ಅಡಿಕೆ ಸುಲಿಯೋದು ಬಹಳ ಸುಲಭ


Team Udayavani, Jan 19, 2020, 5:56 AM IST

meg-17

ಕೂಲಿ ಕೆಲಸಕ್ಕೆ ಜನ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಹೆಚ್ಚಿನವರು ಅಡಿಕೆ ಕೃಷಿಗೆ ಗುಡ್‌ಬೈ ಹೇಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ರಾಮಚಂದ್ರ ಭಟ್ಟರು ಅಡಿಕೆ ಸುಲಿಯುವ ಹೊಸ ಯಂತ್ರವನ್ನು ತಯಾರಿಸಿದ್ದಾರೆ. ಈ ಯಂತ್ರ, ರಾಜ್ಯ, ನೆರೆ ರಾಜ್ಯಗಳ ರೈತರು ಮಾತ್ರವಲ್ಲ, ಶ್ರೀಲಂಕಾದ ಕೃಷಿಕರ ಮೆಚ್ಚುಗೆಗೂ ಪಾತ್ರವಾಗಿದೆ.

ಕೂಲಿಗೆ ಜನ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಅಡಿಕೆ ಬೆಳೆಯನ್ನೇ ನಂಬಿಕೊಂಡಿದ್ದ ಹಲವರು ಈಗ ಅಡಿಕೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೊರಗಿನ ಜನರ ನೆರವಿಲ್ಲದೆ ಮನೆಯವರೇ ನಿರ್ವಹಣೆ ಮಾಡಬಹುದಾದ ಯಂತ್ರಗಳನ್ನು ಶೋಧಿಸುವ ಮೂಲಕ, ಅಡಿಕೆ ಕೃಷಿಕರ ಪಾಲಿಗೆ ಆಪತ್ಕಾಲದ ನೆಂಟನಂತಾಗಿದ್ದಾರೆ ಸುಳ್ಯದ ರಾಮಚಂದ್ರ ಭಟ್ಟರು.

ಪಟ್ಟಣದಿಂದ ಅನತಿ ದೂರದ ಜಯನಗರದಲ್ಲಿದೆ ಅವರ ಮನೆ. ಭಟ್ಟರು ಕಂಡು ಹಿಡಿದಿರುವ ಒಣ ಅಡಿಕೆ ಸುಲಿಯುವ, ಕಾಳುಮೆಣಸು ಬೇರ್ಪಡಿಸುವ, ಕಾಂಪೋಸ್ಟ್‌ ಗೊಬ್ಬರದ ಸಲಕರಣೆಗಳನ್ನು ಹುಡಿ ಮಾಡುವ ಯಂತ್ರಗಳು. ರೈತರ ಮನದಲ್ಲಿ ಮಂದಹಾಸ ಮೂಡಿಸಿವೆ.

ಅಡಿಕೆ ಸುಲಿಯುವ ಯಂತ್ರವನ್ನು ಪರಿಷ್ಕರಿಸಬೇಕಿದ್ದರೆ ಇಪ್ಪತ್ತೆ„ದಕ್ಕಿಂತ ಹೆಚ್ಚು ಸಲ ಅದನ್ನು ತಯಾರಿಸಿ, ಪರಿಣಾಮಗಳನ್ನು ಗಮನಿಸಿ ಬದಲಾಯಿಸುತ್ತ ಹೋದ ಮೇಲೆ ಸುಧಾರಣೆ ಸಾಧ್ಯವಾಯಿತು ಎಂದು ತನ್ನ ಯಶೋಗಾಥೆಯನ್ನು ಬಿಚ್ಚಿಡುತ್ತಾರೆ ಭಟ್ಟರು. ಅರವತ್ತೆರಡರ ಹರಯದ ರಾಮಚಂದ್ರ ಭಟ್ಟರು ಕೃಷಿಕ ಮನೆಯ ಕುಡಿಯೇ ಆದರೂ, ಬಿ.ಕಾಂ. ಪದವೀಧರರಾಗಿ ಐಟಿಡಬ್ಲ್ಯುಎ ಕೋರ್ಸ್‌ ಮಾಡಲು ಮಂಗಳೂರು ಸೇರಿದ್ದರು. ಹಾಸ್ಟೆಲ್‌ ವಾಸ. ದಿನದಲ್ಲಿ ಮೂರು ತಾಸು ತರಗತಿ. ಅಲ್ಲಿ ಅವರ ಅಣ್ಣ ಶಂಕರ ಭಟ್ಟರಿಗೆ ವರ್ಕ್‌ ಶಾಪ್‌ ಇತ್ತು. ಅಲ್ಲಿ ಯಂತ್ರಗಳ ತಯಾರಿಕೆಯ ವಿಧಾನಗಳನ್ನು ನೋಡುತ್ತಿದ್ದ ರಾಮಚಂದ್ರ ಭಟ್ಟರ ಮನದೊಳಗೆ ಅಡಿಕೆ ಸುಲಿಯುವ ಪರಿಷ್ಕೃತ ಯಂತ್ರ ತಯಾರಿಕೆಯ ಕನಸು ಗರಿಗೆದರಿತು. ತಾಂತ್ರಿಕ ತರಬೇತಿ ಪಡೆಯದೆಯೇ ಸ್ವಂತ ಯೋಚನಾ ಶಕ್ತಿಯಿಂದ ಅದರಲ್ಲಿ ಬದಲಾವಣೆಗಳನ್ನು ಮಾಡುತ್ತ ಹೋದ ಫ‌ಲವಾಗಿ ಅತ್ಯುತ್ತಮದ್ದು ಎನ್ನಬಹುದಾದ ಅಡಿಕೆ ಸುಲಿಯುವ ಯಂತ್ರ ತಯಾರಿಸಲು ಅವರಿಗೆ ಸಾಧ್ಯವಾಗಿದೆ.

ಹೊರರಾಜ್ಯದಿಂದಲೂ ಬೇಡಿಕೆ
ಹೆಗ್ಗಳಿಕೆಯ ವಿಚಾರವೆಂದರೆ ಭಟ್ಟರ ಯಂತ್ರದ ವಿಷಯ ತಿಳಿದು ಶ್ರೀಲಂಕಾದಿಂದ ರೈತರು ಬಂದು ದುಂಬಾಲು ಬಿದ್ದು ಯಂತ್ರ ಮಾಡಿಸಿಕೊಂಡು ಹೋಗಿದ್ದಾರೆ. ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಗಳಿಂದಲೂ ರೈತರು ಯಂತ್ರವನ್ನು ಮಾಡಿಸಿಕೊಂಡು ಹೋಗಿ ಭಟ್ಟರ ಕಾರ್ಯವೈಖರಿಯನ್ನು ಹೊಗಳಿದ್ದಾರೆ. ಕಾಳುಮೆಣಸನ್ನು ಗೆರೆಗಳಿಂದ ಬೇರ್ಪಡಿಸುವ ಸರಳ ಯಂತ್ರವನ್ನೂ ಭಟ್ಟರು ತಯಾರಿಸಿದ್ದಾರೆ. ಅರ್ಧ ಅಶ್ವಶಕ್ತಿಯ ಯಂತ್ರದ ಮೂಲಕ ಕೆಲಸ ಮಾಡುವ ಈ ಯಂತ್ರದಲ್ಲಿ ಕಸ ಸಿಲುಕಿಕೊಂಡು ಯಂತ್ರದ ಕೆಲಸಕ್ಕೆ ತಡೆಯಾಗುವುದಿಲ್ಲ. ಹಣ್ಣಿನ ಸಿಪ್ಪೆ ಸುಲಿಯುವ ತೊಂದರೆಯಿಲ್ಲ. ಕಾಳು ಮತ್ತು ಕಸ ಪ್ರತ್ಯೇಕವಾಗಿ ಬೀಳುತ್ತದೆ. ಪೂರ್ಣವಾಗಿ ಸ್ಟೇನ್‌ಲೇಸ್‌ ಸ್ಟೀಲಿನ ದೇಹವಿರುವ ಯಂತ್ರದ ಡ್ರಮ್‌ ದೊಡ್ಡದಾಗಿದೆ. ತುಕ್ಕಿನ ಭಯವಿಲ್ಲ. ತಾಸಿಗೆ ಒಂದೂಕಾಲು ಕ್ವಿಂಟಾಲ್‌ ಕಾಳನ್ನು ಬೇರ್ಪಡಿಸಿ ಕೊಡುತ್ತದೆ. ಇದನ್ನು ಕೂಡ ತಯಾರಿಸಲು 18ರಿಂದ 30 ಸಾವಿರ ರೂ. ಬೇಕಾಯಿತೆಂಬುದು ಅವರ ವಿವರಣೆ.

7 ವರ್ಷಗಳ ಸತತ ಪರಿಶ್ರಮ
ಭಟ್ಟರ ಏಳು ವರ್ಷಗಳ ಸತತ ಪರಿಶ್ರಮದ ಫ‌ಲವಾಗಿ ಅಡಿಕೆ ಸುಲಿಯುವ ಯಂತ್ರ ರೂಪುಗೊಂಡಿದೆ. ಉಳಿದ ಯಂತ್ರಗಳಲ್ಲಿ ಅಡಿಕೆ ಸುಲಿಯುವಾಗ ಏಳುವ ವಿಪರೀತ ಧೂಳಿನ ಸಮಸ್ಯೆ ಇರುತ್ತಿತ್ತು. ಇದರಲ್ಲಿ ಹಾಗಿಲ್ಲ. ತೀರ ಮೃದುವಾದ ಅಡಿಕೆಯ ಹೊರತು ಇನ್ನಿತರ ಹುಡಿಯಾಗುವ ಸಮಸ್ಯೆಯೇ ಇಲ್ಲ. ಯಂತ್ರದೊಳಗೆ ಸಿಪ್ಪೆಯನ್ನು ಉಜ್ಜಲು ವಾಹನದ ಟೈರನ್ನು ಬಳಸಿದ ಕಾರಣ ಅಡಿಕೆಯ ಮೇಲೆ ರವೆಯಷ್ಟೂ ಕಲೆಗಳು ಬೀಳುವುದಿಲ್ಲ. ಸಿಪ್ಪೆ ಅಂಟಿಕೊಳ್ಳುವ ಪ್ರಸಂಗಗಳು ತೀರಾ ವಿರಳ. ಭಟ್ಟರು ಯಂತ್ರದಲ್ಲಿ ಮಾಡಿಕೊಂಡಿರುವ ಪರಿಷ್ಕರಣೆಯ ಫ‌ಲವಾಗಿ ತಾಸಿಗೆ 35ರಿಂದ 40 ಕಿಲೋ ಸುಲಿಯುವ ಯಂತ್ರದಿಂದ ಆರಂಭಿಸಿ ಮೂರೂವರೆ ಕ್ವಿಂಟಾಲಿನ ತನಕ ಸುಲಿಯಬಹುದು. ಸಣ್ಣ ಯಂತ್ರದ ತಯಾರಿಕೆಯ ವೆಚ್ಚ ಎಂಭತ್ತು ಸಾವಿರವಾದರೆ ದೊಡ್ಡದಕ್ಕೆ ಮೂರು ಲಕ್ಷವಾಗುತ್ತದೆ. ತಾಂತ್ರಿಕ ದೋಷಗಳು ಸಂಭವಿಸುವುದು ವಿರಳ. ಇದು ಅರ್ಧ ಅಥವಾ ಒಂದು ಅಶ್ವ ಶಕ್ತಿಯ ಯಂತ್ರವಾದುದರಿಂದ ವಿದ್ಯುತ್ಛಕ್ತಿಯ ಬಳಕೆಯೂ ಕಡಿಮೆ. ಇದೇ ಕಾರಣದಿಂದ ಹೆಂಗಸರಿಗೂ ಈ ಯಂತ್ರದ ನಿರ್ವಹಣೆ ಸುಲಭ.

ಎರಡು ಅಶ್ವ ಶಕ್ತಿ
ಎರೆಗೊಬ್ಬರ ಮತ್ತು ಕಾಂಪೋಸ್ಟ್‌ ತಯಾರಿಕೆಗೆ ಬೇಕಾಗುವ ತೆಂಗಿನ ಗರಿಗಳ ಕೊತ್ತಲಿಗೆ, ಅಡಿಕೆ ಹಾಳೆ, ತೆಂಗಿನ ಸಿಪ್ಪೆ ಇದನ್ನೆಲ್ಲ ಹುಡಿಯಾಗಿ ಗೋಧಿ ಹಿಟ್ಟಿನಂತೆ ಮಾಡಿಕೊಡಬಲ್ಲ ಯಂತ್ರವನ್ನೂ ಭಟ್ಟರು ನಿರ್ಮಿಸಿದ್ದಾರೆ. ಕಬ್ಬಿಣದ ಶಕ್ತಿಯುತವಾದ ಬ್ಲೇಡ್‌ ಮತ್ತು ಗುದ್ದಿ ಹುಡಿ ಮಾಡಲು ಬಲಯುತವಾದ ಹ್ಯಾಮರ್‌ ಅಳವಡಿಸಿರುವ ಯಂತ್ರ ಎರಡು ಅಶ್ವ ಶಕ್ತಿಯನ್ನು ಉಪಯೋಗಿಸುತ್ತದೆ. ಇದನ್ನು ತಯಾರಿಸಲು 45 ಸಾವಿರ ರೂಪಾಯಿ ಬೇಕಾಯಿತು ಎನ್ನುತ್ತಾರೆ ಅವರು. ಈ ಯಂತ್ರಗಳನ್ನು ಬಯಸಿದವರಿಗೆ ತಯಾರಿಸಿಕೊಡುತ್ತಾರೆ. ಈ ವರೆಗೆ, ಬಳಸಿದವರ ಮೊಗದ ತುಂಬಾ ತೃಪ್ತಿಯ ಹೂ ನಗು ಚೆಲ್ಲಿದೆ. ಬಳಸಲು ಸುಲಭ, ತಾಂತ್ರಿಕ ಸಮಸ್ಯೆಗಳು ವಿರಳವೆಂಬುದೇ ಅವರ ತಯಾರಿಕೆಯ ಹಿರಿಮೆ.

– ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Afro-Asia Cup after 2 decades?

Afro-Asia Cup: 2 ದಶಕಗಳ ಬಳಿಕ ಆಫ್ರೋ -ಏಷ್ಯಾ ಕಪ್‌?

jharkhand election: 7 guarantee from INDIA bloc

Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.

Lawrence Bishnoi T-Shirt Sale on Flipkart, Meesho

T-Shirt: ಫ್ಲಿಪ್‌ಕಾರ್ಟ್‌, ಮೀಶೋದಲ್ಲಿ ಲಾರೆನ್ಸ್‌ ಬಿಷ್ಣೋಯ್‌ ಟೀಶರ್ಟ್‌ ಮಾರಾಟ: ಆಕ್ರೋಶ

ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ

Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

Bid for 2036 Olympics: Official application from India to IOC

Olympics; 2036ರ ಒಲಿಂಪಿಕ್ಸ್‌ಗೆ ಬಿಡ್‌: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ

R.Ashok

Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್‌ ರಾಜೀನಾಮೆಗೆ ಬಿಜೆಪಿ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Afro-Asia Cup after 2 decades?

Afro-Asia Cup: 2 ದಶಕಗಳ ಬಳಿಕ ಆಫ್ರೋ -ಏಷ್ಯಾ ಕಪ್‌?

jharkhand election: 7 guarantee from INDIA bloc

Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.

Lawrence Bishnoi T-Shirt Sale on Flipkart, Meesho

T-Shirt: ಫ್ಲಿಪ್‌ಕಾರ್ಟ್‌, ಮೀಶೋದಲ್ಲಿ ಲಾರೆನ್ಸ್‌ ಬಿಷ್ಣೋಯ್‌ ಟೀಶರ್ಟ್‌ ಮಾರಾಟ: ಆಕ್ರೋಶ

Dina Bhavishya

Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ

ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ

Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.