ಅತಿಕ್ರಮಣ ತೆರವು ಭರವಸೆ ಪ್ರತಿಭಟನೆ ವಾಪಸ್
Team Udayavani, Jan 18, 2020, 12:52 PM IST
ಮುಗಳಖೋಡ: ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಪಟ್ಟಣದ ಸಕಾರಿ ಗೋಮಾಳ 147 ಎಕರೆ ಜಮೀನು ಅಳತೆ ಮಾಡಿ ಅತಿಕ್ರಮಣ ತೆರವುಗೊಳಿಸುವ ಚಿಕ್ಕೋಡಿ ವಿಭಾಗಾಧಿಕಾರಿ ಭರವಸೆ ಮೇರೆಗೆ ಇಲ್ಲಿ ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹ ಹಿಂಪಡೆಯಲಾಯಿತು.
ಇಲ್ಲಿಯ ಪುರಸಭೆ ಆವರಣದಲ್ಲಿ ಸರ್ಕಾರಿ ಗೋಮಾಳ ಅತಿಕ್ರಮಣ ತೆರವುಗೊಳಿಸಿ ಸರ್ಕಾರದಿಂದ ಪಟ್ಟಣಕ್ಕೆ ಬೇಕಾದ ಬಸ್ ತಂಗುದಾಣ, ಉಪ ಪೊಲೀಸ್ ಠಾಣೆ, ಸಮುದಾಯ ಆರೋಗ್ಯ ಕೇಂದ್ರಕ್ಕೆ ಆವರಣ ಗೋಡೆ, ಹಾಗೂ ಇನ್ನಿತರ ಮೂಲ ಸೌಕರ್ಯಕ್ಕೆ ಅವಶ್ಯ ಜಾಗ ನಿಗದಿಪಡಿಸುವಂತೆ ಆಮರಣ ಉಪವಾಸ ಕೈಕೊಂಡ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಸರಕಾರಿ ಆಸ್ತಿ ನಮ್ಮ ಆಸ್ತಿಯಾಗಿದ್ದು, ಅದರ ಸಂಪೂರ್ಣ ಮಾಹಿತಿ ಪಡೆದು ಸೂಕ್ತ ಬಂದೋಬಸ್ತ್ ಏರ್ಪಡಿಸಿ ಒಂದು ತಿಂಗಳಲ್ಲಿ ಈ ಕಾರ್ಯ ಪೂರ್ತಿ ಮಾಡಲಾಗುವುದು. ತಾವು ಈ ಆಮರಣ ಉಪವಾಸ ಕೈಬಿಟ್ಟು ಸಹಕರಿಸಬೇಕು ಎಂದರು.
ಉಪವಾಸ ನಿರತ ಸುರೇಶ ಹೊಸಪೇಟಿ, ಭೀಮಪ್ಪ ಬನಶಂಕರಿ, ಹಾಗೂ ಇತರರು ಮಾತನಾಡಿ, ಒಂದು ತಿಂಗಳಲ್ಲಿ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಉಪವಾಸದಿಂದ ಹಿಂದೆ ಸರಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ, ಕಂದಾಯ ಅಧಿಕಾರಿಗಳಾದ ದಾನ್ನೋಳ್ಳಿ, ಸಿದ್ದು ಹತ್ತರಗಿ, ಪುರಸಭೆ ಮುಖ್ಯಾಧಿಕಾರಿಜಿ.ಬಿ.ಡಂಭಳ, ಉಪವಾಸ ನಿರತ ಪುರಸಭೆ ಸದಸ್ಯರಾದ ವಿಠuಲ ಯಡವಣ್ಣವರ, ಮಹಾವೀರ ಕುರಾಡೆ, ಪದ್ಮಣ್ಣ ಕುರಾಡೆ, ಕರೆಪ್ಪಮಂಟೂರ, ಚಂದು ಗೌಲತ್ತನವರ, ಮುಖಂಡರಾದ ಹಣಮಂತ ಬಾಬಣ್ಣವರ, ಸುಖದೇವ ಕರಿಭೀಮಗೋಳ ಉಪಸ್ಥಿತರಿದ್ದರು.
ಹಾರೂಗೇರಿ ಪೊಲೀಸ್ ಠಾಣೆಯ ಪಿಎಸ್‌ಐ ಯಮನಪ್ಪ ಮಾಂಗ ಸೂಕ್ತ ಬಂದೋಬಸ್ ಕೈಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
Belagavi: ಗಾಂಧಿ ಭಾರತ ಹಿನ್ನೆಲೆ ಡಿ. 26, 27 ರಂದು ಕೆಲ ಶಾಲೆಗಳಿಗೆ ರಜೆ
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.