ಸಂಭ್ರಮದ ಸಿದೇಶ್ವರ ದೇವರ ಜಾತ್ರೆ
Team Udayavani, Jan 17, 2020, 3:11 PM IST
ಕಾಗವಾಡ: ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಐನಾಪೂರ ಶ್ರೀ ಸಿದ್ಧೇಶ್ವರ ದೇವರ ಜಾತ್ರೆ ಪಲ್ಲಕ್ಕಿ ಉತ್ಸವ ಮಕರ ಸಂಕ್ರಮಣದ ನಿಮಿತ್ತ ಬುಧವಾರ ಜರುಗಿತು.
ದೇವರ ಭೇಟಿಯ ಸಂದರ್ಭದಲ್ಲಿ 11 ಗ್ರಾಮಗಳ ಪಲ್ಲಕ್ಕಿ ಉತ್ಸವದಲ್ಲಿ ಸಾವಿರಾರು ಭಕ್ತರು ಭಂಡಾರ ಹಾಗೂ ಖಾರಿಕ-ಕೊಬ್ಬರಿ, ಚಿಲ್ಲರೆ ಹಣ ದೇವರ ಪಾಲಿಕೆಗಳ ಮೇಲೆ ತೂರುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ದಕ್ಷಿಣ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಸಾವಿರಾರು ಜನರು ಸಾಗರೋಪಾದಿಯಲ್ಲಿ ಹರಿದು ಬಂದು ತಮ್ಮ ಹರಕೆ ತೀರಿಸಿ ಭಂಡಾರದಲ್ಲಿ ಮಿಂದೆದ್ದರು. ಶ್ರೀ ಸಿದ್ಧೇಶ್ವರ ದೇವರ ಪೂಜೆ ನೆರವೇರಿಸಿ ಅಭಿಷೇಕ, ಭಂಡಾರ ಪೂಜೆ, ನೈವೇದ್ಯ ಮಾಡಿದರು. ಬೆಳಗ್ಗೆ ಶ್ರೀ ಸಿದ್ಧೇಶ್ವರನಿಗೆ ಭಂಡಾರ ಪೂಜೆ, ಮಹಾಪೂಜೆ, ಅಭಿಷೇಕ, ನೈವೇದ್ಯ ನಡೆಯಿತು.
ನಂತರ ಕೃಷ್ಣಾ ನದಿಯಲ್ಲಿ 11 ಗ್ರಾಮಗಳ ವಿವಿಧ ದೇವರ ಗಂಗಾಜಲ ಅಭಿಷೇಕ ನೆರವೇರಿತು. ರಾಜುಗೌಡಾ ಪಾಟೀಲ, ಸುಭಾಷಗೌಡಾ ಪಾಟೀಲ, ಪ್ರಶಾಂತ ಅಪರಾಜ, ಅಣ್ಣಾಸಾಬ ಡೂಗನವರ, ಬಾಹುಬಲಿ ಕುಸನಾಳೆ, ಪ್ರಕಾಶಚಿನಗಿ, ಸುರೇಶ ಅಡಿಶೇರಿ, ಹನಮಂತ ಪೂಜಾರಿ, ಸೇರಿದಂತೆ ಅನೇಕರು ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.