ಕಾಡಿನ ಹುಡುಗನ ಕಾಡುವ ಕಥೆ

ಕಲಿವೀರನ ಆ್ಯಕ್ಷನ್‌ ಪ್ಯಾಕೇಜ್‌

Team Udayavani, Jan 17, 2020, 6:03 AM IST

an-20

ಕೆಲವರಿಗೆ ಪ್ರತಿಭೆ ಇರುತ್ತೆ. ಅವಕಾಶ ಇರಲ್ಲ. ಇನ್ನೂ ಕೆಲವರಿಗೆ ಅವಕಾಶ ಸಿಕ್ಕರೂ ಪ್ರತಿಭೆ ಮೂಲಕ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಲ್ಲೊಂದು ಚಿತ್ರತಂಡ ಪ್ರತಿಭಾವಂತನನ್ನು ಗುರುತಿಸಿ, ಆತನಿಗೊಂದು ವೇದಿಕೆ ಕಲ್ಪಿಸುವ ಮೂಲಕ ಚಿತ್ರದ ನಾಯಕನನ್ನಾಗಿಸಿದೆ. ಹೌದು, ಆ ಚಿತ್ರದ ಹೆಸರು “ಕಲಿವೀರ’. ಆ ಪ್ರತಿಭಾವಂತನ ಹೆಸರು ಚಂದ್ರಶೇಖರ್‌.

ಚಂದ್ರಶೇಖರ್‌ ಒಂದು ರೀತಿಯ ಆಧುನಿಕ ಏಕಲವ್ಯನಂತೆ ಎಲ್ಲಾ ಕಲೆಗಳಲ್ಲೂ ಪರಿಣಿತಿ ಹೊಂದಿದ್ದಾರೆ. ಅವರು ರಂಗಕರ್ಮಿ, ಡ್ಯಾನ್ಸ್‌, ಸ್ಟಂಟ್ಸ್‌, ಮಾರ್ಷಲ್‌ ಆರ್ಟ್ಸ್ ಸೇರಿದಂತೆ ಹಲವು ಕಲೆಗಳ ಪ್ರಾಕಾರಗಳನ್ನು ಕಲಿತಿದ್ದಾರೆ. ಸಾಕಷ್ಟು ಸಾಹಸಗಳ ವಿದ್ಯೆಯನ್ನು ಕಲಿತಿದ್ದಾರೆ. ಇವರ ಪ್ರತಿಭೆ ಗಮನಿಸಿದ ನಿರ್ದೇಶಕ ಅವಿನಾಶ್‌ ಭೂಷಣ್‌, “ಕಲಿವೀರ’ ಚಿತ್ರಕ್ಕೆ ಸರಿಹೊಂದುತ್ತಾರೆಂದು ಇವರನ್ನೇ ಹೀರೋ ಮಾಡಿದ್ದಾರೆ. ಇದೊಂದು ಆಕ್ಷನ್‌ ಚಿತ್ರ. ಅದರಲ್ಲೂ ಸಾಕಷ್ಟು ಕುತೂಹಲ ಹಾಗೂ ಹಾಸ್ಯದೊಂದಿಗೆ ಸಾಗುವ ಚಿತ್ರ. ಬಹುತೇಕ ಹೊಸತನ ತುಂಬಿರುವ ಕಥೆಯಲ್ಲಿ ಹಲವು ಏರಿಳಿತಗಳಿವೆ. ರಿಯಲ್‌ ಲೈಫ‌ಲ್ಲೂ ತನ್ನವರು ಯಾರೂ ಇಲ್ಲದಿರುವ ಹೀರೋ, ಚಿತ್ರದಲ್ಲೂ ಅನಾಥರಾಗಿರುವ ಪಾತ್ರ ಮಾಡಿದ್ದಾರೆ. ಅವರು ಕಾಡೊಂದರಲ್ಲಿ ವಾಸಿಸುವ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣ ಮುಗಿದಿದ್ದು, ಪ್ರೇಕ್ಷಕರ ಎದುರು ಬರಲು ತಯಾರಿ ನಡೆಸುತ್ತಿದೆ ಚಿತ್ರತಂಡ.

ಚಿತ್ರಕ್ಕೆ ಡಿಫ‌ರೆಂಟ್‌ ಡ್ಯಾನಿ ಸ್ಟಂಟ್ಸ್‌ ಮಾಡಿಸಿದ್ದಾರೆ. ಅವರ ಮೂರು ದಶಕಗಳ ಅನುಭವದಲ್ಲಿ ಸುಮಾರು 600 ಚಿತ್ರಗಳಿಗೆ ಸ್ಟಂಟ್‌ ಮಾಡಿಸಿದ್ದಾರೆ. ಈ ಚಿತ್ರದ ಹೀರೋ ಮಾಡುವ ಸಾಹಸ ಕಂಡು ಖುಷಿಯಲ್ಲೇ ಅವರಿಗೆ ಬಾಳೆಕಾಯಿ ಮಂಡಿ, ಸುರಿಯೋ ಮಳೆ, ಬೆಂಕಿ ಹಾಗೂ ಕಲರಿ ಕಲೆಗಳೊಂದಿಗೆ ಭರ್ಜರಿ ಫೈಟ್ಸ್‌ ಮಾಡಿಸಿದ್ದಾರಂತೆ.

ಚಿತ್ರಕ್ಕೆ ಚಿರಶ್ರೀ ಅಂಚನ್‌ ನಾಯಕಿಯಾಗಿದ್ದಾರೆ. ಪಾವನ ಗೌಡ ಅವರಿಲ್ಲಿ ಲಾಯರ್‌ ಆಗಿ ಕಾಣಿಸಿಕೊಂಡರೆ, ನೀನಾಸಂ ಅಶ್ವತ್ಥ್ ಅವರಿಲ್ಲಿ ನೆಗೆಟಿವ್‌ ಶೇಡ್‌ ಇರುವ ಪೊಲೀಸ್‌ ಅಧಿಕಾರಿ ಪಾತ್ರ ಮಾಡಿದ್ದಾರೆ. ತಬಲನಾಣಿಗೂ ಇಲ್ಲೊಂದು ವಿಶೇಷ ಪಾತ್ರವಿದೆಯಂತೆ. ದಾಂಡೇಲಿ ಸುತ್ತಮುತ್ತಲಿರುವ ಅರಣ್ಯ ಪ್ರದೇಶಗಳು, ಶಿವಮೊಗ್ಗ, ಕನಕಪುರ, ಬೆಂಗಳೂರು ಹಾಗೂ ಮುತ್ತತ್ತಿ ಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ.

ವಿ.ಮನೋಹರ್‌ ಸಂಗೀತವಿದೆ. ನಾಗೇಂದ್ರಪ್ರಸಾದ್‌, ಅರಸು ಅಂತಾರೆ ಗೀತೆ ರಚಿಸಿದ್ದಾರೆ. ಹಾಲೇಶ್‌ ಛಾಯಾಗ್ರಹಣ ಮಾಡಿದರೆ, ಎ.ಆರ್‌.ಕೃಷ್ಣ ಸಂಕಲನ ಮಾಡಿದ್ದಾರೆ. ಮುರಳಿ ನೃತ್ಯ ಸಂಯೋಜಿಸಿದ್ದಾರೆ. ಅಂದಹಾಗೆ, ಪ್ರತಿಭಾವಂತ ಹುಡುಗನನ್ನು ನೋಡಿದ ರಾಣೆಬೆನ್ನೂರಿನ ಶ್ರೀನಿವಾಸ್‌ ಹಾಗು ಮೂವರು ಗೆಳೆಯರು ಜ್ಯೋತಿ

ಆರ್ಟ್ಸ್ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇವರೆಲ್ಲರಿಗು ಇದು ಮೊದಲ ಅನುಭವ. ಇತ್ತೀಚೆಗೆ ತಮ್ಮ ಚಿತ್ರದ ಕುರಿತು ಹೇಳಿಕೊಳ್ಳಲೆಂದೇ ಇಡೀ ಚಿತ್ರತಂಡ ಪತ್ರಕರ್ತರ ಎದುರು ಬಂದಿತ್ತು. ಎಲ್ಲವನ್ನೂ ಹೇಳಿಕೊಳ್ಳುವ ಮೂಲಕ ಹೊಸಬರ ಚಿತ್ರವನ್ನು ಬೆಂಬಲಿಸಿ ಎಂಬ ಮನವಿಯನ್ನು ಇಟ್ಟಿತು.

ಟಾಪ್ ನ್ಯೂಸ್

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.