ಹೂಗಳ ರಾಶಿಯಿಂದ ಕಂಗೊಳಿಸಿದ ದರ್ಬಾರ್ ವೇದಿಕೆ
Team Udayavani, Jan 18, 2020, 12:32 AM IST
ಉಡುಪಿ: ಬಣ್ಣ ಬಣ್ಣದ ಸಾವಿರಾರು ಹೂವು ಹಾಗೂ ಹಸಿರು ಸಿರಿಯ ಎಲೆಗಳನ್ನು ಸೇರಿಸಿ ರಾಜಾಂಗಣದಲ್ಲಿ ನಿರ್ಮಿಸಲಾದ ಅದಮಾರು ಮಠದ ದರ್ಬಾರ್ ವೇದಿಕೆ ಸಂಪೂರ್ಣವಾಗಿ ದೇಸೀ ಕಲಾತ್ಮಕತೆಯಿಂದ ಕೂಡಿದ್ದು ಕಣ್ಮನ ಸೆಳೆಯುತ್ತಿದೆ. ವೇದಿಕೆಯಲ್ಲಿ ಎಲ್ಲಿಯೂ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ಅವಕಾಶ ನೀಡಿಲ್ಲ.
ಜಾಜಿ, ಕಾಡು ಮಲ್ಲಿಗೆ, ಗೊಂಡೆ, ಲಿಲ್ಲಿ, ಡೇಲಿಯಾ, ಗುಲಾಬಿ, ಕೆಂಪು ಹಾಗೂ ಹಳದಿ ಕಣಗಿಲೆ, ಸೇವಂತಿಗೆ, ಸಿಂಗಾರ, ಗುಲಾಬಿ ಜತೆಗೆ ಸೇರಿಸಿ ಕೂಡಿದ ಹಸಿರು ಎಲೆಗಳಿಂದ ಕಂಗೊಳಿಸುತ್ತಿರುವ ವೇದಿಕೆ ಆಕರ್ಷಕವಾಗಿದೆ. ತೆಂಗಿನ ಗರಿ, ಅಡಿಕೆ, ಕೆಂದಾಳೆ ಸೀಯಾಳದ ಸಾಲು ವೇದಿಕೆ ಅಂದಕ್ಕೆ ಸಾಂಪ್ರದಾಯಿಕ ಮೆರುಗು ನೀಡಿದೆ.
ಸೆಲ್ಫಿ ಕ್ರೇಜ್
ನೈಸರ್ಗಿಕ ಹೂವಿನ ಪರಿಮಳ ಮಠದ ಪರಿಸರದಲ್ಲಿ ಜನರನ್ನು ಆಕರ್ಷಿಸುತ್ತಿದೆ. ಮಠಕ್ಕೆ ಬಂದ ಭಕ್ತರು ದರ್ಬಾರ್ ವೇದಿಕೆಯ ಆಲಂಕಾರವನ್ನು ತಮ್ಮ ಮೊಬೈಲ್‌ಗಳಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡು ಬಂದಿತ್ತು. ರಾಜಾಂಗಣದಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ ಕೃಷ್ಣ ಪ್ರಸಾದ ಸ್ವೀಕರಿಸುವ ಭಕ್ತರು ದರ್ಬಾರ್ ವೇದಿಕೆ ಅಲಂಕಾರವನ್ನು ನೋಡಿ ಆನಂದಿಸುತ್ತಿರುವ ದೃಶ್ಯ ಕಂಡು ಬಂತು.
ಅನುಭವಿ ತಂಡ
ವೇದಿಕೆಯನ್ನು ನಿರ್ಮಾಣಕ್ಕೆ ಪಡುಬಿದ್ರಿಯ ರಾಘವೇಂದ್ರ ಬೈಲ ನೇತೃತ್ವದ 50 ಜನರ ತಂಡ ಜ. 17ರ ಬೆಳಗ್ಗೆಯಿಂದ ಜ. 18ರ ಬೆಳಗ್ಗೆವರೆಗೆ ಅಲಂಕಾರವನ್ನು ನಡೆಸಲಿದೆ. ಈ ತಂಡ ಪಲಿಮಾರು ಪರ್ಯಾಯ ಸೇರಿದಂತೆ ಒಟ್ಟು 10 ಪರ್ಯಾಯದ ದರ್ಬಾರ್ ವೇದಿಕೆ ನಿರ್ಮಿಸಿದೆ.
ಸಾಂಪ್ರದಾಯಿಕ ಶೈಲಿ
ದರ್ಬಾರ್ ವೇದಿಕೆ ಹಾಗೂ ರಾಜಾಂಗಣ ಆವರಣವನ್ನು ಬುಡಕಟ್ಟು ಜನರ ಸಾಂಪ್ರಾದಾಯಿಕ ಶೈಲಿ ನಿರ್ಮಿಸಲಾಗಿದೆ. ಕಾರ್ಕಳ ಮಾಳದ ಶ್ರೀನಿವಾಸ ಮತ್ತವರ ತಂಡ ಇದರ ನೇತೃತ್ವ ವಹಿಸಿಕೊಂಡಿದೆ. ಸುಮಾರು 250 ಹೆಚ್ಚು ತೆಂಗಿನ ಗರಿಗಳಿಂದ ಹಣೆದ ಮಡಿಲು, ಸಿರಿ ಗರಿ ಬಳಿಸಿ ವಿವಿಧ ಕಲಾಕೃತಿ ರಚಿಸಿ ರಾಜಾಂಗಣವನ್ನು ಸಿಂಗರಿಸಿದ್ದಾರೆ.
3.5 ಲ.ರೂ. ಹೂವುಗಳು
ದರ್ಬಾರ್ ವೇದಿಕೆಯ ನಿರ್ಮಾಣ ಕೂಡ ಸಾಂಪ್ರದಾಯಿಕ ಶೈಲಿಯಲ್ಲಿ ರೂಪುಗೊಂಡಿದೆ. ತುಮಕೂರು, ಶಿವಮೊಗ್ಗ, ಬೆಂಗಳೂರಿನಿಂದ ತರಿಸಿದ ಸುಮಾರು 3.5 ಲ.ರೂ. ಹೂವು ಹಾಗೂ ಸ್ಥಳೀಯವಾಗಿ 250ಕ್ಕೂ ಅಧಿಕ ಸೀಯಾಳ, 50,000 ಅಡಿಕೆಯಿಂದ ಅಲಂಕರಿಸಲಾಗಿದೆ. ಇವುಗಳನ್ನು ಅದಮಾರು ಮಠ, ಕೃಷ್ಣ ಮಠ ಹಾಗೂ ರಾಜಾಂಗಣದ ದರ್ಬಾರ್ ವೇದಿಕೆಯ ಸಿಂಗಾರಕ್ಕೆ ಬಳಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
5 ವರ್ಷದ ಬಾಲಕಿ ಮೇಲೆ ಅತ್ಯಾಚಾ*ರ; ಆರೋಪಿ ಆತ್ಮಹ*ತ್ಯೆ
Hanur: ಮಾದಪ್ಪನ ಬೆಟ್ಟದಲ್ಲಿ ಉರುಳು ಸೇವೆ ವೇಳೆ ಹೃದಯಾಘಾತಕ್ಕೆ ಭಕ್ತ ಸಾವು
Chamarajanagara: ಹನೂರಲ್ಲಿ ಕಾಡಾನೆ ದಾಳಿಗೆ ಒಬ್ಬ ಸಾವು, ಮತ್ತೊಬ್ಬನಿಗೆ ಗಾಯ
Madikeri: ಸೋಲಾರ್ ಅಂಗಡಿಯಿಂದ 2.16 ಲಕ್ಷ ರೂ. ಕಳವು: ಆರೋಪಿ ಬಂಧನ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ