ಓ ನನ್ನ ಚೇತಕ್…ರಸ್ತೆಗಳಲ್ಲಿ ಮಿಂಚಿನ ಸಂಚಾರ
Team Udayavani, Jan 20, 2020, 5:01 AM IST
ಅಂತೂ ಇಂತೂ ರಸ್ತೆಗಿಳಿಯಿತು ಬಜಾಜ್ ಚೇತಕ್ ಎಲೆಕ್ಟ್ರಿಕ್. ಕಳೆದ ಒಂದು ವರ್ಷದಿಂದ ಜನರಲ್ಲಿ ನಿರೀಕ್ಷೆ ಹುಟ್ಟಿಸಿದ್ದ ಚೇತಕ್‌ನ ಹೊಸ ರೂಪ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈಗಾಗಲೇ ಆನ್‌ಲೈನ್ ಬುಕ್ಕಿಂಗ್ ಕೂಡಾ ಶುರುವಾಗಿದೆ.
ಅಂತೂ ಇಂತೂ ಹಳೇ ಬಜಾಜ್ ಚೇತಕ್ ಹಳೇ ಗಾಡಿ, ಹೊಸ ರೂಪದೊಂದಿಗೆ ಮತ್ತು ಎಲೆಕ್ಟ್ರಿಕ್ ಮಾದರಿಯಲ್ಲಿ ರಸ್ತೆಗಿಳಿದಿದೆ. ಬಜಾಜ್ ಕಂಪನಿ, ಕಳೆದ ಮಂಗಳವಾರ ಬಜಾಜ್ ಚೇತಕ್ ಎಲೆಕ್ಟ್ರಿಕ್ ಗಾಡಿಯನ್ನು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲ, ಜ.15ರಿಂದಲೇ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಕೂಡ ಆರಂಭವಾಗಿದೆ. ಆಸಕ್ತ ಗ್ರಾಹಕರು 2 ಸಾವಿರ ರೂ.ಗಳನ್ನು ಕಟ್ಟಿ ಈ ಬೈಕ್ ಬುಕ್ ಮಾಡಬಹುದಾಗಿದೆ.
ಎರಡು ಆವೃತ್ತಿಗಳಲ್ಲಿ ಲಭ್ಯ
ಎರಡು ವೇರಿಯಂಟ್‌ನಲ್ಲಿ ಬಂದಿರುವ ಹೊಸ ಚೇತಕ್‌ನ “ಪ್ರೀಮಿಯಂ’ ಎಂಬ ಆವೃತ್ತಿಯ ಗಾಡಿಗೆ 1.15 ಲಕ್ಷ ರೂ. ನಿಗದಿ ಪಡಿಸಲಾಗಿದೆ. ಅರ್ಬನ್ ಎಂಬ ವರ್ಷನ್ ಗೆ 1. ಲಕ್ಷ ರೂ. ಇವೆರಡೂ ಎಕ್ಸ್ ಶೋರೂಂ ದರ. ಬೆಂಗಳೂರು ಮತ್ತು ಪುಣೆಯಲ್ಲಿ ಈ ದರ ಒಂದೇ ಆಗಿರುತ್ತದೆ. ಒಟ್ಟಾರೆ ಆರು ಬಣ್ಣಗಳಲ್ಲಿ ಈ ಗಾಡಿ ಲಭ್ಯವಿದೆ.
85- 95 ಕಿ.ಮೀ ಮೈಲೇಜ್
ಕಂಪನಿ ಮೂರು ಫ್ರೀ ಸರ್ವೀಸ್, 50 ಸಾವಿರ ಕಿ.ಮೀ. ಅಥವಾ 3 ವರ್ಷದ ವರೆಗೆ ವಾರೆಂಟಿ, 12 ಸಾವಿರ ಕಿ.ಮೀ. ಅಥವಾ ವರ್ಷಕ್ಕೊಮ್ಮೆ ಸರ್ವೀಸ್ ಮಾಡಿಕೊಡಲಾಗುತ್ತದೆ. ಅರ್ಬನ್ ವರ್ಷನ್‌ನಲ್ಲಿ ಎರಡು ಬಣ್ಣಗಳಲ್ಲಿ ಗಾಡಿ ಲಭ್ಯವಿದ್ದರೆ, ಪ್ರೀಮಿಯಂನಲ್ಲಿ ನಾಲ್ಕು ಬಣ್ಣಗಳಲ್ಲಿ ಸಿಗಲಿದೆ. ಒಮ್ಮೆ ಚಾರ್ಜ್ ಮಾಡಿದಲ್ಲಿ 85 ಕಿ.ಮೀ. ಓಡಿಸಬಹುದು, ಎಕೋ ಮೋಡ್‌ನಲ್ಲಿ ಓಡಿಸಿದರೆ, 95 ಕಿ.ಮೀ. ಕೂಡ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ.
ಇತರೆ ಮಾಹಿತಿ
ಬ್ಯಾಟರಿ- 3ಕೆಡಬ್ಲ್ಯೂ ಎಚ್(48ವಿ, 60.3 ಎಎಚ್)
ಮೋಟಾರ್- 4080 ವ್ಯಾಟ್(ಪೀಕ್), 3800 ವ್ಯಾಟ್(ಕಂಟಿನ್ಯೂಯಸ್)
ಟೋರ್ಕ್- 16 ಎನ್‌ಎಂ
ಬ್ಯಾಟರಿ ಮತ್ತು ಮೋಟಾರ್- ಐಪಿ 67
ಕ್ರ್ಯಾಶ್ ಟೆಸ್ಟ್‌ನಲ್ಲಿ ಟಾಟಾ ಅಲ್ಟ್ರಾಝ್ ಪಾಸ್
ಟಾಟಾ ಬಳಗಕ್ಕೆ ಮತ್ತೂಂದು ಖುಷಿ ಸಂಗತಿ ಸಿಕ್ಕಿದೆ. ಟಾಟಾ ನೆಕ್ಸಾನ್ ಬಳಿಕ ಬರುತ್ತಿರುವ ಮೇಡ್ ಇನ್ ಇಂಡಿಯಾ ಕಾರ್ ಆದ “ಟಾಟಾ ಅಲ್ಟ್ರಾಝ್’ಗೆ ಅಂತಾರಾಷ್ಟ್ರೀಯ ಮಟ್ಟದ ಕ್ರ್ಯಾಶ್ ಟೆಸ್ಟ್(ಅಪಘಾತ ಪರೀಕ್ಷೆ)ನಲ್ಲಿ 5 ಸ್ಟಾರ್ ಸಿಕ್ಕಿದೆ. ಯಾವುದೇ ಕಾರು ಅಪಘಾತವನ್ನು ಎಷ್ಟರಮಟ್ಟಿಗೆ ತಡೆದುಕೊಳ್ಳುತ್ತದೆ ಎಂಬ ಪರೀಕ್ಷಿಸುವುದಕ್ಕೆ ಕ್ರ್ಯಾಶ್ ಟೆಸ್ಟ್ ಎಂದು ಕರೆಯುತ್ತಾರೆ. ಅದರಲ್ಲಿ ಇನ್ನೂ ಮಾರುಕಟ್ಟೆಗೆ ಪ್ರವೇಶಿಸಿದ ಟಾಟಾದ ಹೊಸ ಕಾರು ಅಲ್ಟ್ರಾಝ್ ಉತ್ತಮ ಫಲಿತಾಂಶ ನೀಡಿರುವುದು ವಿಶೇಷ.
ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಮ್(ಗ್ಲೋಬಲ್ ಎನ್‌ಸಿಎಪಿ)ನಲ್ಲಿ ಫ್ರಂಟ್ ಕ್ರ್ಯಾಶ್ ಮತ್ತು ಸೈಡ್ ಇಂಪ್ಯಾಕ್ಟ್ ಟೆಸ್ಟ್‌ನಲ್ಲೂ ಈ ಕಾರು ಉತ್ತಮ ಅಂಕಗಳನ್ನೇ ಗಳಿಸಿದೆ. ಈ ಕಾರು, ಚಾಲಕ ಮತ್ತು ಪಕ್ಕದಲ್ಲಿ ಕುಳಿತ ಪ್ರಯಾಣಿಕನಿಗೂ ಉತ್ತಮ ರಕ್ಷಣೆ ನೀಡಿರುವುದು ಕಂಡು ಬಂದಿದೆ. ಮುಂಬದಿಯಲ್ಲೇ ಚೆನ್ನಾದ ರಕ್ಷಣೆ ಇದೆ ಎಂದ ಮೇಲೆ ಹಿಂಬದಿ ಸೀಟಿನಲ್ಲಿ ಕುಳಿತವರಿಗೆ ಸಹಜವಾಗಿ ಇನ್ನಷ್ಟು ರಕ್ಷಣೆ ಸಿಗಲಿದೆ. ಟಾಟಾ ಅಲ್ಟ್ರಾಝ್ನಲ್ಲಿ ಡುಯೆಲ್ ಏರ್‌ಬ್ಯಾಗ್, ಇಬಿಡಿ ಸಹಿತ ಎಬಿಎಸ್, ಕಾನರ್ ಸ್ಟೆಬಿಲಿಟಿ ಕಂಟ್ರೋಲ್, ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ಅಲರ್ಟ್ ಸಿಸ್ಟಮ್ ಇದ್ದು, ಪ್ರಯಾಣಿಕರಿಗೆ ಕಾರು ಹೆಚ್ಚಿನ ಸುರಕ್ಷತೆ ಒದಗಿಸಲಿದೆ ಎಂದಿದೆ ಸಂಸ್ಥೆ. ಇದೇ ಜನವರಿ 22ಕ್ಕೆ ಈ ಕಾರು ಮಾರುಕಟ್ಟೆಗೆ ಪ್ರವೇಶಿಸಲಿದ್ದು, 5- 8 ಲಕ್ಷ ರೂ.ಗಳ ವರೆಗೆ ಎಕ್ಸ್‌ಶೋ ರೂಂ ದರವಿದೆ.
-ಸೋಮಶೇಖರ ಸಿ.ಜೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.