ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ಇಲಾಖೆ ಯತ್ನ

ಕೊನೆ ಸ್ಥಾನದಿಂದ ಮೊದಲ ಸ್ಥಾನಕ್ಕೆ ಬರಲು ಕ್ರಮ

Team Udayavani, Jan 16, 2020, 10:40 AM IST

16-January-1

ಶಹಾಬಾದ: ವಿದ್ಯಾರ್ಥಿಗಳಿಗೆ ಗಣಿತ ಕಬ್ಬಿಣದ ಕಡಲೆಯಲ್ಲ. ವಿಜ್ಞಾನ ವಿಷಯ ಮನನಕ್ಕೆ ಹಿಂಜರಿಯಬೇಕಿಲ್ಲ. ನಿಗದಿತ ಓದು ಮತ್ತು ಪ್ರಯತ್ನ ಯಶಸ್ಸಿಗೆ ದಾರಿ ಎನ್ನುವ ದೃಷ್ಟಿಕೋನದಡಿ ತಾಲೂಕು ಶಿಕ್ಷಣ ಇಲಾಖೆ ಎಸ್‌ಎಸ್‌ಎಲ್‌ಸಿಯಲ್ಲಿ ಜಿಲ್ಲೆಗೆ ಕೊನೆ ಸ್ಥಾನ ಪಡೆದುಕೊಂಡಿರುವ ತಾಲೂಕನ್ನು ಪ್ರಸಕ್ತ ಸಾಲಿನಲ್ಲಿ ಮೊದಲ ಸ್ಥಾನಕ್ಕೆ ತರಲು ಸಕಲ ಕ್ರಮ ಕೈಗೊಳ್ಳಲು ಮುಂದಾಗಿದೆ.

ಇಂತಹದ್ದೊಂದು ಪ್ರಯೋಗವನ್ನು ತಾಲೂಕು ಶಿಕ್ಷಣ ಇಲಾಖೆ ಈಗಾಗಲೇ ಚಿತ್ತಾಪುರ, ವಾಡಿ, ಕಾಳಗಿಯಲ್ಲಿ ನಡೆಸಿದ್ದು, ಕೊನೆಯದಾಗಿ ಶಹಾಬಾದ್‌ನ ಬಸವ ಸಮಿತಿ ಶಾಲೆ ಆವರಣದಲ್ಲಿ ಕಾರ್ಯಾಗಾರ ಆಯೋಜಿಸುವ ಮೂಲಕ ಮಕ್ಕಳು, ಶಾಲಾ ಆಡಳಿತ ಮಂಡಳಿ, ಶಿಕ್ಷಕರಿಂದ ಉತ್ತಮ ಪ್ರತಿಕ್ರಿಯೆಗೆ ಒಳಗಾಗಿದೆ.

ನಾಲ್ಕು ವಲಯ ಸೇರಿ ಸುಮಾರು 4500 ಸಂಖ್ಯೆಯಲ್ಲಿ ಬಂದಿದ್ದ ಮಕ್ಕಳಿಗೆ ವಿಜ್ಞಾನ ಮತ್ತು ಗಣಿತ ವಿಷಯಗಳ ಕುರಿತು ವಿಶೇಷ ವಿಷಯ ತಜ್ಞರಿಂದ ಓದುವುದು ಹೇಗೆ? ಪರೀಕ್ಷೆಗಳಲ್ಲಿ ಎಂತಹ ಪ್ರಶ್ನೆಗಳು ಕೇಳಬಹುದು? ಅದರ ತಯಾರಿ ಹೇಗೆ? ಯಾವ ಪಾಠಗಳ ಕಡೆ ಹೆಚ್ಚಿನ ಗಮನಹರಿಸುವುದು? ಸರಳವಾಗಿ ಬಿಡಿಸುವುದು ಸೇರಿದಂತೆ ಪ್ರೇರಣಾದಾಯಕವಾದ ಮಾತುಗಳನ್ನು ಹೇಳಿಕೊಟ್ಟಿದ್ದರಿಂದ ಮಕ್ಕಳು ಉಲ್ಲಾಸದಿಂದ ಕೇಳುತ್ತ ವಿಷಯ ತಜ್ಞರ ಸಲಹೆಗಳಿಗೆ ತಲೆಬಾಗುತ್ತಿರುವುದು ಕಂಡು ಬಂದಿತು.

ಸಂಪನ್ಮೂಲ ವ್ಯಕ್ತಿ ಅಶೋಕ ಕಾಬಾ, ಗಣಿತನ್ನು ಸರಳವಾಗಿ ಬಿಡಿಸುವ ಕಲೆಯನ್ನು ಹೇಳಿಕೊಟ್ಟಿದನ್ನು ನೋಡಿ ಮಕ್ಕಳು ಆನಂದ ಪಟ್ಟರಲ್ಲದೇ, ಈ ಲೆಕ್ಕ ಇಷ್ಟು ಸರಳವಾಗಿ ಬಿಡಿಸಬಹುದಾ ಎಂದು ಅಚ್ಚರಿಪಟ್ಟರು. ಅಲ್ಲದೇ ಇದನ್ನು ನಾನು ಬಿಡಿಸಬಲ್ಲೇ ಎಂದು ಧೈರ್ಯದಿಂದ ಹೇಳಿಕೊಳ್ಳುವ ಸನ್ನಿವೇಶಗಳು ಕಂಡುಬಂದವು.

ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಾದ ಶಿವಾನಂದ, ಜಮಾದಾರ ಅವರು ವಿಜ್ಞಾನ ವಿಷಯದ ಕುರಿತು ಮನಮುಟ್ಟವಂತೆ ಹೇಳಿಕೊಟ್ಟರು. ಅಲ್ಲದೇ ಇದಕ್ಕೆ ಸಂಬಂಧಿ ಸಿದ ಕೆಲವು ಪ್ರಯೋಗಗಳನ್ನು ಸ್ಥಳದಲ್ಲಿಯೇ ಮಾಡಿ ತೋರಿಸುವ ಮೂಲಕ ಮಕ್ಕಳನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಯೋಗಿಕವಾಗಿ ಮಕ್ಕಳಿಗೆ ತಿಳಿಸಬಹುದೆಂದು ತೋರಿಸಿಕೊಟ್ಟರು.

ಕಲಬುರಗಿ ಜಿಲ್ಲೆಯ ಹೆಸರಾಂತ ಸರ್ವಜ್ಞ ಸಂಸ್ಥೆ ಸಂಸ್ಥಾಪಕ ಚೆನ್ನಾರೆಡ್ಡಿ ಪಾಟೀಲ, ವಾಗ್ಮಿಗಳಾದ ಗುರುರಾಜ ಪಾಟೀಲ ಅವರಿಂದ ಪ್ರೇರಣಾದಾಯಕ ಮಾತುಗಳನ್ನು ಹೇಳಿಸಿ, ಮಕ್ಕಳ ಮನಸ್ಸಿನಲ್ಲಿ ಧೈರ್ಯ, ಉತ್ಸಾಹ ಮತ್ತು ಆತ್ಮಬಲ ತುಂಬುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡಿತು. ಒಟ್ಟಾರೆಯಾಗಿ ಮಕ್ಕಳಲ್ಲಿರುವ ಗೊಂದಲ, ಅನುಮಾನಗಳನ್ನು ಪರಿಹರಿಸಲಾಯಿತು. ಕಾರ್ಯಾಗಾರವನ್ನು ಜಸ್ಟಿಸ್‌ ಶಿವರಾಜ ಪಾಟೀಲ ಫೌಂಡೇಶನ್‌ ಸಹಕಾರದಿಂದ ನಡೆಸಲಾಗಿತ್ತು.

ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದರಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲೂ ಇನ್ನೂ ಉತ್ತಮ ರೀತಿಯಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಂಡು ಶಿಕ್ಷಣದ ಗುಣಮಟ್ಟ ಹೆಚ್ಚಿಸಲಾಗುವುದು ಎಂದು ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಡವಳಗಿ “ಉದಯವಾಣಿ’ಗೆ ತಿಳಿಸಿದರು.

ಸುಮಾರು ನಾಲ್ಕುವರೆ ಸಾವಿರ ಮಕ್ಕಳು ಕಾರ್ಯಾಗಾರದ ಉಪಯೋಗ
ಪಡೆದುಕೊಂಡಿದ್ದಾರೆ. ಇದು ಕೇವಲ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಿಸುವ
ಕಾರ್ಯಾಗಾರವಲ್ಲದೇ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಕಾರ್ಯಾಗಾರವಾಗಿದೆ. ಈ ಬಾರಿ ಉತ್ತಮ ಫಲಿತಾಂಶ ಬರಲಿದೆ.
ಶಂಕ್ರಮ್ಮ ಡವಳಗಿ,
ಕ್ಷೇತ್ರ ಶಿಕ್ಷಣಾಧಿಕಾರಿ, ಚಿತ್ತಾಪುರ

„ಮಲ್ಲಿನಾಥ ಪಾಟೀಲ

ಟಾಪ್ ನ್ಯೂಸ್

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು

Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು

priyank kharge

Kalaburagi: ಪುನರ್‌ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ

Priyank–Kharge

Waqf Notice Issue: ಬಿಜೆಪಿ- ಕಾಂಗ್ರೆಸ್‌ ನಾಯಕರಿಂದ ರಾಜಕೀಯ ವಾಕ್ಸಮರ

Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ

Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-wqqwewq

Australia ಗೆಲುವಿಗೆ ಕಮಿನ್ಸ್‌  ನೆರವು: ಪಾಕಿಸ್ಥಾನ 203; ಆಸೀಸ್‌  8 ವಿಕೆಟಿಗೆ 204

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.