮಟ್ಟವನ್ನು ದೃಢೀಕರಿಸಲು ಹಾಲ್‌ಮಾರ್ಕ್‌ ಅಗತ್ಯವಾಗಿದ್ದು, ಈ ಚಿಹ್ನೆ ಇದ್ದರೆ ಚಿನ್ನದ ಮರು ಮಾರಾಟದ ವೇಳೆ ಗ್ರಾಹಕರಿಗೆ ಆಗಿನ ಮಾರುಕಟ್ಟೆಯಲ್ಲಿನ ದರವೇ ಸಿಗುತ್ತದೆ.

ಇಷ್ಟನ್ನು ಗಮನಿಸಿ
ಗ್ರಾಹಕರು ಹಾಲ್‌ಮಾರ್ಕ್‌ ಹೊಂದಿರುವ ಚಿನ್ನದ ಮೇಲೆ ನಾಲ್ಕು ಅಂಶಗಳನ್ನು ಗಮನಿಸಬೇಕು ಬಿಐಎಸ್‌ ಗುರುತು, ಕ್ಯಾರೆಟ್‌ ಶುದ್ಧತೆ, ಮೌಲ್ಯಮಾಪನ ಕೇಂದ್ರದ ಹೆಸರು ಮತ್ತು ಆಭರಣಕಾರರ ಗುರುತಿನ ಚಿಹ್ನೆ.

30 ರೂ. ಹೆಚ್ಚಳ
ಹಾಲ್‌ಮಾರ್ಕ್‌ ಇರುವ ಆಭರಣಗಳ ಖರೀದಿ ಮೇಲೆ ಹೆಚ್ಚುವರಿಯಾಗಿ 30 ರೂ. ಶುಲ್ಕ ವಿಧಿಸಲಾಗಿದೆ. ಆದರೆ ಸ್ಥಳೀಯ ವರ್ತಕರು ಮಾತ್ರ ಈ ವೆಚ್ಚವನ್ನು ಗ್ರಾಹಕರ ಮೇಲೆ ಹೇರಬಹುದಾಗಿದೆ. ಬ್ರ್ಯಾಂಡೆಡ್‌ ಆಭರಣ ಮಾರಾಟಗಾರರು ಈ ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಗೆ ವಿಧಿಸುವಂತಿಲ್ಲ.

ಕಡ್ಡಾಯ ಏಕೆ ?
ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ) ಹಾಲ್‌ಮಾರ್ಕ್‌ ಅನ್ನು ಕಡ್ಡಾಯಗೊಳಿಸುವುದಕ್ಕೆ ಸಂಬಂಧಿಸಿ ಬಿಡುಗಡೆಗೊಳಿಸಿರುವ ಅಧಿಸೂಚನೆಯ ಗಡುವು ಕಳೆದ ಡಿಸೆಂಬರ್‌ 8ಕ್ಕೆ ಮುಕ್ತಾಯವಾಗಿದೆ. ಹೀಗಾಗಿ ಶೀಘ್ರದಲ್ಲಿಯೇ ಹಾಲ್‌ಮಾರ್ಕ್‌ ಕಡ್ಡಾಯಗೊಳಿಸಬೇಕಾದ ಒತ್ತಡ ಉಂಟಾಗಿದ್ದು, ಇದಕ್ಕೆ ತಪ್ಪಿದರೆ ಡಬುÉ éಟಿಒ ಸದಸ್ಯತ್ವ ಹೊಂದಿರುವ ರಾಷ್ಟ್ರಗಳಲ್ಲಿ ಜ್ಯುವೆಲ್ಲರಿ, ಚಿನ್ನ ಕುರಿತ ವಹಿವಾಟಿಗೆ ಅಡಚಣೆ ಉಂಟಾಗಲಿದೆ.

ಬಿಐಎಸ್‌ ನೀಡುತ್ತದೆ
ಬ್ಯೂರೋ ಆಫ್ ಇಂಡಿಯನ್‌ ಸ್ಟಾಂಡರ್ಡ್‌ ಈ ಕಾರ್ಯಾಚರಣೆಯನ್ನು ಮಾಡಿಕೊಂಡು ಬಂದಿದ್ದು, ಚಿನ್ನದ ಮೌಲ್ಯ ಮತ್ತು ಹಾಲ್‌ಮಾರ್ಕಿಂಗ್‌ ಕೇಂದ್ರಗಳು (ಎಎಚ್‌ಸಿಎಸ್‌) ನೀಡಿದ ಚಿಹ್ನೆಯ ಮೂಲಕ ಚಿನ್ನದ ಶುದ್ಧತೆಯನ್ನು ಪ್ರಮಾಣೀಕರಿಸಲಾಗುತ್ತದೆ. ಜತೆಗೆ ಈ ನಿಯಮದಡಿ ಸುಮಾರು ಶೇ. 40ರಷ್ಟು ಹಾಲ್‌ಮಾರ್ಕ್‌ ಇರುವ ಚಿನ್ನಾಭರಣಗಳನ್ನು ಗುರುತಿಸಲಾಗಿದೆ.

ಶಿಕ್ಷೆಯೂ ಇದೆ
2021ರ ಜನವರಿ 15ರಿಂದ ಕಡ್ಡಾಯವಾಗಲಿದ್ದು, ಈ ಒಂದು ವರ್ಷದೊಳಗೆ ಹಾಲ್‌ಮಾರ್ಕಿಂಗ್‌ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು. 14, 18 ಮತ್ತು 22 ಕ್ಯಾರೆಟ್‌ ಚಿನ್ನದ ಆಭರಣಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ನಿಯಮ ಉಲ್ಲಂಘಿಸಿದರೆ ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಟಾಪ್ ನ್ಯೂಸ್

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

2-

ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.