ಚಿತ್ತಾಕರ್ಷಕ ನೃತ್ಯ ರೂಪಕ “ಶ್ರೀಕೃಷ್ಣ ಸಂದರ್ಶನಂ’

ಸೃಷ್ಟಿ ನೃತ್ಯ ಕಲಾ ಕುಟೀರ ಪ್ರಸ್ತುತಿ

Team Udayavani, Jan 17, 2020, 1:33 AM IST

an-52

ಶ್ರೀ ಕೃಷ್ಣನ ಲೀಲಾಮೃತಗಳನ್ನು ಪ್ರಚುರಪಡಿಸುವ ಉದ್ದೇಶದಿಂದ “ಶ್ರೀಕೃಷ್ಣ ಸಂದರ್ಶನಂ’ ನೃತ್ಯ ರೂಪಕವನ್ನು ರಚಿಸಿ ಪ್ರಸ್ತುತಪಡಿಸಲಾಗಿದೆ. ಈ ನೃತ್ಯ ರೂಪಕದಲ್ಲಿ ಶ್ರೀ ಕೃಷ್ಣ ಪರಮಾತ್ಮನ ಜನನದಿಂದ ಹಿಡಿದು ಆತನ ವಿಶ್ವರೂಪ ದರ್ಶನದ ವರೆಗೆ ಹೆಣೆದು ಪ್ರಸ್ತುತಪಡಿಸಲಾಗಿದೆ.

ಶ್ರೀ ಕೃಷ್ಣಮಠ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ನಡೆದ ಶ್ರೀ ಕೃಷ್ಣ ತುಲಾಭಾರ ಮಹೋತ್ಸವ ಪ್ರಯುಕ್ತ ವಿಶೇಷ ಲೈಟಿಂಗ್‌, ಸೆಟ್ಟಿಂಗ್ಸ್‌, ಎಲ್‌ಸಿಡಿ ವೀಡಿಯೋ ಗ್ರಾಫಿಕ್ಸ್‌ ತಂತ್ರಜ್ಞಾನದೊಂದಿಗೆ ಉಡುಪಿಯಲ್ಲಿ ಪ್ರಥಮ ಬಾರಿಗೆ ಉಡುಪಿಯ ಸೃಷ್ಟಿ ನೃತ್ಯ ಕಲಾ ಕುಟೀರದವರಿಂದ ಪ್ರಸ್ತುತಿಗೊಂಡ “ಶ್ರೀಕೃಷ್ಣ ಸಂದರ್ಶನಂ’ ನೃತ್ಯ ರೂಪಕ ಚಿತ್ತಾಕರ್ಷಕವಾಗಿ ಮೂಡಿಬಂದಿದೆ.
ಶ್ರೀ ಕೃಷ್ಣನ ಲೀಲಾಮೃತಗಳನ್ನು ಪ್ರಚುರಪಡಿಸುವ ಉದ್ದೇಶದಿಂದ “ಶ್ರೀಕೃಷ್ಣ ಸಂದರ್ಶನಂ’ ನೃತ್ಯ ರೂಪಕವನ್ನು ರಚಿಸಿ ಪ್ರಸ್ತುತಪಡಿಸಲಾಗಿದೆ. ಈ ನೃತ್ಯ ರೂಪಕದಲ್ಲಿ ಶ್ರೀ ಕೃಷ್ಣ ಪರಮಾತ್ಮನ ಜನನದಿಂದ ಹಿಡಿದು ಆತನ ವಿಶ್ವರೂಪ ದರ್ಶನದ ವರೆಗೆ ಹೆಣೆದು ಪ್ರಸ್ತುತಪಡಿಸಲಾಗಿದೆ. ಮಧುರೆಯಲ್ಲಿ ಶ್ರೀ ಕೃಷ್ಣನ ಹುಟ್ಟು, ಶ್ರೀಕೃಷ್ಣನನ್ನು ಮಧುರೆಯಿಂದ ನಂದಗೋಕುಲಕ್ಕೆ ಕರೆದುಕೊಂಡು ಬರುವುದು, ಶ್ರೀಕೃಷ್ಣ ಬಾಲಲೀಲೆ, ಪೂತನಿ ಮೋಕ್ಷ, ಅಗಾಸುರ, ಬಕಾಸುರ, ತೃಣಾಬರ್ತಾ, ಶಕಟಾಸುರ ವಧೆ, ಕಾಳಿಂಗ ಮರ್ದನ, ಶ್ರೀಕೃಷ್ಣ ರಾಸಲೀಲೆ, ಗೋವರ್ಧನ ಗಿರಿ ಎತ್ತುವುದು, ಅಕ್ರೂರನಿಗೆ ದರ್ಶನ, ಚಾಣೂರ, ಮುಷ್ಟಿಕಾದಿ ರಾಕ್ಷಸರ ವಧೆ, ಕಂಸ ವಧೆ, ರುಕ್ಮಿಣಿ, ಸತ್ಯಭಾಮೆ, ಸಣ್ಮಹಿಷಿಯರೊಂದಿಗೆ ವಿವಾಹ, ಪಾರಿಜಾತ ವೃಕ್ಷದ ಕಥೆ, ಶ್ರೀಕೃಷ್ಣ ತುಲಾಭಾರ, ವಾದಿರಾಜರು ಬರೆದಿರುವಂತೆ ಉಡುಪಿಗೆ ಕೃಷ್ಣನ ವಿಗ್ರಹ ಬಂದ ಬಗೆ, ಮಧ್ವಾಚಾರ್ಯರಿಗೆ ಗೋಪಿಚಂದನದ ಉಂಡೆಯಲ್ಲಿ ಕೃಷ್ಣ ವಿಗ್ರಹ ಗೋಚರ, ಉಡುಪಿಯಲ್ಲಿ ಕೃಷ್ಣ ವಿಗ್ರಹದ ಪ್ರತಿಷ್ಠಾಪನೆ, ಪೂಜೆಗಾಗಿ ಅಷ್ಟಮಠಗಳನ್ನು ಸ್ಥಾಪಿಸಿ, ಪರ್ಯಾಯ ಪದ್ಧತಿಯಂತೆ ಪೂಜಾ ಕೈಂಕರ್ಯ ಹಾಗೂ ವಿಶ್ವರೂಪ ದರ್ಶನದೊಂದಿಗೆ ವಿಶಿಷ್ಟ ವೀಡಿಯೋ ಗ್ರಾಫಿಕ್ಸ್‌ ಮತ್ತು ಲೈಟಿಂಗ್ಸ್‌ಗಳೊಂದಿಗೆ ಸೃಷ್ಟಿ ಕಲಾಕುಟೀರದ ಚೌಷಷ್ಠಿ (64) ಕಲಾವಿದರಿಂದ ಪ್ರಸ್ತುತಿಗೊಂಡಿತು.

ಸಮಗ್ರ ತಂಡ
ನೃತ್ಯ ರೂಪಕಕ್ಕೆ ಕಥೆ ಮತ್ತು ಸಂಭಾಷಣೆಯಲ್ಲಿ ಡಾ| ಕೊರ್ಲಹಳ್ಳಿ ವೆಂಕಟೇಶ್‌ ಆಚಾರ್ಯ, ಸಾಹಿತ್ಯ ಕರ್ನಾಟಕ ಹರಿದಾಸರು, ರಾಗ ಸಂಯೋಜನೆ, ಚಿತ್ರಕತೆ, ನಿರ್ದೇಶನ ಹಾಗೂ ಸಂಗೀತ ನಿರ್ದೇಶನ ಡಾ| ವಿ|ಮಂಜರಿ ಚಂದ್ರ, ಧ್ವನಿಮುದ್ರಿತ ಹಿನ್ನೆಲೆ ಸಂಗೀತಕ್ಕೆ ಸಂಗೀತಾ ಬಾಲಚಂದ್ರ, ಅರುಣ್‌ ನಾಯಕ್‌ ಆತ್ರಾಡಿ ಅವರ ಹಾಡುಗಾರಿಕೆ, ಕಲಾಶ್ರೀ ಡಾ| ಹನುಮಂತರಾಜು ಮೈಸೂರು ಅವರ ಮೃದಂಗ, ನಿತೀಶ್‌ ಅಮ್ಮಣ್ಣಾಯರ ಕೊಳಲು ವಾದನ, ವಾಮನ್‌ ಕಾರ್ಕಳ ಅವರ ರಿದಂ ಪ್ಯಾಡ್‌ ಸಹಕರಿಸಿದ್ದರು.

ಸಪ್ತ ಕೃಷ್ಣರ ಸಮಾಗಮ
ನೃತ್ಯ ರೂಪಕದ ಬಹು ವಿಶೇಷತೆ ಎಂಬಂತೆ ಸಪ್ತ ಶ್ರೀಕೃಷ್ಣರಾಗಿ ಉಡುಪಿಯ ಸೃಷ್ಟಿ ನೃತ್ಯ ಕಲಾಕುಟೀರ ನಿರ್ದೇಶಕಿ ವಿದುಷಿ ಡಾ| ಮಂಜರಿ ಚಂದ್ರ, ಹರ್ಷ್‌, ಲಹರಿ, ಸ್ಮೆರಾ, ಹಿತಾ ಮಯ್ಯ, ಜಾನಕಿ, ಪನ್ನಗ ಅವರಿಂದ ಶ್ರೀಕೃಷ್ಣ, ಸಂಸ್ಥೆಯ ಹಿರಿಯ ಕಲಾವಿದೆಯರಾದ ವಿ| ಅಕ್ಷತಾ ಪವನ್‌ರಿಂದ ಸತ್ಯಭಾಮೆ, ವಿ| ಸ್ಮತಿ ರಾವ್‌ ಅವರಿಂದ ರುಕ್ಮಿಣಿ, ವಿ| ಅನನ್ಯಾ ಸಂದೀಪ್‌ರಿಂದ ದೇವಕಿ, ಕ್ಷಮಾ ರಾಕೇಶ್‌ರಿಂದ ಯಶೋಧೆ, ಮೇದಿನಿ ಆಚಾರ್ಯರಿಂದ ಕಂಸ, ಸುಮನಾ ಕಾರ್ತಿಕ್‌ರಿಂದ ಮುಷ್ಟಿಕ, ಶಿಶುಪಾಲ, ವಿ| ಜಿತೇಶ್‌ ಬಂಗೇರರಿಂದ ಅರ್ಜುನ, ಅನ್ವಿತಾರಿಂದ ವಸುದೇವ ಪಾತ್ರ ನಿರ್ವಹಿಸಲ್ಪಟ್ಟು ಸುಮಾರು ಒಂದುವರೆ ಗಂಟೆಗಳ ಕಾಲ ನೃತ್ಯ ರೂಪಕವು ವಿಶೇಷವಾಗಿ ಮೂಡಿ ಬಂದಿದೆ.

ಎಸ್‌ಜಿ. ನಾಯ್ಕ ಸಿದ್ದಾಪುರ

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.