ಕೌಶಲ್ಯ ಅಭಿವೃದ್ಧಿಗೆ ಸಿಗಲಿದೆ ಹೊಸ ರೂಪ
ಅಸ್ಪೈರಿಂಗ್ ವುಮೆನ್ಸ್ ಅಸೋಸಿಯೇಶನ್‌ನಿಂದ ಅಭಿನಂದನೆ-ಸಂವಾದ ಕಾರ್ಯಕ್ರಮ
Team Udayavani, Jan 19, 2020, 4:38 PM IST
ಬೀದರ: ಉದ್ಯೋಗ ಕ್ಷೇತ್ರಕ್ಕೆ ಬೇಕಾಗಿರುವಂತಹ ಮಾನವ ಸಂಪನ್ಮೂಲ ನಿರ್ಮಾಣಕ್ಕೆ ಕೌಶಲ್ಯ ಅಭಿವೃದ್ಧಿ ಅವಶ್ಯಕವಾಗಿದೆ. ಈ ದಿಸೆಯಲ್ಲಿ ತಾಂತ್ರಿಕತೆಯ ಬದಲಾವಣೆಗೆ ತಕ್ಕಂತೆ ಕೌಶಲ್ಯ ಅಭಿವೃದ್ಧಿಗೆ ಹೊಸ ರೂಪ ಕೊಡಲಾಗುವುದು ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ರತ್ನಪ್ರಭಾ ಹೇಳಿದರು.
ನಗರದ ಎ.ಕೆ. ಕಾಂಟಿನೆಂಟಲ್ ಸಭಾಂಗಣದಲ್ಲಿ ಶನಿವಾರ ಅಸ್ಪೈರಿಂಗ್ ವುಮೆನ್ಸ್ ಅಸೋಸಿಯೇಶನ್ ಹಮ್ಮಿಕೊಂಡಿದ್ದ ಸಂವಾದ ಮತ್ತು ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಹಿಳೆಯರು ಇಂದಿಗೂ ಹಳೆ ಕಸುಬಿನ ಕೌಶಲ್ಯ ಹೊಂದಿದ್ದು, ನೂತನವಾಗಿ ಕೌಶಲ್ಯ ತರಬೇತಿ ರೂಪಿಸಿ ಜಾರಿಗೆ ತರಲಿದ್ದೇನೆ ಎಂದು ತಿಳಿಸಿದರು.
ಯುವಕ ಮತ್ತು ಯುವತಿಯರಿಗೆ ಕೌಶಲ್ಯ ತರಬೇತಿಗಳನ್ನು ನೀಡುವುದರೊಂದಿಗೆ ಸ್ವಾವಲಂಬಿಗಳಾಗಿ ಬಾಳುವಂತೆ ಮಾಡುವುದು ಮಹಿಳೆಯರಿಗೆ ಹೊಸ ಹೊಸ ವೃತ್ತಿ ಕೌಶಲ್ಯ ತರಬೇತಿಗಳನ್ನು ನೀಡುವುದರೊಂದಿಗೆ ನಿರುದ್ಯೋಗ ನಿವಾರಣೆ ಮಾಡುವುದು ಪ್ರಾಧಿಕಾರದ ಪ್ರಯತ್ನ ಆಗಲಿದೆ ಎಂದು ಹೇಳಿದರು.
ಸಹಾಯಕ ಆಯುಕ್ತರಾಗಿ ನಂತರ ಜಿಲ್ಲಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿರುವುದರಿಂದ ಇಂದಿಗೂ ಬೀದರ ಜತೆಗೆ ನಂಟು ಹೊಂದಿದ್ದೇನೆ. ಸೇವಾ ಅವಧಿಯಲ್ಲಿ ಜನರ ಸಮಸ್ಯೆಗಳನ್ನು ಅರಿತು ಸಾಕಷ್ಟು ವಿಷಯಗಳನ್ನು ಕಲಿಯುತ್ತಿದ್ದೆ. ಸಿಬ್ಬಂದಿಗಳ ಜೊತೆಗೂಡಿ ಪ್ರಗತಿ ಸಾಧಿ ಸಿರುವೆ. ಸಾಕ್ಷರತಾ ಆಂದೋಲನ ವ್ಯಾಪಕವಾಗಿ ನಡೆಸಿ ಮಹಿಲಾ ಸಾಕ್ಷರತೆ ಹೆಚ್ಚಳಕ್ಕೆ ಪ್ರಯತ್ನಿಸಲಾಗಿತ್ತು. ಗಡಿ ಗ್ರಾಮ ಚೊಂಡಿಮುಖೇಢ, ಗಣೇಪೂರದಲ್ಲಿ ಜನ ಸಂಪರ್ಕ ಸಭೆಗಳನ್ನು ನಡೆಸಿ ಜನರ ಮೆಚ್ಚುಗೆಗೆ ಪಾತ್ರಳಾಗಿದ್ದೆ. ಬೀದರ ಜನತೆ ಇಂದಿಗೂ ನನ್ನ ಮೇಲೆ ಪ್ರೀತಿ ಮತ್ತು ವಿಶ್ವಾಸ ಹೊಂದಿರುವುದು ಸಂತೋಷವಾಗುತ್ತದೆ ಎಂದ ಅವರು, ಬೀದರನಲ್ಲಿ ಕರ್ತವ್ಯ ಕುರಿತಂತೆ ಪುಸ್ತಕ ಬರೆದಿರುವುದಾಗಿ ತಿಳಿಸಿದರು.
ಸಂಸ್ಥೆಯ ಅಧ್ಯಕ್ಷೆ ರತ್ನಪ್ರಭಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಕೌಶಲ್ಯ ತರಬೇತಿಗಳನ್ನು ಆರಂಭಿಸಿ ನಿರುದ್ಯೋಗ ಸಮಸ್ಯೆ ನಿವಾರಿಸಬೇಕೆಂದು ಮನವಿ ಮಾಡಿದರು. ರಾಷ್ಟ್ರೀಯ ಗ್ರಾಮೀಣ ಜೀವನ ಗೋಪಾಲ ಮಿಷನ್ ನಿರ್ದೇಶಕಿ ಬಿ.ಎಂ. ಮಮತಾ ಮಾತನಾಡಿದರು. ಡಿಸಿಸಿ ಬ್ಯಾಂಕಿನ ಜಿ.ಎಂ. ವಿಠuಲರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಕಿರಣ ಪಾಟೀಲ ಹಕ್ಯಾಳ ಸ್ವಾಗತಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ವಿಜಯಕುಮಾರ ಪಾಟೀಲ ಗಾದಗಿ, ಚೆನ್ನಬಸಯ್ನಾ ಸ್ವಾಮಿ, ಸಂಸ್ಥೆಯ ಪದಾಧಿಕಾರಿಗಳಾದ ವಿಜಯಲಕ್ಷ್ಮೀ ಚೊಂಡೆ, ಸುನಿತಾ ಪಾಟೀಲ, ಅನಿತಾ ಜಾಬಾ, ಸುನೀತಾ ಬಸಂತಪೂರೆ, ಸುಮಾ ದಿಲೀಪಕುಮಾರ, ಪೂಜಾ ಪಾಟೀಲ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಕರವೇ ಸೇರಿದಂತೆ ವಿವಿಧ ಸಂಘಟನೆಗಳಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೌಶಲ್ಯ ಮತ್ತು ನಿರುದ್ಯೋಗಿ ಸಮಸ್ಯೆ ಕುರಿತು ಸಂವಾದ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Lawyer Jagadish: ಮತ್ತೆ ಬಿಗ್ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್ ಜಗದೀಶ್ ಎಂಟ್ರಿ..!
Bengaluru: 54 ಎಂಜಿನಿಯರಿಂಗ್ ಸೀಟ್ ಬ್ಲಾಕ್: ಕೆಇಎ ಶಂಕೆ
Hospitalised: ಚಂದ್ರಬಾಬು ನಾಯ್ಡು ಅವರ ಸಹೋದರನ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.