ಬ್ಲ್ಯಾಕ್ ಕ್ಯಾಪ್ ಲಲನೆಯರು
Team Udayavani, Jan 17, 2020, 5:52 AM IST
ಇತ್ತೀಚಿನ ಹವಮಾನ ತೀರಾ ವಿಚಿತ್ರವೆನ್ನಬಹುದು. ಚಳಿಗಾಲವಾಗಿದ್ದರೂ ಸುಡುಬಿಸಿಲು ನೆತ್ತಿಯ ಮೇಲೆ ಮಂಜು ಹನಿಯುವ ಬದಲು ಬೆವರಲ್ಲಿಯೇ ಸ್ನಾನ ಮಾಡಿಸುವಂತಿರುತ್ತದೆ. ಹೊರಗೆ ಸುತ್ತಾಡಲೂ ತಲೆ ನೋವಿನ ಚಿಂತೆ ಕಾಡುತ್ತದೆ. ಹೀಗಿರುವಾಗಲೇ ಬಿಸಿಲಬೇಗೆಯಿಂದ ತಪ್ಪಿಸಿಕೊಳ್ಳಲು ಪರ್ಯಾಯ ಮಾರ್ಗದ ಕಡೆ ಸಹಜವಾಗಿಯೇ ನಮ್ಮ ಗಮನ ಇರಲೇ ಬೇಕಾಗುತ್ತದೆ. ಇಂತಹ ಆಲೋಚನೆ ಬಂದಾಗಲೇ ನೆನಪಿಗೆ ಬರುವುದು ಬ್ಲ್ಯಾಕ್ ಕ್ಯಾಪ್. ಈ ಬ್ಲ್ಯಾಕ್ ಕ್ಯಾಪ್ ಇತ್ತೀಚೆಗೆ ಟ್ರೇಂಡ್ ಆಗಿದ್ದರೂ ಹಿಂದಿನ ಕಾಲದ ಸಿನೆಮಾಗಳಲ್ಲಿ ಇದರ ವಿನ್ಯಾಸ ಕಂಡಾಗ ಇದು ಎಷ್ಟು ಹಳೆಯದು ಎಂಬುವುದು ನೆನಪಿಗೆ ಬರುತ್ತದೆ.
ಬ್ಯಾಕ್ ಕ್ಯಾಪ್ ಯಾಕೆ?
ಯಾವುದೇ ಬಣ್ಣದ ಡ್ರೇಸ್‌ಗೆ ಸಹಜವಾಗಿ ಹೊಂದಿಕೊಂಡು ಸುಂದರತೆಯೊಂದಿಗೆ ಚರ್ಮದ ರಕ್ಷಣೆಗೂ ಪಯುಕ್ತವಾಗಿದೆ.
ಯಾವುದರೊಂದಿಗೆ ಸೂಕ್ತ?
ಬ್ಲ್ಯಾಕ್ ಹ್ಯಾಟ್ ಕೇವಲ ಬಿಸಿಲಿನಿಂದ ಮಾತ್ರ ನಮ್ಮನ್ನು ರಕ್ಷಿಸಲು ಬಳಸದೇ ಮಾಡರ್ನ್ ರೂಪದಲ್ಲಿ ಕಾಣಲೂ ಇದು ಸಹಾಯಕವಾಗಿದೆ. ಆ ಕಾರಣದಿಂದಲೇ ರ್‍ಯಾಂಪ್‌ವಾಕ್‌ನಲ್ಲಿ, ಫ್ಯಾಷನ್ ಶೋನಲ್ಲಿ ಇದೊಂದು ಹವಾ ಮೂಡಿಸಿದೆ ಎಂದರೂ ತಪ್ಪಾಗಲಾರದು. ಸಾಮಾನ್ಯ ಸ್ಪೋರ್ಟ್ಸ್ ಡ್ರೆಸ್‌ನಲ್ಲಿಯೂ ಇದು ಒಂದು ಟ್ರೆಂಡ್ ಆಗಿದೆ. ಕ್ರಾಪ್ ಟಾಪ್ ಜತೆ ರೌಂಡ್ ಇಯರಿಂಗ್ ಧರಿಸಿ ಸಿಂಪಲ್ ಮೇಕಪ್‌ನೊಂದಿಗೆ ಲೈಟ್ ಕಲರ್ ಪಿಂಕ್ ಲಿಫ್ಟಿಕ್ ಬ್ಲ್ಯಾಕ್ ಹ್ಯಾಟ್ ಗೆ ಪಫೇìಕ್ಟ್ ಮ್ಯಾಚಿಂಗ್ ಎನ್ನಬಹುದು. ಇದರೊಂದಿಗೆ ಮಿನಿ ಸ್ಕರ್ಟ್, ಥ್ರಿ ಫೋರ್ಥ್ ಝೀನ್ಸ್ ಪ್ಯಾಂಟ್ ವಿತ್ ವೈಟ್ ಶರ್ಟ್ ಗೂ ಬ್ಲ್ಯಾಕ್ ಹ್ಯಾಟ್ ಮ್ಯಾಚಿಂಗ್ ಆಗುತ್ತದೆ.
ಹೇಗಿರಲಿ ಮೇಕ್ ಅಪ್?
ಹ್ಯಾಟ್‌ಗೂ ಮೇಕಪ್ ಗೂ ಸಂಬಂಧವಿದೆಯೇ ಎಂದು ಕಡೆಗಣಿಸದಿರಿ. ಯಾವುದೇ ಟ್ರೆಂಡ್ ಆದರೂ ಉತ್ತಮ ಲುಕ್ ದೊರಕಲು ಮೇಕಪ್ ಟಚ್ ಇರಲೇ ಬೇಕಾಗುತ್ತದೆ. ವೈಟ್ ಮಿನಿಸ್ಕರ್ಟ್ ನೊಂದಿಗೆ ಬ್ಲ್ಯಾಕ್ ಹ್ಯಾಟ್ ಸೂಪರ್ ಕಾಂಬಿನೇಷನ್ ಆಗಿದೆ ಸ್ಕರ್ಟ್ ಧರಿಸುವಾಗ ಹಿಲ್ಡ್ ಚಪ್ಪಲಿಯೂ ಕೂಡ ಸ್ಟೈಲ್ ಲುಕ್ ನೀಡಲು ಸಹಕಾರಿಯಾಗಿದೆ. ನೀವು ಫ್ಯಾಷನ್ ಶೋನಲ್ಲಿ ಬ್ಯಾಕ್ ಕ್ಯಾಪ್ ತೊಡುವಂತಿದ್ದರೆ ಡಾರ್ಕ್ ಲಿಫ್ಟಿಕ್ ಹಾಕಿಕೊಳ್ಳಬೇಕು. ಐಲೈನರ್ ದಪ್ಪಗೆ ಹಾಕಿಕೊಳ್ಳುವುದರಿಂದ ಹ್ಯಾಟ್ ಮರೆಯಲ್ಲಿ ಕಣ್ಣಿನ ಅಂದವು ಚೆನ್ನಾಗಿಕಾಣಲೂ ಸಾಧ್ಯ.
ಈಗಿನ ಟ್ರೆಂಡ್:
ಈಗಿನ ಟ್ರೆಂಡ್‌ನಲ್ಲಿ ನೆಟೆಡ್ ಬ್ಲ್ಯಾಕ್ ಹ್ಯಾಟ್ ಬಹುತೇಕರಿಗೆ ಫೇವರೆಟ್ ಎನ್ನಬಹುದು. ಇದರೊಂದಿಗೆ ಪುಲ್ಲಿಂಗ್ ಹ್ಯಾಟ್ ಆರಾಮದಾಯಕ ಅನುಭವವನ್ನು ಒದಗಿಸುತ್ತದೆ. ಸಿಂಪಲ್ ಬ್ಲ್ಯಾಕ್ ಹ್ಯಾಟ್ ಗೆ ವೈಟ್ ಫ್ಲವರ್ ಇದ್ದು ಒಂದೆರಡು ಗರಿ ಅದುಗಿಟ್ಟರೆ ಪಾರ್ಟಿ ನಲ್ಲಿ ಧರಿ ಸುವಾಗ ಸ್ಮಾರ್ಟ್ ಲುಕ್‌ನಲ್ಲಿ ನೀವು ಕಂಗೊಳಿಸಬಹುದು. ಡೆನಿಮ್ ಬ್ಲ್ಯಾಕ್ ಹ್ಯಾಟ್ ಶೈನಿ ಲುಕ್ ನೊಂದಿಗೆ ಡೆನಿಮ್ ಬಟ್ಟೆ ಚರ್ಮದ ಆರೈಕೆಯನ್ನು ಕೂಡ ಮಾಡುತ್ತದೆ. ಫ್ಲ್ಯಾಟ್ ಬ್ಲ್ಯಾಕ್ ಹ್ಯಾಟ್ ಮಾಡರ್ನ್ ಲುಕ್‌ನಲ್ಲಿ ನಳನೆಯರು ಕಂಗೊಳಿಸಲು ನೆರವಾಗಿದ್ದು ಕಾಲೇಜು ಬೆಡಗಿ ಯರ ನೆಚ್ಚಿನ ಹ್ಯಾಟ್ ಇದಾಗಿದೆ.
– ರಾಧಿಕಾ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.