ಗ್ರಾಪಂ ಎದುರೇ ಮೀನು ಮಾರಿ ಪ್ರತಿಭಟನೆ
Team Udayavani, Jan 18, 2020, 3:13 PM IST
ಭಟ್ಕಳ: ಶಿರಾಲಿ ಗ್ರಾಪಂ ವ್ಯಾಪ್ತಿ ಹೈಟೆಕ್ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುತ್ತಿರುವ ಮಹಿಳೆಯರು ಗ್ರಾಪಂ ಎದುರು ಮೀನು ಮಾರಾಟ ಮಾಡುವ ಮೂಲಕ ವಿಶಿಷ್ಟ ರೀತಿಯ ಪ್ರತಿಭಟನೆ ನಡೆಸಿದರು.
ಶಿರಾಲಿ ಗ್ರಾಪಂ ವ್ಯಾಪ್ತಿಯಲ್ಲಿ ಮೀನು ಮಾರಾಟಗಾರ ಮಹಿಳೆಯರಿಗಾಗಿಯೇ ಮೀನು ಮಾರುಕಟ್ಟೆಯಲ್ಲಿ ಕಟ್ಟಲಾಗಿದ್ದು ಬೇರೆ ಬೇರೆ ಕಡೆಗಳಲ್ಲಿ ಮೀನು ಮಾರಾಟ ಮಾಡುವವರು ಮನಸ್ಸಿಲ್ಲದಿದ್ದರೂ ಮಾರುಕಟ್ಟೆಯಲ್ಲಿಯೇ ಮೀನು ಮಾರಾಟ ಮಾಡುತ್ತಿರುವಾಗ ಗ್ರಾಪಂ ವತಿಯಿಂದ ಖಾಸಗಿ ವ್ಯಕ್ತಿಗೆ ಮೀನು ಮಾರುಕಟ್ಟೆ ಎದುರುಗಡೆಯೇ ಮೀನು ಮಾರಾಟಕ್ಕೆ ಪರವಾನಗಿ ನೀಡಿರುವುದನ್ನು ವಿರೋಧಿಸಿ ಗ್ರಾಪಂ ಎದುರು ಪ್ರತಿಭಟನಾರ್ಥ ಮೀನು ಮಾರಾಟ ನಡೆಸಿದರು.
ಮೀನುಗಾರ ಮಹಿಳೆಯರು ನಾವು ಮೀನು ಮಾರಾಟ ಮಾಡುವ ಮಾರುಕಟ್ಟೆ ಎದುರಿನಲ್ಲಿಯೇ ಖಾಸಗಿ ವ್ಯಕ್ತಿಗೆ ಮೀನು ಮಾರಾಟ ಮಾಡಲು ಗ್ರಾಪಂ ಪರವಾನಗಿ ನೀಡಿದ್ದರಿಂದ ನಮಗೆ ವ್ಯಾಪಾರವೇ ಇಲ್ಲವಾಗಿದೆ. ಸರಕಾರ ನಮ್ಮ ಅನುಕೂಲಕ್ಕಾಗಿ ಮಾರುಕಟ್ಟೆ ಕಟ್ಟಿದೆ, ಆದರೆ ಅದರ ದುರುಪಯೋಗ ಪಡೆದು ನಾವು ವ್ಯಾಪಾರವಿಲ್ಲದೆ ವಂಚಿತರಾಗುತ್ತಿದ್ದೇವೆ ಎಂದು ಆರೋಪಿಸಿದರು.
ಈ ಹಿಂದೆ ಗ್ರಾಪಂಗೆ ನಾವು ಖಾಸಗಿ ವ್ಯಕ್ತಿಗಳಿಗೆ ನೀಡಿದ ಪರವಾನಗಿ ರದ್ದು ಪಡಿಸುವಂತೆ ಕೋರಿದರೂ ಸಹ ರದ್ದು ಪಡಿಸಿಲ್ಲ. ನಮ್ಮ ವ್ಯಾಪಾರಕ್ಕೆ ಪೆಟ್ಟು ಬೀಳುತ್ತಿರುವುದರಿಂದ ನಾವು ತೊಂದರೆಯಲ್ಲಿದ್ದೇವೆ. ಗ್ರಾಪಂ ತಕ್ಷಣ ಕ್ರಮ ಕೈಗೊಂಡು ಅವರಿಗೆ ನೀಡಿದ ಪರವಾನಿಗೆ ರದ್ದು ಪಡಿಸದಿದ್ದಲ್ಲಿ ಇನ್ನೂ ಉಗ್ರ ಹೋರಾಟ ಅನಿವಾರ್ಯ ಎಂದರು. ಗ್ರಾಪಂ ಅಧ್ಯಕ್ಷ ವೆಂಕಟೇಶ ನಾಯ್ಕ ಖಾಸಗೀಯವರಿಗೆ ನೀಡಿದ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ನಂತರ ಗ್ರಾಪಂ ಎದುರು ಮೀನು ಮಾರಾಟ ಕೈಬಿಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.