ಶ್ರೀಕೃಷ್ಣ ಮಠ: 730 ದಿನಗಳ ಅಖಂಡ ಭಜನೆ ಸಮಾಪನ
ಪಲಿಮಾರು ಶ್ರೀಗಳ ಅದ್ಭುತ ಸೇವೆ; ಗಿನ್ನೆಸ್ ದಾಖಲಾರ್ಹ
Team Udayavani, Jan 18, 2020, 1:33 AM IST
ಶ್ರೀ ಪಲಿಮಾರು ಶ್ರೀಪಾದರು ಶುಕ್ರವಾರ ದ್ವಿತೀಯ ಪರ್ಯಾಯದ ಕೊನೆಯ ಮಹಾಪೂಜೆ ನಡೆಸಿದರು.
ಉಡುಪಿ: ಎರಡು ವರ್ಷ ಅಂದರೆ 730 ದಿನಗಳ ಕಾಲ ಅನುಕ್ಷಣವೂ ಶ್ರೀಕೃಷ್ಣನ ಸನ್ನಿಧಿಯಲ್ಲಿ ನಡೆದ ಗೋವಿಂದನಾಮ ಸ್ಮರಣೆ ಜ. 18ರ ಪ್ರಾತಃಕಾಲ ಸಮಾಪನಗೊಳ್ಳುತ್ತಿದೆ. 2 ವರ್ಷ ಅನುದಿನವೂ ನಡೆದ ಲಕ್ಷತುಳಸೀ ಅರ್ಚನೆ ಮತ್ತು ಲಕ್ಷ ವಿಷ್ಣುಸಹಸ್ರನಾಮಾರ್ಚನೆ ಜ. 17ರಂದು ಮುಕ್ತಾಯಗೊಂಡಿದೆ. ಇಂತಹ ಅದ್ಭುತ ಸೇವೆ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಸಂದಂತಾಗಿದೆ. ಗಿನ್ನೆಸ್ ದಾಖಲೆಗೆ ಸೇರುವಂಥದ್ದಾದರೂ ಅಂಥ ಪ್ರಯತ್ನ ನಡೆದಿಲ್ಲ.
ದಿನಕ್ಕೆ 6 ಭಜನ ಮಂಡಳಿಗಳೆಂದು ಲೆಕ್ಕ ಹಾಕಿದರೆ ಎರಡು ವರ್ಷಗಳಲ್ಲಿ 8,7ಚ60 ಮಂಡಳಿಗಳು ಭಾಗವಹಿಸಿ ದಂತಾಯಿತು. 2 ದಿನಗಳಿಗೊಮ್ಮೆ 6 ಮಂಡಳಿಗಳೆಂದು ಲೆಕ್ಕ ಹಾಕಿದರೆ 4,380 ತಂಡಗಳು ಭಾಗವಹಿಸಿದಂತಾಗುತ್ತದೆ. ಸರಾಸರಿ 20 ಜನರನ್ನು ಲೆಕ್ಕ ಹಾಕಿದರೆ 8,760 ತಂಡಗಳಲ್ಲಿ 1.75 ಲಕ್ಷಕ್ಕೂ ಹೆಚ್ಚು ಸದಸ್ಯರು ಶ್ರೀಕೃಷ್ಣನ ಸನ್ನಿಧಿಯಲ್ಲಿ ಭಜಿಸಿದಂತಾಗುತ್ತದೆ. ಒಮ್ಮೆ ಒಂದು ಪಾಳಿಯಲ್ಲಿ ಭಾಗವಹಿಸಿದವರನ್ನು ಗಣಿಸಿದರೆ ಭಜಕರ ಸಂಖ್ಯೆ 2 ಲಕ್ಷವನ್ನೂ ಮೀರಲಿದೆ.
ಇಷ್ಟೊಂದು ಸಂಖ್ಯೆಯ ಭಜನ ಮಂಡಳಿಗಳನ್ನು ಒದಗಿಸಿದವರು ತಿರುಪತಿ ಮತ್ತು ಮಂತ್ರಾಲಯದ ದಾಸ ಸಾಹಿತ್ಯ ಪ್ರಾಜೆಕ್ಟ್ ಹಾಗೂ ಉಡುಪಿ ಜಿಲ್ಲಾ ಭಜನ ಮಂಡಳಿಗಳ ಒಕ್ಕೂಟದವರು. ಅಖಂಡ ಭಜನೆಯಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ವಿವಿಧ ಜಾತಿಯವರು ಪಾಲ್ಗೊಂಡರು. ಹುಬ್ಬಳ್ಳಿ, ಆಂಧ್ರಪ್ರದೇಶದ ಕೌತಾಳಂನಿಂದ ಮುಸ್ಲಿಮರೂ ಬಂದು ದಾಸರ ಹಾಡುಗಳನ್ನು ಹಾಡಿ ಕೃಷ್ಣಾರ್ಪಣಗೊಳಿಸಿದರು.
ಇದರ ಸಂಪೂರ್ಣ ಸಮನ್ವಯಕಾರರಾಗಿದ್ದ ವರು ದಾವಣಗೆರೆಯ ನಿವೃತ್ತ ಎಂಜಿನಿಯರ್ ಕಂಪ್ಲಿ ಗುರುರಾಜ ಆಚಾರ್ಯ ಮತ್ತು ಪತ್ನಿ ಗೀತಾ ಗುರುರಾಜಾ ಚಾರ್ಯ. ಇವರು 2 ವರ್ಷ ಮನೆ ಬಿಟ್ಟು ಇಲ್ಲಿದ್ದು ಕಾರ್ಯನಿರ್ವಹಿಸಿದ್ದಾರೆ.
ನಿತ್ಯ ಲಕ್ಷಾರ್ಚನೆ
2018ರ ಜ. 18ರಂದು ಆರಂಭಗೊಂಡ ಲಕ್ಷ ತುಳಸೀ ಅರ್ಚನೆ 2020ರ ಜ. 17ರಂದು ಮುಕ್ತಾಯಗೊಂಡಿದೆ. ಇದು ಲಕ್ಷ ತುಳಸೀ ಅರ್ಚನೆ ಎಂದು ಪ್ರಸಿದ್ಧವಾದರೂ ಇದರೊಳಗೆ ಲಕ್ಷ ನಾಮ ಅರ್ಚನೆಯೂ ಸೇರಿಕೊಂಡಿತ್ತು.
50 ವೈದಿಕರು ವಿಷ್ಣುಸಹಸ್ರನಾಮವನ್ನು ಎರಡು ಬಾರಿ ಹೇಳಿದರೆ ಲಕ್ಷ ಸಲವಾಗುತ್ತದೆ. 108 ನಾಮಗಳು ಶ್ರೀಕೃಷ್ಣಾಷ್ಟೋತ್ತರದ ಶತನಾಮಾವಳಿಗಳು ಪ್ರತ್ಯೇಕ. 60 ವೈದಿಕರನ್ನು ನಿಗದಿಪಡಿಸಿದ್ದರು. ಇದಲ್ಲದೆ 10-15 ಜನರು ಸ್ವಯಂ ಇಚ್ಛೆಯಿಂದ ಸೇರಿದ್ದರಿಂದ ಒಟ್ಟಾರೆ ಲಕ್ಷಕ್ಕಿಂತ ಹೆಚ್ಚು ಬಾರಿ ವಿಷ್ಣು ಸಹಸ್ರನಾಮದ ಉಚ್ಚಾರಣೆ ನಡೆಯಿತು. ಇದರ ಸಂಪೂರ್ಣ ಜವಾಬ್ದಾರಿ ನಿರ್ವಹಿಸಿದವರು ಮುಂಬಯಿಯ ಪುರೋಹಿತರೂ ಜ್ಯೋತಿಷಿಗಳೂ ಆದ ಎಂ.ಪಿ. ಗುರುರಾಜ ಉಪಾಧ್ಯಾಯ ಮತ್ತು ಉಡುಪಿಯ ಪೂರ್ಣಚಂದ್ರ ಉಪಾಧ್ಯಾಯ ಅವರು.
ಎದ್ದು ನಿಂತ ತುಳಸೀವನಗಳು
ನಾನಾ ಕಡೆಗಳಲ್ಲಿ ತುಳಸೀ ವನಗಳು ನಿರ್ಮಾಣಗೊಂಡು ತುಳಸಿಪತ್ರಗಳು ಅವಿರತವಾಗಿ ಪೂರೈಕೆಯಾದವು. ಅರ್ಚನೆ ಯಾದ ತುಳಸಿ ಕುಡಿಗಳು ಪ್ರಸಾದ ರೂಪದಲ್ಲಿ ವಿನಿಯೋಗವಾದ ಬಳಿಕ ಉಳಿದುದನ್ನು ಉದ್ಯಾವರ ಕುತ್ಪಾಡಿಯ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಔಷಧ ತಯಾರಿಗಾಗಿ ಬಳಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.