ಅಂಬೇಡ್ಕರ್ ಸಂವಿಧಾನ ಬರೆದಿರಬಹುದು, ಆದರೆ ಅವರ ಮೊಮ್ಮಗ ಸಂವಿಧಾನ ತಜ್ಞ ಅಲ್ಲ: ಕಾರಜೋಳ
Team Udayavani, Jan 18, 2020, 1:23 PM IST
ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕಾಂಗ್ರೆಸ್ ನಡವಳಿಕೆ ಆಶ್ಚರ್ಯ ಆಗಿದೆ, ನೆಹರೂ, ಇಂದಿರಾ ಗಾಂಧಿ, ರಾಜೀವ ಗಾಂಧಿ ಕಾಲದಲ್ಲಿಯೂ ಈ ಕಾಯ್ದೆ ಬಗ್ಗೆ ಚರ್ಚೆ ಆಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ವಾಜಪೇಯಿ ಕಾಲದಲ್ಲಿಯೂ ತಿದ್ದುಪಡಿ ಬಗ್ಗೆ ಚರ್ಚೆ ಆಗಿತ್ತು. ಆದರೆ ಪಾಸ್ ಆಗಿರಲಿಲ್ಲ, ಮನಮೋಹನ್ ಸಿಂಗ್ ಕಾಲದಲ್ಲಿಯೂ ಚರ್ಚೆ ಆದಾಗಲೂ ವಿರೋಧ ಮಾಡಿಲ್ಲ. ಇವತ್ತು ನರೇಂದ್ರ ಮೋದಿ, ಅಮಿತ್ ಶಾ ಕಾಲದಲ್ಲಿ ಕಾಯಿದೆ ಪಾಸ್ ಆಗಿದೆ. ಲೋಕಸಭೆಯಲ್ಲೇ ವಿರೋಧ ಆಗಿಲ್ಲ, ಪೌರತ್ವ ಬೇಡ ದೇಶ ಬೇಕು ಅಂದರೆ ಹೇಗೆ ಎಂದರು.
ಇನ್ನು ಪೌರತ್ವವೂ ಬೇಕು ದೇಶವೂ ಬೇಕು ಎಂದ ಅವರು, ಇಂದಿರಾ ಗಾಂಧಿ ಕಾಲದ ಬಾಂಗ್ಲಾ ನಿರಾಶ್ರಿತರು ದೇಶದಲ್ಲಿ ಇದ್ದಾರೆ. ಕಾಂಗ್ರೆಸ್ ನವರು ಯಾಕೆ ವಿರೋಧ ಮಾಡುತ್ತೇವೆ ಅಂತಾ ಹೇಳುತ್ತಿಲ್ಲ, ವೋಟ್ ಬ್ಯಾಂಕ್ ಕಳೆದು ಹೋಗುವ ಆತಂಕಕ್ಕೆ ಕಾಂಗ್ರೆಸ್ ಕಾಯ್ದೆಯನ್ನು ವಿರೋಧ ಮಾಡುತ್ತಿದೆ ಎಂದರು.
ಇನ್ನು ಡಾ. ಅಂಬೇಡ್ಕರ್ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಅವರು ಸಿಎಎಗೆ ವಿರೋಧ ತೋರಿರುವ ವಿಚಾರವಾಗಿ ಮಾತನಾಡಿ, ಅವರು ಸಂವಿಧಾನ ಬರೆದವರ ಮೊಮ್ಮಗ ಇರಬಹುದು, ಆದ್ರೆ ಅವರು ಸಂವಿಧಾನ ತಜ್ಞ ಅಲ್ಲ ಎಂದರು.
ನಂತರ ಹುಬ್ಬಳ್ಳಿಯಲ್ಲಿ ಅಮಿತ ಶಾ ಜೊತೆ ಸಚಿವ ಸಂಪುಟ ವಿಸ್ತರಣೆ ಚರ್ಚೆ ವಿಚಾರವಾಗಿ ಮಾತನಾಡಿ, ಸಚಿವ ಸಂಪುಟದ ಬಗ್ಗೆ ಚರ್ಚೆ ಆಗುತ್ತದೆ ಇಲ್ಲವೋ ಗೊತ್ತಿಲ್ಲ, ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಅವರು, ನಮ್ಮ ನಾಯಕ ಯಡಿಯೂರಪ್ಪನವರಿಗೆ ಅವಕಾಶ ಕೊಟ್ಟರೇ ಚರ್ಚೆ ಆಗುತ್ತದೆ ಎಂದರು.
ಯತ್ನಾಳ ಮತ್ತು ನಿರಾಣಿ ಮಧ್ಯದ ಮುಸುಕಿನ ಗುದ್ದಾಟ ವಿಚಾರವಾಗಿ ನೋ ಕಮೆಂಟ್ ಅಂತಾ ಪ್ರತಿಕ್ರಿಯಿಸಿದ ಕಾರಜೋಳ, ಯಾವ ಉದ್ದೇಶಕ್ಕೆ ಯತ್ನಾಳ ಹಾಗೆ ಹೇಳಿದ್ದಾರೆ ಎನ್ನುವುದನ್ನು ಯತ್ನಾಳ ಅವರನ್ನೇ ಕೇಳಿ ಎಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Udupi: ಟವರ್ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್ ದಾವೆ: ಸಂಸದ ಕೋಟ
Mangaluru: ಅಡಿಕೆ ಕ್ಯಾನ್ಸರ್ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.