ತುಂಡ್ ಹೈಕ್ಳ ಜಂಟಿ ಸಾಹಸ
ಚಿತ್ರ ವಿಮರ್ಶೆ
Team Udayavani, Jan 18, 2020, 7:03 AM IST
ಇಲ್ಲಿಯವರೆಗೆ ಸಂಭಾಷಣೆಕಾರನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮಂಜು ಮಾಂಡವ್ಯ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ “ಶ್ರೀ ಭರತ ಬಾಹುಬಲಿ’ ಚಿತ್ರ ಈ ವಾರ ತೆರೆಗೆ ಬಂದಿದೆ. ಅಂದಹಾಗೆ, ಚಿತ್ರದ ಹೆಸರು “ಶ್ರೀ ಭರತ ಬಾಹುಬಲಿ’ ಅಂತಿದ್ದರೂ, ಇತಿಹಾಸ-ಪುರಾಣಗಳಲ್ಲಿ ಬರುವ ಭರತ-ಬಾಹುಬಲಿಗೂ, ಈ ಚಿತ್ರದಲ್ಲಿರುವ ಭರತ-ಬಾಹುಬಲಿಗೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ನೋಡೋಕೆ ಸಿಗೋದು ಪಕ್ಕಾ ನಮ್ಮ-ನಿಮ್ಮ ನಡುವೆ ಇರುವ ಭರತ-ಬಾಹುಬಲಿ ಅನ್ನೋ ತುಂಡ್ ಹೈಕ್ಳು.
ಚಿಕ್ಕ ವಯಸ್ಸಿನಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕದಲ್ಲಿ ಕಳೆದು ಹೋಗುವ ಪುಟ್ಟ ಹುಡುಗಿ ಶ್ರೀ ವಿದೇಶಿ ದಂಪತಿಗಳ ಕೈಗೆ ಸಿಕ್ಕು ವಿದೇಶ ಸೇರಿಕೊಳ್ಳುತ್ತಾಳೆ. ಅಲ್ಲೆ ಬೆಳೆದು ದೊಡ್ಡವಳಾಗುವ ಶ್ರೀಗೆ ಪದೇ ಪದೇ ಬೀಳುವ ಕನಸೊಂದು ಆಕೆಯನ್ನು ನಿಜ ಜೀವನದಲ್ಲಿ ಮತ್ತೆ ತನ್ನ ಹೆತ್ತವರನ್ನು ಹುಡುಕಿಕೊಂಡು ಭಾರತಕ್ಕೆ ಬರುವಂತೆ ಮಾಡುತ್ತದೆ. ಮತ್ತೂಂದೆಡೆ ಹಳ್ಳಿಯಲ್ಲಿ ಅವರಿವರಿಗೆ ಟೋಪಿ ಹಾಕಿಕೊಂಡು ಆರಾಮಾಗಿ ಓಡಾಡಿಕೊಂಡಿರುವ ಭರತ, ಬಾಹುಬಲಿ ಅನ್ನೋ ತುಂಡ್ ಹೈಕ್ಳು ಈ ಹುಡುಗಿಯ ಕಣ್ಣಿಗೆ ಬೀಳುತ್ತಾರೆ.
ಈ ಹುಡುಗರನ್ನು ಬಳಸಿಕೊಂಡು ಶ್ರೀ ತನ್ನ ಪೋಷಕರನ್ನು ಹುಡುಕಲು ಯಶಸ್ವಿಯಾಗುತ್ತಾಳಾ? ಶ್ರೀ ಹೆತ್ತವರ ಹುಡುಕಾಟದಲ್ಲಿ ಭರತ-ಬಾಹುಬಲಿಯ ಪಾತ್ರವೇನು ಅನ್ನೋದೆ “ಶ್ರೀ ಭರತ ಬಾಹುಬಲಿ’ ಚಿತ್ರದ ಕಥೆ. ಅದೆಲ್ಲವನ್ನೂ ಒಂದಷ್ಟು ಕಮರ್ಶಿಯಲ್ ಅಂಶಗಳನ್ನು ಇಟ್ಟುಕೊಂಡು ತೆರೆಮೇಲೆ ತಂದಿದೆ ನಿರ್ದೇಶಕ ಮಂಜು ಮಾಂಡವ್ಯ ಆ್ಯಂಡ್ ಟೀಮ್. ಚಿತ್ರದ ಹೆಸರೇಹೇಳುವಂತೆ ಶ್ರೀ, ಭರತ ಮತ್ತು ಬಾಹುಬಲಿ ಅನ್ನೋ ಮೂರು ಪಾತ್ರಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ.
ಚಿತ್ರದ ಮೊದಲರ್ಧ ಒಂದಷ್ಟು ತರಲೆ, ಅನಪೇಕ್ಷಿತ ಹಾಸ್ಯ ದೃಶ್ಯಗಳು ಚಿತ್ರದ ವೇಗಕ್ಕೆ ಅಲ್ಲಲ್ಲಿ ಬ್ರೇಕ್ ಹಾಕುತ್ತ ಸಾಗುವುದರಿಂದ ಅಷ್ಟಾಗಿ ಮನಸ್ಸಿನಲ್ಲಿ ಉಳಿಯುವುದಿಲ್ಲ. ಆದರೆ ದ್ವಿತಿಯಾರ್ಧದ ನಂತರ ಚಿತ್ರಕಥೆ ಒಂದಷ್ಟು ಗಂಭೀ ರವಾಗಿ ನೋಡುಗರನ್ನು ಹಿಡಿದು ಕೂರಿಸುತ್ತದೆ. ನಿರ್ದೇಶಕರು ಮೊದ ಲರ್ಧದ ನಿರೂಪಣೆ ಕೊಂಚ ಬಿಗಿಯಾಗಿಸಿದ್ದರೆ, ಚಿತ್ರ ನೋಡುಗರಿಗೆ ಇನ್ನಷ್ಟು ಪರಿಣಾಮಕಾರಿ ಯಾಗುವ ಸಾಧ್ಯತೆಗಳಿದ್ದವು.
ಇನ್ನು ಮೊದಲ ಬಾರಿಗೆ ನಾಯಕನಾಗಿ ಬೆಳ್ಳಿತೆರೆಗೆ ಅಡಿಯಿಟ್ಟಿರುವ ಮಂಜು ಮಾಂಡವ್ಯ ನಿರ್ದೇಶನ ಮತ್ತು ನಟನೆ ಎರಡನ್ನೂ ಸಮಾನವಾಗಿ ನಿರ್ವಹಿಸಿದ್ದಾರೆ. ಚಿತ್ರದ ದ್ವಿತಿಯಾರ್ಧ ಮಂಜು ಮಾಂಡವ್ಯ ಮತ್ತು ನಾಯಕಿ ಸಾರಾ ಹರೀಶ್ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್ ಆಗಿದೆ. ನೋಡುಗರಿಗೆ ಚಿಕ್ಕಣ್ಣ ಕಾಮಿಡಿ ನಿರೀಕ್ಷಿತ ಮಜಾ ಕೊಡುವುದು ಕಷ್ಟ. ಉಳಿದಂತೆ ಚಿತ್ರದ ಇತರ ಕಲಾವಿದರು ನಿರ್ದೇಶಕರ ಅಣತಿಯಂತೆ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ.
ಚಿತ್ರದ ಛಾಯಾಗ್ರಹಣ, ಸಂಕಲನ ತೆರೆಮೇಲೆ ಚಿತ್ರದ ಅಂದವನ್ನು ಹೆಚ್ಚಿಸಿವೆ. ಮಣಿಕಾಂತ್ ಕದ್ರಿ ಸಂಗೀತದ ಎರಡು ಹಾಡುಗಳು ತಲೆದೂಗುವಂತಿವೆ. ಒಟ್ಟಾರೆ ಕೆಲವೊಂದು ತರ್ಕಗಳನ್ನು ಬದಿಗಿಟ್ಟು ನೋಡುವುದಾದರೆ, ಲವ್, ಕಾಮಿಡಿ, ಸೆಂಟಿಮೆಂಟ್, ಐಟಂ ಡ್ಯಾನ್ಸ್ ಹೀಗೆ ಎಲ್ಲ ಕಮರ್ಶಿಯಲ್ ಎಲಿಮೆಂಟ್ಸ್‌ನ್ನು ಇಟ್ಟುಕೊಂಡು ಬಂದಿರುವ “ಶ್ರೀ ಭರತ ಬಾಹುಬಲಿ’ಯಿಂದ ಕನಿಷ್ಟ ಮನರಂಜನೆಗೆ ಖಾತ್ರಿ ಎನ್ನಲು ಅಡ್ಡಿಯಿಲ್ಲ.
ಚಿತ್ರ: ಶ್ರೀ ಭರತ ಬಾಹುಬಲಿ
ನಿರ್ಮಾಣ: ಐಶ್ವರ್ಯ ಪ್ರೊಡಕ್ಷನ್ಸ್
ನಿರ್ದೇಶನ: ಮಂಜು ಮಾಂಡವ್ಯ
ತಾರಾಗಣ: ಮಂಜು ಮಾಂಡವ್ಯ, ಚಿಕ್ಕಣ್ಣ, ಸಾರಾ ಹರೀಶ್, ಶ್ರೀನಿವಾಸ ಮೂರ್ತಿ, ಭವ್ಯಾ, ಹರೀಶ್ ರಾಯ್, ಸೇತುರಾಮ್ ಮತ್ತಿತರರು
* ಜಿ.ಎಸ್ ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.