ಪ್ರಶಸ್ತಿ ಗರಿ ಮುಡಿಗೇರಿಸಿಕೊಂಡ ಮೇಘನಾರಾಜ್
Team Udayavani, Jan 19, 2020, 4:43 AM IST
ಇತ್ತೀಚೆಗಷ್ಟೆ 2018ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ನಟಿ ಮೇಘನಾ ರಾಜ್ ಇರುವುದೆಲ್ಲವ ಬಿಟ್ಟು… ಚಿತ್ರದ ಅಭಿನಯಕ್ಕಾಗಿ 2018ನೇ ಸಾಲಿನ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಮದುವೆಯ ಬಳಿಕ ಮೇಘನಾ ರಾಜ್ ಅಭಿನಯಿಸಿದ್ದ ಈ ಚಿತ್ರದ ತಮ್ಮ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ಬಂದಿರುವುದಕ್ಕೆ ಮೇಘನಾ ರಾಜ್ ಕೂಡ ಫುಲ್ ಖುಷಿಯಾಗಿದ್ದಾರೆ.
ಈ ಬಗ್ಗೆ ಮಾತನಾಡುವ ಮೇಘನಾ ರಾಜ್, “ನನ್ನ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಬಂದಿದೆ ಎಂದಾಗ ಮೊದಲು ನಾನು ನಂಬಿರಲಿಲ್ಲ. ಅವಾರ್ಡ್ ಲಿಸ್ಟ್ ನೋಡಿದ ಮೇಲೆ ನಂಬಿಕೆ ಬಂತು. ಇರುವುದೆಲ್ಲವ ಬಿಟ್ಟು… ಸಿನಿಮಾದ ಆ ಪಾತ್ರವನ್ನು ಒಪ್ಪಿಕೊಳ್ಳಲು ಸುಮಾರು ನಾಲ್ಕೈದು ತಿಂಗಳು ಸಮಯ ತೆಗೆದುಕೊಂಡಿದ್ದೆ. ಯಾಕೆಂದರೆ, ತುಂಬ ಬೋಲ್ಡ್ ಆಗಿದ್ದ, ಜೊತೆಗೆ ಅಭಿನಯಕ್ಕೂ ಸಾಕಷ್ಟು ಸ್ಕೋಪ್ ಇದ್ದ ಪಾತ್ರವಾಗಿತ್ತು. ಆ ಥರದ ಪಾತ್ರ ಮಾಡಬೇಕೋ, ಬೇಡವೋ ಎಂಬ ಗೊಂದಲದಲ್ಲಿದ್ದೆ. ಕೊನೆಗೂ ನಿರ್ದೇಶಕರ ಒತ್ತಾಯದ ಮೇರೆಗೆ ಅಂಥದ್ದೊಂದು ಪಾತ್ರ ಮಾಡಲು ಒಪ್ಪಿಕೊಂಡೆ. ಈ ಚಿತ್ರದ ಮೇಲೆ ನನಗಿಂತಲೂ ನಿರ್ದೇಶಕರಿಗೆ ಸಾಕಷ್ಟು ನಂಬಿಕೆ ಯಿತ್ತು ಅನಿರೀಕ್ಷಿತ ವಾಗಿ ಇಷ್ಟೊಂದು ದೊಡ್ಡ ಪ್ರಶಸ್ತಿ ನನಗೆ ಬಂದಿರುವುದು ನಿಜಕ್ಕೂ ಹೊಸ ವರ್ಷದ ಆರಂಭದಲ್ಲಿ ಯೇ ನನಗೊಂದು ಬಿಗ್ ಸರ್‌ಪ್ರೈಸ್’ ಎನ್ನುತ್ತಾರೆ.
ಇನ್ನು ಮೇಘನಾ ರಾಜ್ ಕುಟುಂಬ ಮೊದಲಿನಿಂದಲೂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು, ಮೇಘನಾ ತಾಯಿ ಪ್ರಮೀಳಾ ಜೋಷಾಯ್ ಕೂಡ ರಾಜ್ಯ ಪ್ರಶಸ್ತಿ ವಿಜೇತೆ. ಮೇಘನಾ ತಂದೆ ನಟ ಸುಂದರ್‌ರಾಜ್ ಕೂಡ ಸುಮಾರು ನಾಲ್ಕು ದಶಕಗಳಿಂದ ರಂಗಭೂಮಿ ಮತ್ತು ಚಿತ್ರರಂಗ ಎರಡರಲ್ಲೂ ಸಕ್ರಿಯವಾಗಿ ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನವಾಗಿದ್ದಾರೆ.
2009ರಲ್ಲಿ ತೆರೆಕಂಡ ಪುಂಡ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾದ ಮೇಘನಾ ರಾಜ್, ಕನ್ನಡ ಚಿತ್ರರಂಗದಲ್ಲಿ ಸದ್ದಿಲ್ಲದೆ ಹತ್ತು ವರ್ಷಗಳ ಸಿನಿಜರ್ನಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ರಾಕಿಂಗ್ ಸ್ಟಾರ್‌ಯಶ್, ಧನಂಜಯ್, ಚೇತನ್, ವಿಜಯ ರಾಘವೇಂದ್ರ, ಶ್ರೀನಗರ ಕಿಟ್ಟಿ, ಲೂಸ್‌ಮಾದ ಯೋಗಿ- ಹೀಗೆ ಹಲವು ನಾಯಕ ನಟರ ಜೊತೆ ತೆರೆಹಂಚಿ ಕೊಂಡು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿರುವ ಮೇಘನಾಗೆ ಈ ಬಾರಿ ಪ್ರಕಟಗೊಂಡಿರುವ ರಾಜ್ಯ ಪ್ರಶಸ್ತಿ ಸಾಕಷ್ಟು ಮನ್ನಣೆ ತಂದುಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.