ಗಮನ ಸೆಳೆದ ಇಸ್ರೇಲ್ ಮಾದರಿ
Team Udayavani, Jan 19, 2020, 10:58 AM IST
ಧಾರವಾಡ: ಹನಿ ನೀರನ್ನು ಪರಿಪೂರ್ಣವಾಗಿ ಬಳಸಿ, ನಿಗದಿತ ಸಮಯದಲ್ಲಿ ಅದನ್ನು ಹಣವಾಗಿ ಪರಿವರ್ತಿಸುವ ಕೃಷಿ ವಿಧಾನವನ್ನು ಜಗತ್ತಿಗೆ ಮಾದರಿಯಾಗಿ ಕೊಟ್ಟಿದ್ದು ಇಸ್ರೇಲ್ ದೇಶ. ಇಸ್ರೇಲ್ ಕೃಷಿ ಮಾದರಿ ಇದೀಗ ಸದಾ ಬರಗಾಲಕ್ಕೆ ತುತ್ತಾಗುವ ಉಕ ಭಾಗದ ರೈತರಿಗೂ ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಇದಕ್ಕೆ ಪೂರಕ ಎನ್ನುವಂತೆ ಕೃಷಿಮೇಳದಲ್ಲಿ ಇಸ್ರೇಲ್ ಕೃಷಿ ಮಾದರಿ ಪ್ರಾತ್ಯಕ್ಷಿಕೆ ನಿರ್ಮಿಸಿದ್ದು, ಹೆಚ್ಚು ರೈತರನ್ನು ಆಕರ್ಷಿಸುತ್ತಿದೆ. “ಪ್ರತಿ ಹನಿ-ಸಮೃದ್ಧ ತನಿ’ ಎಂಬಘೋಷವಾಕ್ಯದಲ್ಲಿ ನಡೆದಿರುವ ಈ ಸಲದ ಕೃಷಿ ಮೇಳದಲ್ಲಿ ಇಸ್ರೇಲ್ ಕೃಷಿ ಮಾದರಿಗಳು ಗಮನ ಸೆಳೆಯುತ್ತಿವೆ. ಎರಡೂವರೆ ಲಕ್ಷ ಹಾಗೂ 27 ಸಾವಿರ ಮೌಲ್ಯದ ಎರಡು ಯಂತ್ರಗಳ ತಂತ್ರಜ್ಞಾನದ ಬಗ್ಗೆ ಮೇಳದಲ್ಲಿ ಮಾಹಿತಿ ಲಭ್ಯವಿದ್ದು, ಈ ಮೂಲಕ ಶೇ.40 ರಿಂದ ಶೇ.60 ನೀರಿನ ಉಳಿತಾಯ ಆಗಲಿದೆ. ಇದಲ್ಲದೇ ಮೊಬೈಲ್ ಮೂಲಕವೇ ನಿಗದಿತ ಸಮಯಕ್ಕೆ ಸಂದೇಶಗಳ ರವಾನೆ ಮೂಲಕ ನೀರು ಹಾಯಿಸುವಿಕೆ ಆಗಲಿದೆ. ಈ ತಂತ್ರಜ್ಞಾನದ ಸಾಧನಗಳ ಮಾಹಿತಿಯ ಜೊತೆಗೆ ಅಡಿಕೆ, ಪೇರು, ಪಪ್ಪಾಯಿ, ಸಪೋಟ ಸೇರಿದಂತೆಎಲ್ಲ ಬೆಳೆಗಳಿಗೆ ಈ ತಂತ್ರಜ್ಞಾನ ಅಳವಡಿಸಿಕೊಳ್ಳಬಹುದಾಗಿದೆ.
ಅದರಲ್ಲೂ ಕಬ್ಬಿನ ಬೆಳೆಯಲ್ಲಿ ಶೇ.50ಕ್ಕೂ ಹೆಚ್ಚು ನೀರಿನ ಉಳಿತಾಯ ಆಗಲಿದೆ. ಹನಿ ನೀರಾವರಿ ಹಾಗೂ ತುಂತುರು ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆಯುವ ಕೃಷಿ ಬೆಳೆಗಳು, ಹೂ-ತೋಟದ ಬೆಳೆಗಳ ಪ್ರಾತ್ಯಕ್ಷಿತೆಗಳು ಇಲ್ಲಿವೆ. ಮನೆಯಲ್ಲಿ ಕುಳಿತೇ ಮೊಬೈಲ್ ಮೂಲಕ ಬೆಳೆಗಳಿಗೆ ನೀರು ಒದಗಿಸಬಹುದಾಗಿದೆ. ಯಾವ ಬೆಳೆಗೆ ಎಷ್ಟು ನೀರು ಎಂಬ ಮಾಹಿತಿ ಸಾಧನದಲ್ಲಿ ಅಳವಡಿಸಿದರೆ ಸಾಕು. ಅದಕ್ಕೆ ತಕ್ಕಂತೆ ನಿಗದಿತ ಸಮಯಕ್ಕೆ ನೀರು ಪೂರೈಸಲಿದೆ. ಬೆಳೆಗಳಿಗೆ ನೀರು ಕಡಿಮೆ ಮಾಡಲಾಗದು. ಆದರೆ ವ್ಯರ್ಥವಾಗುವ ನೀರನ್ನು ಉಳಿತಾಯ ಮಾಡಬಹುದು. ಇದಕ್ಕೆ ಸರಕಾರದಿಂದ ಶೇ.90ರಷ್ಟು ಸಬ್ಸಿಡಿ ಇದೆ ಎಂದು ಹೇಳುತ್ತಾರೆ ಬೇಸಾಯ ಶಾಸ್ತ್ರದ ತಜ್ಞ ಪ್ರೊ| ಶಶಿಧರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.