ಆದಾಯ ಕರ – 87ಎ ರಿಬೇಟ್‌ ಎಂಬ ಮಾಯೆ


Team Udayavani, Jan 20, 2020, 6:22 AM IST

rebate

ಈ ಕೆಳಗಿನ ಟೇಬಲನ್ನು ಸರಿಯಾಗಿ ನೋಡಿ. ಇದು ಅದೇ ಟೇಬಲ್‌ – ಬಜೆಟ್‌-2019 ಮಂಡನೆಯಾದ ಕೆಲ ಗಂಟೆಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಲು ಆರಂಭಿಸಿದ್ದು ಇದೇ ಟೇಬಲ್‌ ಫೇಸ್‌ಬುಕ್‌, ವಾಟ್ಸಪ್‌ಗ್ಳಲ್ಲಿ ಇದು ಹಾಕಿದ ಸುತ್ತುಗಳಿಗೆ ಲೆಕ್ಕವಿಲ್ಲ. ಈ ಟೇಬಲನ್ನು ಹಿಡಕೊಂಡು ಆ ಸಮಯದಲ್ಲಿ ಒಂದು ಸಣ್ಣ ಯುದ್ಧವೇ ನಡೆದಿದೆ. ಇದರ ಹೊಸ ಬಜೆಟ್‌ ಅನುಷ್ಠಾನಕ್ಕೆ ಬಂದರೆ ರೂ. 5,00,000 ಆದಾಯ ಇರುವ ಒಬ್ಟಾತ (ಪರಿಸ್ಥಿತಿ-1) ನೂರಕ್ಕೆ ನೂರು ಶತ ರಿಬೇಟ್‌ ಪಡೆದು ಕಿಂಚಿತ್ತೂ ಕರ ಕಟ್ಟದೆ ಬಚಾವಾದರೆ ಕೇವಲ ನೂರು ರುಪಾಯಿ ಜಾಸ್ತಿ ಅಂದರೆ ರೂ. 5,00,100 ವರಮಾನ ಇರುವ ಇನ್ನೊಬ್ಟಾತ (ಪರಿಸ್ಥಿತಿ-2) ರೂ. 13,021 ಕರ ಕಟ್ಟಬೇಕು.

ಅಂದರೆ ಕೇವಲ ನೂರು ರುಪಾಯಿ ಜಾಸ್ತಿ ಸಂಪಾದನೆ ಮಾಡಿದ ತಪ್ಪಿಗೆ ಹದಿಮೂರು ಸಾವಿರ ಕಳಕೊಳ್ಳಬೇಕಾದ ಪರಿಸ್ಥಿತಿ ಇಲ್ಲಿ ಕಾಣಿಸುತ್ತದೆ. ಕೆಲವರು ಇದು ಅಮಾಯಕರ ತಲೆ ಮೇಲೆ ಮೋದಿ ಹೆಣೆದ ಮೋಸ ಎಂದು ಸಾರಿದ್ದರೆ ಇನ್ನು ಕೆಲವರು ಈ ಟೇಬಲೇ ಸರಿ ಇಲ್ಲ ಎಂದು ವಾದಕ್ಕಿಳಿದಿದ್ದರು.

ಈ ಬಗ್ಗೆ ಸ್ಪಷ್ಟೀಕರಣ ಕೇಳುತ್ತಾ ನನಗೆ ಬರುವ ಕರೆಗಳಿಗೆ, ಸಂದೇಶಗಳಿಗೆ ಲೆಕ್ಕವಿಲ್ಲ. ರೂ. 5 ಲಕ್ಷದವರೆಗಿನ ಆದಾಯಕ್ಕೆ ಕರ ಇಲ್ಲ ಎನ್ನುವ ಮಾತು ಬಹಳ ಅಪಾರ್ಥಕ್ಕೆ ಎಡೆ ಮಾಡಿಕೊಟ್ಟಿದೆ. ಆದ ಕಾರಣ ಈ ಬಗ್ಗೆ ಬಜೆಟ್‌ ಸಮಯದಲ್ಲಿ ಮೂಲಭೂತ ವಿವರಣೆ ನೀಡಿದ್ದರೂ ಸಹ ಇನ್ನೊಮ್ಮೆ ಈ ವಿಚಾರವನ್ನು ಸ್ಪಷ್ಟವಾಗಿ ಕೊರೆಯ ಬೇಕು ಅಂತ ಕಾಣುತ್ತದೆ. ಅಂತೆಯೇ ಈ ಕೊರೆತ; ಒಪ್ಪಿಸಿಕೊಳ್ಳಿ.

ಪ್ರಪ್ರಥಮವಾಗಿ ನಾನು ಹೇಳಬಯಸುವುದು ಏನೆಂದರೆ ಈ ಟೇಬಲ್‌ ಸರಿಯಾಗಿಯೇ ಇದೆ. ಇದರಲ್ಲಿ ಯಾವ ತಪ್ಪೂ ಇಲ್ಲ. ಇದು ಯಾಕೆ ಹೀಗೆ ಅಂದರೆ ಸೆಕ್ಷನ್‌ 87ಎ ಇರುವುದೇ ಹಾಗೆ. ರೂ. 5 ಲಕ್ಷದವರೆಗಿನ ಆದಾಯ ಇರುವವರು ಮಾತ್ರ ಈ ರಿಯಾಯಿತಿ ಅಥವಾ ರಿಬೇಟಿಗೆ ಅರ್ಹರು. ಅವರಿಗೆ ಸಂಪೂರ್ಣ ಕರ ವಿನಾಯಿತಿ ಸಿಗುತ್ತದೆ. ಹಾಗಾಗಿ ತಾವು ಕಟ್ಟ ತಕ್ಕ ರೂ. 12,500 ಕರ ಸಂಪೂರ್ಣವಾಗಿ ಮನ್ನಾ ಆಗಿ ಅವರು ಒಂದೇ ಒಂದು ಪೈ ಕರ ಕಟ್ಟದೆ ಪಾರಾಗುತ್ತಾರೆ. ಆದರೆ ರೂ. 5 ಲಕ್ಷದ ಮೇಲಿನ ಆದಾಯ ಇರುವವರಿಗೆ ಈ ಸೆಕ್ಷನ್‌ 87ಎ ಸೆಕ್ಷನ್‌ ಸೌಲಭ್ಯ ಇಲ್ಲ. ಹಾಗಾಗಿ ಅವರು ಯಥಾ ಪ್ರಕಾರ ರೂ. 2.5 ಲಕ್ಷದಿಂದ ಆರಂಭಿಸಿ ಸಂಪೂರ್ಣ ಕರ ಕಟ್ಟಬೇಕು. ಯಾವುದೇ ಮನ್ನಾ ಇಲ್ಲದ ಕಾರಣ ಅದು ರೂ. 13,021 ಕ್ಕೆ ಬಂದು ನಿಲ್ಲುತ್ತದೆ. (ಈ ಮಾತು 60-80 ವಯೋಮಾನದ ಹಿರಿಯ ನಾಗರಿಕರಿಗೆ 3 ಲಕ್ಷದಿಂದ ಆರಂಭಿಸಿ ಅನ್ವಯವಾಗುತ್ತದೆ).

ಇಲ್ಲಿ ತೆರಿಗೆ ವಿನಾಯಿತಿಯ ಮಿತಿಯನ್ನು (Tax exemption limit) ಹೆಚ್ಚಳ ಮಾಡದೆ ಇದ್ದ ಕಾರಣ ಇದು ಎಲ್ಲಾ ಮಟ್ಟದ ಆದಾಯದವರಿಗೂ ಅನ್ವಯವಾಗುವುದಿಲ್ಲ. ಕೇವಲ ಒಂದು ಸ್ಲಾಬ್‌ನ ವರೆಗೆ ಮಾತ್ರ ಅನ್ವಯಿಸುವಂತೆ ರಿಯಾಯಿತಿ ನೀಡಿದ್ದಾರೆ. ಕರ ವಿನಾಯಿತಿಗೂ ಕರ ರಿಯಾಯಿತಿಗೂ ಇರುವ ವ್ಯತ್ಯಾಸ ಇದೇ. ಆದರೆ ಈ ರೀತಿ ಏಕೆ ಮಾಡಿದರು? ಎಲ್ಲರಿಗೂ ಏಕೆ ಈ ಲಾಭ ನೀಡಿಲ್ಲ? ಎಂದು ಯಾರಾದರೂ ಕೇಳಬಹುದು. ಸರಕಾರದ ಎಲ್ಲಾ ಸೌಲಭ್ಯಗಳೂ ಇರುವುದೇ ಹಾಗೆ. ಆದಾಯ ತೆರಿಗೆ ಯಾವತ್ತೂ ಕೆಳ ಮತ್ತು ಕೆಳ ಮಧ್ಯಮ ವರ್ಗಕ್ಕೆ ಕಡಿಮೆ ಮತ್ತು ಹೆಚ್ಚಿನ ಆದಾಯ ಇರುವವರಿಗೆ ಜಾಸ್ತಿ. ಮೀಸಲಾತಿ ಕೂಡಾ ಒಂದು ನಿರ್ದಿಷ್ಟ ವರಮಾನದ ಕೆಳಗಿನವರಿಗೆ ಮಾತ್ರವೇ ಇದೆ. ಅದರಿಂದ ಮೇಲಿನ ಕ್ರೀಮಿಲೇಯರಿಗೆ ಇಲ್ಲ. ವಿದ್ಯಾರ್ಥಿ ವೇತನಗಳಲ್ಲಿಯೂ, ಗ್ಯಾಸ್‌ ಸಬ್ಸಿಡಿಯಲ್ಲೂ, ರೇಶನ್‌ ಕಾರ್ಡಿನಲ್ಲೂ ವರಮಾನದ ಮಾನದಂಡ ಇದ್ದೇ ಇದೆ. ಹಾಗಾಗಿ ಈ ರೀತಿಯ ಒಂದು ಆರ್ಥಿಕ ಮಟ್ಟದವರಿಗೆ ಮಾತ್ರ ಸೀಮಿತವಾದ ರಿಯಾಯಿತಿ ಲಾಗಾಯ್ತಿನಿಂದ ನಡೆದುಕೊಂಡು ಬಂದ “ಸಾಮಾಜಿಕ ನ್ಯಾಯ’ದ ಇನ್ನೊಂದು ಮುಖವೇ ಆಗಿದೆ ಮತ್ತು ಆ ಬಗ್ಗೆ ಯಾರದ್ದೂ ತಕರಾರು ಇರಲಿಕ್ಕಿಲ್ಲ ಎಂದು ನನ್ನ ಭಾವನೆ.

ಆದರೆ ಇಲ್ಲಿ ಒಂದು ರೀತಿಯ ವಿಪರ್ಯಾಸ ಅನಿಸುವುದು ಒಬ್ಟಾತ ಐದು ಲಕ್ಷದ ಗಡಿಯನ್ನು ‘ಜಸ್ಟ್‌ ಪಾಸ್‌’ ಅದಾಗ! ಒಂದು ವರ್ಷ 5 ಲಕ್ಷ ವರಮಾನ ಇದ್ದುಕೊಂಡು ಮುಂದಿನ ವರ್ಷ ಕಷ್ಟ ಪಟ್ಟು ನೂರು ರುಪಾಯಿ ಜಾಸ್ತಿ ಸಂಪಾದನೆ ಮಾಡಿದವನು ಬಾರೀ ದೊಡ್ಡ ಮೊತ್ತ (ರೂ. 13,021) ಕಳಕೊಳ್ಳಬೇಕಾಗುತ್ತದೆ. ಈ ವಿಪರ್ಯಾಸ ಒಂಥರಾ ಮುಖಕ್ಕೆ ರಾಚುತ್ತದೆ.

ಆದರೆ ಸೀಮಿತ ಕೆಳ ವರ್ಗಕ್ಕೆ ಮಾತ್ರ ಸೌಲಭ್ಯ ಕೊಡಬೇಕು ಎಂದು ಹೊರಟರೆ ಈ ರೀತಿಯ ಗಡಿರೇಖೆ ಅನಿವಾರ್ಯವೂ ಹೌದು.

ಹಾಗೆ ನೋಡುವುದಾದರೆ ಈ ಸೆಕ್ಷನ್‌ 87ಎ ಹೊಸತೇನಲ್ಲ. ಇದನ್ನು ಪ್ರಪ್ರಥಮ ಬಾರಿಗೆ ಭರತ ಖಂಡದಲ್ಲಿ ಇಂಟ್ರಡ್ನೂಸ್‌ ಮಾಡಿದ್ದು 2013 ರ ಬಜೆಟ್ಟಿನಲ್ಲಿ ಆಗಿನ ವಿತ್ತ ಸಚಿವರಾಗಿದ್ದ ಚಿದಂಬರಂ ಅವರು. ಆದರೆ ಅದು ಚಿಕ್ಕ ಪ್ರಮಾಣದಲ್ಲಿತ್ತು. ರೂ. 30,000 ಕರ ಕಟ್ಟುವವರಿಗೆ ಕೇವಲ ರೂ. 2,000 ದ ರಿಬೇಟ್‌ ನೀಡಿದ್ದರು. ಹಾಗಾಗಿ ಅದನ್ನು ಯಾರೂ ಒಂದು ಇಶ್ಯೂ ಮಾಡಲಿಲ್ಲ. ಆ ಬಳಿಕ 2014 ರಲ್ಲಿ ಬಂದ ಜೈಟಿÉಯವರು ಮುಂದಿನ ಎರಡು ವರ್ಷ ಅದೇ ಪದ್ಧತಿಯನ್ನು ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಸಿಕೊಂಡು ಹೋದರು. ಮುಂದೆ, ಮೂರನೆಯ ವರ್ಷ (2016-17) ರಿಬೇಟ್‌ ಮಿತಿಯನ್ನು ರೂ. 2,000 ದಿಂದ ರೂ. 5,000 ಕ್ಕೆ ಏರಿಸಿದರು. ಬಳಿಕ 2017-18 ರಲ್ಲಿ ಕರ ದರವನ್ನು ಶೇ. 5ಕ್ಕೆ ಇಳಿಸಿದಾಗ 87ಎ ಮಿತಿಯನ್ನೂ ಕೂಡಾ ರೂ. 3.5 ಲಕ್ಷಕ್ಕೆ ಇಳಿಸಿದರು. ಮರು ವರ್ಷವೂ ಅದೇ ಮುಂದುವರಿದ ಆ ಪದ್ಧತಿ ರೂ. 5 ಲಕ್ಷದ ಮಿತಿಯೊಡನೆ ಇದೀಗ ಬರೋಬ್ಬರಿ ರೂ. 12,500 (ಸೆಸ್‌ ಸಹಿತ ರೂ. 13,000) ರ ರಿಯಾಯಿತಿಗೆ ಬಂದು ನಿಂತಿದೆ. ಈ ರೀತಿ ದೊಡ್ಡ ಮೊತ್ತದಲ್ಲಿ ಒಂದು ಸ್ಲಾಬಿಗೆ ಸಂಪೂರ್ಣ ಕರಭಾರವನ್ನು ಮನ್ನಾ ಮಾಡಿದ್ದು ಇದೇ ಮೊದಲ ಬಾರಿ. ಈ ಸೆಕ್ಷನ್‌ ಇಷ್ಟು ಪ್ರಭಾವಶಾಲಿಯಾಗಿ ಬಳಕೆಯಾಗಿದ್ದು ಇದೇ ಪ್ರಥಮ ಹಾಗೂ ಬಹುತೇಕ ಜನರು 6 ವರ್ಷಗಳಿಂದ ಅಮಲಿನಲ್ಲಿದ್ದ ಈ ಸೆಕ್ಷನ್ನನ್ನು ಗಮನಿಸಿದ್ದೂ ಕೂಡಾ ಇದೇ ಮೊದಲ ಬಾರಿ.

ಈ ಸೆಕ್ಷನ್‌ ಮಟ್ಟಿಗೆ ಹೇಳುವುದಾದರೆ ಆದಾಯ ಅಂದರೆ ಕರಾರ್ಹ ಆದಾಯ; ಒಟ್ಟು ಆದಾಯ ಅಲ್ಲ. ಒಟ್ಟು ಆದಾಯದಿಂದ ಕಳೆಯುವುದನ್ನೆಲ್ಲಾ ಕಳೆದು ಅಂತಿಮವಾಗಿ ಕರಕಟ್ಟಲು ಸಿಗುವ ಮೊತ್ತವೇ ಕರಾರ್ಹ ಆದಾಯ. ಹಾಗಾಗಿ ಇದು ಅತ್ಯಂತ ಪ್ರಭಾವಶಾಲಿ. ಈ ರೀತಿ ಸಿಗುವ ಆದಾಯ ರೂ. 5ಲಕ್ಷದ ಮೇಲೆ ಇದ್ದರೆ ಅಂತವರಿಗೆ ಈ ಸೆಕ್ಷನ್‌ ಅನ್ವಯವಾಗುವುದೇ ಇಲ್ಲ; ಅದರ ಒಳಗಿನವರಿಗೆ ಮಾತ್ರ ಇದರ ಲಾಭ ಇರುತ್ತದೆ.

ಆದ ಕಾರಣ ಸ್ವಾಭಾವಿಕವಾಗಿಯೇ ಎಲ್ಲರ ಗಮನ ಕರಾರ್ಹ ಆದಾಯವನ್ನು ಒಂದು ಪೈ ಜಾಸ್ತಿಯಾಗದಂತೆ ರೂ. 5 ಲಕ್ಷದ ಒಳಕ್ಕೆ ಇಳಿಸುವಲ್ಲಿ ಇರುತ್ತದೆ. ಹೌದು! ಹೇಗಾದರೂ ಮಾಡಿ ಕರಾರ್ಹ ಆದಾಯವನ್ನು ರೂ. 5 ಲಕ್ಷಕ್ಕಿಂತ ಕಡಿಮೆ ಮಾಡಬೇಕು ಎನ್ನುವುದು ಈ ಸಲದ ಮೂಲ ಮಂತ್ರವಾಗಿದೆ. ಈ ಮಂತ್ರವನ್ನು ಸರಿಯಾಗಿ ಅನುಷ್ಠಾನ ಮಾಡಿದರೆ ಒಟ್ಟು ಆದಾಯ 9, 10, ಯಾ 11 ಲಕ್ಷ ಆದಾಯ ಉಳ್ಳವರೂ ಕರ ಕಟ್ಟದೆ ಬಚಾವಾಗಬಹುದು. ಆದರೆ ಆ ಮಂತ್ರದ ಅನುಷ್ಠಾನ ಹೇಗೆ ಎನ್ನುವುದನ್ನು ಮುಂದಿನ ವಾರ ನೋಡೋಣ. ತಬ್‌ ತಕ್‌ ಕೇ ಲಿಯೇ ಶುಕ್ರಿಯಾ, ಶಬ್ಟಾಖೈರ್‌, ಶುಭದಿನ !

– ಜಯದೇವ ಪ್ರಸಾದ ಮೊಳೆಯಾರ

Udayavani Tags

ಟಾಪ್ ನ್ಯೂಸ್

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.